May 2023

ಆ ಕಹಿ ಘಟನೆಗೆ 13 ವರ್ಷ| ಜಗತ್ತನ್ನೇ ತಲ್ಲಣಗೊಳಿಸಿದ್ದ ಮಂಗಳೂರು ವಿಮಾನ ದುರಂತ

ಸಮಗ್ರ ಡಿಜಿಟಲ್ ಡೆಸ್ಕ್: ಜಗತ್ತನ್ನೇ ತಲ್ಲಣಗೊಳಿಸಿದ್ದ ಮಂಗಳೂರು ಏರ್‌ ಪೋರ್ಟ್‌ ನಲ್ಲಿ ನಡೆದ ವಿಮಾನ ದುರಂತಕ್ಕೆ ಇಂದಿಗೆ 13 ವರ್ಷ. 2010ರ ಮೇ 22ರಂದು ಈ ಭೀಕರ ದುರಂತ ಸಂಭವಿಸಿದ್ದು, ವಿಮಾನದಲ್ಲಿದ್ದ 158 ಮಂದಿ ಮೃತಪಟ್ಟು ಕೇವಲ 8 ಮಂದಿ ಮಾತ್ರ ಬದುಕಿ ಉಳಿದಿದ್ದರು. ದುರಂತದಲ್ಲಿ ಮೃತಪಟ್ಟವರಲ್ಲಿ ಅನೇಕರ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿದ್ದು, ಅವುಗಳನ್ನು ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ಸಂಸ್ಕಾರ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ನೆನಪಿನ ಪಾರ್ಕ್ ನಿರ್ಮಿಸಲಾಗಿದೆ. ಮೇ 22ರಂದು ಬೆಳಗ್ಗೆ […]

ಆ ಕಹಿ ಘಟನೆಗೆ 13 ವರ್ಷ| ಜಗತ್ತನ್ನೇ ತಲ್ಲಣಗೊಳಿಸಿದ್ದ ಮಂಗಳೂರು ವಿಮಾನ ದುರಂತ Read More »

ಹೊಸದೊಂದು ಸಂಘಟನೆ ಕಟ್ಟಿದ ಅರುಣ್ ಕುಮಾರ್ ಪುತ್ತಿಲ| ಬಿಜೆಪಿಗೆ ಸೆಡ್ಡು ಹೊಡೆದು ಲೋಕಾರ್ಪಣೆಗೊಂಡ ‘ಪುತ್ತಿಲ ಪರಿವಾರ’

ಸಮಗ್ರ ನ್ಯೂಸ್: ಬಿಜೆಪಿಯಿಂದ ಬಂಡಾಯ ಎದ್ದು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ಕಳುಹಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಇದೀಗ ಸಂಘ ಪರಿವಾರಕ್ಕೆ ಸಡ್ಡು ಹೊಡೆಯಲು ಮತ್ತೊಂದು ಸಂಘಟನೆ ರೂಪುಗೊಂಡಿದೆ. ಪುತ್ತಿಲ ಪರಿವಾರ ಹೆಸರಿನಲ್ಲಿ ಹೊಸ ಸಂಘಟನೆ ಇಂದು ಲೋಕಾರ್ಪಣೆಗೊಂಡಿದೆ. ಇಂದು ನಡೆದ ಪುತ್ತಿಲ ಬೆಂಬಲಿಗರ ನಮ್ಮ ನಡಿಗೆ ಮಹಾಲಿಂಗೇಶ್ವರನ ಕಡೆಗೆ ಪಾದಯಾತ್ರೆ ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಈ ಹೊಸ ಸಂಘಟನೆ ಹುಟ್ಟುಕೊಂಡಿದೆ.

