ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾನಿಲಯ ಸ್ನಾನತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಂಗಳ ಗಂಗೋತ್ರಿ, ಕೊಣಾಜೆ ಇದರ ಆಶ್ರಯದಲ್ಲಿ ಗಡಿನಾಡ ಗಿರಿಜನರ ಜೊತೆ ಒಡನಾಟದ ಪಯಣ ಶಿಬಿರವು ದಿನಾಂಕ 20 ಮೆ 2023 ರಿಂದ 26 ಮೇ 2023ರವರೆಗೆ ನಡೆಯಲಿದ್ದು, ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮವು 20 ಮೇ 2023 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಗಿರಿಜನ ಆಶ್ರಮ ಶಾಲೆಯ ಶಿಕ್ಷಕರಾದ ಶೇಖರ್ ಇವರು ಶಿಬಿರದ ಕುರಿತು ಸಲಹೆಗಳನ್ನು ನೀಡುವುದರ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು.

ಸಮಾಜ ಕಾರ್ಯ ಅಧ್ಯಯನ ಶಿಬಿರದ ಎರಡನೇ ದಿನ ಪ್ಲಾಸ್ಟಿಕ್ ಜಾಗೃತಿ ಅಭಿಯಾನದಲ್ಲಿ ಗಿರಿಜನ ಆಶ್ರಮ ಶಾಲೆಯಿಂದ ದೊಡ್ಡಭೈರನಕುಪ್ಪೆ ಜಂಕ್ಷನ್ ವರೆಗೂ ಪ್ಲಾಸ್ಟಿಕ್ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಕಬಿನಿ ನದಿ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡಿದ್ದು, ಈ ವೇಳೆ ಊರಿನ ಗ್ರಾಮಸ್ಥರು ಅವರ ಅಭಿಪ್ರಾಯ ಹಾಗೂ ಸಮಸ್ಯೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.