ಸುಳ್ಯ: ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಅರಮನೆಗಯ ನಿವಾಸಿಗಳು| ಬ್ಯಾನರ್ ಹರಿದವರಿಗೆ ಕೊರಗಜ್ಜ ಶಿಕ್ಷೆ ನೀಡಲಿ ಎಂದು ಪ್ರಾರ್ಥನೆ| ಕೋಟಿ ಲೆಕ್ಕದ ಅನುದಾನ ಪೊಳ್ಳು ಭರವಸೆಯೇ?
ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅರಮನೆಗಯ ಎಂಬಲ್ಲಿ ಸುಮಾರು 30 ವರ್ಷಗಳಿಂದ ಬೇಡಿಕೆಯ ಸೇತುವೆಯನ್ನು ನಿರ್ಮಿಸದ ಹಿನ್ನಲೆ ಆ ಭಾಗದ ಜನರು ಇದೀಗ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಅರಮನೆಗಯ ಎಂಬ ಊರು ಹಳ್ಳಿ ಪ್ರದೇಶವಾಗಿದ್ದು ಮರ್ಕಂಜ ಹಾಗೂ ಅಂರತೋಡು ಗ್ರಾಮಕ್ಕೆ ಸೇರಿಕೊಂಡಿರುವ ಊರಾಗಿದೆ. ಈ ಭಾಗದಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಈ ಊರಿನ ಮಧ್ಯದಲ್ಲಿ ನದಿಯಿದ್ದು, ಮಳೆಗಾಲದಲ್ಲಿ ಉಕ್ಕಿ ಹರಿಯುತ್ತದೆ. ಆ ಸಮಯದಲ್ಲಿ ಅಲ್ಲಿಯ ಜನರು ಸೇರಿದಂತೆ ಶಾಲಾ ಮಕ್ಕಳ […]