January 2023

ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ, ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆ| ಕಾಂಗ್ರೆಸ್ ನಿಂದ ಭರಪೂರ ಕೊಡುಗೆಗಳ ಭರವಸೆ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಮತದಾರರ ಓಲೈಕೆಗೆ ಭರವಸೆಗಳ ಮೇಲೆ ಭರವಸೆ ನೀಡತೊಡಗಿದೆ. ಈಗಾಗಲೇ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಮಾಸಿಕ 2,000 ರೂ., ಬಿಪಿಎಲ್ ಕುಟುಂಬಕ್ಕೆ ತಿಂಗಳಿಗೆ 10 ಕೆಜಿ ಅಕ್ಕಿ ವಿತರಿಸುತಾಗಿ ಘೋಷಣೆ ಮಾಡಿರುವ ಕಾಂಗ್ರೆಸ್, ಈಗ ಸ್ತ್ರೀಶಕ್ತಿ ಸಂಘಗಳ ಮಹಿಳೆಯರ ಸಾಲ ಮನ್ನಾ ಮಾಡುವುದಾಗಿ ಹೇಳಿದೆ. ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವ ಜೊತೆಗೆ ರೈತರು ಮತ್ತು ಸ್ತ್ರೀಶಕ್ತಿ ಸಾಲದ […]

ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ, ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆ| ಕಾಂಗ್ರೆಸ್ ನಿಂದ ಭರಪೂರ ಕೊಡುಗೆಗಳ ಭರವಸೆ Read More »

ಸರಣಿ ಕ್ಲೀನ್ ಸ್ವೀಪ್; ನ್ಯೂಜಿಲೆಂಡ್ ವೈಟ್ ವಾಶ್| ಏಕದಿನ ಕ್ರಿಕೆಟ್ ನಲ್ಲಿ ಭಾರತವೇ ನಂ-1

ಸಮಗ್ರ ನ್ಯೂಸ್: 3 ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ವೈಟ್ ವಾಶ್ ಮಾಡಿರುವ ಟೀಂ ಇಂಡಿಯಾ ಏಕದಿನ ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದೆ. ಹೈದರಾಬಾದ್, ರಾಯ್‌ಪುರ ನಂತರ ಇಂದೋರ್‌ನಲ್ಲೂ ರೋಹಿತ್ ಶರ್ಮಾ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಮೂರನೇ ಏಕದಿನ ಪಂದ್ಯವನ್ನು 90 ರನ್‌ಗಳಿಂದ ಗೆದ್ದುಕೊಂಡ ಭಾರತ ಈ ಗೆಲುವಿನೊಂದಿಗೆ ಸರಣಿಯಲ್ಲೂ ಕ್ಲೀನ್ ಸ್ವೀಪ್ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಅವರ ಅಬ್ಬರದ

ಸರಣಿ ಕ್ಲೀನ್ ಸ್ವೀಪ್; ನ್ಯೂಜಿಲೆಂಡ್ ವೈಟ್ ವಾಶ್| ಏಕದಿನ ಕ್ರಿಕೆಟ್ ನಲ್ಲಿ ಭಾರತವೇ ನಂ-1 Read More »

ದೆಹಲಿಯಲ್ಲಿ ಪ್ರಬಲ ಭೂಕಂಪ; ಮನೆ ಬಿಟ್ಟು ಹೊರಗೋಡಿದ ಜನ

ಸಮಗ್ರ ನ್ಯೂಸ್: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ದೆಹಲಿ ಹಾಗೂ ಉತ್ತರಾಖಂಡ್​ನ ಹಲವೆಡೆ 35 ಸೆಕೆಂಡ್​ ಭೂಮಿ ಕಂಪಿಸಿದೆ ಎಂದು ಹೇಳಲಾಗಿದೆ. ರಿಕ್ಟರ್ ಮಾಪಕದಲ್ಲಿ 5.4ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಇದರಿಂದ ದೆಹಲಿಯಲ್ಲಿ ಜನರು ಭಯ ಭಯಗೊಂಡು ಮನೆ, ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ ಎಂದು ತಿಳಿದುಬಂದಿದೆ. ಭೂಕಂಪದಿಂದ ಉಂಟಾದ ಹಾನಿಯ ಬಗ್ಗೆ ಇನ್ನಷ್ಟೇ ಮಾಹಿತಿಗಳು ಹೊರಬರಬೇಕಿದ್ದು, ಪರಿಶೀಲನೆ ಪ್ರಗತಿಯಲ್ಲಿದೆ.

