February 2023

ಮಂಗಳೂರು: ಪಬ್ ನಲ್ಲಿ ಮ್ಯೂಸಿಕ್ ಅವಕಾಶ ಇಲ್ಲ..!!| ಪೊಲೀಸರ ಹೊಸ ರೂಲ್ಸ್ ಗೆ ಗ್ರಾಹಕರ ಆಕ್ರೋಶ!!|ದಿನಕ್ಕೊಂದು ರೂಲ್ಸ್ ತಂದರೆ ಉದ್ಯಮಿಗಳ ಪಾಡೇನು?

ಸಮಗ್ರ ನ್ಯೂಸ್: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಹೊಸದಾಗಿ ಜಾರಿ ಮಾಡ್ತ ಇರೋ ರೂಲ್ಸ್ ಗಳು ಮತ್ತಷ್ಟು ಪರಿಸ್ಥಿತಿಯನ್ನು ಹದಗೆಡಿಸುತ್ತಿದ್ದು ಉದ್ಯಮಿಗಳು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಎಜುಕೇಷನ್ ಹಬ್, ಬೀಚ್ ಸಿಟಿ ಎಂದೆಲ್ಲ ಕರೆಯಲ್ಪಡುವ ಮಂಗಳೂರಲ್ಲಿ ಕಳೆದೆರಡು ದಿನಗಳಿಂದ ಹೊಸ ರೂಲ್ಸ್ ಒಂದು ಜಾರಿಗೆ ಬಂದಿದೆ. ಕೆಲದಿನಗಳ ಹಿಂದೆ ಎಡಿಜಿಪಿ ಅಲೋಕ್ ಕುಮಾರ್ ಅವರು ಮಂಗಳೂರಿಗೆ ಬಂದು ನಾಗರಿಕರನ್ನು ಭೇಟಿಯಾಗಿ ಹೋದ ಮರುಕ್ಷಣವೇ ಹೊಸ ರೂಲ್ಸ್ ಒಂದನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದ್ದು ಇದಕ್ಕೆ […]

ಮಂಗಳೂರು: ಪಬ್ ನಲ್ಲಿ ಮ್ಯೂಸಿಕ್ ಅವಕಾಶ ಇಲ್ಲ..!!| ಪೊಲೀಸರ ಹೊಸ ರೂಲ್ಸ್ ಗೆ ಗ್ರಾಹಕರ ಆಕ್ರೋಶ!!|ದಿನಕ್ಕೊಂದು ರೂಲ್ಸ್ ತಂದರೆ ಉದ್ಯಮಿಗಳ ಪಾಡೇನು? Read More »

ಪುತ್ತೂರು: ಭೀಕರ ರಸ್ತೆ ಅಪಘಾತ|ಗ್ರಾಮ ಪಂಚಾಯತ್ ಸದಸ್ಯ ಮೃತ್ಯು

ಸಮಗ್ರ ನ್ಯೂಸ್: ಪುತ್ತೂರಿನ ಸಂಟ್ಯಾರು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಗ್ರಾಮ ಪಂಚಾಯತ್ ಸದಸ್ಯ ಮೃತಪಟ್ಟ ಘಟನೆ ಫೆ.14 ರಂದು ರಾತ್ರಿ ನಡೆದಿದೆ. ಕಾರಲ್ಲಿದ್ದವರನ್ನು ಬೆಟ್ಟಂಪಾಡಿಯ ದಿಲೀಪ್ ಕುಮಾರ್ ರಾವ್ , ಶಶಿಕುಮಾರ್ , ನವನೀತ್ ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುರಳಿಧರ್ ಭಟ್ ಎಂದು ಸ್ಥಳೀಯರು ಗುರುತಿಸಿದ್ದಾರೆ. KA21 P 5049 ನೋಂದಾಣಿಯ ಫಾರ್ಡ್ ಫೀಗೋ ಕಾರು ಬೆಟ್ಟಂಪಾಡಿ ಕಡೆ ಹೋಗುತ್ತಿದ್ದ ವೇಳೆ ಸಂಟ್ಯಾರು ಸಮೀಪದ ಬಳಕ್ಕ ಎಂಬಲ್ಲಿ ಅಪಘಾತ ಸಂಭವಿಸಿದ್ದು ,

ಪುತ್ತೂರು: ಭೀಕರ ರಸ್ತೆ ಅಪಘಾತ|ಗ್ರಾಮ ಪಂಚಾಯತ್ ಸದಸ್ಯ ಮೃತ್ಯು Read More »

