Ad Widget .

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ| ಮತ್ತೋರ್ವ ಆರೋಪಿಯನ್ನು ಬಂಧಿಸಿದ ಎನ್ಐಎ

ಸಮಗ್ರ ನ್ಯೂಸ್: ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬಂಧಿಸಿದ್ದಾರೆ.

Ad Widget . Ad Widget .

ತೌಫೀಲ್​ ಬಂಧಿತ ಆರೋಪಿ. ಎನ್‌ಐಎ ಅಧಿಕಾರಿಗಳು ನಿನ್ನೆ (ಮಾ.4) ರಂದು ರಾತ್ರಿ 9.30 ಕ್ಕೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಬಂಧಿಸಿದ್ದಾರೆ. ಎನ್‌ಐಎ ಅಧಿಕಾರಿಗಳು ಆರೋಪಿ ಪತ್ತೆಗೆ 5 ಲಕ್ಷ ಹಣ ಬಹುಮಾನ ಘೋಷಣೆ ಮಾಡಿದ್ದರು.

Ad Widget . Ad Widget .

ಪ್ಲಂಬರ್​ನಂತೆ ಮನೆಗೆ ಎಂಟ್ರಿ ಕೊಟ್ಟು ತೌಫಿಲ್ ಬಂಧಿಸಿದ ಎನ್‌ಐಎ ಅಧಿಕಾರಿಗಳು:
ನಿನ್ನೆ ಖಚಿತ ಮಾಹಿತಿ ಮೇರೆಗೆ ಸುಮಾರು 10ಕ್ಕೂ ಹೆಚ್ಚು ಎನ್​ಐಎ ಅಧಿಕಾರಿಗಳು ತೌಫಿಲ್ ಮನೆ ಬಳಿಗೆ ಹೋಗಿದ್ದಾರೆ. ನಂತರ ಮೊದಲಿಗೆ ಇಬ್ಬರು ಅಧಿಕಾರಿಗಳು ಫ್ಲಂಬರ್ ಅಂತ ಕೈಯಲ್ಲಿ ರಿಂಚ್ ಹಿಡಿದು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ತೌಫಿಲ್ ಮಟನ್​ ಕತ್ತರಿಸುತ್ತಿದ್ದನು. ಇಬ್ಬರು ಅಧಿಕಾರಿಗಳು ಒಳಗಡೆ ಬಂದದ್ದನ್ನು ನೋಡಿದ ತೌಘಿಲ್​​, ಚಾಕುವಿನಿಂದ ಹಲ್ಲೆ ಮಾಡಲು ಬಂದಿದ್ದಾನೆ. ಇದನ್ನು ತಿಳಿದ ಉಳಿದ ಅಧಿಕಾರಿಗಳು ಏಕಕಾಲಕ್ಕೆ ಒಳಗೆ ಬಂದು ತೌಘಿಲ್​ನನ್ನು ಲಾಕ್​ ಮಾಡಿಕೊಂಡಿದ್ದಾರೆ. ಸದ್ಯ ಎನ್‌ಐಎ ಅಧಿಕಾರಿಗಳು ತೌಫಿಲ್​​ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರವೀಣ್ ನೆಟ್ಟಾರುನನ್ನು ಜುಲೈ 26 ರಂದು ಆತನ ಕೋಳಿ ಅಂಗಡಿಗೆ ನುಗ್ಗಿ ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದರು. ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದರು. ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದರು.

Leave a Comment

Your email address will not be published. Required fields are marked *