Ad Widget .

ಇ-ಮೇಲ್ ಖಾತೆಗಳನ್ನು ಡಿಲೀಟ್ ಮಾಡಲು ಮುಂದಾದ ಗೂಗಲ್ ಸಂಸ್ಥೆ

ಸಮಗ್ರ ನ್ಯೂಸ್: ನಿಮ್ಮಲ್ಲಿರುವ ಇ-ಮೇಲ್ ಖಾತೆಯನ್ನು 2 ವರ್ಷಗಳಿಂದ ಬಳಕೆ ಮಾಡದಿದ್ದಲ್ಲಿ ನಿಮ್ಮ ಖಾತೆಗೆ ಇದೀಗ ಕುತ್ತು ಬರುವ ಸಾಧ್ಯತೆಯಿದೆ.

Ad Widget . Ad Widget .

ಗೂಗಲ್ ತನ್ನ ಬಳಕೆದಾರರ ಖಾತೆಗಳ ಹೊಸ ಬದಲಾವಣೆಯನ್ನು ತಂದಿದೆ. ಬಳಕೆದಾರರು ತನ್ನ ಹಳೆಯ ಗೂಗಲ್ ಖಾತೆಗಳನ್ನು ಲಾಗಿನ್ ಹಾಗೂ ಪರಿಶೀಲನೆ ಮಾಡುವಂತೆ ತಿಳಿಸಿದೆ. ಈ ಹಿಂದೆ 2 ವರ್ಷಗಳಿಂದ ಕಾರ್ಯನಿರ್ವಹಿಸದ ಗೂಗಲ್ ಖಾತೆಗಳಲ್ಲಿ ಸಂಗ್ರಹವಾಗಿರುವ ಡೇಟಾಗಳನ್ನು ಅಳಿಸಿ ಹಾಕುವುದಾಗಿ ಗೂಗಲ್ ಹೇಳಿತ್ತು. ಆದರೆ ಇದೀಗ ಇಡೀ ಖಾತೆಯನ್ನೇ ಅಳಿಸಿ ಹಾಕುವುದಾಗಿ ಗೂಗಲ್ ಎಚ್ಚರಿಕೆ ನೀಡಿದೆ.

Ad Widget . Ad Widget .

ಈ ವರ್ಷದಿಂದ ಗೂಗಲ್ ಖಾತೆಯನ್ನು ಕನಿಷ್ಠ 2 ವರ್ಷಗಳವರೆಗೆ ಬಳಸದಿದ್ದರೆ ಅಥವಾ ಸೈನ್ ಇನ್ ಮಾಡದೆ ಇದ್ದಲ್ಲಿ ಖಾತೆಯನ್ನು ಹಾಗೂ ಅದರಲ್ಲಿರುವ ಡೇಟಾಗಳನ್ನು ಅಳಿಸಬಹುದು. ಅವುಗಳಲ್ಲಿ ಗೂಗಲ್ ವರ್ಕ್ಸ್ಪೇಸ್ ಗಳಾದ ಇ-ಮೇಲ್, ಡಾಕ್ಸ್, ಡ್ರೈವ್, ಕ್ಯಾಲೆಂಡರ್, ಯೂಟ್ಯೂಬ್, ಹಾಗೂ ಗೂಗಲ್ ಫೋಟೋಗಳು ಸೇರಿರುತ್ತವೆ ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.

ಈ ಹೊಸ ನೀತಿಯ ಬಗ್ಗೆ ಈ ವರ್ಷದ ಡಿಸೆಂಬರ್ ವರೆಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇ-ಮೇಲ್ ಗಳನ್ನು ಸಕ್ರಿಯವಾಗಿ ಬಳಕೆ ಮಾಡದವರು ತಮ್ಮ ಹಳೆಯ ಖಾತೆಯನ್ನು ಮತ್ತೆ ಹಿಂಪಡೆಯಲು ಇನ್ನೂ ಸಮಯವಿದೆ. ಆದರೆ ಒಂದು ಬಾರಿ ಡಿಲೀಟ್ ಆದ ಖಾತೆಯನ್ನು ಮರುಬಳಕೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಬಳಕೆದಾರರು ಈ ನೀತಿಯ ಬದಲಾವಣೆ ಬಗ್ಗೆ ತಿಳಿದುಕೊಂಡಿರುವುದು ಹಾಗೂ ತಮ್ಮ ಗೂಗಲ್ ಖಾತೆಗಳನ್ನು ಅಳಿಸದಂತೆ ತಡೆಯಲು ಕ್ರಮ ಕೈಗೊಳ್ಳುವುದು ಅಗತ್ಯ. ಅದಕ್ಕಾಗಿ ಬಳಕೆದಾರರು ತಮ್ಮ ಹಳೆಯ ಖಾತೆಗಳನ್ನು ಪರಿಶೀಲಿಸಿ ವಿವಿಧ ಚಟುವಟಿಕೆಯನ್ನು ನಿರ್ವಹಿಸುವುದರಿಂದ ಖಾತೆಗಳು ಅಳಿಸಿ ಹೋಗುವುದನ್ನು ತಪ್ಪಿಸಬಹುದು.

Leave a Comment

Your email address will not be published. Required fields are marked *