May 2023

ಬೆಂಗಳೂರು: ಮಳೆಗೆ ಕೊಚ್ಚಿ ಹೋದ ಚಿನ್ನ|2.5 ಕೋಟಿ ರೂಪಾಯಿ ನಷ್ಟ

ಸಮಗ್ರ ನ್ಯೂಸ್: ಮೇ.21ರಂದು ಸುರಿದ ಭಾರಿ ಮಳೆಗೆ ಚಿನ್ನಾಭರಣ ಅಂಗಡಿಗೆ ನೀರು ನುಗ್ಗಿ ಚಿನ್ನವನ್ನು ಕೊಚ್ವಿಕೊಂಡ ಹೋದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ನಿಹಾನ್ ಆಭರಣ ಮಳಿಗೆ​ಗೆ ಮಳೆ ನೀರು ನುಗ್ಗಿದ್ದು, ಈ ವೇಳೆ ಮಳಿಗೆಯಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಈ ವೇಳೆ ಸಿಬ್ಬಂದಿ ಇದ್ದರಾದರೂ ಆಭರಣಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗದಂತೆ ತಡೆಯಲೆತ್ನಿಸಿದ್ದಾರೆ.ಆದರೂ ಸುಮಾರು 2.5 ಕೋಟಿ ನಷ್ಟ ಉಂಟಾಗಿರುವ ಬಗ್ಗೆ ಮಾಲೀಕರು ತಿಳಿಸಿದ್ದಾರೆ.

ಬೆಂಗಳೂರು: ಮಳೆಗೆ ಕೊಚ್ಚಿ ಹೋದ ಚಿನ್ನ|2.5 ಕೋಟಿ ರೂಪಾಯಿ ನಷ್ಟ Read More »

ಬೆಳ್ತಂಗಡಿ ಶಾಸಕ‌ ಹರೀಶ್ ಪೂಂಜಾ ಹೆಸರಲ್ಲಿ ನಕಲಿ ಪೋಸ್ಟರ್ ಹಂಚಿಕೆ| ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶದ ವಿರುದ್ದ ದೂರು

ಸಮಗ್ರ ನ್ಯೂಸ್: ಶಾಸಕ ಹರೀಶ್ ಪೂಂಜರವರ ಹೆಸರಿನಲ್ಲಿ ನಕಲಿ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದು, ಈ ಬಗ್ಗೆ ಸಂದೇಶ ಸೃಷ್ಟಿ ಮಾಡಿದ ಮತ್ತು ಅದನ್ನು ಜಾಲತಾಣಗಳಲ್ಲಿ ಶೇರ್ ಮಾಡಿದ ವ್ಯಕ್ತಿಗಳ ವಿರುದ್ಧ ಮೇ 22 ರಂದು ಬೆಳ್ತಂಗಡಿ ನಗರ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತರು ದೂರು ದಾಖಲಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಪದಾಧಿಕಾರಿಗಳು, ತಾಲೂಕು ಯುವಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ದೂರು ಸ್ವೀಕರಿಸಿದ ಬೆಳ್ತಂಗಡಿ ಠಾಣಾ ಪೊಲೀಸರು ಕಾನೂನು ಕ್ರಮದ ಭರವಸೆ ನೀಡಿದ್ದಾರೆ.

ಬೆಳ್ತಂಗಡಿ ಶಾಸಕ‌ ಹರೀಶ್ ಪೂಂಜಾ ಹೆಸರಲ್ಲಿ ನಕಲಿ ಪೋಸ್ಟರ್ ಹಂಚಿಕೆ| ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶದ ವಿರುದ್ದ ದೂರು Read More »

ರಾ.ಸ್ವ.ಸೇ ಸಂಘದ ಹಿರಿಯ ಕೊಂಡಿ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಇನ್ನಿಲ್ಲ

