Ad Widget .

ಬಟ್ಟೆ ಮೇಲಿನ ಕಲೆಯನ್ನು ನಿಮಿಷಗಳಲ್ಲೇ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಏನಾದ್ರು ಕೆಲಸ ಮಾಡುವಾಗ ಬಟ್ಟೆಯಲ್ಲಿ ಕಲೆಗಳಾಗುವುದು ಸಾಮಾನ್ಯ. ಅವುಗಳನ್ನು ತೆಗೆಯೋದು ಹೇಗೆ ಎನ್ನುವುದೇ ಚಿಂತೆಯಾಗಿ ಹೋಗಿರುತ್ತದೆ. ಆದರೆ ಈ ಟಿಪ್ಸ್ ಮೂಲಕ ಸುಲಭವಾಗಿ ಬಟ್ಟೆಯಲ್ಲಾದ ಕಲೆಯನ್ನು ರಿಮೂವ್ ಮಾಡಬಹುದು.

Ad Widget . Ad Widget .

ನಿಂಬೆ-ಉಪ್ಪಿನ ಬಳಕೆ : ಹೆಚ್ಚಾಗಿ ಎಣ್ಣೆ ಮತ್ತು ಜಿಡ್ಡಿನ ಕಲೆಗಳನ್ನು ಸುಲಭವಾಗಿ ತೆಗೆಯಲು ನಿಂಬೆ ಮತ್ತು ಉಪ್ಪು ಸಹಾಯಕವಾಗಿದೆ. ಇದಕ್ಕಾಗಿ ನಿಂಬೆಹಣ್ಣನ್ನು ಕತ್ತರಿಸಿ ಅದಕ್ಕೆ ಉಪ್ಪು ಹಾಕಿ ಬಟ್ಟೆಯಲ್ಲಿನ ಕಲೆಯ ಮೇಲೆ ಉಜ್ಜುವುದು ಕಲೆಗಳನ್ನು ತೆಗೆದು ಹಾಕಲು ಸಹಾಯಕವಾಗುತ್ತದೆ.

Ad Widget . Ad Widget .

ಮೊಸರಿನ ಬಳಕೆ :ಬಟ್ಟೆಯ ಮೇಲೆ ಪಾನ್ ಮಸಾಲಾ ಅಥವಾ ಇತರೆ ಯಾವುದೇ ಕಲೆಗಳಿದ್ದರೆ ಅವುಗಳನ್ನು ತೆಗೆಯಲು ಮೊಸರನ್ನು ಕೂಡ ಬಳಸಬಹುದು. ಇದಕ್ಕಾಗಿ ಕಲೆಯಾದ ಜಾಗವನ್ನು ಮೊಸರು ಅಥವಾ ಮಜ್ಜಿಗೆಯಲ್ಲಿ ಅದ್ದಿ ಹತ್ತು ನಿಮಿಷ ಹಾಗೆಯೇ ಬಿಟ್ಟು ನಂತರ ಬಟ್ಟೆಯನ್ನು ಶುದ್ಧ ನೀರಿನಿಂದ ತೊಳೆಯುವುದು ಬಟ್ಟೆಯಲ್ಲಿನ ಕಲೆಗಳನ್ನು ತೆಗೆದುಹಾಕುತ್ತದೆ.

ಬೆಚ್ಚಗಿನ ನೀರಿನಿಂದ ಕಲೆಗಳ ಮಾಯ : ಚಹಾ-ಕಾಫಿಯ ಕಲೆಗಳನ್ನು ತೆಗೆದುಹಾಕಲು ನೀವು ಬಿಸಿ ನೀರಿನ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಬಟ್ಟೆಯನ್ನು ಬಿಸಿ ನೀರಿನಲ್ಲಿ ಹಾಕಿ ಹದಿನೈದು ನಿಮಿಷಗಳ ಕಾಲ ನೆನೆ ಬಿಡಬೇಕು. ನಂತರ ನೀರಿನಿಂದ ಬಟ್ಟೆಯನ್ನು ತೆಗೆದು ಇಪ್ಪತ್ತು ನಿಮಿಷಗಳ ಕಾಲ ಲಿಕ್ವಿಡ್ ಇಲ್ಲವೇ ಡಿಟರ್ಜೆಂಟ್ ನಲ್ಲಿ ನೆನೆಸಿ. ಇದರಿಂದ ಬಟ್ಟೆಯನ್ನು ಕೈಗಳಿಂದ ಉಜ್ಜುವ ಮೂಲಕ ಬಟ್ಟೆಗಳಲ್ಲಾದ ಕಲೆಗಳನ್ನು ಮಾಯವಾಗಿಸಬಹುದು.

ಕಾಸ್ಟಿಕ್ ಸೋಡಾ ಬಳಕೆ : ಬಟ್ಟೆಯ ಮೇಲಿನ ಕಲೆ ಸಮಸ್ಯೆಗೆ ಕಾಸ್ಟಿಕ್ ಸೋಡಾವನ್ನು ಸಹ ಬಳಸಬಹುದು. ಕಾಸ್ಟಿಕ್ ಸೋಡಾವನ್ನು ಸ್ವಲ್ಪ ನೀರಿಗೆ ಸೇರಿಸಿ ಬಟ್ಟೆಯನ್ನು ಹತ್ತು ನಿಮಿಷಗಳ ಕಾಲ ಆ ನೀರಿನಲ್ಲಿ ಹಾಕಿಡಿ. ನಂತರ ಅದನ್ನು ಹೊರತೆಗೆದು ಸಾಮಾನ್ಯ ನೀರಿನಿಂದ ತೊಳೆಯುವುದರಿಂದ ಬಟ್ಟೆಯ ಮೇಲಿನ ಯಾವುದೇ ರೀತಿಯ ಕಲೆಗಳನ್ನು ನಿಮಿಷಗಳಲ್ಲಿ ತೆಗೆದು ಹಾಕಬಹುದು.

ಸೀಮೆಎಣ್ಣೆ ಬಳಕೆ : ಬಟ್ಟೆಯ ಮೇಲಿನ ಕೆಲವು ಕಲೆಗಳನ್ನು ಹೋಗಲಾಡಿಸುವುದು ಅಸಾಧ್ಯವಾಗಿರುತ್ತದೆ. ಇದಕ್ಕಾಗಿ ಸೀಮೆ ಎಣ್ಣೆಯನ್ನು ಬಳಸಬಹುದು. ಸೀಮೆಎಣ್ಣೆಯನ್ನು ಬಟ್ಟೆಯಲ್ಲಿ ಕಲೆಯಾದ ಜಾಗಕ್ಕೆ ಹಾಕಿ ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಅದನ್ನು ಡಿಟರ್ಜೆಂಟ್ ನಿಂದ ತೊಳೆಯಿರಿ. ಇದು ಕೆಲವೇ ನಿಮಿಷಗಳಲ್ಲಿ ಬಣ್ಣದ ಕಲೆಗಳನ್ನು ಮಾಯವಾಗಿಸುತ್ತದೆ.

Leave a Comment

Your email address will not be published. Required fields are marked *