April 2023

ಹೊತ್ತಿ ಉರಿಯಲಿದ್ದಾನೆ ಸೂರ್ಯ| ಆದಷ್ಟೂ ಮನೆಯೊಳಗೆ ಇರಲು ನಾಸಾ ಸೂಚನೆ

ಸಮಗ್ರ ನ್ಯೂಸ್: ಸೂರ್ಯ‌ ಮುಂದಿನ ಒಂದೆರಡು ದಿನಗಳಲ್ಲಿ ಇನ್ನಷ್ಟು ಪ್ರಖರಗೊಳ್ಳಲಿದ್ದು ಹೆಚ್ಚು ಬಿಸಿಲಿನ ತಾಪಮಾನ ಅಂತೆಯೇ ಬಿಸಿಗಾಳಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ಎಚ್ಚರಿಸಿದೆ. ಸೂರ್ಯನು 11 ವರ್ಷಗಳ ಆವರ್ತನೆಯ ಉತ್ತುಂಗ ಮಟ್ಟವನ್ನು ತಲುಪುವ ಸಮಯದಲ್ಲಿ ಇನ್ನಷ್ಟು ಪ್ರಖರಗೊಳ್ಳುತ್ತದೆ ಎಂದು ಸಂಸ್ಥೆ ತಿಳಿಸಿದೆ.‌‌ ಆದ್ದರಿಂದ ಮುಂದಿನ ಎರಡ್ಮೂರು ದಿ‌ನ ಮನೆಯಿಂದ ಹೊರಗೆ ಬರೋದನ್ನು ಆದಷ್ಟು ತಪ್ಪಿಸುವುದು ಒಳಿತು ಎಂದು ನಾಸಾ ತಿಳಿಸಿದೆ. ಸೌರ ಬಿರುಗಾಳಿಯ ಆರಂಭದ ಹೊಡೆತವು ಏಪ್ರಿಲ್ 24 ರಂದು ಭೂಮಿಯನ್ನು […]

ಹೊತ್ತಿ ಉರಿಯಲಿದ್ದಾನೆ ಸೂರ್ಯ| ಆದಷ್ಟೂ ಮನೆಯೊಳಗೆ ಇರಲು ನಾಸಾ ಸೂಚನೆ Read More »

ನಮೀಬಿಯಾದಿಂದ ತಂದ ಮತ್ತೊಂದು ಚೀತಾ ‌ಸಾವು

ಸಮಗ್ರ ನ್ಯೂಸ್: ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಸರ್ಕಾರ ತಂದ ಒಟ್ಟು 20 ಚೀತಾಗಳ ಪೈಕಿ ಒಂದು ಚೀತಾ ಈಗಾಗಲೇ ಸಾವನ್ನಪ್ಪಿದ್ದು ಇದೀಗ ಮತ್ತೊಂದು ಚೀತಾ ಕೂಡಾ ಸಾವನ್ನಪ್ಪಿದೆ.‌ ಮೃತ ಪಟ್ಟಿರುವ ಚಿರತೆ ‘ಉದಯ್’ಗೆ ಆರು ವರ್ಷ ವಯಸ್ಸಾಗಿತ್ತು. ಇದಕ್ಕೂ ಮುನ್ನ ನಮೀಬಿಯಾದ ಚೀತಾ ಸಶಾ ಮಾರ್ಚ್ 27 ರಂದು ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತ್ತು. ಬೆಳಿಗ್ಗೆ ತಪಾಸಣೆಯ ಸಮಯದಲ್ಲಿ, ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾ ತಲೆ ತಗ್ಗಿಸಿ ಮಂಕಾಗಿರುವುದು ಕಂಡುಬಂದಿತು. ನಂತ್ರ ಹಾಜರಾದ ಪಶುವೈದ್ಯರು, ಹಿರಿಯ ಅಧಿಕಾರಿಗಳಿಗೆ

ನಮೀಬಿಯಾದಿಂದ ತಂದ ಮತ್ತೊಂದು ಚೀತಾ ‌ಸಾವು Read More »