ಅಡಿಕೆ ಕ್ಯಾನ್ಸರ್ ಕಾರಕವಲ್ಲ| ಗುಡ್ ನ್ಯೂಸ್ ನೀಡಿದ ವರದಿ

ಸಮಗ್ರ ನ್ಯೂಸ್: ಅಡಿಕೆ ಬೆಳೆಗಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲ ಎಂದು ವರದಿ ಹೇಳಿದೆ. ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲ, ಔಷಧೀಯ ಗುಣವಿದೆ ಎಂದು ರಾಮಯ್ಯ ತಾಂತ್ರಿಕ ವಿವಿ ವರದಿ ನೀಡಿದೆ. ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, 1 ವರ್ಷದ ಹಿಂದೆಯೇ ಸಂಶೋಧನೆ ನಡೆಸಲು ರಾಮಯ್ಯ ತಾಂತ್ರಿಕ ವಿವಿಗೆ ಹೇಳಿದ್ದೆವು , ಇದೀಗ ರಾಮಯ್ಯ ತಾಂತ್ರಿಕ ವಿವಿ ವರದಿ ಸಲ್ಲಿಕೆ ಮಾಡಿದೆ. ಅಡಿಕೆಯಲ್ಲಿ

ಅಡಿಕೆ ಕ್ಯಾನ್ಸರ್ ಕಾರಕವಲ್ಲ| ಗುಡ್ ನ್ಯೂಸ್ ನೀಡಿದ ವರದಿ Read More »

ಯಾರಾಗಬೇಕು ಕರ್ನಾಟಕದ ಮುಂದಿನ ಸಿಎಂ? ಟ್ವಿಟರ್ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಫಸ್ಟ್, ಬೊಮ್ಮಾಯಿ ಲಾಸ್ಟ್

ಸಮಗ್ರ ನ್ಯೂಸ್: ಟ್ವಿಟ್ಟರ್‌ನಲ್ಲಿ ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು? ಎಂದು ಇತ್ತೀಚೆಗೆ ಮತಗಣನೆ ನಡೆದಿತ್ತು. ಪಿಎಲ್‌ಇ ಕರ್ನಾಟಕದ ಖಾತೆಯಿಂದ ನಡೆದ ಈ ಜನ ಮತಗಣನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಧಿಕ ಜನರು ಒಲವು ತೋರಿದ್ದಾರೆ. ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರಿಗೆ ಅತ್ಯಂತ ಕಡಿಮೆ ಮತಗಳು ಬಿದ್ದಿವೆ. ಫೆಬ್ರವರಿ 3ರಂದು ಪಿಎಲ್‌ಇ ಕರ್ನಾಟಕ ಆರಂಭಿಸಿದ ಈ ಮತಗಣನೆಯಲ್ಲಿ ಬಹುತೇಕರು ಸಿದ್ದರಾಮಯ್ಯ ಪರ ಒಲವು ತೋರಿದ್ದಾರೆ. ಈ ಖಾತೆಗೆ ಹತ್ತು ಸಾವಿರ ಫಾಲೋವರ್ಸ್‌ ಇದ್ದು, ಸುಮಾರು 2 ಸಾವಿರ

ಯಾರಾಗಬೇಕು ಕರ್ನಾಟಕದ ಮುಂದಿನ ಸಿಎಂ? ಟ್ವಿಟರ್ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಫಸ್ಟ್, ಬೊಮ್ಮಾಯಿ ಲಾಸ್ಟ್ Read More »

ವ್ಯಾಲೆಂಟೈನ್ಸ್ ಡೇಗೆ ಬಿಜೆಪಿ ನಾಯಕರ ಪೋಸ್ಟರ್ ವೈರಲ್| “ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು”

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇದೀಗ ಪ್ರೇಮಿಗಳ ದಿನವಾದ ಫೆ.14 ರಂದು ಕಾಂಗ್ರೇಸ್ ನ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ವಿವಿಧ ಮುಖಂಡರು ಹಾಗೂ ಸಚಿವರ ವ್ಯಾಲೆಂಟೈನ್ ಡೇ ಪೋಸ್ಟ್ ರ್ ಗಳನ್ನು ಬಿಡುಗಡೆ ಮಾಡುತ್ತಿದೆ. ಕಂದಾಯ ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಭಾವಚಿತ್ರವುಳ್ಳ ಪೋಸ್ಟರ್ ಅನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ”ಬಿಜೆಪಿಗರು ಶುದ್ಧ

