April 2023

ಬ್ಯಾಟ್ ಹಿಡಿದು ಕ್ರೀಸ್ ಗಿಳಿದ ಅರುಣ್ ಕುಮಾರ್ ಪುತ್ತಿಲ| ಪುತ್ತೂರಲ್ಲಿ ಗೆಲುವಿನ ಸಿಕ್ಸರ್ ಬಾರಿಸ್ತಾರಾ ಬಂಡಾಯ ನಾಯಕ!?

ಸಮಗ್ರ ನ್ಯೂಸ್: ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ಒತ್ತಡದ ನಡುವೆಯೂ ಬಂಡಾಯ ಕಣಕ್ಕಿಳಿದ ಅರುಣ್ ಪುತ್ತಿಲ ತಮ್ಮ ನಾಮಪತ್ರ ಹಿಂಪಡೆಯದೆ ಕಣದಲ್ಲಿ ಗಟ್ಟಿಯಾಗಿ ನಿಂತುಬಿಟ್ಟಿದ್ದಾರೆ. ಅಲ್ಲದೆ, ತಮ್ಮ ಚುನಾವಣಾ ಚಿಹ್ನೆಯಾಗಿ ಕ್ರಿಕೆಟ್ ಬ್ಯಾಟ್ ಅನ್ನು ಆಯ್ಕೆ ಮಾಡಿಕೊಂಡಿದ್ದು, ಅರುಣ್ ಪುತ್ತಿಲ ಕ್ರೀಸಿಗಿಳಿದು ಬ್ಯಾಟಿಂಗ್ ಮಾಡುವ ಸೂಚನೆ ನೀಡಿದ್ದಾರೆ. ಪುತ್ತೂರು ಮತ್ತು ಸುಳ್ಯ ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಪರವಾಗಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಫೇಸ್ಬುಕ್ ಜಾಲತಾಣದಲ್ಲಿ ಅರುಣ್ ಪುತ್ತಿಲ ಪರ ಅಭಿಯಾನ […]

ಬ್ಯಾಟ್ ಹಿಡಿದು ಕ್ರೀಸ್ ಗಿಳಿದ ಅರುಣ್ ಕುಮಾರ್ ಪುತ್ತಿಲ| ಪುತ್ತೂರಲ್ಲಿ ಗೆಲುವಿನ ಸಿಕ್ಸರ್ ಬಾರಿಸ್ತಾರಾ ಬಂಡಾಯ ನಾಯಕ!? Read More »

ಬೆಳ್ತಂಗಡಿ: ಗೆಳೆಯರೊಂದಿಗೆ ನದಿಗೆ ತೆರಳಿ ಕಣ್ಮರೆಯಾಗಿದ್ದಾತ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಗೆಳೆಯನೊಂದಿಗೆ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಪುದುವೆಟ್ಟು ಗ್ರಾಮದ ಶಾಂತಿ ಹೊಳೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಕಂಚೇರಿ ಕಂಡ ನಿವಾಸಿ ಜೈಸನ್‌ ಪಿ.ವಿ. (34) ತನ್ನ ಅಕ್ಕನ ಮನೆಗೆ ಬಂದಿದ್ದು ಗೆಳೆಯ ಸ್ಟ್ಯಾನ್ಲಿಯೊಂದಿಗೆ ರವಿವಾರ ಪುದುವೆಟ್ಟು ಗ್ರಾಮದ ಶಾಂತಿಯ ಹೊಳೆಗೆ ಸ್ನಾನಕ್ಕೆಂದು ಬೈಕ್‌ನಲ್ಲಿ ತೆರಳಿದ್ದರು. ಈ ವೇಳೆ ಸ್ನಾನಕ್ಕೆ ಇಳಿದ ಜೈಸನ್‌ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ಬೆಳಗ್ಗೆ ಅವರ ಮೃತದೇಹವು ಪತ್ತೆಯಾಗಿದೆ. ಈ ಬಗ್ಗೆ

ಬೆಳ್ತಂಗಡಿ: ಗೆಳೆಯರೊಂದಿಗೆ ನದಿಗೆ ತೆರಳಿ ಕಣ್ಮರೆಯಾಗಿದ್ದಾತ ಶವವಾಗಿ ಪತ್ತೆ Read More »