ವಿಧಾನ ಸಭಾ ಚುನಾವಣೆ| ನಾಮಪತ್ರ ವಾಪಾಸಾತಿಗೆ ಇಂದೇ ಕೊನೆದಿನ| ಬಂಡಾಯಗಾರರ ಶಮನಕ್ಕೆ ಮುಂದಾದ ಪಕ್ಷದ ನಾಯಕರು

ಸಮಗ್ರ‌ ನ್ಯೂಸ್: ರಾಜ್ಯ ವಿಧಾನಸಭೆ ಚುನಾವಣೆ ನಾಮಪತ್ರ ವಾಪಸ್ ಪಡೆಯಲು ಇಂದೇ ಕೊನೆ ದಿನವಾಗಿದೆ. 3632 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. 502 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕರಿಸಲಾಗಿದೆ. 3130 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ. ಬಿಜೆಪಿ ಎಲ್ಲಾ ಇನ್ನೂ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 75 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. 68 ಮಂದಿ ಲಿಂಗಾಯಿತರಿಗೆ ಬಿಜೆಪಿ ಟಿಕೆಟ್ ನೀಡಲಾಗಿದ್ದು, 134 ಪದವೀಧರರು, 37 ಸ್ನಾತಕೋತ್ತರ ಪದವೀಧರರು ಸೇರಿದ್ದಾರೆ. ಕಾಂಗ್ರೆಸ್ 223 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 53

ವಿಧಾನ ಸಭಾ ಚುನಾವಣೆ| ನಾಮಪತ್ರ ವಾಪಾಸಾತಿಗೆ ಇಂದೇ ಕೊನೆದಿನ| ಬಂಡಾಯಗಾರರ ಶಮನಕ್ಕೆ ಮುಂದಾದ ಪಕ್ಷದ ನಾಯಕರು Read More »

ರಾಮನಗರ: ಚಲಿಸುತ್ತಿರುವಾಗಲೇ‌ ಬೇರ್ಪಟ್ಟ ರೈಲು ಬೋಗಿಗಳು| ಸಂಭಾವ್ಯ ಅಪಾಯ ಜಸ್ಟ್ ಮಿಸ್!

ಸಮಗ್ರ ನ್ಯೂಸ್: ಚಲಿಸುತ್ತಿರುವಾಗಲೇ ರೈಲಿನ ಬೋಗಿಗಳು ಬೇರ್ಪಟ್ಟ ಆತಂಕಕಾರಿ ಘಟನೆ ರಾಮನಗರದಲ್ಲಿ ನಡೆದಿದೆ. ರಾಮನಗರದ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ಚಲಿಸುತ್ತಿದ್ದ ರೈಲೊಂದರ ಬೋಗಿಗಳು ಬೇರ್ಪಟಿದ್ದು, ಈ ವೇಳೆ ರೈಲಿನಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಮೈಸೂರಿನಿಂದ ಬೆಂಗಳೂರು ಕಡೆಗೆ ಹೊರಟಿದ್ದ ತೂತುಕುಡಿ ಎಕ್ಸ್‌ಪ್ರೆಸ್ ರಾತ್ರಿ 8ರ ವೇಳೆಗೆ ರಾಮನಗರ ನಿಲ್ದಾಣ ತಲುಪಿದ್ದು, ಅಲ್ಲಿಂದ ಮತ್ತೆ ಪ್ರಯಾಣ ಮುಂದುವರಿಸುತ್ತಲೇ ಶಬ್ದ ಕಾಣಿಸಿಕೊಂಡಿತು. ನೋಡ ನೋಡುತ್ತಲೇ ರೈಲಿನ ಮಧ್ಯಭಾಗದ ಬೋಗಿಗಳು ಬೇರ್ಪಟ್ಟಿವೆ. ಈ ಬಗ್ಗೆ ಮಾಹಿತಿ ನೀಡಿರುವ ಪ್ರಯಾಣಿಕರೊಬ್ಬರು, ‘ರೈಲು

