April 2023

ಛತ್ತೀಸ್ ಗಡದಲ್ಲಿ ನಕ್ಸಲರ ಅಟ್ಟಹಾಸ| 11 ಯೋಧರು ಹುತಾತ್ಮ

ಸಮಗ್ರ ನ್ಯೂಸ್: ದಾಂತೇವಾಡದಲ್ಲಿ ಅರನಪುರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಯೋಧರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಂತೇವಾಡದಲ್ಲಿ ನಕ್ಸಲರು ಸುಧಾರಿತ ಸ್ಪೋಟಕ ಬಳಸಿ ದುಷ್ಕೃತ್ಯ ನಡೆಸಿದ್ದಾರೆ. ನಕ್ಸಲರು ಡಿಆರ್ ಜಿ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ನೆಲ ಬಾಂಬ್ ಮೂಲಕ ಸ್ಪೋಟಿಸಿದ್ದಾರೆ. ನಕ್ಸಲರ ಸುಧಾರಿತ ಸ್ಪೋಟಕದಲ್ಲಿ ಡಿಆರ್ ಜಿ ಸಿಬ್ಬಂದಿ ವಾಹನದ ಚಾಲಕ, 10 ಯೋಧರು ಹುತಾತ್ಮರಾಗಿದ್ದಾರೆ. ಎಡಪಂಥೀಯ ಉಗ್ರವಾದದ ಕೇಂದ್ರವಾಗಿರುವ ಬಸ್ತಾರ್’ನಲ್ಲಿ ಬಂಡುಕೋರರ ವಿರುದ್ಧ ಹಲವಾರು ಯಶಸ್ವಿ ಕಾರ್ಯಾಚರಣೆಗಳಲ್ಲಿ ಡಿಆರ್ಜಿ ಪ್ರಮುಖ ಪಾತ್ರ ವಹಿಸಿದೆ. ದಾಳಿ […]

ಛತ್ತೀಸ್ ಗಡದಲ್ಲಿ ನಕ್ಸಲರ ಅಟ್ಟಹಾಸ| 11 ಯೋಧರು ಹುತಾತ್ಮ Read More »

ಸುಳ್ಯದಲ್ಲಿ ಗುಡುಗು ಸಹಿತ ಗಾಳಿ ಮಳೆ

ಸಮಗ್ರ ಸಮಾಚಾರ: ಸುಳ್ಯದಲ್ಲಿ ಇಂದು ಅಪರಾಹ್ನ ಗುಡುಗು, ಸಹಿತ ಬಾರೀ ಗಾಳಿ ಮಳೆಯಾಗಿದೆ. ಬೆಳಗ್ಗೆ ಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು ಮಧ್ಯಾಹ್ನ ಮೂರು ಗಂಟೆ ವೇಳೆ ಬಾರೀ ಗಾಳಿ ಸಹಿತ ಮಳೆಯಾಗಿದೆ. ಸುಳ್ಯ ನಗರ ಸೇರಿದಂತೆ ಸುಳ್ಯ, ಕಡಬ ತಾಲೂಕಿನ ಹಲವೆಡೆ ಮಳೆಯಾಗಿದೆ ಎಂದು ತಿಳಿದುಬಂದಿದೆ. ನಿನ್ನೆ ಮಧ್ಯಾಹ್ನ ಹನಿ ಮಳೆಯಾಗಿತ್ತು.

ಸುಳ್ಯದಲ್ಲಿ ಗುಡುಗು ಸಹಿತ ಗಾಳಿ ಮಳೆ Read More »

ಬೆತ್ತಲೆ ಮಹಿಳೆಯೊಂದಿಗೆ ನಡೆದಿತ್ತು‌ ಸ್ಮಶಾನದಲ್ಲಿ ವಿಚಿತ್ರ ಪೂಜೆ| ಹುಡುಗಿಯರ ಫೋಟೋ ಇಟ್ಕೊಂಡು ನಡೆದಿತ್ತು ವಾಮಾಚಾರ