ಸಮಗ್ರ ನ್ಯೂಸ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕ, ಸಾಮಾಜಿಕ, ಧಾರ್ಮಿಕ,ಸಹಕಾರಿ ನೇತಾರ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ( 61)ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಸದಾ ನಗುಮುಖ ಗಂಭೀರ ವ್ಯಕ್ತಿತ್ವ, ನೇರ ನಡೆ ನುಡಿಯವರಾಗಿದ್ದ ಕಾಂತಪ್ಪ ಶೆಟ್ಟಿಯವರು ಹೃದಯ ವೈಶಾಲ್ಯತೆಯುಳ್ಳವರಾಗಿದ್ದರು. ಕೆಲ ಸಮಯಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಮಧ್ಯಾಹ್ನ ಅವರು ಕೊನೆಯುಸಿರೆಳೆದಿದ್ದಾರೆ. ರಾ.ಸ್ವ.ಸೇ.ಸಂಘದಲ್ಲಿ ಮಾತ್ರವಲ್ಲ ಭಾರತೀಯ ಜನತಾಪಕ್ಷದಲ್ಲು ಗುರುತಿಸಿಕೊಂಡಿದ್ದ ಅವರು ಒಂದುಬಾರಿ ಪುದು ಜಿ.ಪಂ.ಚುನಾವಣೆಗೆ ಸ್ಪರ್ಧಿ ಸೋಲನ್ನನುಭವಿಸಿದ

ರಾ.ಸ್ವ.ಸೇ ಸಂಘದ ಹಿರಿಯ ಕೊಂಡಿ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಇನ್ನಿಲ್ಲ Read More »

ಸುಳ್ಯ; ಬೈಕ್ ಅಪಘಾತ ಓರ್ವ ಮೃತ್ಯು

ಸಮಗ್ರ ನೂಸ್: ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಸುಳ್ಯದ ಪಾಲಡ್ಕ ಎಂಬಲ್ಲಿ ಮೇ.22 ರಂದು ಸಂಭವಿಸಿದೆ.ಮೃತಪಟ್ಟಾತ ಕೆವಿಜಿ ಆಯುರ್ವೇದ ಕಾಲೇಜು ವಿಧ್ಯಾರ್ಥಿ ಸ್ವರೂಪ್(22) ಎಂದು ಗುರುತಿಸಲಾಗಿದೆ. ಈತ ಬೈಕ್ ನಲ್ಲಿ ತೆರಳುತ್ತಿದ್ದು ಓವರ್ ಟೇಕ್ ಮಾಡುವ ರಭಸದಲ್ಲಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಎನ್ನಲಾಗಿದೆ. ಈ ವೇಳೆ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು

ಸುಳ್ಯ; ಬೈಕ್ ಅಪಘಾತ ಓರ್ವ ಮೃತ್ಯು Read More »

ಕುಲದೈವದ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕಿ ಭಾಗೀರಥಿ ಮುರುಳ್ಯ| ಅಧಿವೇಶನದಲ್ಲಿ ಗೊಂದಲ ಸೃಷ್ಟಿ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆಯ ಮೊಟ್ಟ ಮೊದಲ ವಿಶೇಷ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಮೇ.24ರ ವರೆಗೆ ನಡೆಯಲಿದೆ. ಸಾರ್ವತ್ರಿಕ ಚುನಾವಣೆಯ ಬಳಿಕ ವಿಧಾನಸಭೆಗೆ ಆಯ್ಕೆಯಾದ 224 ಜನಪ್ರತಿನಿಧಿಗಳ ಪ್ರಮಾಣವಚನ ಕಾರ್ಯಕ್ರಮ ಅಧಿವೇಶನದಲ್ಲಿ ನಡೆಯಿತು. ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧಿವೇಶನದಲ್ಲಿ ಅಧಿಕಾರ ಪದ ಮತ್ತು ಗೌಪ್ಯತಾ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಅವರು ಕುಲದೇವರಾದ ಸತ್ಯಸಾರಮಣಿ, ಸತ್ಯ ಪದನಾಜಿ, ಅಮ್ಮನವರು ಹಾಗೂ ಮತದಾರ ಭಾಂದವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಕೆಲವು ಸದಸ್ಯರು