ರಾಮನಗರ: ಚಲಿಸುತ್ತಿರುವಾಗಲೇ‌ ಬೇರ್ಪಟ್ಟ ರೈಲು ಬೋಗಿಗಳು| ಸಂಭಾವ್ಯ ಅಪಾಯ ಜಸ್ಟ್ ಮಿಸ್! Read More »

ಚಾರ್ಮಾಡಿ ಘಾಟ್: ತಡೆಗೋಡೆ ಬಿರುಕು, ಕುಸಿಯುವ ಭೀತಿ|ದುರಸ್ತಿಗೊಳಿಸುವಂತೆ ವಾಹನ ಚಾಲಕರ ಒತ್ತಾಯ

ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯ (charmadi ghat) ಅಣ್ಣಪ್ಪ ದೇವಸ್ಥಾನದ ಸಮೀಪ ಒಮ್ಮುಖ ಇಕ್ಕಟ್ಟು ರಸ್ತೆಯಲ್ಲಿ ತಡೆಗೋಡೆ ಕುಸಿಯುವ ಆತಂಕ ಎದುರಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಬಾರಿ ಕಿರಿದಾದ ರಸ್ತೆ ಇದಾಗಿದ್ದು ಈ ರಸ್ತೆಯಲ್ಲಿ ಒಂದೇ ವಾಹನ ಸಾಗಲು ಆಗುವುದರಿಂದ ಯಾವುದೋ ವಾಹನ ತಡೆಗೋಡೆಗೆ ಡಿಕ್ಕಿ ಹೊಡೆದಿರುವ ಪರಿಣಾಮ ತಡೆಗೋಡೆ ತಳದಿಂದಲೇ ಬಿರುಕು ಬಿಟ್ಟಿದ್ದು ತಡೆಗೊಡೆ ಕುಸಿಯುವ ಸಂಭವವೇ ಹೆಚ್ಚಾಗಿದೆ. ಈ ರಸ್ತೆಯ ಬಲ ಭಾಗದಲ್ಲಿ ಬೃಹತ್ ಬಂಡೆ ಆಕಾಶಕ್ಕೆ ಮುಖ ಮಾಡಿರುವುದರಿಂದ ಈ ಸ್ಥಳದಲ್ಲಿ ರಸ್ತೆ ಮಾಡಲು

ಚಾರ್ಮಾಡಿ ಘಾಟ್: ತಡೆಗೋಡೆ ಬಿರುಕು, ಕುಸಿಯುವ ಭೀತಿ|ದುರಸ್ತಿಗೊಳಿಸುವಂತೆ ವಾಹನ ಚಾಲಕರ ಒತ್ತಾಯ Read More »

ಸುರತ್ಕಲ್: “ಡಬಲ್ ಇಂಜಿನ್ ಸರಕಾರದ ಇಂಜಿನ್ ಮಾತ್ರ ಇಲ್ಲಿದೆ, ಬೋಗಿ ಯುಪಿ, ಗುಜರಾತ್ ನಲ್ಲಿದೆ” -ಇನಾಯತ್ ಅಲಿ

Samagra news “ಜನರು ಕೋವಿಡ್ ಬಳಿಕ ಬೆಲೆ ಏರಿಕೆಯಿಂದ ತತ್ತರಿಸಿಹೋಗಿದ್ದಾರೆ. ಅದೆಷ್ಟೋ ವಿದ್ಯಾವಂತ ಯುವಜನತೆ ಉದ್ಯೋಗ ಕಳೆದುಕೊಂಡಿದ್ದಾರೆ. ಬಿಜೆಪಿಯವರು ತಮ್ಮದು ಡಬಲ್ ಇಂಜಿನ್ ಸರಕಾರ ಅಂತ ಹೇಳ್ತಾರೆ. ಆದರೆ ಅದರ ಇಂಜಿನ್ ಮಾತ್ರ ಇಲ್ಲಿದೆ, ಬೋಗಿ ದೂರದ ಯುಪಿ, ಗುಜರಾತ್ ಕಡೆಗೆ ಹೊರಟುಹೋಗಿದೆ. ಅಭಿವೃದ್ಧಿ ಮಾಡುವುದನ್ನು ಬಿಟ್ಟು ಸಮಾಜದಲ್ಲಿ ಜಾತಿ ಮತಗಳ ಮಧ್ಯೆ ಹುಳಿ ಹಿಂಡುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಈ ಬಾರಿ ಜನರು ಬಿಜೆಪಿ ಸರಕಾರದಿಂದ ಭ್ರಮ ನಿರಸನಗೊಂಡು ಕಾಂಗ್ರೆಸ್ ಕೈಹಿಡಿಯಲಿದ್ದಾರೆ. ಈ ಮೂಲಕ