ಸಮಗ್ರ ನ್ಯೂಸ್: ಸ್ಮಶಾನದಲ್ಲಿ ಮಧ್ಯರಾತ್ರಿ ಬೆತ್ತಲೆಯಾಗಿ ಮಹಿಳೆ ಸೇರಿದಂತೆ ನಾಲ್ವರು ಮಾಟ ಮಂತ್ರ ಮಾಡುತ್ತಿದ್ದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಚೋಗಚಿಕೊಪ್ಪ ತಾಂಡಾದಲ್ಲಿ ಕಂಡು ಬಂದಿದೆ. ಊರ ಹೊರಗಿನ ಸ್ಮಶಾನದಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬೆತ್ತಲಾದ ಮಹಿಳೆ ಹಾಗೂ ಮೂವರು ಪುರುಷರು ಮೂವರು ಹುಡುಗಿಯರ ಫೋಟೋ ಇಟ್ಟು ಅದರ ಸುತ್ತಲೂ ನಿಂಬೆಹಣ್ಣುಗಳನ್ನು ಇಟ್ಟು ವಾಮಾಚಾರ ಮಾಡುತ್ತಿದ್ದರು. ಮನುಷ್ಯನ ತಲೆ ಬುರುಡೆಯ ಮೇಲೆ ವ್ಯಕ್ತಿ ಒಬ್ಬರ ಹೆಸರು ಬರೆದು ಕೋಳಿ ರಕ್ತದಲ್ಲಿ ಪೂಜೆ ಮಾಡಿದ್ದಾರೆ. ನಿಂಬೆ

ಬೆತ್ತಲೆ ಮಹಿಳೆಯೊಂದಿಗೆ ನಡೆದಿತ್ತು‌ ಸ್ಮಶಾನದಲ್ಲಿ ವಿಚಿತ್ರ ಪೂಜೆ| ಹುಡುಗಿಯರ ಫೋಟೋ ಇಟ್ಕೊಂಡು ನಡೆದಿತ್ತು ವಾಮಾಚಾರ Read More »

ಸುಳ್ಯ: ಹಿರಿಯ ರಾಜಕೀಯ ಧುರೀಣ ಚಂದ್ರಶೇಖರ ಮೇಲ್ನಾಡು ಇನ್ನಿಲ್ಲ

ಸಮಗ್ರ‌ ನ್ಯೂಸ್: ಅವಿಭಜಿತ ಸುಳ್ಯ ತಾಲೂಕಿನ ಹಿರಿಯ ರಾಜಕೀಯ ಧುರೀಣ ಚಂದ್ರಶೇಖರ ಮೇಲ್ನಾಡುರವರು ಇಂದು(ಎ.26) ಬೆಳಿಗ್ಗೆ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮುಂಜಾನೆ ಎಂದಿನಂತೆ ಚಹಾ ತಿಂಡಿ ಸೇವಿಸಿ, ಸ್ವಲ್ಪ ಹೊತ್ತಲ್ಲಿ ತೀವ್ರ ಹೃದಯಘಾತದಿಂದ ಕುಸಿದ ಅವರನ್ನು ಅವರ ಪುತ್ರ ಗುರುಪ್ರಸಾದ್ ಮೇಲ್ನಾಡುರವರು ಕಡಬ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಬಗ್ಗೆ ಅವರು ಕೊನೆಯುಸಿರೆಳೆದರು. ಚಂದ್ರಶೇಖರ ಮೇಲ್ನಾಡುರವರು ಏನೆಕಲ್ಲು ಪ್ರಾಥಮಿಕ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ, ಗುತ್ತಿಗಾರು ತಾಲೂಕು ಪಂಚಾಯಿತ್ ನ ಸದಸ್ಯರಾಗಿ,

ಸುಳ್ಯ: ಹಿರಿಯ ರಾಜಕೀಯ ಧುರೀಣ ಚಂದ್ರಶೇಖರ ಮೇಲ್ನಾಡು ಇನ್ನಿಲ್ಲ Read More »

ಮಧ್ಯಾಹ್ನವೇ ಕತ್ತಲೆಯಲ್ಲಿ ಮುಳುಗಿದ ಕಾನ್ಪುರ!!