ವ್ಯಾಲೆಂಟೈನ್ಸ್ ಡೇಗೆ ಬಿಜೆಪಿ ನಾಯಕರ ಪೋಸ್ಟರ್ ವೈರಲ್| “ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು” Read More »

ಸುನಿಲ್ ಕುಮಾರ್ ವಿರುದ್ದ ಸ್ಪರ್ಧೆಯಿಂದ ಹಿಂದೆ ಸರಿಯಲಾರೆ; ಬಿಜೆಪಿ ಸಚಿವ, ಶಾಸಕರೇ ನನಗೆ ಬೆಂಬಲ‌ ನೀಡಿದ್ದಾರೆ| ಸ್ಪೋಟಕ ಹೇಳಿಕೆ ನೀಡಿದ ಪ್ರಮೋದ್ ಮುತಾಲಿಕ್

ಸಮಗ್ರ ನ್ಯೂಸ್: ಕಾರ್ಕಳದಲ್ಲಿ ಸ್ಪರ್ಧಿಸಲು ಬಿಜೆಪಿ ಸಚಿವರು, ಶಾಸಕರು ತನುಮನ ಧನದ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪೋಟಕ ಹೇಳಿಕೆ ನೀಡಿದ್ದಾರೆ, ‘ಸಚಿವ ಸುನಿಲ್‌ ಕುಮಾರ್‌ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿರುವವರೂ ಸೇರಿದಂತೆ ಬಿಜೆಪಿಯ ಕೆಲವು ಸಚಿವರು ಹಾಗೂ ಶಾಸಕರು ತನು-ಮನ-ಧನದ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ’ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಹೇಳಿದರು.

ಸುನಿಲ್ ಕುಮಾರ್ ವಿರುದ್ದ ಸ್ಪರ್ಧೆಯಿಂದ ಹಿಂದೆ ಸರಿಯಲಾರೆ; ಬಿಜೆಪಿ ಸಚಿವ, ಶಾಸಕರೇ ನನಗೆ ಬೆಂಬಲ‌ ನೀಡಿದ್ದಾರೆ| ಸ್ಪೋಟಕ ಹೇಳಿಕೆ ನೀಡಿದ ಪ್ರಮೋದ್ ಮುತಾಲಿಕ್ Read More »

ಫೆಬ್ರವರಿ 14 ಭಾರತೀಯರು ಮರೆಯಬಾರದ ದಿನ| ಯಾಕೆ ಗೊತ್ತಾ?

ಸಮಗ್ರ ನ್ಯೂಸ್: ಫೆ.14. ಭಾರತೀಯರು ಮರೆಯಲಾಗದ ದಿನ. ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ ಎಂದೇ ಹೇಳಬಹುದು. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಫೆಬ್ರವರಿ 14 ರಂದು 40 ಸಿಆರ್ಪಿಎಫ್ ಅಧಿಕಾರಿಗಳ ಸಾವು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವರದಿಯಾದಾಗ ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿತ್ತು. ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ

ಫೆಬ್ರವರಿ 14 ಭಾರತೀಯರು ಮರೆಯಬಾರದ ದಿನ| ಯಾಕೆ ಗೊತ್ತಾ? Read More »

ಫೆ.14 ರಂದೇ ಪ್ರೇಮಿಗಳ ದಿನ ಯಾಕೆ? ಇದರ ಹಿನ್ನೆಲೆ ಏನು? ಯಾರು ಈ ವ್ಯಾಲಂಟೈನ್?

