ಸಮಗ್ರ ನ್ಯೂಸ್: ಕೊಪ್ಪ ತಾಲೂಕಿನ ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆತ್ತದಕೊಳಲಿನಲ್ಲಿ ಇದೇ ಮೊದಲ ಭಾರೀ ಆನೆಯ ಲದ್ದಿ ಕಂಡ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ.

ಬೆತ್ತದಕೊಳಲು ಕುಡಿಯುವ ನೀರಿನ ಕೆರೆಯ ಬಳಿ ಆನೆಯ ಹೆಜ್ಜೆ ಹಾಗೂ ಲದ್ದಿ ಕಂಡಿದ್ದು ಅಲ್ಲೆ ಒಂದಷ್ಟು ಜಾಗ ಕೂಡ ಹುಡಿ ಮಾಡಿದೆ. ಎಲ್ಲಿಯೂ ಯಾರ ಕಣ್ಣಿಗೂ ಆನೆ ಕಾಣಿಸದ ಆನೆ ಎಲ್ಲಿದೆ? ಎಲ್ಲಿ ಹೋಗಿದೆ ಎಂಬುದು ತಿಳಿಯದೆ ಜನ ಗಾಬರಿಕೊಂಡಿದ್ದಾರೆ.

ಕತ್ತಲಾದರೆ ಸಾಕು ಕಾಡುಕೋಣಗಳ ಭಯದಿಂದ ಓಡಾಡುತ್ತಿದ್ದ ಬೆತ್ತದಕೊಳಲು ಗ್ರಾಮಸ್ಥರು ಈಗ ಆನೆಯ ಭಯದಿಂದಲೂ ಓಡಾಡುವ ಪರಿಸ್ಥಿತಿ ಎದುರಾಗಿದೆ.