ಸಮಗ್ರ ನ್ಯೂಸ್: ಪುತ್ತೂರು ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ದ್ವಿತೀಯ ಪಿಯು ಪರೀಕ್ಷೆಯನ್ನು ಖಾಸಗಿಯಾಗಿ ಬರೆದು 421 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಗ್ರಾ. ಪಂ. ಅಧ್ಯಕ್ಷೆಯಾದ ಭಾರತಿ ಭಟ್ 24 ವರ್ಷಗಳ ಬಳಿಕ ದ್ವಿತೀಯ ಪಿಯು ಪರೀಕ್ಷೆಯನ್ನು ಬರೆದಿದ್ದಾರೆ ಇನ್ನೂ ಇವರು ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
ಬಡ ಕುಟುಂಬದಲ್ಲಿ ಜನಿಸಿದ್ದ ಭಾರತಿ 1997-98ರಲ್ಲಿ 8ನೇ ತರಗತಿ ತೇರ್ಗಡೆ ಹೊಂದಿದ್ದು, ತಂದೆಯ ವಿಯೋಗದಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಅನಂತರ ವೆಂಕಟ್ರಮಣ ಭಟ್ ಅವರನ್ನು ವಿವಾಹವಾಗಿ ಪಾಣಾಜೆಯಲ್ಲಿ ನೆಲೆಸಿರುವ ಅವರು 2020-21ನೇ ಸಾಲಿನ ಗ್ರಾ.ಪಂ. ಚುನಾ ವಣೆಯಲ್ಲಿ ಸದಸ್ಯೆ ಯಾಗಿ ಆಯ್ಕೆಯಾಗಿ 2 ವರ್ಷ ಗಳಿಂದ ಪಾಣಾಜೆ ಗ್ರಾ.ಪಂ. ಅಧ್ಯಕ್ಷೆಯಾಗಿದ್ದಾರೆ.
ಬೆಳ್ತಂಗಡಿಯ ಕೊಯ್ಯೂರು ಪ.ಪೂ. ಕಾಲೇಜಿನ ಪ್ರಾಚಾರ್ಯ ರಾಗಿರುವ ಪಾಣಾಜೆಯ ಬಾಲಕೃಷ್ಣ ಬೇರಿಕೆ ಅವರ ಮಾರ್ಗದರ್ಶನ ದೊಂದಿಗೆ 2021-22ನೇ ಸಾಲಿನ 10ನೇ ತರಗತಿಯ ಪರೀಕ್ಷೆ ಬರೆದು ಶೇ. 54 ಅಂಕ ಗಳಿಸಿದ್ದರು.