ಸಮಗ್ರ ನ್ಯೂಸ್: ಉರಿ ಬಿಸಿಲಿನ ಬೇಗೆಯಲ್ಲಿ ಅಕ್ಷರಶಃ ಬೆಂದು ಬಸವಳಿದ ಕಾನ್ಪುರದಲ್ಲಿ ಅಕಾಲಿಕ ಮಳೆ ಸುರಿದಿದೆ. ಮಧ್ಯಾಹ್ನ 2:30 ರ ವೇಳೆಗೆ ಮಳೆ ಹಾಗು ಮೋಡಗಳು ಜೋರಾದ ಕಾರಣ ನಗರದ ವಾತಾವರಣದಲ್ಲಿ ಕತ್ತಲೆ ಆವರಿಸಿದಂತೆ ಭಾಸವಾಗಿದೆ. ಮಳೆಯೊಂದಿಗೆ, ಧೂಳಿನ ಗಾಳಿ ಹಾಗೂ ತಂಪಾದ ಗಾಳಿ ಬೆರೆತು ನಡು ಮಧ್ಯಾಹ್ನವೇ ರಾತ್ರಿಯಂತೆ ಆಗಿಬಿಟ್ಟಿದೆ. ನಗರದ ಈ ಬದಲಾವಣೆಯನ್ನು ಚಿತ್ರಗಳು ಹಾಗೂ ವಿಡಿಯೋಗಳ ರೂಪದಲ್ಲಿ ಸೆರೆ ಹಿಡಿದ ಸ್ಥಳೀಯರು, ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಚಿತ್ರಗಳನ್ನು ಸೆರೆ

ಮಧ್ಯಾಹ್ನವೇ ಕತ್ತಲೆಯಲ್ಲಿ ಮುಳುಗಿದ ಕಾನ್ಪುರ!! Read More »

ಬಿರುಸಾದ ಪ್ರಚಾರ ಭರಾಟೆ| ಇಂದು ರಾಜ್ಯಕ್ಕೆ ಯೋಗಿ ಆದಿತ್ಯನಾಥ್ ಭೇಟಿ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಭರಾಟೆ ಬಿರುಸಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ರಾಜ್ಯಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸಲಿದ್ದು, ಮಂಡ್ಯದಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಇಂದು ಯೋಗಿ ಆದಿತ್ಯನಾಥ್ ಅವರು ಮಂಡ್ಯ ನಗರ, ಬಸವನಬಾಗೇವಾಡಿ, ಇಂಡಿ, ಏಪ್ರಿಲ್ 30 ರಂದು ಶೃಂಗೇರಿ, ಪುತ್ತೂರು, ಕಾರ್ಕಳ, ಬೈಂದೂರು, ಭಟ್ಕಳ, ಮೇ.3 ರಂದು ಗಂಗಾವತಿ, ಜೇವರ್ಗಿ, ಶಹಾಪುರ, ಭಾಲ್ಕಿ ಕ್ಷೇತ್ರಗಳಲ್ಲಿ ಮತಯಾಚನೆ ಮಾಡಲಿದ್ದಾರೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ

ಬಿರುಸಾದ ಪ್ರಚಾರ ಭರಾಟೆ| ಇಂದು ರಾಜ್ಯಕ್ಕೆ ಯೋಗಿ ಆದಿತ್ಯನಾಥ್ ಭೇಟಿ Read More »

ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ವಿಧಿವಶ| ಎರಡು ದಿನ ಶೋಕಾಚರಣೆ

ಸಮಗ್ರ ನ್ಯೂಸ್: ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್ (95) ಮಂಗಳವಾರ ರಾತ್ರಿ ವಿಧಿವಶರಾಗಿದ್ದು, ಅವರ ಗೌರವಾರ್ಥ ಕೇಂದ್ರ ಸರ್ಕಾರ 2 ದಿನ ಶೋಕಾಚರಣೆ ಘೋಷಣೆ ಮಾಡಿದೆ. ಕೆಲ ದಿನಗಳಿಂಗ ಅನಾರೋಗ್ಯದಿಂದ ಬಳಲುತ್ತಿದ್ದ ಬಾದಲ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರಣ ಅವರನ್ನು ಒಂದು ವಾರದ ಹಿಂದೆ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೇ ಇಂದು ರಾತ್ರಿ 8 ಗಂಟೆಗೆ ನಿಧನರಾಗಿದ್ದಾರೆ. ಅವರ

ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ವಿಧಿವಶ| ಎರಡು ದಿನ ಶೋಕಾಚರಣೆ Read More »