ದೆಹಲಿಯಲ್ಲಿ ಪ್ರಬಲ ಭೂಕಂಪ; ಮನೆ ಬಿಟ್ಟು ಹೊರಗೋಡಿದ ಜನ Read More »

ಕಾಸರಗೋಡು: ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ| ಚಾಲಕರಿಬ್ಬರು ಗಂಭೀರ

ಸಮಗ್ರ ನ್ಯೂಸ್: ಎರಡು ಲಾರಿಗಳ ನಡುವೆ ಉಂಟಾದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಸಂಭವಿಸಿದೆ. ಗಾಯ ಗೊಂಡ ಚಾಲಕರನ್ನು ಕುಂಬಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಡುಗೆ ಅನಿಲ ಸಿಲಿಂಡರ್ ಹೇರಿಕೊಂಡು ತೆರಳುತ್ತಿದ್ದ ಲಾರಿ ಮತ್ತು ಇನ್ನೊಂದು ಸರಕು ಲಾರಿ ನಡುವೆ ಅಪಘಾತ ನಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಸಿಲಿಂಡರ್ ಲಾರಿಯು ರಾಷ್ಟ್ರೀಯ ಹೆದ್ದಾರಿ ಬದಿ ಫಿಲ್ಲರ್ ನಿರ್ಮಾಣಕ್ಕೆ ತೊಡಲಾದ

ಕಾಸರಗೋಡು: ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ| ಚಾಲಕರಿಬ್ಬರು ಗಂಭೀರ Read More »

ಕರ್ತವ್ಯದ ವೇಳೆಯಲ್ಲಿ ಹೃದಯಾಘಾತ| ಉಪನ್ಯಾಸಕಿ ಸಾವು

ಸಮಗ್ರ ನ್ಯೂಸ್: ಹೃದಯಾಘಾತ ಸಂಭವಿಸಿ 27 ವರ್ಷದ ಅತಿಥಿ ಉಪನ್ಯಾಸಕಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಅನುಷಾ ಶೆಟ್ಟಿ (27) ಹೃದಯಾಘಾತದಿಂದ ಮೃತಪಟ್ಟ ಯುವತಿ. ಈಕೆ ಕಾರವಾರ ನಗರದ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಕಳೆದ 6 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಇವರು ಕರ್ತವ್ಯ ನಿರತ ವೇಳೆಯಲ್ಲಿಯೇ ಬಿದ್ದಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಕರ್ತವ್ಯದ ವೇಳೆಯಲ್ಲಿ ಹೃದಯಾಘಾತ| ಉಪನ್ಯಾಸಕಿ ಸಾವು Read More »

LICಯಲ್ಲಿ‌‌ 9394 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| ಸಂಪೂರ್ಣ ಮಾಹಿತಿ ಇಲ್ಲಿದೆ