ರೈಲಿನಿಂದ ಎಸೆಯಲ್ಪಟ್ಟು ಯುವಕ ದುರ್ಮರಣ

ಸಮಗ್ರ ನ್ಯೂಸ್: ಸ್ನೇಹಿತನ ಜೊತೆ ಗೋವಾಕ್ಕೆ ತೆರಳುತ್ತಿದ್ದ ಯುವಕನೊಬ್ಬ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳ ಪೆರಿಂಗಡಿಯಲ್ಲಿ ನಡೆದಿದೆ. ಪಾಲಕ್ಕಾಡ್ ನ ನಿವಾಸಿ ಸಾಬೀರ್(32) ಮೃತ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಗೋವಾಕ್ಕೆ ತಲಪಿದಾಗ ಸ್ನೇಹಿತನು ಸಾಬೀರ್ ನಾಪತ್ತೆಯಾಗಿದ್ದು , ಈ ಬಗ್ಗೆ ಸ್ನೇಹಿತನು ಗೋವಾ ಪೊಲೀಸರಿಗೆ ದೂರು ನೀಡಿದ್ದು, ಗೋವಾ ಪೊಲೀಸರು ಕೇರಳ ಮತ್ತು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಕುಂಬಳೆ ಪೊಲೀಸ್ ಠಾಣೆಯ ಪೆರಿಂಗಡಿಯ ರೈಲ್ವೆ ಹಳಿ ಬಳಿ ಮೃತದೇಹ

ರೈಲಿನಿಂದ ಎಸೆಯಲ್ಪಟ್ಟು ಯುವಕ ದುರ್ಮರಣ Read More »

ದ.ಕ ಜಿಲ್ಲೆಯ 8 ಕ್ಷೇತ್ರಗಳಲ್ಲಿ 60 ಮಂದಿ ಸ್ಪರ್ಧೆ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಮಪತ್ರ ಸಲ್ಲಿಸಿದ್ದ 72 ಜನರಲ್ಲಿ 12 ಜನರು ನಾಮಪತ್ರ ಹಿಂತೆಗೆದುಕೊಂಡುದರಿಂದ ಈಗ ಸ್ಪರ್ಧೆಯಲ್ಲಿ 60 ಮಂದಿ ಉಳಿದಿದ್ದಾರೆ. ಮಂಗಳೂರು ಉತ್ತರದಲ್ಲಿ 10, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡಬಿದಿರೆ, ಮಂಗಳೂರು ದಕ್ಷಿಣಗಳಲ್ಲಿ ತಲಾ 8, ಬಂಟ್ವಾಳ 6, ಮಂಗಳೂರು ಉಳ್ಳಾಲದಲ್ಲಿ 4 ಮಂದಿ ಉಳಿದಿದ್ದಾರೆ. ಮೇ.10 ರಂದು ಚುನಾವಣೆ ನಡೆಯಲಿದ್ದು, ಮೇ. 13ಕ್ಕೆ ಈ ಸ್ಪರ್ಧಾಳುಗಳ ಭವಿಷ್ಯ ತಿಳಿಯಲಿದೆ.

ದ.ಕ ಜಿಲ್ಲೆಯ 8 ಕ್ಷೇತ್ರಗಳಲ್ಲಿ 60 ಮಂದಿ ಸ್ಪರ್ಧೆ Read More »

ಬೆಳ್ತಂಗಡಿ: ಮಾಜಿ‌ ಶಾಸಕ,‌ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರ ಬಳಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರ ಮನೆ ಮೇಲೆ‌ ಏ.24 ರಂದು ಬೆಳಗ್ಗೆ 6:30 ಕ್ಕೆ ಆದಾಯ‌ ಇಲಾಖೆ ಅಧಿಕಾರಿಗಳು (ಐಟಿ) ದಾಳಿ ನಡೆಸಿದ್ದು, ಹಲವು ಸೊತ್ತು‌ ಹಾಗೂ ದಾಖಲೆಗಳು ವಶವಾಗಿವೆ. ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿ ಫಾರ್ಮ್ ಹೌಸ್ , ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿರುವ ಮನೆ, ಲಾಯಿಲ ಪ್ರಸನ್ನ ಎಜುಕೇಶನ್ ಟ್ರಸ್ಟ್ ಮೇಲೆ ಏಕಕಾಲದಲ್ಲಿ ಏ.24 ರ ಬೆಳಗ್ಗೆ 6:30 ಕ್ಕೆ ದಾಳಿ ಮಾಡಿದ್ದರು.