ಸಮಗ್ರ ನ್ಯೂಸ್: ಇಡೀ ವಿಶ್ವವೇ ಪ್ರತಿ ವರ್ಷ ಆಚರಿಸುವ ವಿಶೇಷ ದಿನಗಳಲ್ಲಿ ವ್ಯಾಲೆಂಟೈನ್‌ ಡೇ ಕೂಡಾ ಒಂದು. ಪರ-ವಿರೋಧ ಚರ್ಚೆಗಳ ನಡುವೆ, ಆಚರಣೆಯ ವಿರೋಧದ ನಡುವೆಯೂ ಪ್ರತಿ ವರ್ಷ ಪ್ರೇಮಿಗಳು ತಮ್ಮ ವಿಶೇಷ ದಿನವನ್ನು ಆಚರಿಸುತ್ತಾ ಬಂದಿದ್ದಾರೆ.ಫೆಬ್ರವರಿ 7 ರಿಂದ ವ್ಯಾಲೆಂಟೈನ್‌ ವೀಕ್‌ ಆರಂಭವಾಗಿ ಫೆಬ್ರವರಿ 14ರಂದು ಕೊನೆಗೊಳ್ಳುತ್ತದೆ. ವ್ಯಾಲೆಂಟೈನ್‌ ವೀಕ್‌ ಆರಂಭದಿಂದ ಪ್ರೇಮಿ, ತನ್ನ ಸಂಗಾತಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಬಯಸುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ ಮೆಚ್ಚಿನ ಉಡುಗೊರೆ ನೀಡುವ ಮೂಲಕ ಅವರನ್ನು ಇಂಪ್ರೆಸ್‌

ಫೆ.14 ರಂದೇ ಪ್ರೇಮಿಗಳ ದಿನ ಯಾಕೆ? ಇದರ ಹಿನ್ನೆಲೆ ಏನು? ಯಾರು ಈ ವ್ಯಾಲಂಟೈನ್? Read More »

ಬಿಬಿಸಿ ದೆಹಲಿ ಕಚೇರಿ ಮೇಲೆ ಐಟಿ ರೈಡ್

ಸಮಗ್ರ ನ್ಯೂಸ್: ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಸರ್ವೀಸ್ (BBC)ನ ದೆಹಲಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಿಢೀರ್ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ. ಲಂಡನ್ ಮೂಲದ ಕಂಪನಿಯ ಮೇಲೆ ಕಚೇರಿ ಏಕೆ ದಾಳಿ ಮಾಡಿದೆ ಎಂಬುದು ಸ್ಪಷ್ಟವಾಗಿಲ್ಲ. ಕೆಲವು ವರದಿಗಳ ಪ್ರಕಾರ ಇಲಾಖೆಯು ಕಚೇರಿಗೆ ಬೀಗ ಜಡಿಯಬಹುದು ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಐಟಿ ಅಧಿಕಾರಿಗಳು ಉದ್ಯೋಗಿಗಳ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ನೌಕರರನ್ನು ಕಚೇರಿ ಬಿಟ್ಟು ಬೇಗ ಮನೆಗೆ ತೆರಳುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬಿಬಿಸಿ ದೆಹಲಿ ಕಚೇರಿ ಮೇಲೆ ಐಟಿ ರೈಡ್ Read More »

ಕಾಪು: ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಬೈಕ್| ನಿಶ್ಚಿತಾರ್ಥವಾಗಿದ್ದ ಯುವತಿ ದುರ್ಮರಣ

ಸಮಗ್ರ ನ್ಯೂಸ್: ಕಾಪು ಸಮೀಪದ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ನಿಶ್ಚಿತಾರ್ಥವಾಗಿದ್ದ ಯುವತಿಯೊರ್ವಳು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವಳನ್ನು‌ ಮಂಗಳೂರಿನ ರೋಶ್ನಿ ಡಿಸೋಜಾ(27) ಎಂದು ಗುರುತಿಸಲಾಗಿದೆ. ರೋಶ್ನಿ ತನಗೆ ಮದುವೆ ನಿಶ್ಚಯವಾಗಿದ್ದ ಜೋಯಲ್ ಎಂಬವರ ಜೊತೆ ಮಂಗಳೂರಿನಿಂದ ಕಲ್ಮಾಡಿ ಚರ್ಚ್ ಗೆ ಭೇಟಿ ನೀಡಿ ಹಿಂದಕ್ಕೆ ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದೆ. ಮೂಡುಬೆಟ್ಟು ಅಂಬಿಕಾ ಟಿಂಬರ್ ಬಳಿ ಹಾಕಲಾಗಿದ್ದ ಬ್ಯಾರಿಕೆಡ್ ಗೆ ಡಿಕ್ಕಿ ಹೊಡೆದು ಬೈಕ್ ಉರುಳಿ ಬಿದ್ದಿತ್ತು. ಇದರಿಂದ ಬೈಕ್ ನಿಂದ ಎಸೆಯಲ್ಪಟ್ಟ

ಕಾಪು: ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಬೈಕ್| ನಿಶ್ಚಿತಾರ್ಥವಾಗಿದ್ದ ಯುವತಿ ದುರ್ಮರಣ Read More »