ಸಮಗ್ರ ನ್ಯೂಸ್: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದಲ್ಲಿ ಅಪ್ರೆಂಟಿಸ್‌ ಡೆವಲಪ್‌ಮೆಂಟ್‌ ಆಫೀಸರ್‌ಗಳ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿರುವ ಎಲ್‌ಐಸಿ, ಇಂದಿನಿಂದ ಅರ್ಜಿ ಸ್ವೀಕಾರ ಶುರುಮಾಡಿದೆ. ಒಟ್ಟು 9394 ಹುದ್ದೆಗಳ ಭರ್ತಿಗೆ ಎಲ್‌ಐಸಿ ಈ ನೇಮಕ ಅಭಿಯಾನ ಕೈಗೊಂಡಿದೆ. ಅರ್ಜಿ ಸಲ್ಲಿಕೆ ಶುರು – 21 ಜನವರಿ 2023.ಅರ್ಜಿ ಸಲ್ಲಿಕೆಗೆ ಕೊನೇ ದಿನ – 10 ಫೆಬ್ರವರಿ 2023.ಕಾಲ್‌ ಲೆಟರ್‌ ಡೌನ್‌ಲೋಡ್‌ – 4 ಮಾರ್ಚ್‌ 2023.ಪ್ರಿಲಿಮಿನರಿ ಎಕ್ಸಾಂ ದಿನಾಂಕ –

LICಯಲ್ಲಿ‌‌ 9394 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| ಸಂಪೂರ್ಣ ಮಾಹಿತಿ ಇಲ್ಲಿದೆ Read More »

ರೈಲ್ವೇ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ| 7914 ಹುದ್ದೆಗಳಿಗೆ ಅಧಿಸೂಚನೆ

ಸಮಗ್ರ ನ್ಯೂಸ್: ಭಾರತೀಯ ರೈಲ್ವೇಯಲ್ಲಿ ಭರ್ಜರಿ ಉದ್ಯೋಗಾವಕಾಶ ಮಾಡಿಕೊಡಲಾಗಿದ್ದು, ಅಧಿಸೂಚನೆ ಹೊರಡಿಸಲಾಗಿದೆ. ಕೇವಲ 10ನೇ ತರಗತಿ ವಿದ್ಯಾರ್ಹತೆಯೊಂದಿಗೆ ಉದ್ಯೋಗ ಪಡೆಯುವ ಅವಕಾಶವನ್ನ ಭಾರತೀಯ ರೈಲ್ವೇ ಈಗ ಒದಗಿಸುತ್ತಿದೆ. ಗ್ರೂಪ್ ಡಿ ಹುದ್ದೆಗಳ ಪ್ರಕಟಣೆಯ ನಂತ್ರ ಮತ್ತೊಂದು ಬೃಹತ್ ಅಧಿಸೂಚನೆಯನ್ನ ಬಿಡುಗಡೆ ಮಾಡಲಾಗಿದೆ. ಇತ್ತೀಚಿನ ಅಧಿಸೂಚನೆಯ ಮೂಲಕ 7,914 ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ದಕ್ಷಿಣ ಮಧ್ಯ ರೈಲ್ವೆ, ಆಗ್ನೇಯ ರೈಲ್ವೆ, ವಾಯುವ್ಯ ರೈಲ್ವೆ ನೇಮಕಾತಿಗಳನ್ನ ವಲಯಗಳಾದ್ಯಂತ ಮಾಡಲಾಗುತ್ತದೆ. ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿ

ರೈಲ್ವೇ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ| 7914 ಹುದ್ದೆಗಳಿಗೆ ಅಧಿಸೂಚನೆ Read More »

ಈರುಳ್ಳಿ ಸಿಪ್ಪೆ‌ ವೇಸ್ಟ್ ಅಂತ ಬಿಸಾಕ್ತೀರಾ? ಈ ವಿಷಯ ತಿಳ್ಕೊಂಡ್ರೆ ಇನ್ನು ನೀವು ಹಾಗೆ ಮಾಡಲ್ಲ…!