ಬೆಳ್ತಂಗಡಿ: ಮಾಜಿ‌ ಶಾಸಕ,‌ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರ ಬಳಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು? ಇಲ್ಲಿದೆ ಫುಲ್ ಡೀಟೈಲ್ಸ್ Read More »

ಹವಾಮಾನ ವರದಿ| ಇನ್ನಾದರೂ ಬಂದೀತೇ ಮಳೆ? ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಸಮಗ್ರ ನ್ಯೂಸ್: ಬಿಸಿಲ ಬೇಗೆಗೆ ಕಾದು ಕೆಂಪಾಗಿರುವ ಇಳೆಗೆ ಮಳೆಯ ಸಿಂಚನವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇಂದಿನಿಂದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರದಿಂದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಂಭವ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಬಾಗಲಕೋಟೆ, ಕಲಬುರ್ಗಿ, ಬೀದರ್, ಬೆಳಗಾವಿ, ರಾಯಚೂರು, ಕೊಪ್ಪಳ, ಯಾದಗಿರಿ, ಜಿಲ್ಲೆಗಳಲ್ಲಿ

ಹವಾಮಾನ ವರದಿ| ಇನ್ನಾದರೂ ಬಂದೀತೇ ಮಳೆ? ಹವಾಮಾನ ಇಲಾಖೆಯಿಂದ ಮುನ್ಸೂಚನೆ Read More »

ಸೀರೆಗಾಗಿ ಮಹಿಳೆಯರ ಜಡೆಜಗಳ| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ನಾರೀಮಣಿಗಳ ಕಿತಾಪತಿ

ಸಮಗ್ರ ನ್ಯೂಸ್: ಸೀರೆಗಾಗಿ ಇಬ್ಬರು ಮಹಿಳೆಯರು ಜಗಳವಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ ಎನ್ನಲಾಗಿದೆ. ಟ್ವಿಟರ್ ಬಳಕೆದಾರರಾದ ಆರ್ ವೈದ್ಯ ಅವರು ಹಂಚಿಕೊಂಡ ವಿಡಿಯೋದಲ್ಲಿ, ಬೆಂಗಳೂರಿನ ಮಲ್ಲೇಶ್ವರಂನ ಮೈಸೂರು ಸಿಲ್ಕ್ಸ್‌ನಲ್ಲಿ ಶಾಪಿಂಗ್ ಮಾಡುವಾಗ ಇಬ್ಬರು ಮಹಿಳೆಯರು ಸೀರೆಗಾಗಿ ಜಗಳವಾಡುತ್ತಿರುವುದು ಕಂಡುಬಂದಿದೆ. ಮಹಿಳೆಯರು ಪರಸ್ಪರ ಹೊಡೆದುಕೊಳ್ಳಲು ಮತ್ತು ಪರಸ್ಪರರ ಕೂದಲನ್ನು ಎಳೆಯಲು ಪ್ರಾರಂಭಿಸಿದ್ದರಿಂದ ವಾದವು ಶೀಘ್ರದಲ್ಲೇ ಜಗಳಕ್ಕೆ ತಿರುಗಿತು. ಆದಾಗ್ಯೂ, ಇತರ ಗ್ರಾಹಕರು ಅವರ ಜಗಳವನ್ನು ನಿಲ್ಲಿಸಲು ಮುಂದಾಗಲಿಲ್ಲ. ಭದ್ರತಾ

ಸೀರೆಗಾಗಿ ಮಹಿಳೆಯರ ಜಡೆಜಗಳ| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ನಾರೀಮಣಿಗಳ ಕಿತಾಪತಿ Read More »

ಸುಬ್ರಹ್ಮಣ್ಯ: ಕಾಡಾನೆ ಪ್ರತ್ಯಕ್ಷ; ಅಸ್ವಸ್ಥಗೊಂಡಿರುವ ಶಂಕೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷಗೊಂಡಿದ್ದು, ಅಸ್ವಸ್ಥಗೊಂಡಿರುವ ಶಂಕೆ ಸ್ಥಳೀಯವಾಗಿ ವ್ಯಕ್ತವಾಗಿದೆ. ರವಿವಾರ ಸಂಜೆಯಿಂದ ರಾತ್ರಿವರೆಗೆ ಚೇರು ಭಾಗದಲ್ಲಿ ಸಂಚರಿಸಿರುವ ಕಾಡಾನೆ ಸೋಮವಾರ ಬೆಳಗ್ಗೆ ಎರ್ಮಾಯಿಲ್ ಭಾಗದಲ್ಲಿ ಕಾಣಸಿಕ್ಕಿದೆ. ಆನೆ ನೋಡಲು ತೀರಾ ಅಸ್ವಸ್ಥಗೊಂಡಿರುವಂತೆ ಕಂಡಿದ್ದು, ನಡೆದಾಡಲು ಕಷ್ಟಪಡುತ್ತಿದ್ದು, ಎಡಗಾಲಿಗೆ ಬಲವಾದ ಗಾಯವಾಗಿದ್ದು, ತಿಂದ ಆಹಾರ ಜಗಿದು ಅಲ್ಲಲ್ಲೇ ಉಗುಲಿ ಹೋಗುತ್ತಿದೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಗಮನ ಹರಿಸುವಂತೆ ಸ್ಥಳೀಯರು ತಿಳಿಸಿದ್ದಾರೆ. ಈ ಬಗೆಗಿನ ಬರಹವೂ ವೈರಲ್