ಹೊಸದೊಂದು ಸಂಘಟನೆ ಕಟ್ಟಿದ ಅರುಣ್ ಕುಮಾರ್ ಪುತ್ತಿಲ| ಬಿಜೆಪಿಗೆ ಸೆಡ್ಡು ಹೊಡೆದು ಲೋಕಾರ್ಪಣೆಗೊಂಡ ‘ಪುತ್ತಿಲ ಪರಿವಾರ’ Read More »

Weather report| ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು ಸಹಿತ ಮಳೆ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಂಭವ ಇದೆ. ಹವಾಮಾನ ಇಲಾಖೆಯಿಂದ ಈ ಕುರಿತಾಗಿ ಮುನ್ಸೂಚನೆ ನೀಡಲಾಗಿದ್ದು, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ, ಮೈಸೂರು, ಮಂಡ್ಯ, ತುಮಕೂರು, ಶಿವಮೊಗ್ಗ, ರಾಮನಗರ, ವಿಜಯನಗರ, ಕೋಲಾರ, ಕೊಡಗು, ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೋಮವಾರ ಗುಡುಗು ಸಹಿತ ಮಳೆಯಾಗುವ

Weather report| ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು ಸಹಿತ ಮಳೆ Read More »

ಪ್ಲೇಆಪ್ ನಲ್ಲೇ ಹೊರಗುಳಿದ ಆರ್ ಸಿಬಿ| ಈ ಸಲವೂ ಕಫ್ ನಮ್ದಲ್ಲ!!

ಸಮಗ್ರ ನ್ಯೂಸ್: 16ನೇ ಆವೃತ್ತಿಯ ಐಪಿಎಲ್ ನಲ್ಲಿ ಕಪ್ ಗೆಲ್ಲುವ ಆರ್‌ಸಿಬಿ ಕನಸು ಈಡೇರಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ ಆರು ವಿಕೆಟ್ ಗಳಿಂದ ಸೋತು ಪ್ಲೇ ಆಫ್ ಎಂಟ್ರಿಯಿಂದ ಹೊರಗುಳಿದಿದೆ. ಈ ಮೂಲಕ ಐಪಿಎಲ್ ನ ಈ ಆವೃತ್ತಿಯಲ್ಲೂ ಕಪ್ ವಂಚಿತವಾಗಿದೆ. ಆದರೆ ಆರ್.ಸಿ.ಬಿ. ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. 61 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ

ಪ್ಲೇಆಪ್ ನಲ್ಲೇ ಹೊರಗುಳಿದ ಆರ್ ಸಿಬಿ| ಈ ಸಲವೂ ಕಫ್ ನಮ್ದಲ್ಲ!! Read More »

ಇಂದಿನಿಂದ ಮೂರು ದಿನ‌ ರಾಜ್ಯ ವಿಧಾನಮಂಡಲ ವಿಶೇಷ ಅಧಿವೇಶನ

ಸಮಗ್ರ ನ್ಯೂಸ್: ಇಂದಿನಿಂದ (ಮೇ.22ರಿಂದ 24) ಮೂರು ದಿನ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಮೊದಲ ಎರಡು ದಿನ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೊನೆ ದಿನ ವಿಧಾನಸಭಾ ಸ್ಪೀಕರ್​​​ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ನೂತನ ಸದಸ್ಯರಿಗೆ ಹಂಗಾಮಿ ಸ್ಪೀಕರ್​ ಆಗಿ ಆಯ್ಕೆಯಾಗಿರುವ ಆರ್​.ವಿ ದೇಶಪಾಂಡೆಯವರು ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ. ವಿಧಾನಸಭೆಯ ಅವಧಿ ಮೇ 23ಕ್ಕೆ ಅಂತ್ಯವಾಗಿದ್ದು, ಈ ತಿಂಗಳು 23ರರೊಳಗೆ ಶಾಸಕರ ಪ್ರಮಾಣವಚನ ಸ್ವೀಕಾರ ಪೂರ್ಣಗೊಳ್ಳಬೇಕು.

ಇಂದಿನಿಂದ ಮೂರು ದಿನ‌ ರಾಜ್ಯ ವಿಧಾನಮಂಡಲ ವಿಶೇಷ ಅಧಿವೇಶನ Read More »

