February 2023

ವನಿತೆಯರ ಟಿ-20 ವಿಶ್ವಕಪ್| ಶುಭಾರಂಭದ ಮುನ್ನುಡಿ ಬರೆದ ಭಾರತ

ಸಮಗ್ರ ನ್ಯೂಸ್: ಭಾರತ ವನಿತೆಯರ ಕ್ರಿಕೆಟ್​ ತಂಡ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಧೂರಿ ಶುಭಾರಂಭ ಮಾಡಿತು. ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ತಂಡವನ್ನು ಏಳು ವಿಕೆಟ್​ಗಳಿಂದ ಬಗ್ಗು ಬಡಿದ ಹರ್ಮನ್​ಪ್ರೀತ್​ ಕೌರ್ ಬಳಗ ಸಂಭ್ರಮಾಚರಣೆ ಮಾಡಿತು. ಜೆಮಿಮಾ ರೋಡ್ರಿಗಸ್​ (53 ರನ್​, 38 ಎಸೆತ) ಹಾಗೂ ರಿಚಾ ಘೋಷ್​ (31 ರನ್​, 20 ಎಸೆತ) ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಇಲ್ಲಿ ನ್ಯೂಲ್ಯಾಂಡ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ […]

ವನಿತೆಯರ ಟಿ-20 ವಿಶ್ವಕಪ್| ಶುಭಾರಂಭದ ಮುನ್ನುಡಿ ಬರೆದ ಭಾರತ Read More »

ವ್ಯಾಲಂಟೈನ್ ಡೇ ದಿನ ಮರುಮದುವೆ ಆಗಲಿದ್ದಾರೆ ಹಾರ್ದಿಕ್ ಪಾಂಡ್ಯ!

ಸಮಗ್ರ ನ್ಯೂಸ್: ಟೀಂ ಇಂಡಿಯಾದ ಆಟಗಾರ ಹಾರ್ದಿಕ್​ ಪಾಂಡ್ಯ​ ಮರು ಮದುವೆಯಾಗಲು ಮುಂದಾಗಿದ್ದಾರೆ. ವ್ಯಾಲೆಂಟೈನ್ಸ್​ ಡೇ ದಿನ‌ ಅವರು ಮದುವೆಯಾಗಲಿದ್ದಾರಂತೆ. ಅಂದ ಹಾಗೆಯೇ, ಪ್ರೇಮಿಗಳ ದಿನಾಚರಣೆಗೆ ಒಂದೇ ದಿನ ಬಾಕಿ ಇದ್ದು, ಫೆಬ್ರವರಿ 13ರಂದು ವಿವಾಹ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ ಎಂಬ ಮಾತು ಕೇಳಿಬಂದಿದೆ. ಹಾರ್ದಿಕ್ ಪಾಂಡ್ಯ ಬಾಲಿವುಡ್​ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ಪ್ರೀತಿಸಿ ಬಳಿಕ ಗಂಡು ಮಗುವಿಗೆ ತಂದೆಯಾದ ಬಗ್ಗೆ ತಿಳಿದೇ ಇದೆ. ಅದರೀಗ ಮರು ಮದುವೆಯಾಗಲು ಈ ಕ್ರಿಕೆಟಿಗ ಮುಂದಾಗಿದ್ದಾರೆ. ಅಂದ ಹಾಗೆ ವಧು

ವ್ಯಾಲಂಟೈನ್ ಡೇ ದಿನ ಮರುಮದುವೆ ಆಗಲಿದ್ದಾರೆ ಹಾರ್ದಿಕ್ ಪಾಂಡ್ಯ! Read More »