ಸುಬ್ರಹ್ಮಣ್ಯ: ಕಾಡಾನೆ ಪ್ರತ್ಯಕ್ಷ; ಅಸ್ವಸ್ಥಗೊಂಡಿರುವ ಶಂಕೆ Read More »

ಪೊಲೀಸ್ ಠಾಣೆಯೊಳಗೇ ಬಾಂಬ್ ಸ್ಪೋಟಿಸಿದ ಉಗ್ರರು| 12 ಮಂದಿ ಸಾವು; 40ಕ್ಕೂ ಹೆಚ್ಚು ಮಂದಿ ಗಂಭೀರ

ಸಮಗ್ರ ನ್ಯೂಸ್: ಪೊಲೀಸ್ ಠಾಣೆಯೊಂದರಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 12 ಜನ ಪೊಲೀಸರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅಫ್ಘಾನಿಸ್ತಾನದ ನೆರೆಯ ಖೈಬರ್ ಪಖ್ತುನ್ಖ್ವಾದ ವಾಯುವ್ಯ ಪ್ರದೇಶದ ಸ್ವಾತ್ ಕಣಿವೆಯ ಕಬಾಲ್ ಪಟ್ಟಣದಲ್ಲಿನ ವಿಶೇಷ ಭಯೋತ್ಪಾದನಾ ನಿಗ್ರಹ ಕೇಂದ್ರವನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಬಾಂಬ್ ಸ್ಪೋಟಿಸಿದ್ದಾರೆ ಎನ್ನಲಾಗಿದೆ. ದೇಶೀಯ ತಾಲಿಬಾನ್ ಶಾಖೆಯೊಂದಿಗೆ ಸಂಪರ್ಕ ಹೊಂದಿರುವ ಪಾಕಿಸ್ತಾನದಲ್ಲಿ ಪೊಲೀಸರ ಮೇಲೆ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕ ದಾಳಿಗಳ ನಡುವೆ ಈ ಘಟನೆ ನಡೆದಿದೆ

ಪೊಲೀಸ್ ಠಾಣೆಯೊಳಗೇ ಬಾಂಬ್ ಸ್ಪೋಟಿಸಿದ ಉಗ್ರರು| 12 ಮಂದಿ ಸಾವು; 40ಕ್ಕೂ ಹೆಚ್ಚು ಮಂದಿ ಗಂಭೀರ Read More »

ಸುಳ್ಯ: ಮಾಜಿ‌ ಶಾಸಕ ಕೆ.ಕುಶಲ ಪುತ್ರ ಸುಧೀರ್ ಕೆಆರ್ ಎಸ್ ಪಕ್ಷಕ್ಕೆ ಸೇರ್ಪಡೆ

ಸಮಗ್ರ ನ್ಯೂಸ್: ಸುಳ್ಯದ‌ ಮಾಜಿ ಶಾಸಕ ಕೆ ಕುಶಲರವರ ಮಗ ಸುಧೀರ್ ಬೆಳ್ಳಾಳ್ಕರ್ ರವರು ಇಂದು ಕೆಆರ್ ಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ಸಿದ್ದಾಂತವನ್ನು ಒಪ್ಪಿ ಸಂಘಟನಾ ಕಾರ್ಯದರ್ಶಿಯಾಗಿ ಸುಧೀರ್ ನೇಮಕಗೊಂಡಿದ್ದಾರೆ. ಪಕ್ಷದ ಸಂಪೂರ್ಣ ಬೆಳವಣಿಗೆಗೆ ಇದು ಪೂರಕವಾಗಲಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ಕೆ.ಆರ್.ಎಸ್ ಪಕ್ಷದ ಅಧ್ಯಕ್ಷರು ಅವಿನಾಶ್ ಕಾರಿಂಜ, ಪ್ರದಾನ ಕಾರ್ಯದರ್ಶಿ ಜೀವನ್ ನಾರ್ಕೋಡು ಮತ್ತು ಸುಚೇತ್ ಮತ್ತು ಅಖಿಲ್ ರವರು ಸುದೀರ್ ರನ್ನು ಬರಮಾಡಿಕೊಂಡರು.

ಸುಳ್ಯ: ಮಾಜಿ‌ ಶಾಸಕ ಕೆ.ಕುಶಲ ಪುತ್ರ ಸುಧೀರ್ ಕೆಆರ್ ಎಸ್ ಪಕ್ಷಕ್ಕೆ ಸೇರ್ಪಡೆ Read More »