ಸಮಗ್ರ ನ್ಯೂಸ್: ಸುಳ್ಯ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಕೃಷ್ಣಪ್ಪರ ಆಯ್ಕೆಯಿಂದ ಅಸಮಾಧಾನ ಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕ್ಷೇತ್ರದಾದ್ಯಂತ ತಟಸ್ಥರಾಗಿದ್ದು, ಕೃಷ್ಣಪ್ಪರವರು ಕೆಲವು ನಾಯಕರೊಂದಿಗೆ ಪ್ರಚಾರಕ್ಕೆ ಪ್ರಾರಂಭಿಸಿದ್ದಾರೆ. ಆದರೆ ಕ್ಷೇತ್ರದ ಪ್ರತೀ ಗ್ರಾಮಗಳ ಬೂತ್ ಗಳಲ್ಲಿ ಕಾರ್ಯಕರ್ತರು ಹೈಕಮಾಂಡ್ ನಡೆಯಿಂದ ಆಕ್ರೋಷಿತರಾಗಿದ್ದಾರೆ.
ನಂದಕುಮಾರ್ ಪರ ಸುಳ್ಯದಲ್ಲಿ ಅಲೆ ಎದ್ದಿದ್ದು ಕೃಷ್ಣಪ್ಪರ ಪರವಾಗಿ ಪ್ರಚಾರಕ್ಕೆ ತೆರಳುವ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವುದು ವರದಿಯಾಗುತ್ತಿದೆ. ಇದು ನಾಯಕರು ಇರಿಸು ಮುರಿಸಿಗೆ ಕಾರಣವಾಗಿದೆ. ಬಿ ಫಾರಂ ನಂದಕುಮಾರ್ ರವರಿಗೆ ನೀಡಿ ಅಭ್ಯರ್ಥಿಯಾಗಿಸಿದರೆ ಚುನಾವಣಾ ಪ್ರಚಾರಕ್ಕಿಳಿಯುವುದಾಗಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಈ ಮಧ್ಯೆ ನಂದಕುಮಾರ್ ರವರಿಗೆ ಕಾಂಗ್ರೆಸ್ ಬಿ ಫಾರಂ ನೀಡದೆ ಪಕ್ಷೇತರಾಗಿ ಸ್ಪರ್ಧೆಸಿದರೆ ನಂದಕುಮಾರ್ ಅಭಿಮಾನಿ ಕಾಂಗ್ರೆಸ್ ಕಾರ್ಯಕರ್ತರು ಗೆಲ್ಲಿಸಿಕೊಡುವ ಹುಮ್ಮಸ್ಸಿನಲ್ಲಿದ್ದಾರೆ.
ಒಟ್ಟಿನಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೆಲ್ಲುವ ಅಭ್ಯರ್ಥಿ ನಂದಕುಮಾರ್ ಪರವಾಗಿರುವುದು ಮುಖಂಡರಿಗೆ ಮುಖಭಂಗ ಉಂಟು ಮಾಡಿದೆ.