ಅರಸೀಕೆರೆಗೆ ಹೊಸ ಅಭ್ಯರ್ಥಿ ಘೋಷಿಸಿದ ಜೆಡಿಎಸ್| ಹಾಲಿ ಶಾಸಕ ಶಿವಲಿಂಗೇಗೌಡರಿಗೆ ಟಾಂಗ್

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗಿದ್ದು, ಈ ಬಾರಿ ಹಾಸನ ಜಿಲ್ಲೆಯ ಅರಸಿಕೆರೆ ಕ್ಷೇತ್ರದ ಹಾಲಿ ಅಭ್ಯರ್ಥಿ ಶಿವಲಿಂಗೇಗೌಡರನ್ನು ಕೈಬಿಟ್ಟು ಹೊಸ ಅಭ್ಯರ್ಥಿಗೆ ಜೆಡಿಎಸ್ ಟಿಕೆಟ್ ಘೋಷಣೆ ಮಾಡಲಾಗಿದೆ. ಅರಸಿಕೆರೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಬಾಣಾವರ ಅಶೋಕ್ ಗೆ ಅರಸಿಕೆರೆ ಜೆಡಿಎಸ್ ಟಿಕೆಟ್ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಹಾಲಿ ಶಾಸಕ ಶಿವಲಿಂಗೇಗೌಡರಿಗೆ ಸೆಡ್ಡು ಹೊಡೆದಿದ್ದಾರೆ. ಸಮಾವೇಶದಲ್ಲಿ ಹಾಲಿ ಶಾಸಕ ಶಿವಲಿಂಗೇಗೌಡರ ವಿರುದ್ಧ ವಾಗ್ದಾಳಿ

ಅರಸೀಕೆರೆಗೆ ಹೊಸ ಅಭ್ಯರ್ಥಿ ಘೋಷಿಸಿದ ಜೆಡಿಎಸ್| ಹಾಲಿ ಶಾಸಕ ಶಿವಲಿಂಗೇಗೌಡರಿಗೆ ಟಾಂಗ್ Read More »

ಡಿಕೆ ಬ್ರದರ್ಸ್ ನ ಹಾಡಿ ಹೊಗಳಿದ ಸಚಿವ ಡಾ.ಸುಧಾಕರ್

ಸಮಗ್ರ ನ್ಯೂಸ್: ಕನಕಪುರದಲ್ಲಿ ನಡೆದ ತಾಯಿ ಮತ್ತು ಮಕ್ಕಳ ಅಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹಾಡಿ ಹೊಗಳಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ಡಿ.ಕೆ.ಶಿವಕುಮಾರ್ ಅವರು ಯಾಕೆ ಗೆಲ್ಲುತ್ತಾರೆ ಅಂತಾ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಮೊದಲು ಡಿ.ಕೆ. ಶಿವಕುಮಾರ್ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆಲ್ಲುತ್ತಿದ್ದರು. ಬರುಬರುತ್ತಾ ಡಿ.ಕೆ.

ಡಿಕೆ ಬ್ರದರ್ಸ್ ನ ಹಾಡಿ ಹೊಗಳಿದ ಸಚಿವ ಡಾ.ಸುಧಾಕರ್ Read More »

ತೋಟದ ಬಾವಿಗೆ ಆಯ ತಪ್ಪಿ ಬಿದ್ದು ಬಾಲಕ ಸಾವು

ಸಮಗ್ರ ನ್ಯೂಸ್: ತೋಟದ ಬಾವಿಗೆ ಆಯತಪ್ಪಿ ಬಿದ್ದು ಮಗು ಮೃತಪಟ್ಟ ಧಾರುಣ ಘಟನೆ ಉ.ಕನ್ನಡ ಜಿಲ್ಲೆಯ ಹೊನ್ನಾವರದಿಂದ ವರದಿಯಾಗಿದೆ. ಹೊನ್ನಾವರ ತಾಲೂಕಿನ ಕಡ್ಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಂದೂರಿನ ನಾಗಭೂಷಣ ದಯಾನಂದ ಹೆಗಡೆ ಎನ್ನುವ ಒಂದನೆ ತರಗತಿ ವಿದ್ಯಾರ್ಥಿ ತಮ್ಮ ಮನೆಯ ತೋಟದ ಸಮೀಪ ನಾಯಿಯೊಂದಿಗೆ ಆಟ ಆಡುತ್ತಾ ತೆರಳಿ ಆಕಸ್ಮಿಕವಾಗಿ ತೆರೆದ ಬಾವಿಯಲ್ಲಿ ಬಿದ್ದಿದ್ದಾನೆ. ಮಗುವನ್ನು ಕುಟುಂಬದವರು ತೋಟದಲ್ಲಿ ಹುಡುಕಿ ಬಾವಿಯ ಕಡೆ ನೋಡಿದಾಗ ದುರಂತ ಬೆಳಕಿಗೆ ಬಂದಿದೆ. ತೆರೆದ ಬಾವಿಯಾಗಿದ್ದು, ಬಾವಿಯಲ್ಲಿ ನೀರು ಇದ್ದ

ತೋಟದ ಬಾವಿಗೆ ಆಯ ತಪ್ಪಿ ಬಿದ್ದು ಬಾಲಕ ಸಾವು Read More »