ಕುಲದೈವದ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕಿ ಭಾಗೀರಥಿ ಮುರುಳ್ಯ| ಅಧಿವೇಶನದಲ್ಲಿ ಗೊಂದಲ ಸೃಷ್ಟಿ Read More »

ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಮೇ 22, ಕಾಲೇಜು ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ನಡೆದಿದೆ. ಶೇಖಮಲೆಯ ಜಾರತ್ತಾರು ನಿವಾಸಿ ಆನಂದ ರವರ ಪುತ್ರ ರಿತೇಶ್(18) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಇಂದು ಮಧ್ಯಾಹ್ನ ಮನೆಯ ಪಕ್ಕದಲ್ಲಿರುವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಗೆ ಶರಣಾಗಿದ್ದಾನೆ. ಈತ ಪುತ್ತೂರಿನ ಜಿಡೆಕಲ್ಲು ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಕಾಲೇಜಿನ ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಎಂದು ಅವನ ಸ್ನೇಹಿತರಿಂದ ತಿಳಿದು ಬಂದಿದೆ. ಹದಿನೆಂಟರ ಹರೆಯದ ರಿತೇಶ್

ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ಫಲಿಸದ ಪ್ರಾರ್ಥನೆ; ನಟ ಶರತ್ ಬಾಬು ನಿಧನ

ಸಮಗ್ರ ನ್ಯೂಸ್: ಕನ್ನಡದ ಅಮೃತವರ್ಷಿಣಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟ ಶರತ್ ಬಾಬು(೭೧) ಇಂದು (ಮೇ 22) ರಂದು ಹೈದರಾಬಾದ್​ನಲ್ಲಿ ಕೊನೆ ಉಸಿರೆಳೆದಿದ್ದಾರೆ. ಹಲವು ದಿನಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನ ಹೊಂದಿದ್ದಾರೆ. ಶರತ್ ಬಾಬು ಅವರನ್ನು ಏಪ್ರಿಲ್​ನ ಮೊದಲ ವಾರದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ತುಸು ಚೇತರಿಸಿಕೊಂಡ ಬಳಿಕ ಅವರನ್ನು ಹೈದರಾಬಾದ್​ಗೆ ಕರೆದೊಯ್ಯಲಾಗಿತ್ತು. ಅದಾದ ಬಳಿಕ ಅಲ್ಲಿ ಮತ್ತೆ

ಫಲಿಸದ ಪ್ರಾರ್ಥನೆ; ನಟ ಶರತ್ ಬಾಬು ನಿಧನ Read More »

ಚಿಕ್ಕಮಗಳೂರು : ಕಾಲುವೆಯಲ್ಲಿ ಮುಳುಗಿ ಮೂವರ ಸಾವು

ಸಮಗ್ರ ನ್ಯೂಸ್: ಕಾಲುವೆಯಲ್ಲಿ ಮುಳುಗಿ ಮೂವರ ಸಾವನಪ್ಪಿದ ಘಟನೆ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಪತಪ್ಪಿ ಕಾಲುವೆಯಲ್ಲಿ ಸಂಭವಿಸಿದೆ. ರವಿ (31), ಅನನ್ಯ (17), ಶಾಮವೇಣಿ (16) ಮೃತ ದುರ್ದೈವಿಗಳು.ರವಿ ಮೂಲತಃ ಲಕ್ಕವಳ್ಳಿ ನಿವಾಸಿ, ಅನನ್ಯ, ಶಾಮವೇಣಿ ರವಿಯ ಸಹೋದರಿಯರ ಮಕ್ಕಳು ಮತ್ತು ಅನನ್ಯ ಮೂಲತಃ ಶಿವಮೊಗ್ಗ, ಶಾಮವೇಣಿ ನಂಜನಗೂಡಿನವರಾಗಿದ್ದಾರೆ. ಇವರು ಸಂಬಂಧಿ ಮನೆ ಲಕ್ಕವಳ್ಳಿಗೆ ಬಂದಿದ್ದರು. ಈ ವೇಳೆ ನೀರಿನಲ್ಲಿ ಆಟವಾಡುವಾಗ ಆಯಾ ತಪ್ಪಿ ಬಿದ್ದು ಸಾವನಪ್ಪಿದ್ದಾರೆ. ಘಟನೆಯಾದಗ ಒಬ್ಬರ ರಕ್ಷಣೆಗೆ ಮತ್ತೊಬ್ಬರು ತೆರಳಿದಾಗ ಮೂವರು

