ಸಮಗ್ರ ನ್ಯೂಸ್: ನಾಲ್ಕು ದಿನಗಳ ಹಿಂದೆ ನಡೆದ ಟಿಪ್ಪರ್ ಮತ್ತು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಫೆ.7ರಂದು ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಕೊಕ್ಕಡ ಸೌತಡ್ಕ ನಿವಾಸಿ ಸಿರಾಜ್ ಎಂದು ಗುರುತಿಸಲಾಗಿದೆ.
ಟಿಪ್ಪರ್ ಮತ್ತು ಸಿರಾಜ್ ಸಂಚರಿಸುತ್ತಿದ್ದ ಬೈಕ್ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಕೆಂಪಕೋಡಿ ಎಂಬಲ್ಲಿ ಮುಖಾಮುಖಿ ಡಿಕ್ಕಿಯಾಗಿ ಸಿರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಪಘಾತದ ತೀವ್ರತೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿರಾಜ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಿರಾಜ್ SKSSF ಕೊಕ್ಕಡ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸಮಾಜ ಮುಖಿ ಸೇವೆ ಗೈಯುತ್ತಿದ್ದರು. ಮೃತ ಸಿರಾಜ್ ನ ಅಗಲುವಿಕೆಯಿಂದ ಆತನ ಬಂಧುಬಳಗದ ಆಕ್ರಂದನ ಹೇಳತೀರದಾಗಿದೆ.