‘ದಕ್ಷಿಣ ಕನ್ನಡದವರು ಬ್ಯಾಂಕ್ ಕಟ್ಟಿ ಬೆಳೆಸಿದರು; ಗುಜರಾತ್ ನವರು ನುಂಗಿ ನೀರು ಕುಡಿದರು’| ಅಮಿತ್ ಶಾ ಹೇಳಿಕೆಗೆ ಟ್ವೀಟ್ ಮೂಲಕ ಸಿದ್ದು ಲೇವಡಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದವರು ಬೆವರು ಸುರಿಸಿ ಅಡಿಕೆ ಬೆಳೆದರೆ ಗುಜರಾತ್ ನವರು ಅಡಿಕೆ ತಿಂದು ಬೆವರು ಸುರಿಸುತ್ತಾರೆ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಲೇವಡಿ ಮಾಡಿದ್ದಾರೆ. ಅಮಿತ್ ಶಾ ಹೇಳಿಕೆಗೆ ಟ್ವೀಟ್ ಮಾಡಿರುವ ಅವರು ದಕ್ಷಿಣ ಕನ್ನಡದವರು ವಿಜಯ ಬ್ಯಾಂಕ್‌, ಸಿಂಡಿಕೇಟ್ ಬ್ಯಾಂಕ್‌ಗಳನ್ನು ಕಟ್ಟಿ ಬೆಳೆಸಿದರು. ಗುಜರಾತ್‌ನವರು ಈ ಬ್ಯಾಂಕ್‌ಗಳನ್ನು ನುಂಗಿ ನೀರು ಕುಡಿದರು. ನಮ್ಮವರಿಗೆ ಕಟ್ಟುವುದು, ಬೆಳೆಸುವುದು ಗೊತ್ತು, ನಿಮಗೆ ಮಾರುವುದು, ಮುಳುಗಿಸುವುದು ಮಾತ್ರ

‘ದಕ್ಷಿಣ ಕನ್ನಡದವರು ಬ್ಯಾಂಕ್ ಕಟ್ಟಿ ಬೆಳೆಸಿದರು; ಗುಜರಾತ್ ನವರು ನುಂಗಿ ನೀರು ಕುಡಿದರು’| ಅಮಿತ್ ಶಾ ಹೇಳಿಕೆಗೆ ಟ್ವೀಟ್ ಮೂಲಕ ಸಿದ್ದು ಲೇವಡಿ Read More »

ಬೆಳ್ತಂಗಡಿ: 1700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್| ಎರಡೇ‌ ಗಂಟೆಗಳಲ್ಲಿ ಸಾಹಸ ಪ್ರದರ್ಶನ

ಸಮಗ್ರ ನ್ಯೂಸ್: ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಜ್ ಅವರು ಭಾನುವಾರ (ಫೆ.12) ಎರಡೇ ತಾಸುಗಳಲ್ಲಿ ಬರೀ ಕೈಗಳ ಸಹಾಯದಿಂದ ಗಡಾಯಿಕಲ್ಲು (ಜಮಾಲಾಬಾದ್/ ನರಸಿಂಹಗಡ) ಏರಿ ಸಾಹಸ ಮೆರೆದಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಅವರು ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದರು. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲನ್ನು ಮೆಟ್ಟಿಲುಗಳ ಸಹಾಯವಿಲ್ಲದೆ ನಿರಾತಂಕವಾಗಿ ಅವರು ಏರಿದರು. ಅರಣ್ಯ ಇಲಾಖೆಯ ಸೂಚನೆಯಂತೆ ಸೊಂಟಕ್ಕೆ ಕಟ್ಟಿದ ಬೆಲ್ಟ್ ಹಾಗೂ ಪಕ್ಕದಲ್ಲಿದ್ದ ರೋಪ್‌ಗೆ ಹುಕ್ ಮೂಲಕ ಸಂಪರ್ಕ ಕಲ್ಪಿಸಿ ಸುರಕ್ಷತೆ ದೃಷ್ಟಿಯಿಂದ ಮೇಲೇರಲು ಅವಕಾಶ ನೀಡಲಾಗಿತ್ತು.

