March 2023

ಮಂಗಳೂರು: ಚೂರಿಯಿಂದ ಇರಿದು ಮಹಿಳೆಯ ಹತ್ಯೆ

ಸಮಗ್ರ ನ್ಯೂಸ್: ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಮಂಗಳೂರಿನ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಉಳ್ಳಾಲ ಕೋಟೆಪುರ ಬಸ್‌ ನಿಲ್ದಾಣದ ಸಮೀಪ ನಡೆದಿದೆ. ಹತ್ಯೆಗೆ ಸಂಬಂಧಿಸಿ ಆಕೆಯೊಂದಿಗೆ ವಾಸಿಸುತ್ತಿದ್ದ ದೆಹಲಿ ಮೂಲದ ನಯೀಮ್‌ ಎಂಬಾತ ಈ ಹತ್ಯೆಯನ್ನು ಮಾಡಿ ಪರಾರಿಯಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿಯಿಂದ ಕೋಟೆಪುರಕ್ಕೆ ಬಂದಿದ್ದ ಜೋಡಿ, ಸ್ಥಳೀಯ ಸೆಲೂನ್‌ ಮಾಲೀಕರ ಮೂಲಕ ಬಾಡಿಗೆ ಮನೆಯನ್ನು ಸಂಪರ್ಕಿಸಿ, ಹಮೀದ್‌ ಎಂಬವರ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದರು. ಈ ಸಂದರ್ಭ […]

ಮಂಗಳೂರು: ಚೂರಿಯಿಂದ ಇರಿದು ಮಹಿಳೆಯ ಹತ್ಯೆ Read More »

ಸುಳ್ಯ: ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿ ಕಡೆ| ಇಂದು (ಮಾ.18) ನಾಲ್ಕೂರಿನಲ್ಲಿ ಡಿಸಿ ಗ್ರಾಮವಾಸ್ತವ್ಯ

ಸಮಗ್ರ ನ್ಯೂಸ್: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ದ.ಕ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಮಾ. 18ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಾಲೆ ಮಜಲು ಶ್ರೀ ವೆಂಕಟೇಶ್ವರ ಸಭಾ ಭವನದಲ್ಲಿ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ಥಳೀಯ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಿದ್ದಾರೆ. ಡಿಸಿಯವರೊಂದಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದು, ಗ್ರಾಮಸ್ಥರು ತಮ್ಮ ಅಹವಾಲು ಹಾಗೂ ಸಮಸ್ಯೆಗಳ‌

ಸುಳ್ಯ: ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿ ಕಡೆ| ಇಂದು (ಮಾ.18) ನಾಲ್ಕೂರಿನಲ್ಲಿ ಡಿಸಿ ಗ್ರಾಮವಾಸ್ತವ್ಯ Read More »

ಮಾಂಸ ಮಾರಾಟಗಾರರನ್ನು ಥಳಿಸಿ ದರೋಡೆ ಮಾಡಿದ ದಿಲ್ಲಿ ಪೊಲೀಸರು| ಮುಖದ ಮೇಲೆ ಮೂತ್ರ ವಿಸರ್ಜಿಸಿ ಹಲ್ಲೆ

ಸಮಗ್ರ ನ್ಯೂಸ್: ಪೂರ್ವ ದಿಲ್ಲಿಯ ಶಾಹದಾರದಲ್ಲಿ ಇಬ್ಬರು ಮಾಂಸ ಮಾರಾಟಗಾರರನ್ನು ಮೂವರು ದಿಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಏಳು ಮಂದಿ ಥಳಿಸಿ ದರೋಡೆ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಮಾರ್ಚ್ 7 ರಂದು ಆನಂದ್ ವಿಹಾರ್ ಪ್ರದೇಶದಲ್ಲಿ ಇಬ್ಬರು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಸ್ಕೂಟರ್‌ಗೆ ಢಿಕ್ಕಿ ಹೊಡೆದಾಗ ಘಟನೆ ನಡೆದಿದೆ. ‘ಗೋ ರಕ್ಷಕರು’ ಎನ್ನಲಾಗಿರುವ ಆರೋಪಿಗಳು ಸಂತ್ರಸ್ತರ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಯ

ಮಾಂಸ ಮಾರಾಟಗಾರರನ್ನು ಥಳಿಸಿ ದರೋಡೆ ಮಾಡಿದ ದಿಲ್ಲಿ ಪೊಲೀಸರು| ಮುಖದ ಮೇಲೆ ಮೂತ್ರ ವಿಸರ್ಜಿಸಿ ಹಲ್ಲೆ Read More »

ಮಡಿಕೇರಿ: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ| ಆರೋಪಿಯ ಬಂಧನ

ಸಮಗ್ರ ನ್ಯೂಸ್:ಬಾರ್‌ವೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಯೊಬ್ಬರ ಮೇಲೆ ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಕೊಡಗಿನ ಗೋಣಿಕೊಪ್ಪಲು ನಲ್ಲಿ ನಡೆದಿದೆ. ಆರೋಪಿಯನ್ನು ವ್ಯಾನ್‌ ಚಾಲಕ ಮಣಿಕಂಠ (39) ಎಂದು ಗುರುತಿಸಲಾಗಿದೆ. ‘ಮಹಿಳೆಯು ಭಾನುವಾರ ಸಂಜೆ ಮದ್ಯದಂಗಡಿಯಲ್ಲಿ ಕೆಲಸ ಮುಗಿಸಿ ವಾಪಸ್ ತಮ್ಮ ಊರಿಗೆ ತೆರಳಲು ಬಸ್‌ನಿಲ್ದಾಣದ ಬಳಿ ನಿಂತಿದ್ದಾಗ ಮಾರುತಿ ಓಮ್ನಿ ವ್ಯಾನ್‌ನಲ್ಲಿ ಬಂದ ಆರೋಪಿಯು ಡ್ರಾಪ್‌ ಕೊಡುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ

ಮಡಿಕೇರಿ: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ| ಆರೋಪಿಯ ಬಂಧನ Read More »

ಕಡಬ: ರಬ್ಬರ್ ಟ್ಯಾಪಿಂಗ್ ಕತ್ತಿ ಎದೆಗೆ ಹೊಕ್ಕು ಮಹಿಳೆ ದುರ್ಮರಣ

ಸಮಗ್ರ ನ್ಯೂಸ್: ರಬ್ಬರ್ ಮರ ಟ್ಯಾಪಿಂಗ್ ಮಾಡುವ ಕತ್ತಿ ಎದೆಗೆ ಹೊಕ್ಕು ಗಂಭೀರ ಗಾಯಗೊಂಡು ಮಹಿಳೆ ಮೃತಪಟ್ಟ ಘಟನೆ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಎಡಮಂಗಲ ಗ್ರಾಮದ ಬಳಕ್ಕಬೆ ನಿವಾಸಿ ಶಿವರಾಮ ಎಂಬವರ ಪತ್ನಿ ಗೀತಾ ಎಂದು ಗುರುತಿಸಲಾಗಿದೆ. ಗೀತಾರವರು ತಮ್ಮದೇ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಎಡವಿ ಬಿದ್ದಿದ್ದು, ಈ ವೇಳೆ ಅವರ ಕೈಯಲ್ಲಿದ್ದ ಕತ್ತಿ ಎದೆಯೊಳಗೆ ಹೊಕ್ಕು ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ಅವರ ಪತಿ

ಕಡಬ: ರಬ್ಬರ್ ಟ್ಯಾಪಿಂಗ್ ಕತ್ತಿ ಎದೆಗೆ ಹೊಕ್ಕು ಮಹಿಳೆ ದುರ್ಮರಣ Read More »

