April 2023

ಭಾರತದಲ್ಲಿ ವಾಟ್ಸಪ್ ಸರ್ವರ್ ಡೌನ್; ಪರದಾಡುತ್ತಿರುವ ಬಳಕೆದಾರರು

ಸಮಗ್ರ ನ್ಯೂಸ್: ಭಾರತದಲ್ಲಿ ಕೆಲವು ಬಳಕೆದಾರರಿಗೆ WhatsApp ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. Downdetector ಪ್ರಕಾರ, ಅಪ್ಲಿಕೇಶನ್ ಕಳೆದ ರಾತ್ರಿಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂದು ಕೂಡ ಮುಂದುವರೆದಿದೆ ಎಂದು ತಿಳಿದುಬಂದಿದೆ. ಈ ಸಮಸ್ಯೆ ಎದುರಿಸಿದ ಬಗ್ಗೆ ಬಳಕೆದಾರರು Twitter ನಲ್ಲಿ ಸ್ಥಗಿತದ ಬಗ್ಗೆ ದೂರು ನೀಡಿದ್ದಾರೆ. ಈ ಮೂಲಕ ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಸ್ವೀಕರಿಸಿದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಆದಾಗ್ಯೂ, ಆಂಡ್ರಾಯ್ಡ್ ಬೀಟಾ ಬಳಕೆದಾರರಲ್ಲಿ ಈ ಸಮಸ್ಯೆಯು ಹೆಚ್ಚು ಪ್ರಚಲಿತವಾಗಿದೆ.

ಭಾರತದಲ್ಲಿ ವಾಟ್ಸಪ್ ಸರ್ವರ್ ಡೌನ್; ಪರದಾಡುತ್ತಿರುವ ಬಳಕೆದಾರರು Read More »

ಬೆಳ್ತಂಗಡಿ: ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲೇಟು| ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ

ಸಮಗ್ರ ನ್ಯೂಸ್: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ನಾಮಪತ್ರ ಸಲ್ಲಿಸಿ ತೆರಳುತ್ತಿದ್ದ ವೇಳೆ ಕಾರ್ಯಕರ್ತರ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದು‌ ಬೆಳ್ತಂಗಡಿ ‌ಉದ್ವಿಗ್ನವಾಗಿದೆ. ಹರೀಶ್ ಪೂಂಜಾ ನಾಮಪತ್ರ ಸಲ್ಲಿಸಿ ಮರಳುತ್ತಿದ್ದ ವೇಳೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ನಾಮಪತ್ರ ಸಲ್ಲಿಸಲು ಆಗಮಿಸುತ್ತಿದ್ದರು.‌ ಉಭಯ ತಂಡದಲ್ಲಿಯೂ ಸಾವಿರಾರು ಕಾರ್ಯಕರ್ತರು ಇದ್ದರು. ಈ ವೇಳೆ ಕಾಂಗ್ರೆಸ್ ಪುಂಡನೊಬ್ಬ ಬಿಜೆಪಿ ಕಾರ್ಯಕರ್ತನ ಕಾರಿಗೆ ಬಾಟಲ್ ಮತ್ತು ಕಲ್ಲು ಎಸೆದಿದ್ದು ಇದರ ಪರಿಣಾಮ ಕಾರಿನ ಗ್ಲಾಸ್ ಪುದಿಪುಡಿಯಾಗಿದೆ. ಸ್ಥಳದಲ್ಲಿ ಉಧ್ವಿಗ್ನ ವಾತಾವರಣ

ಬೆಳ್ತಂಗಡಿ: ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲೇಟು| ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ Read More »