ಸುರತ್ಕಲ್: “ಡಬಲ್ ಇಂಜಿನ್ ಸರಕಾರದ ಇಂಜಿನ್ ಮಾತ್ರ ಇಲ್ಲಿದೆ, ಬೋಗಿ ಯುಪಿ, ಗುಜರಾತ್ ನಲ್ಲಿದೆ” -ಇನಾಯತ್ ಅಲಿ Read More »

ವಿರಾಜಪೇಟೆ: ವರ್ತಕನಿಗೆ ಗುಂಡು ಹೊಡೆದ ನಿವೃತ ಎಸ್ಪಿ ಮಗ

Samagra news: ನಿವೃತ ಎಸ್ಪಿ ಮಗನೋರ್ವ ವರ್ತಕನಿಗೆ ಗುಂಡು ಹೊಡೆದ ಘಟನೆ ವಿರಾಜಪೇಟೆ ತಾಲೂಕು ಅಮ್ಮತ್ತಿಯಲ್ಲಿ ನಡೆದಿದೆ. ನಿವೃತ ಎಸ್ಪಿ ನೆಲ್ಲಮಕ್ಕಡ ಚಿನ್ನಪ್ಪ ಎಂಬುವವರ ಪುತ್ರ ರಂಜಿತ್ ಎಂಬಾತ ಪ್ರಕರಣ ಅರೋಪಿ. ಈತ ಬೋಪಣ್ಣ ಎಂಬ ವರ್ತಕ ಮೇಲೆ ಸರ್ವಿಸ್ ರಿವಾಲ್ವರ್ ನಿಂದ ಮೂರು ಸುತ್ತಿನ ಗುಂಡು ಹಾರಿಸಿದ್ದಾನೆ. ಈ ವೇಳೆ ಕೂದುಲೆಳೆಯಲ್ಲಿ ಪ್ರಾಣಾಪಾಯದಿಂದ ವರ್ತಕ ಬೋಪಣ್ಣ ಪಾರಾಗಿದ್ದಾರೆ. ಆರೋಪಿ ರಂಜಿತ್ ಸಣ್ಣಪುಟ್ಟ ಗಾಯಗೊಂಡಿದ್ದು ಅಮ್ಮತ್ತಿ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಆಸ್ಪತ್ರೆಯಲ್ಲೇ ಪೊಲೀಸರು ಬೀಡುಬಿಟ್ಟಿದ್ದಾರೆ

ವಿರಾಜಪೇಟೆ: ವರ್ತಕನಿಗೆ ಗುಂಡು ಹೊಡೆದ ನಿವೃತ ಎಸ್ಪಿ ಮಗ Read More »

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಬೆಂಗಳೂರನ್ನೇ ಲೂಟಿ ಮಾಡಿದ್ದಾರೆ: ಬಸವರಾಜ ಬೊಮ್ಮಾಯಿ