ತಂಗಿಯೇ ಆತನ ಹೆಂಡತಿ| ಆರು ವರ್ಷಗಳ ಬಳಿಕ ಗೊತ್ತಾಯ್ತು ವಿಚಿತ್ರ ಸತ್ಯ

ಸಮಗ್ರ ನ್ಯೂಸ್: ಮದುವೆಯಾದ 6 ವರ್ಷಗಳ ನಂತರ ಆ ವ್ಯಕ್ತಿಗೆ ವಿಚಿತ್ರ ಸತ್ಯವೊಂದು ತಿಳಿದು ಆಘಾತಕ್ಕೊಳಗಾಗಿದ್ದಾನೆ. 2 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿ 6 ವರ್ಷ ಸಂಸಾರ ನಡೆಸಿದ ಹೆಂಡತಿ ಆತನ ಸ್ವಂತ ಸಹೋದರಿ ಎಂದು ಗೊತ್ತಾಗಿ ಮುಂದೇನು ಎಂಬ ಸಂಕಷ್ಟಕ್ಕೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ. ಏನಿದು ಘಟನೆ?ಡಿಎನ್‌ಎ ಮತ್ತು ರಕ್ತ ಹೊಂದಾಣಿಕೆಯ ಸಂಬಂಧಗಳಲ್ಲಿ ವಿವಾಹವಾಗುವುದರಿಂದ ಮುಂಬರುವ ಪೀಳಿಗೆಯಲ್ಲಿ ಆನುವಂಶಿಕ ದೋಷಗಳ ಅಪಾಯವಿದೆ ಎಂದು ವೈದ್ಯಕೀಯ ವಿಜ್ಞಾನವು ನಂಬುತ್ತದೆ. ಮದುವೆಗೆ ಸಂಬಂಧಿಸಿದಂತೆ ಪ್ರಪಂಚದ ಎಲ್ಲೆಡೆ ವಿಭಿನ್ನ

ತಂಗಿಯೇ ಆತನ ಹೆಂಡತಿ| ಆರು ವರ್ಷಗಳ ಬಳಿಕ ಗೊತ್ತಾಯ್ತು ವಿಚಿತ್ರ ಸತ್ಯ Read More »

ಸಿನಿಮಾ ಮೂಲಕ ಪರಿಸರದ ರಕ್ಷಣೆಯಾಗಲಿ| ವಿಶ್ವಸಂಸ್ಥೆಯಲ್ಲಿ ನಟ, ನಿರ್ದೇಶಕ ರಿಷಭ್ ಶೆಟ್ಟಿ ಕರೆ

ಸಮಗ್ರ ನ್ಯೂಸ್: ‘ಪರಿಸರದ ಸುಸ್ಥಿರತೆಯನ್ನು ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟನಾಗಿ, ನಿರ್ದೇಶಕನಾಗಿ ಈ ಕುರಿತಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದೇ ನನ್ನ ಉದ್ದೇಶ. ಪರಿಸರ ಪ್ರಜ್ಞೆಗೆ ಸಿನಿಮಾ ಮಾಧ್ಯಮ ಕನ್ನಡಿ ಹಿಡಿಯುತ್ತದೆ. ಪರಿಸರ ಕುರಿತಾದ ಸಿನಿಮಾಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್‌, ‘ಪರಿಸರ ಸಂರಕ್ಷಣೆಗಾಗಿ ಕಳೆದ 1 ದಶಕಕ್ಕಿಂತ ಹೆಚ್ಚು ಅವಧಿಯಿಂದ ತಳಮಟ್ಟದಿಂದ ಕಾರ್ಯನಿರ್ವಹಿಸುತ್ತಿರುವ ಭಾರತದ

ಸಿನಿಮಾ ಮೂಲಕ ಪರಿಸರದ ರಕ್ಷಣೆಯಾಗಲಿ| ವಿಶ್ವಸಂಸ್ಥೆಯಲ್ಲಿ ನಟ, ನಿರ್ದೇಶಕ ರಿಷಭ್ ಶೆಟ್ಟಿ ಕರೆ Read More »

ದಿಢೀರ್ ದೆಹಲಿಗೆ ಹಾರಿದ ಸುಳ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ.ಕೃಷ್ಣಪ್ಪ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಚುನಾವಣೆಗೆ ಭರ್ಜರಿ ತಯಾರಿಗಳು ನಡೆಯುತ್ತಿದೆ. ಹೈಕಮಾಂಡ್ ಪಕ್ಷವನ್ನು ಗೆಲ್ಲಿಸಲು ಜನ ಮ‌ನವೊಲಿಸಲು ಮುಂದಾದರೆ ಇನ್ನೊಂದು ಕಡೆ ಟಿಕೆಟ್ ಆಕಾಂಕ್ಷಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಕೆಲವರ ಹೆಸರುಗಳು ಕೇಳಿ ಬಂದಿದ್ದು ಇನ್ನು ಕೆಲವರು ಸದ್ದಿಲ್ಲದೆ ಹೈಕಮಾಂಡ್ ಬಾಗಿಲಲ್ಲಿ ಸಾಲು ನಿಂತಿರುವುದು ಪರದೆಯ ಹಿಂದೆ ಕಾಣುವ ನೆರಳಿನಂತಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಹೆಸರು ಕೇಳಿ ಬಂದಿದ್ದು ಇಬ್ಬರಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಕುತೂಹಲವಾಗಿದೆ. ಈ