ಸುಳ್ಯ: ಹರಿವು ನಿಲ್ಲಿಸಿದ ಪಯಸ್ವಿನಿ| ಏಳು ವರ್ಷಗಳ ಬಳಿಕ ಮತ್ತೆ ಬರಗಾಲದ ಕರಿಛಾಯೆ

ಸಮಗ್ರ ನ್ಯೂಸ್: ವಿಪರೀತ ಬಿಸಿಲು ಹಾಗ ಸುರಿಯದ ಬೇಸಿಗೆ ಮಳೆಯಿಂದಾಗಿ ಸುಳ್ಯದ ಜೀವನದಿ ಪಯಸ್ವಿನಿ ಹರಿವು ನಿಲ್ಲಿಸಿದೆ. ಏಳು ವರ್ಷಗಳ ಬಳಿಕ ಮತ್ತೆ ತಾಲೂಕಿನ ಹಲವೆಡೆ ನೀರಿಗೆ ತತ್ವಾರ ಎದುರಾಗಿದ್ದು, ಮಳೆ ಸುರಿಯದಿದ್ದರೆ‌ ಜಲಮೂಲಗಳು ಸಂಪೂರ್ಣ ಬರಿದಾಗಲಿವೆ. ಭೂಮಿ ಬೆಂದು ಬರಡಾಗಿ ಬಸವಳಿಯುತ್ತಿದ್ದಂತೆ ಜಲಮೂಲಗಳು ಆವಿಯಾಗಿ ಬತ್ತಿ ಬರಡಾಗುತಿವೆ. ಬರಗಾಲದ ಮತ್ತು ನೀರಿಗೆ ಹಾಹಾಕಾರದ ಮುನ್ಸೂಚನೆ ನೀಡಿ ಸುಳ್ಯದ ಜೀವ ನದಿ ಪಯಸ್ವಿನಿ ಬತ್ತಿ ಹೋಗಿದೆ. ವಿಶಾಲ ನದಿ ಒಡಲಲ್ಲಿ‌ ಅಲ್ಲಲ್ಲಿ ಹೊಂಡಗಳಲ್ಲಿ ಮಾತ್ರ ಅಲ್ಪ ಸ್ವಲ್ಪ

ಸುಳ್ಯ: ಹರಿವು ನಿಲ್ಲಿಸಿದ ಪಯಸ್ವಿನಿ| ಏಳು ವರ್ಷಗಳ ಬಳಿಕ ಮತ್ತೆ ಬರಗಾಲದ ಕರಿಛಾಯೆ Read More »

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಕಿರಣ್ ಕೆ ವಿ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ

ಸಮಗ್ರ ನ್ಯೂಸ್: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಆಯೋಜಿಸಿದ್ದ ಕರೋಕೆ ಸಂಗೀತ ಕಾರ್ಯಕ್ರಮವು ಇತ್ತೀಚಿಗೆ ನೆರವೇರಿತು . ಗಾಯಕರು ಹಾಗೂ ಪೊಲೀಸ್ ಅಧಿಕಾರಿಯಾದ ಕೃಷ್ಣ ಸೀತಂಗೋಳಿ ಅವರ ಸುಪುತ್ರ ದಿವಂಗತ ಕಿರಣ್ ಕೆ ವಿ ಅವರ 3 ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಕರೋಕೆ ಗಾಯನ ಕಾರ್ಯಕ್ರಮವು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರಾದ ಎಚ್ .ಭೀಮರಾವ್ ವಾಷ್ಠರ್ ಅವರ ಅದ್ಯಕ್ಷತೆಯಲ್ಲಿ ಮೂಡಿಬಂತು . ಸಂಗೀತ ಗಾಯನ ಕಾರ್ಯಕ್ರಮದಲ್ಲಿ ವಿಶೇಷವಾಗಿ ಚಲನಚಿತ್ರದ ಶೋಕಗೀತೆಗಳನ್ನೇ

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಕಿರಣ್ ಕೆ ವಿ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ Read More »

ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಈ ಬಾರಿಯೂ ಕುಕ್ಕೆ ನಂ.1| ಸುಬ್ರಹ್ಮಣ್ಯನ ಆದಾಯ ಕೇಳಿದ್ರೆ ಬೆರಗಾಗ್ತೀರಾ..!

ಸಮಗ್ರ ನ್ಯೂಸ್: ರಾಜ್ಯದ ಶ್ರೀಮಂತ ದೇವಸ್ಥಾನ ಎಂಬ ಖ್ಯಾತಿಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಉಳಿಸಿಕೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಈ ಬಾರಿಯೂ 123 ಕೋಟಿ ರೂ. ಆದಾಯ ಗಳಿಸುವ ಮೂಲಕ ರಾಜ್ಯದಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ. 2022ರ ಏಪ್ರಿಲ್‌ನಿಂದ 2023ರ ಮಾ.31ರವರೆಗಿನ ಆರ್ಥಿಕ ವರ್ಷದಲ್ಲಿ 123,64,49,480 ರೂ. ಆದಾಯ ಗಳಿಸಿದೆ. ದೇವಾಲಯಕ್ಕೆ ಹರಕೆ ಸೇವೆ, ಕಾಣಿಕೆ ಮಾತ್ರವಲ್ಲದೇ ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಕೃಷಿ ತೋಟದಿಂದಲೂ ಆದಾಯ ಬರುತ್ತದೆ. ಕೊರೊನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಭಕ್ತರ ಪ್ರವೇಶಕ್ಕೆ

ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಈ ಬಾರಿಯೂ ಕುಕ್ಕೆ ನಂ.1| ಸುಬ್ರಹ್ಮಣ್ಯನ ಆದಾಯ ಕೇಳಿದ್ರೆ ಬೆರಗಾಗ್ತೀರಾ..! Read More »

ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಬಿ ಫಾರಂ ಪಡೆದುಕೊಂಡ ಜಗದೀಶ್ ಶೆಟ್ಟರ್| ಹು. ಧಾ‌ರವಾಡ ಸೆಂಟ್ರಲ್ ನಿಂದ ಸ್ಪರ್ಧೆ

ಸಮಗ್ರ ನ್ಯೂಸ್: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಅಧಿಕೃತವಾಗಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರ್ಪಡೆ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿ ಫಾರಂ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಜಗದೀಶ್ ಶೆಟ್ಟರ್ ಗೆ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಬಿ ಫಾರಂ ಪಡೆದಿದ್ದಾರೆ. ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿಯಲ್ಲಿ ಇಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ

ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಬಿ ಫಾರಂ ಪಡೆದುಕೊಂಡ ಜಗದೀಶ್ ಶೆಟ್ಟರ್| ಹು. ಧಾ‌ರವಾಡ ಸೆಂಟ್ರಲ್ ನಿಂದ ಸ್ಪರ್ಧೆ Read More »

ದೇವರಿಗಾಗಿ ಶಿರವನ್ನು ಛೇಧಿಸಿ ಅಗ್ನಿಕುಂಡಕ್ಕೆ ಅರ್ಪಿಸಿಕೊಂಡ ದಂಪತಿ| ಕಲಿಯುಗದಲ್ಲಿ ಹೀಗೂ ಉಂಟಾ!?

ಸಮಗ್ರ ನ್ಯೂಸ್: ಅಪಾರ ದೈವ ಭಕ್ತಿಯ ಹೊಂದಿದ್ದ ದಂಪತಿಯೊಂದು ತಮ್ಮ ಶಿರವನ್ನೇ ದೇವರಿಗೆ ಅರ್ಪಿಸಿರುವ ಘಟನೆ ಗುಜರಾತ್‌ ನ ರಾಜ್ ಕೋಟ್‌ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಹೇಮುಭಾಯಿ ಮಕ್ವಾನಾ ಮತ್ತು ಅವರ ಪತ್ನಿ ಹಂಸಾಬೆನ್ ಅಪಾರ ದೈವ ಭಕ್ತಿಯನ್ನು ಹೊಂದಿದ್ದರು. ದೇವರಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದವಿದ್ದ ದಂಪತಿ, ತಮ್ಮ ಜೀವವನ್ನೇ ದೇವರಿಗಾಗಿ ಅರ್ಪಿಸಿದ್ದಾರೆ. ತಮ್ಮ ಗುಡಿಸಲಿನಲ್ಲಿ ದಂಪತಿ ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುತ್ತಿದ್ದರು. ದೇವರಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಒಂದು ಯೋಜನೆಯನ್ನು

ದೇವರಿಗಾಗಿ ಶಿರವನ್ನು ಛೇಧಿಸಿ ಅಗ್ನಿಕುಂಡಕ್ಕೆ ಅರ್ಪಿಸಿಕೊಂಡ ದಂಪತಿ| ಕಲಿಯುಗದಲ್ಲಿ ಹೀಗೂ ಉಂಟಾ!? Read More »

ಸುಳ್ಯದಲ್ಲಿ ಮೀಸಲಾತಿ ನಿಜಕ್ಕೂ ಫಲಪ್ರದವಾಗಿದೆಯೇ?

