Ad Widget .

ಸುರಕ್ಷಿತವಲ್ಲ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇ| ಪ್ರಯಾಣಿಕರ ಪ್ರಾಣಕ್ಕಿಲ್ಲ ಗ್ಯಾರಂಟಿ!!

ಸಮಗ್ರ ನ್ಯೂಸ್: ರಾಜ್ಯದ ಸುಸಜ್ಜಿತ ಹೆದ್ದಾರಿ ಎಂದು ಹೇಳುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಕನಿಷ್ಠ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ. ಪರಿಣಾಮ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಾಗಿದೆ.

Ad Widget . Ad Widget .

ನೂತನ ಬೆಂಗಳೂರು-ಮೈಸೂರು ಹೆದ್ದಾರಿ ಪ್ರಯಾಣಕ್ಕೆ ಮುಕ್ತವಾದ ಬಳಿಕ ಅಪಘಾತಗಳು ಹೆಚ್ಚಾಗಿವೆ. ಮೊದಲ ಹಂತದ ಹೆದ್ದಾರಿ ಉದ್ಘಾಟನೆಗೊಂಡು ಟೋಲ್‌ ಶುಲ್ಕ ಸಂಗ್ರಹಿಸಲು ಆರಂಭಿಸಿದೆಯಾದರೂ, ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಪ್ರಯಾಣಿಕರಿಗೆ ದೊರೆಯಬೇಕಾದ ಕನಿಷ್ಠ ಸುರಕ್ಷತಾ ಸೌಲಭ್ಯಗಳು ಇಲ್ಲ ಎಂಬ ಸಂಗತಿ ಏಪ್ರಿಲ್‌ 22 ರಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಸಮಯದಲ್ಲಿ ನಡೆದ ಪ್ರಸಂಗಗಳಿಂದ ಅನಾವರಣಗೊಂಡಿದೆ.

Ad Widget . Ad Widget .

ಹೆದ್ದಾರಿ ಮಧ್ಯದಲ್ಲಿ ಅಪಘಾತ ಸಂಭವಿಸಿದರೆ ಆಂಬ್ಯುಲೆನ್ಸ್‌ ಸ್ಥಳಕ್ಕೆ ಬರಲು ಕನಿಷ್ಠ 30 ರಿಂದ 40 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಹೆದ್ದಾರಿಯಲ್ಲಿಅಪಘಾತಕ್ಕೀಡಾದವರು ಸಾವು ಬದುಕಿನ ನಡುವೆ ಹೋರಾಡುವಾಗ ಕ್ಷಣಕ್ಷಣವೂ ಅಮೂಲ್ಯ. ಆಂಬ್ಯುಲೆನ್ಸ್‌ಗಾಗಿ ಇಷ್ಟೊಂದು ಸಮಯದ ಕಾಯ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.

ಹೈವೇ ಆಂಬ್ಯುಲೆನ್ಸ್‌ ಸ್ಥಳಕ್ಕೆ ಬರಲು ಸಮಯವಾಗುವ ಕಾರಣ 108 ಅಥವಾ ಸ್ಥಳೀಯ ತಾಲೂಕು, ಜಿಲ್ಲಾಸರಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್‌ ಆಗಲಿ ಅಥವಾ ಖಾಸಗಿ ಆಂಬ್ಯುಲೆನ್ಸ್‌ ಆಗಲಿ ಸ್ಥಳಕ್ಕೆ ಬರಲು ಡಿವೈಡರ್‌ ಸಮಸ್ಯೆ ಇದೆ. ಚನ್ನಪಟ್ಟಣ ಅಥವಾ ರಾಮನಗರದಿಂದ ಬೈಪಾಸ್‌ ರಸ್ತೆಗೆ ಹೋಗಲು ಎಂಟ್ರಿ ಮತ್ತು ಎಕ್ಸಿಟ್‌ ಗಾಗಿ ಸುಮಾರು 8ರಿಂದ 10 ಕಿಮೀ ದೂರು ಸುತ್ತಾಡಿಕೊಂಡು ಹೋಗಬೇಕು. ಇನ್ನು ಅಪಘಾತ ನಡೆದ ಸ್ಥಳದಿಂದ ಆಸ್ಪತ್ರೆಗೆ ಹಿಂದಿರುಗಲು ಇಷ್ಟೇ ಸಮಯ ಬೇಕಾಗುತ್ತದೆ. ಇದು ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವ ಗಾಯಾಳುಗಳಿಗೆ ಅಪಾಯವಾಗಿ ಪರಿಣಮಿಸಿದೆ.

Leave a Comment

Your email address will not be published. Required fields are marked *