ಚಿಕ್ಕಮಗಳೂರು : ಕಾಲುವೆಯಲ್ಲಿ ಮುಳುಗಿ ಮೂವರ ಸಾವು Read More »

ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಅಧಿವೇಶನಕ್ಕೆ ತೆರಳಿದ ಸುಳ್ಯ ಶಾಸಕಿ ಭಾಗೀರಥಿ

ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಭಾಗಿರಥಿ ಮುರುಳ್ಯ ಅವರು ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಅಧಿವೇಶನಕ್ಕೆ ತೆರಳಿದ ಪ್ರಸಂಗ ಇಂದು ನಡೆದಿದೆ. ಇಂದು ನೂತನ ಶಾಸಕರಿಗೆ ಮೊದಲ ಅಧಿವೇಶನ ಅಗಿದ್ದು ರಾಜ್ಯದ ಎಲ್ಲಾ ತಾಲೂಕುಗಳ ಶಾಸಕರು ಅಧಿವೇಶನಕ್ಕೆ ತೆರಳಿದ್ದಾರೆ. ಇದೇ ರೀತಿ ಸುಳ್ಯ ಶಾಸಕಿ ಮೊದಲ ಬಾರಿಗೆ ಅಧಿವೇಶನಕ್ಕೆ ತೆರಳುತ್ತಿರುವ ಕಾರಣ ಸರ್ಕಾರದ ಕೆಲಸ ದೇವರ ಕೆಲಸ ಎಂಬಂತೆ ಪ್ರಜಾಪ್ರಭುತ್ವದ ಪವಿತ್ರ ದೇಗುಲವಾದ ವಿಧಾನಸಭೆಗೆ ಭಾಗಿರಥಿ ಮುರುಳ್ಯ ಅವರು ವಿಧಾನಸೌಧದ ಮೆಟ್ಟಿಲುಗಳಿಗೆ ನಮಿಸಿ ಮುಂದಕ್ಕೆ

ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಅಧಿವೇಶನಕ್ಕೆ ತೆರಳಿದ ಸುಳ್ಯ ಶಾಸಕಿ ಭಾಗೀರಥಿ Read More »

ಕಾಗವಾಡ:ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ

ಸಮಗ್ರ ನ್ಯೂಸ್: ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಅಪಘಾತವಾಗಿ ಕಾರು ನಜ್ಜುಗುಜ್ಜಾದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ಹೊರವಲಯದಲ್ಲಿರುವ ಬಿಡ್ಜ ಬಳಿ ನಡೆದಿದೆ. ಭೀಕರ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜನರಿಗೆ ಗಂಭಿರ ಗಾಯಗಳಾಗಿದ್ದು ಎರಡು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರ ರಾಜ್ಯದ ಮಿರಜ್ ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸ್ ಮಹಾರಾಷ್ಟ್ರ ರಾಜ್ಯದ ಕೋಲ್ಲಾಪುರದಿಂದ ಇಳಕಲ್ ಕಡೆಗೆ ಸಂಚುರಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ

ಕಾಗವಾಡ:ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ Read More »