ವೈರಲ್ ಆಯ್ತು ಶಾಸಕಿ ನಯನಾ ಮೋಟಮ್ಮ ಫೋಟೋಸ್| ಅವಿವೇಕಿಗಳಿಗೆ ಉತ್ತರ ಎಂದ ನಯನಾ

ಸಮಗ್ರ ನ್ಯೂಸ್: ರಾಜಕಾರಣಿಗಳನ್ನು ಜನ ಇರುವ ಹಾಗೆಯೇ ನೋಡೋದಕ್ಕೆ ಇಷ್ಟಪಡುತ್ತಾರೆ. ಜನಸಾಮಾನ್ಯರ ಪಾಲಿಗೆ ಉತ್ತಮ ರಾಜಕಾರಣಿಯ ಗುಣಲಕ್ಷಣಗಳಿವು. ಆದರೆ ವಾಸ್ತವದಲ್ಲಿ ನೋಡುವುದಾದರೆ ರಾಜಕಾರಣಿಗಳು ಮನುಷ್ಯರಲ್ವಾ, ಅವ್ರಿಗೂ ಎಲ್ಲರಂತ ಹಲವು ಕನಸುಗಳಿರೋದಲ್ವಾ. ಹೊಸ ಸ್ಥಳಗಳನ್ನು ಸುತ್ತಾಡೋದು, ಟ್ರೆಂಡೀ ಡ್ರೆಸ್ ತರೋದು ಇದೆಲ್ಲಾ ಅವರಿಗೆ ನಿಷಿದ್ಧವಾಗಿಲ್ಲ. ಆದರೂ ರಾಜಕಾರಣಿಗಳು ಹೀಗೆಲ್ಲಾ ಮಾಡಿದರೆ ಯಾಕೆ ಅಪರಾಧಿಯಂತೆ ನೋಡಲಾಗುತ್ತದೆ. ಈ ಬಗ್ಗೆ ಚಿಕ್ಕಮಗಳೂರಿನ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿರುವ ನಯನ ಮೋಟಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಯನಾ ಮೋಟಮ್ಮ ಅವರ

ವೈರಲ್ ಆಯ್ತು ಶಾಸಕಿ ನಯನಾ ಮೋಟಮ್ಮ ಫೋಟೋಸ್| ಅವಿವೇಕಿಗಳಿಗೆ ಉತ್ತರ ಎಂದ ನಯನಾ Read More »

ಝೀರೋ ಟ್ರಾಫಿಕ್, ಹಾರ ತುರಾಯಿಗೆ ಗುಡ್ ಬೈ ಹೇಳಿದ ಸಿಎಂ| ಸನ್ಮಾನದ ಬದಲು ಪುಸ್ತಕ ಕೊಡಿ ಎಂದ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಸಿಎಂ ಸೇರಿದಂತೆ ಸರ್ಕಾರದ ಸಚಿವರು ಪ್ರಯಾಣಿಸುವಾಗ ವಾಹನ ದಟ್ಟಣೆಯಿಂದ ಆಗುವ ಕಿರಿಕಿರಿ ತಪ್ಪಿಸಲು ಝೀರೋ ಟ್ರಾಫಿಕ್ ಪಡೆಯುತ್ತಿದ್ದರು. ಆದರೆ,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಈ ಝೀರೋ ಟ್ರಾಫಿಕ್ ಬೇಡ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರಿಗೆ ತಿಳಿಸಿದ್ದರು. ಈ ಕುರಿತು ಸ್ವತಃ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್

ಝೀರೋ ಟ್ರಾಫಿಕ್, ಹಾರ ತುರಾಯಿಗೆ ಗುಡ್ ಬೈ ಹೇಳಿದ ಸಿಎಂ| ಸನ್ಮಾನದ ಬದಲು ಪುಸ್ತಕ ಕೊಡಿ ಎಂದ ಸಿದ್ದರಾಮಯ್ಯ Read More »

ಮಾಜಿ ಶಾಸಕ ಯು.ಆರ್ ಸಭಾಪತಿ ನಿಧನ

ಸಮಗ್ರ ನ್ಯೂಸ್: ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಶಾಸಕ ಯು.ಆರ್. ಸಭಾಪತಿ(71) ಅಲ್ಪಕಾಲದ ಅಸೌಖ್ಯದಿಂದ ಇದ್ದ ಇವರು ಉಡುಪಿಯ ಬಡಗುಪೇಟೆಯ ತಮ್ಮ ಮನೆಯಲ್ಲಿ ಇಂದು ನಿಧನರಾಗಿದ್ದಾರೆ. 1952 ರಲ್ಲಿ ಹುಟ್ಟಿದ ಅವರು, 1994 ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ(ಕೆಸಿಪಿ) ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಅನಂತರ ಕೆಸಿಪಿ ಕಾಂಗ್ರೆಸ್ ನೊಂದಿಗೆ ವಿಲೀನಗೊಂಡಿತ್ತು. 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಎಂಎಲ್ ಎ ಆಗಿ ಮರು ಆಯ್ಕೆಯಾಗಿದ್ದರು. ಅನಂತರ ಜಿಲ್ಲೆಯ ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಎರಡು ಗಂಡು,