Samagra news: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಬಿಡಿಎ, ಇಂಧನ ಹಾಗೂ ನೀರಾವರಿಯಲ್ಲಿ ಅಕ್ರಮ ಮಾಡಿ, ಇಡೀ ಬೆಂಗಳೂರನ್ನೇ ಲೂಟಿ ಮಾಡಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಆರೋಪಿಸಿದ್ದಾರೆ. ನಗರದ ಯಲಂಹಕದಲ್ಲಿ ಚುನಾವಣಾ ಪ್ರಚಾರ ಹಾಗೂ ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ 8 ಸಾವಿರ ಕೋಟಿ ರೂ. ಅಕ್ರಮ ಮಾಡಿದ್ದಾರೆ. ಬಿಡಿಎ, ಇಂಧನ ಹಾಗೂ ನೀರಾವರಿಯಲ್ಲಿ ಅಕ್ರಮ ಮಾಡಿದ್ದಾರೆಂದು ಆರೋಪಿಸಿದರು. ಸಿದ್ದರಾಮಯ್ಯನವರ ಆಡಳಿತದಲ್ಲಿ ಶಿಕ್ಷಕರ ನೇಮಕಾತಿ, ಪ್ರಶ್ನೆಪತ್ರಿಕೆ ಸೋರಿಕೆ, ರೀಡೂ ಮುಂತಾದಂತಹ ಹಗರಣಗಳು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಬೆಂಗಳೂರನ್ನೇ ಲೂಟಿ ಮಾಡಿದ್ದಾರೆ: ಬಸವರಾಜ ಬೊಮ್ಮಾಯಿ Read More »

ಎಪ್ರಿಲ್ 27 ರಂದು ರಾಹುಲ್ ಗಾಂಧಿ ಮಂಗಳೂರಿಗೆ

ಸಮಗ್ರ ನ್ಯೂಸ್: ಎಪ್ರಿಲ್ 27 ರಂದು ಮಂಗಳೂರಿನಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ್ ಭಂಡಾರಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಎಪ್ರಿಲ್ 27ರಂದು ಕಾಪುವಿಗೆ ಆಗಮಿಸುವ ರಾಹುಲ್ ಗಾಂಧಿ ಅಲ್ಲಿನ ಮೀನುಗಾರರ ಜೊತೆಗಿನ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಮಂಗಳೂರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎ.24ರಂದು ಮಂಗಳೂರಿಗೆ ಆಗಮಿಸಿ ಎ.25ರಂದು ಸುಳ್ಯ, ಪುತ್ತೂರು, ಬೆಳ್ತಂಗಡಿ ಕ್ಷೇತ್ರಗಳಿಗೆ

ಎಪ್ರಿಲ್ 27 ರಂದು ರಾಹುಲ್ ಗಾಂಧಿ ಮಂಗಳೂರಿಗೆ Read More »

ಸುಳ್ಯ: ಅನಾರೋಗ್ಯ ಹಿನ್ನೆಲೆ ಮೂರು ವರ್ಷದ ಕಂದಮ್ಮ ಮೃತ್ಯು

ಸಮಗ್ರ ನ್ಯೂಸ್: ಅನಾರೋಗ್ಯ ಹಿನ್ನೆಲೆ ಮೂರು ವರ್ಷದ ಪುಟ್ಟ ಕಂದಮ್ಮ ಆಸ್ಪತ್ರೆಯಲ್ಲಿ ಅಸು ನೀಗಿದ ಘಟನೆ ಮಾ.22ರ ರಾತ್ರಿ ಸಂಭವಿಸಿದೆ. ಮೃತಪಟ್ಟ ಕಂದಮ್ಮನನ್ನು ಸುಳ್ಯ ಬೋರುಗುಡ್ಡೆ ನಿವಾಸಿ ಮುನಾಫರ್ ಶಾ ರ ಮಗಳು ಆಯಿಷಾ ಮಿಝಾ(3) ಎಂದು ಗುರುತಿಸಲಾಗಿದೆ. ಹೃದಯ ಸಂಬಂಧಿತ ಅನಾರೋಗ್ಯದಿಂದ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಿನ್ನೆ ಶುಕ್ರವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದೆ. ಪವಿತ್ರ ಈದುಲ್ ಫಿತ್ರ್ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲೀಗ ಶೋಕ ಆವರಿಸಿದೆ.

ಸುಳ್ಯ: ಅನಾರೋಗ್ಯ ಹಿನ್ನೆಲೆ ಮೂರು ವರ್ಷದ ಕಂದಮ್ಮ ಮೃತ್ಯು Read More »