ಪ್ರ.ದ ಕಾಲೇಜು ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್| ಎರಡು ತಿಂಗಳ ವೇತನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಮಾರ್ಚ್ ಮತ್ತು ಏಪ್ರಿಲ್-2023ರ ತಿಂಗಳ ಗೌರವಧನವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಇಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ನಡವಳಿಯನ್ನು ಹೊರಡಿಸಿದ್ದಾರೆ. 2023-24ನೇ ಸಾಲಿನ ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಸಯದಡಿ ಬರುವ ಕಾಲೇಜು ಶಿಕ್ಷಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 2023 ರಿಂದ ಜುಲೈ-2023ರ ಅವಧಿಯ ವೆಚ್ಚಕ್ಕಾಗಿ ಅನುದಾನ ಬಿಡುಗಡೆ ಮಾಡಿ ಆದೇಶಿಸಲಾಗಿದೆ ಎಂದಿದ್ದಾರೆ. 2023-24ನೇ

ಪ್ರ.ದ ಕಾಲೇಜು ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್| ಎರಡು ತಿಂಗಳ ವೇತನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ Read More »

ಕಡಬ: ಬೈಕ್ ಸ್ಕಿಡ್ ಆಗಿ ದಾವಣಗೆರೆ ಮೂಲದ ಕಾರ್ಮಿಕ ಸಾವು

ಸಮಗ್ರ ನ್ಯೂಸ್: ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ – ಪಂಜ ರಸ್ತೆಯ ಕಲ್ಲಂತಡ್ಕ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತ ಸವಾರನನ್ನು ದಾವಣಗೆರೆ ಮೂಲದ ಪ್ರಸ್ತುತ ಕೋಡಿಂಬಾಳದಲ್ಲಿ ವಾಸವಿರುವ ಮಂಜು ಎಂದು ಗುರುತಿಸಲಾಗಿದೆ. ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಮಂಜು ಬೈಕಿನಲ್ಲಿ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ರಸ್ತೆಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಡಬ: ಬೈಕ್ ಸ್ಕಿಡ್ ಆಗಿ ದಾವಣಗೆರೆ ಮೂಲದ ಕಾರ್ಮಿಕ ಸಾವು Read More »

ಕರಾವಳಿಯ ಹಲವೆಡೆ ತಂಪೆರೆದ ಮಳೆರಾಯ| ಗುಂಡ್ಯದಲ್ಲಿ ಮರ ಬಿದ್ದು ಹಾನಿ

ಸಮಗ್ರ ನ್ಯೂಸ್: ಬಿಸಿಲ ಬೇಗೆಗೆ ಬಸವಳಿದ ಭೂಮಿಗೆ ಇಂದು ಮಳೆಯ ಹನಿ ಮುತ್ತಿಕ್ಕಿದೆ. ದ.ಕ ಜಿಲ್ಲೆಯ ಕೆಲವೆಡೆ ಸಾಧಾರಣದಿಂದ ಭಾರೀ ಮಳೆಯಾಗಿದ್ದು, ತಾಪಮಾನ ಕೊಂಚ ಇಳಿಕೆಯಾಗಿದೆ. ಸುಳ್ಯ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ. ಮಧ್ಯಾಹ್ನದ ವೇಳೆಗೆ ಅಲ್ಲಲ್ಲಿ ತುಂತುರು ಮಳೆಯಾದ ವರದಿಗಳು ಬಂದಿವೆ. ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಮಣ್ಯದಲ್ಲಿ ಸಂಜೆ ವೇಳೆಗೆ ದಿಢೀರ್ ಮಳೆಯಾಗಿದ್ದು, ವಾತಾವರಣ ಕೂಲ್ ಆಗಿದೆ. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲಮೊಗ್ರು ಕಲ್ಮಕಾರು, ಹರಿಹರ ಪಲ್ಲತ್ತಡ್ಕ, ಐನೆಕಿದು, ಗುತ್ತಿಗಾರು, ಬಳ್ಪ, ಯೇನೆಕಲ್ಲು, ಕೈಕಂಬ, ಪಂಜ ಸೇರಿದಂತೆ ಕೆಲವೆಡೆ

ಕರಾವಳಿಯ ಹಲವೆಡೆ ತಂಪೆರೆದ ಮಳೆರಾಯ| ಗುಂಡ್ಯದಲ್ಲಿ ಮರ ಬಿದ್ದು ಹಾನಿ Read More »