ಸಮಗ್ರ ನ್ಯೂಸ್: ಮಹೀಂದ್ರಾ ಥಾರ್ ಎಸ್ಯುವಿಯು ಬಹಳ ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಎಸ್ಯುವಿಯಾಗಿದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಮಹೀಂದ್ರಾ ಥಾರ್ ಎಸ್ಯುವಿಯ ಕಾಯುವ ಅವಧಿಯು ಕೂಡ ಹೆಚ್ಚಾಗುತ್ತಿದೆ.
ಇದೀಗ ಮಹೀಂದ್ರಾ ಥಾರ್ ಎಸ್ಯುವಿಯು 1 ಲಕ್ಷ ಮಾರಾಟವಾಗಿ ಹೊಸ ಮೈಲಿಗಲ್ಲು ದಾಖಲಿಸಿದೆ. 2020ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಈ ಆಫ್-ರೋಡ್ 1 ಲಕ್ಷ ಉತ್ಪಾದನಾ ಗಡಿಯನ್ನು ದಾಟಿದೆ ಮತ್ತು ಈಗ ಈ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಮಹೀಂದ್ರಾ ಥಾರ್ ಎಸ್ಯುವಿಯು ಪೆಟ್ರೋಲ್ ರೂಪಾಂತರಗಳ ಆರಂಭಿಕ ಬೆಲೆಯು ರೂ.13.49 ಲಕ್ಷವಾದರೆ, ಥಾರ್ ಎಸ್ಯುವಿಯ ಡೀಸೆಲ್ ರೂಪಾಂತರಗಳ ಬೆಲೆಯು ರೂ.10.55 ಲಕ್ಷದಿಂದ ಪ್ರಾರಂಭವಾಗುತ್ತವೆ.
ಮಹೀಂದ್ರಾ ಥಾರ್ ಎಸ್ಯುವಿಯು ಕಡಿಮೆ ಬಜೆಟ್ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಸ್ಯುವಿಯಾಗಿದೆ. ಅದಕ್ಕಾಗಿಯೇ ವಾಹನ ಉತ್ಸಾಹಿಗಳು ಒಂದನ್ನು ಖರೀದಿಸಲು ನಿರಂತರವಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಇದು ಕೆಲವು ಪ್ರಭಾವಶಾಲಿ ಸ್ಪೆಕ್ಸ್ಗಳನ್ನು ಹೊಂದಿದೆ: ಮಹೀಂದ್ರಾ ಥಾರ್ ಎಸ್ಯುವಿಯ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.
ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
ಇನ್ನೂ ಅನೇಕ ವಿಧವಾದ ಪೀಚರ್ ನೊಂದಿಗೆ ಥಾರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮತ್ತು ಈ ವಾಹನದ ಬೇಡಿಕೆಯೂ ಜಾಸ್ತಿನೇ ಇದೆ. ಒಟ್ಟಾರೆ ದೇಶೀಯ ಕಂಪೆನಿಯು ಈ ಸಾಧನೆ ಮಾಡಿದ್ದು ಭಾರತೀಯರಿಗೆ ಹೆಮ್ಮೆ.