ಸಮಗ್ರ ನ್ಯೂಸ್: ಈಚೆಗೆ ಸುಳ್ಯದ ಎಲ್ಲಾ ಅಭ್ಯರ್ಥಿಗಳ ಬಗ್ಗೆ ಗಮನಿಸುತ್ತಿದ್ದೆ. ಅದರಲ್ಲಿ ಬಿಜೆಪಿ ಅಭ್ಯರ್ಥಿಯ ಬಗೆಗಿನ ವಿಡಿಯೋ ಗಮನಿಸುತ್ತಿದ್ದೆ ಅವರು ಭಾವನಾತ್ಮಕವಾಗಿ ಮಾತನಾಡಿದರು.ಅವರ ಹಿನ್ನೆಲೆ ಗಮನಿಸಿ ಅಚ್ಚರಿ ಆಯ್ತ. ಸಮಾಜದ ಅತ್ಯಂತ ಹಿಂದುಳಿದ ವರ್ಗ ಎಂದು ಕರೆಯಿಸಿಕೊಳ್ಳುವ ಸಮುದಾಯಕ್ಕೆ ನೀಡಿದ ಗೌರವ , ಇದರಲ್ಲಿ ಎರಡು ಮಾತಿಲ್ಲ. ಆದರೆ ಸುಳ್ಯದಂತಹ ಪ್ರದೇಶದಲ್ಲಿ ಮೀಸಲಾತಿ ಬಂದು ಇನ್ನೂ ಆ ಸಮುದಾಯಗಳ ಪರಿಸ್ಥಿತಿ ಬದಲಾಗಿಲ್ಲ ಎನ್ನುವ ಸ್ಥಿತಿ ತಿಳಿದು ಅಚ್ಚರಿಯೂ ಆಯಿತು. ಆ ವಿಡಿಯೋ ನಡುವೆ ಓಣಿಯಡ್ಕ ಚಂದ್ರಣ್ಣ ಅವರ

ಸುಳ್ಯದಲ್ಲಿ ಮೀಸಲಾತಿ ನಿಜಕ್ಕೂ ಫಲಪ್ರದವಾಗಿದೆಯೇ? Read More »

ಕಮಲ ಎಸೆದು ಕೈ ಹಿಡಿದ ಜಗದೀಶ್ ಶೆಟ್ಟರ್

ಸಮಗ್ರ ನ್ಯೂಸ್: ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ದೊರಕದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್‌ ಬೈ ಹೇಳಿದ್ದು, ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ ವರಿಷ್ಠರ ಸಂಧಾನಕ್ಕೆ ಮಣಿಯದ ಶೆಟ್ಟರ್ ಕೆಪಿಸಿಸಿ ಕಚೇರಿಯಲ್ಲಿ ಇಂದು ಬೆಳಗ್ಗೆ 9.30ಗೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರೆ ಕಾಂಗ್ರೆಸ್ ನಾಯಕರು ಶೆಟ್ಟರ್‌ರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಕಮಲ ಎಸೆದು ಕೈ ಹಿಡಿದ ಜಗದೀಶ್ ಶೆಟ್ಟರ್ Read More »

ಯಾಕಿಂಗಾಡ್ತಾರೋ ಸಿದ್ದರಾಮಯ್ಯ| ಬಿಜೆಪಿ ಬದಲು ಬಾಯಿ ತಪ್ಪಿ ಕಾಂಗ್ರೆಸ್ ಗೇ ಬೈದುಕೊಂಡ ಮಾಜಿ ಸಿಎಂ

ಸಮಗ್ರ ನ್ಯೂಸ್: ಭಾಷಣದ ಆವೇಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಎಡವಟ್ಟಿನ ಹೇಳಿಕೆ ನೀಡಿದ್ದಾರೆ. ನಿನ್ನೆ ಕೋಲಾರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ‘ರಾಜ್ಯದ ಮಾನ ಮರ್ಯಾದೆ ತೆಗೆದದ್ದು ಕಾಂಗ್ರೆಸ್’ ಎಂದು ಹೇಳಿದ್ದಾರೆ. ಬಳಿಕ ಸರಿಪಡಿಸಿಕೊಂಡ ಅವರು ಮಾತು ಮುಂದುವರೆಸಿದರು. ಮೇ ೧೦ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಮಾಡಲು ಅವಕಾಶ ಕೊಟ್ಟರೆ ಈ ರಾಜ್ಯದ ಜನರ ನೆಲ ಜಲ ಭಾಷೆಯನ್ನು ರಕ್ಷಣೆ ಮಾಡ್ತಾರೆ ಎಂಬುದನ್ನು ವಿಚಾರ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಯಾಕಿಂಗಾಡ್ತಾರೋ ಸಿದ್ದರಾಮಯ್ಯ| ಬಿಜೆಪಿ ಬದಲು ಬಾಯಿ ತಪ್ಪಿ ಕಾಂಗ್ರೆಸ್ ಗೇ ಬೈದುಕೊಂಡ ಮಾಜಿ ಸಿಎಂ Read More »