ಸಿಡ್ನಿ: ಮೋದಿ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಮಂಗಳೂರಿನ ಅನಿಶಾ

ಸಮಗ್ರ ನ್ಯೂಸ್: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಂಧೋನಿ ಅಲ್ಪನೀಸ್ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡುವ ಅಪರೂಪದ ಅವಕಾಶ ಮಂಗಳೂರು ಮೂಲದ ಯುವತಿ ಅನಿಶಾ ಪೂಜಾರಿ ಅವರಿಗೆ ಒಲಿದಿದೆ.

Ad Widget ... ..

ಮೋದಿ ಆಸ್ಟ್ರೇಲಿಯ ಭೇಟಿ ಸಂದರ್ಭ ಮೇ 23ರಂದು ಆಸೀಸ್ ಪ್ರಧಾನಿ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ನಂತರ ಸಮುದಾಯ ಸ್ವಾಗತ ಸಂದರ್ಭ ಅನಿಶಾ ಅವರು ಇರುವ `ನಾಟ್ಯೋಕ್ತಿ’ ನೃತ್ಯ ತಂಡ ತುಳು ಜಾನಪದ ಮತ್ತು ಕಾಂತಾರ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಲಿದೆ.

Ad Widget

ಬಿಜೈ ಕಾಪಿಕಾಡ್ ನಿವಾಸಿ ಅನಿಶಾ ಪೂಜಾರಿ, ಪದ್ಮನಾಭ ಪೂಜಾರಿ ರೂಪಾ ದಂಪತಿ ಪುತ್ರಿಯಾಗಿದ್ದು, ನೃತ್ಯಗುರು ಪ್ರೇಮನಾಥ್ ರವರ ಶಿಷ್ಯೆಯಾಗಿದ್ದಾರೆ. ಮಂಗಳೂರು ಎಸ್‌ಡಿಎಂ ಕಾಲೇಜಿನಲ್ಲಿ ಬಿಬಿಎಂ ಮತ್ತು ಎಂಬಿಎ ಪದವಿ ಗಳಿಸಿದ ಅನಿತಾ ಸಿಡ್ನಿಯಲ್ಲಿ ಟೆಲಿಕಾಂ ಕಂಪನಿ ಉದ್ಯೋಗಿಯಾಗಿದ್ದಾರೆ.

Leave a Comment

Your email address will not be published. Required fields are marked *