ಸಮಗ್ರ ನ್ಯೂಸ್: ಈರುಳ್ಳಿಯನ್ನು ಪ್ರಪಂಚದಾದ್ಯಂತ ಜನರು ಅನೇಕ ಪಾಕವಿಧಾನಗಳನ್ನು ತಯಾರಿಸಲು ಬಳಸುತ್ತಾರೆ. ಈರುಳ್ಳಿ ಹೊರತಾದ ಅಡುಗೆ ಇಲ್ಲ ಅಂತನೇ ಹೇಳಬಹುದು. ಇದರ ಸಿಪ್ಪೆ ತೆಗೆಯುವಾಗ ಕಣ್ಣೀರು ಬಂದರೂ ಅದರ ರುಚಿ ಬಹುತೇಕರಿಗೆ ಇಷ್ಟವಾಗುತ್ತದೆ. ಈರುಳ್ಳಿ ಸುಲಿದ ನಂತರ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಭಾವಿಸಿ ಕಸದ ಬುಟ್ಟಿಗೆ ಎಸೆಯುತ್ತೇವೆ ಆದರೆ ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಂಡರೆ ನೀವು ಹಾಗೆ ಮಾಡುವುದಿಲ್ಲ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.)

ಈರುಳ್ಳಿ ಸಿಪ್ಪೆ‌ ವೇಸ್ಟ್ ಅಂತ ಬಿಸಾಕ್ತೀರಾ? ಈ ವಿಷಯ ತಿಳ್ಕೊಂಡ್ರೆ ಇನ್ನು ನೀವು ಹಾಗೆ ಮಾಡಲ್ಲ…! Read More »

ದಟ್ಟ ಅಡವಿಯಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಕುಟುಂಬಸ್ಥರು!!

ಸಮಗ್ರ ನ್ಯೂಸ್: ದಟ್ಟ ಅರಣ್ಯದಲ್ಲಿ 90 ವರ್ಷದ ವೃದ್ಧೆಯೊಬ್ಬರನ್ನು ಕುಟುಂಬಸ್ಥರು ಬಿಟ್ಟು ಹೋದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ. ನಿತ್ರಾಣ ಸ್ಥಿತಿಯಲ್ಲಿ ವೃದ್ಧೆ ಸೋಮವಾರ ಪತ್ತೆಯಾಗಿದ್ದು, ಕುಟುಂಬದವರೇ ಅವರನ್ನು ಅರಣ್ಯದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಗ್ರಾಮದ ಜನ ತಿಳಿಸಿದ್ದಾರೆ. ರುಮೇವಾಡಿ ಗ್ರಾಮದ ರೈತ ರಾಜು ಘಾಡಿ ಎನ್ನುವವರು ಸೋಮವಾರ ಕಾಡಿನ ದಾರಿಯಲ್ಲಿ ಹೊರಟಿದ್ದರು. ಆಗ ವೃದ್ಧೆ ನರಳುವುದು ಕೇಳಿಸಿತು. ಹತ್ತಿರ ಹೋಗಿ ನೋಡಿದ ಅವರು ಅಜ್ಜಿಗೆ ನೀರು ಕುಡಿಸಿ ಉಪಚರಿಸಿದರು. ತಮ್ಮ ಟ್ರ್ಯಾಕ್ಟರ್‌ನಲ್ಲಿ ಅವರನ್ನು

ದಟ್ಟ ಅಡವಿಯಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಕುಟುಂಬಸ್ಥರು!! Read More »

ಎರಡು ದಿನ‌ ಕರ್ನಾಟಕದಲ್ಲಿ ಸಾಧಾರಣ ಮಳೆ‌ ಸಾಧ್ಯತೆ |ಹವಾಮಾನ ಇಲಾಖೆ ಮಾಹಿತಿ

ಸಮಗ್ರ ನ್ಯೂಸ್: ಮುಂದಿನ ದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ಕನಿಷ್ಠ ಉಷ್ಣಾಂಶವು ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಸೆಲ್ಸಿಯಸ್​ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ, ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ

ಎರಡು ದಿನ‌ ಕರ್ನಾಟಕದಲ್ಲಿ ಸಾಧಾರಣ ಮಳೆ‌ ಸಾಧ್ಯತೆ |ಹವಾಮಾನ ಇಲಾಖೆ ಮಾಹಿತಿ Read More »