ಬೆಳ್ತಂಗಡಿ: 1700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್| ಎರಡೇ‌ ಗಂಟೆಗಳಲ್ಲಿ ಸಾಹಸ ಪ್ರದರ್ಶನ Read More »

“ನನ್ ಮೇಲೆ ನಂಬಿಕೆ ಇದೆಯಲ್ವಾ? ಹಾಗಾದ್ರೆ ಬಿಜೆಪಿಗೆ ಓಟು ಹಾಕಿ” | ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಂಡ ಸಿದ್ದರಾಮಯ್ಯ| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಯಿ ತಪ್ಪಿ ಏನಾದರೂ ಒಂದು ಯಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ನಿನ್ನೆಯೂ ಕೂಡ ಬಾಯಿತಪ್ಪಿ ಬಿಜೆಪಿಗೆ ಮತ ಹಾಕಿ ಅಂದಿರುವ ಭಾಷಣದ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಬ್ಬರದ ಪ್ರಜಾ ಧ್ವನಿ ಯಾತ್ರೆ ನಡೆಯಿತು. ಸಿದ್ದರಾಮಯ್ಯ ಇಂಡಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಜನರು ಅದ್ದೂರಿ ಸ್ವಾಗತ ಕೋರಿದ್ದಾರೆ. ಯಾತ್ರೆಯಲ್ಲಿ ಅಪಾರ ಪ್ರಮಾಣದಲ್ಲಿ ಜನಸ್ತೋಮ ನೆರೆದಿದ್ದು, ಅಭೂತಪೂರ್ವ ಬೆಂಬಲ ದೊರಕಿದೆ.

“ನನ್ ಮೇಲೆ ನಂಬಿಕೆ ಇದೆಯಲ್ವಾ? ಹಾಗಾದ್ರೆ ಬಿಜೆಪಿಗೆ ಓಟು ಹಾಕಿ” | ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಂಡ ಸಿದ್ದರಾಮಯ್ಯ| ವಿಡಿಯೋ ವೈರಲ್ Read More »

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ‘ವಿಶ್ವಮಾನವ ಕುವೆಂಪು’ ಹೆಸರು – ಬಿ.ಎಸ್. ಯಡಿಯೂರಪ್ಪ

ಸಮಗ್ರ ನ್ಯೂಸ್: ಶಿವಮೊಗ್ಗ ಏರ್ ಪೋರ್ಟ್ ಗೆ ವಿಶ್ವಮಾನವ ಕುವೆಂಪು ಹೆಸರಿಡಲು ನಿರ್ಧಾರ ಮಾಡಲಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.‌ ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ ಶಿವಮೊಗ್ಗ ಏರ್ ಪೋರ್ಟ್ ಗೆ ನನ್ನ ಹೆಸರು ಇಡಬೇಡಿ ಎಂದು ಈಗಾಗಲೇ ಮನವಿ ಮಾಡಿದ್ದೇನೆ. ಶಿವಮೊಗ್ಗ ಏರ್ ಪೋರ್ಟ್ ಗೆ ಕುವೆಂಪು ಹೆಸರಿಡುವಂತೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಫೆ.27 ರಂದು ಶಿವಮೊಗ್ಗ ಏರ್ ಪೋರ್ಟ್ ಗೆ ಮೋದಿ ಬರುತ್ತಾರೆ. ಮೋದಿ ಅವರೇ ಕುವೆಂಪು ಹೆಸರನ್ನು ಘೋಷಣೆ ಮಾಡುತ್ತಾರೆ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ‘ವಿಶ್ವಮಾನವ ಕುವೆಂಪು’ ಹೆಸರು – ಬಿ.ಎಸ್. ಯಡಿಯೂರಪ್ಪ Read More »

ಆಂಧ್ರದ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾ., ಮೂಡುಬಿದಿರೆಯ ಎಸ್​.ಅಬ್ದುಲ್​ ನಜೀರ್​

ಸಮಗ್ರ ನ್ಯೂಸ್ : ಆಂಧ್ರ ಪ್ರದೇಶದ ನೂತನ ರಾಜ್ಯಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಎಸ್​.ಅಬ್ದುಲ್ ನಜೀರ್​​ರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಮೂಲತಃ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ ಶ ನಿವೃತ್ತ ನ್ಯಾಯಮೂರ್ತಿ ಎಸ್​.ಅಬ್ದುಲ್​ ನಜೀರ್​ ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದು ಕರುನಾಡಿಗೆ ಹೆಮ್ಮೆಯ ವಿಚಾರವಾಗಿದೆ. ಅಬ್ದುಲ್​ ನಜೀರ್​ ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಬೆಂಚ್ ಸದಸ್ಯರಾಗಿದ್ದರು. ಆಂಧ್ರ ಪ್ರದೇಶದ ಜೊತೆಯಲ್ಲಿ ಛತ್ತಿಸ್‌ಗಢ, ಬಿಹಾರ, ಮಣಿಪುರ ಸೇರಿದಂತೆ ವಿವಿಧ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು

ಆಂಧ್ರದ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾ., ಮೂಡುಬಿದಿರೆಯ ಎಸ್​.ಅಬ್ದುಲ್​ ನಜೀರ್​ Read More »