ಮಾಜಿ ಶಾಸಕ ಯು.ಆರ್ ಸಭಾಪತಿ ನಿಧನ Read More »

ಅವರಿವರಂತೆ ಗ್ಯಾರಂಟಿ ಬಗ್ಗೆ ನಾನು ಟೀಕೆ ಮಾಡಲ್ಲ – ಯಡಿಯೂರಪ್ಪ

ಸಮಗ್ರ ನ್ಯೂಸ್: ಕಾಂಗ್ರೆಸ್‌ ಗ್ಯಾರಂಟಿ ಜಾರಿ ಬಗ್ಗೆ ನನಗೆ ಗ್ಯಾರಂಟಿ ಇದೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಭರವಸೆಗಳು ನಮ್ಮ ಹಿನ್ನಡೆಗೆ ಬಹುಮುಖ್ಯ ಕಾರಣವಾಗಿದೆ. ಅವರು ಅದನ್ನು ಅನುಷ್ಠಾನಕ್ಕೆ ತರಲಿ. ಒಟ್ಟಾರೆಯಾಗಿ ಜನರಿಗೆ ಒಳ್ಳೆಯದಾಗಲಿ ಯಡಿಯೂರಪ್ಪ ಹೇಳಿದರು. ಕಾಂಗ್ರೆಸ್‌ನವರ ಗ್ಯಾರಂಟಿ ಯೋಜನೆಗಳ ಬಗ್ಗೆ ನಾನು ಅನಗತ್ಯವಾಗಿ ಟೀಕೆ ಮಾಡಲು ಹೋಗುವುದಿಲ್ಲ. ಬೇರೆಯವರು ಮಾತನಾಡಿದಂತೆ ನಾನು ಮಾತನಾಡಲ್ಲ ಎಂದು ಬಿ.ಎಸ್.‌ ಯಡಿಯೂರಪ್ಪ ಅವರು

ಅವರಿವರಂತೆ ಗ್ಯಾರಂಟಿ ಬಗ್ಗೆ ನಾನು ಟೀಕೆ ಮಾಡಲ್ಲ – ಯಡಿಯೂರಪ್ಪ Read More »

ಪ್ರಧಾನಿ ಮೋದಿ ಕಾಲಿಗೆರಗಿ ಸ್ವಾಗತಿಸಿದ ಪಪುವಾ ನ್ಯೂಗಿನಿಯಾದ ಪ್ರಧಾನಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಜಪಾನ್‌ನಲ್ಲಿ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡ ಮಂದಿ ಇದೀಗ ಪಪುವಾ ನ್ಯೂಗಿನಿಯಾಗೆ ಬಂದಿಳಿದಿದ್ದಾರೆ. ಮೋದಿ ಆಗಮನದಿಂದ ಪಪುವಾ ನ್ಯೂಗಿನಿಯಾ ಪುಟ್ಟ ದೇಶ ಪುಳಕಿತಗೊಂಡಿದೆ. ಶಿಷ್ಟಾಚಾರ ಬದಿಗೊತ್ತಿ ಪ್ರಧಾನಿ ಮೋದಿಗೆ ಪಪುವಾ ನ್ಯೂಗಿನಿಯಾ ಭರ್ಜರಿ ಸ್ವಾಗತ ನೀಡಿದೆ. ವಿಮಾನದಿಂದ ಇಳಿದು ಬಂದ ಮೋದಿಯನ್ನು ಸ್ವಾಗತಿಸಿದ ಪಪುವಾ ಪ್ರಧಾನಿ ಜೇಮ್ಸ್ ಮರಾಪೆ, ಮೋದಿ ಕಾಲಿಗೆರಗಿದ ಘಟನೆ ನಡೆದಿದೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಮೋದಿ ಜನಪ್ರೀಯತೆ ಹಾಗೂ ಮೋದಿ

ಪ್ರಧಾನಿ ಮೋದಿ ಕಾಲಿಗೆರಗಿ ಸ್ವಾಗತಿಸಿದ ಪಪುವಾ ನ್ಯೂಗಿನಿಯಾದ ಪ್ರಧಾನಿ Read More »