ದಿಢೀರ್ ದೆಹಲಿಗೆ ಹಾರಿದ ಸುಳ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ.ಕೃಷ್ಣಪ್ಪ Read More »

Mother committed to suicide| ಎದೆಹಾಲು ಕುಡಿಯುತ್ತಿದ್ದ ಮಗು ಉಸಿರುಗಟ್ಟಿ ಸಾವು| ಮಗನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಸಮಗ್ರ ನ್ಯೂಸ್: ತಾಯಿ ತನ್ನ 7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದಲ್ಲಿ ನಡೆದಿದೆ.ಈ ಘಟನೆ ಇಡುಕ್ಕಿ ಜಿಲ್ಲೆಯ ಉಪ್ಪುತರ ಸಮೀಪ ನಡೆದಿದೆ. ಮೃತರನ್ನು ಲಿಜಾ ಹಾಗೂ ಬೆನ್ ಟಾಮ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಮಾಡಿಕೊಂಡಿದ್ದುಯಾಕೆ?: ಎರಡು ದಿನಗಳ ಹಿಂದೆಯಷ್ಟೇ ಎದೆ ಹಾಲು ಕುಡಿಯುತ್ತಿದ್ದ ಮಗು ಉಸಿರುಗಟ್ಟಿ ಸಾವನ್ನಪ್ಪಿದ್ದು, ಇದರಿಂದ ತಾಯಿ ತೀವ್ರವಾಗಿ ನೊಂದಿದ್ದರು. ಇದೇ ಬೇಜಾರಲ್ಲಿದ್ದ ತಾಯಿ ಬೆಳಗ್ಗೆ 6 ಗಂಟೆ ಸುಮಾರಿಗೆ ತನ್ನ 7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಪ್ರಾಣ

Mother committed to suicide| ಎದೆಹಾಲು ಕುಡಿಯುತ್ತಿದ್ದ ಮಗು ಉಸಿರುಗಟ್ಟಿ ಸಾವು| ಮಗನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ Read More »

ಅಲ್ಲಲ್ಲಿ ಅಬ್ಬರಿಸಿದ ಬೇಸಿಗೆ ಮಳೆ| ಸಿಡಿಲಿಗೆ ಓರ್ವ ಬಲಿ; ಹಲವು ಅನಾಹುತ

ಸಮಗ್ರ ನ್ಯೂಸ್: ರಾಜ್ಯದ ಕೆಲವೆಡೆ ಗುರುವಾರವೂ ಬೇಸಿಗೆ ಮಳೆಯಾಗಿದ್ದು, ಬಿಸಿಲಿನ ಹೊಡೆತಕ್ಕೆ ಸಿಲುಕಿದ್ದ 8 ಜಿಲ್ಲೆಗಳಲ್ಲಿ ವರುಣ ತಂಪೆರೆದಿದ್ದಾನೆ. ಈ ನಡುವೆ, ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನಲ್ಲಿ ಸಿಡಿಲಿಗೆ ರೈತನೊಬ್ಬ ಬಲಿಯಾಗಿದ್ದರೆ, ಕೋಲಾರದಲ್ಲಿ ಮನೆಯ ಸಜ್ಜಾ ಕುಸಿದ, ಮರ ಉರುಳಿ ಬಿದ್ದ ಘಟನೆ ವರದಿಯಾಗಿವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ರಾಮನಗರ, ಹಾಸನ, ರಾಯಚೂರು, ಹಾವೇರಿ, ಧಾರವಾಡ ಜಿಲ್ಲೆಗಳ ವಿವಿಧೆಡೆ ಗುರುವಾರ ಮಳೆಯಾಗಿದೆ. ಸಿಡಿಲಬ್ಬರದ ಮಳೆಗೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ರೈತನೊಬ್ಬ ಬಲಿಯಾಗಿದ್ದಾನೆ. ತಡಸದ

ಅಲ್ಲಲ್ಲಿ ಅಬ್ಬರಿಸಿದ ಬೇಸಿಗೆ ಮಳೆ| ಸಿಡಿಲಿಗೆ ಓರ್ವ ಬಲಿ; ಹಲವು ಅನಾಹುತ Read More »