January 2023

ಶಿಲ್ಪಕಲೆಯಲ್ಲೂ ಬಿಂಬಿತವಾದ ಧರ್ಮ! ಗಾಂಧಿಪ್ರತಿಮೆ ವಿರೂಪ; ಅನಾವರಣ ಕಾರ್ಯಕ್ರಮ ರದ್ದು

ಸಮಗ್ರ ನ್ಯೂಸ್: ನೂತನವಾಗಿ ನಿರ್ಮಿಸಲಾದ ಗಾಂಧಿ ಪ್ರತಿಮೆಯೇ ವಿರೂಪಗೊಂಡಿದ್ದರಿಂದ ಇಂದು(ಜ.26) ನಡೆಯಬೇಕಿದ್ದ ಗಾಂಧಿಭವನ ಉದ್ಘಾಟನೆ ಕಾರ್ಯಕ್ರಮ ರದ್ದುಗೊಂಡಿದೆ. ಹಾಸನ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಲವು ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಮಾಡುತ್ತಿದ್ದು, ಹಾಸನದಲ್ಲಿ ಸುಮಾರು 23 ಲಕ್ಷ ರೂ.ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣಗೊಂಡಿದೆ. ಅಲ್ಲಿ ಗಾಂಧಿ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಆದರೆ ಈ ಪ್ರತಿಮೆ ವಿರೂಪಗೊಂಡಿರುವುದು ವಿವಾದಾತ್ಮಕವಾಗಿ ಪರಿಣಮಿಸಿದ್ದು, ನಾಳೆ ನಡೆಯಬೇಕಿದ್ದ ಉದ್ಘಾಟನೆ ಕಾರ್ಯಕ್ರಮ ರದ್ದುಗೊಂಡಿದೆ. ಶಿಲ್ಪಕಲೆಯ ತವರು ಎನ್ನಲಾಗಿರುವ […]

ಶಿಲ್ಪಕಲೆಯಲ್ಲೂ ಬಿಂಬಿತವಾದ ಧರ್ಮ! ಗಾಂಧಿಪ್ರತಿಮೆ ವಿರೂಪ; ಅನಾವರಣ ಕಾರ್ಯಕ್ರಮ ರದ್ದು Read More »

ಕೇಂದ್ರಸರ್ಕಾರದಿಂದ ಪದ್ಮ ಪ್ರಶಸ್ತಿ ಘೋಷಣೆ| ಮಾಜಿ ಸಿಎಂ ಎಸ್.ಎಂ ಕೃಷ್ಣ, ಸುಧಾಮೂರ್ತಿ, ಎಸ್.‌ಎಲ್ ಬೈರಪ್ಪ ಸೇರಿ‌ 106 ಸಾಧಕರಿಗೆ ಪುರಸ್ಕಾರ

ಸಮಗ್ರ ನ್ಯೂಸ್: 74ನೇ ಗಣರಾಜ್ಯೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮ ಪುರಸ್ಕೃತರನ್ನು ಘೋಷಿಸಿದ್ದು, ಕನ್ನಡಿಗರಾದ ಸುಧಾ ಮೂರ್ತಿ, ಎಸ್. ಎಂ ಕೃಷ್ಣ, ಎಸ್.ಎಲ್ ಬೈರಲ್, ಉಮ್ಮಥಾಟ್ ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯ, ಚಿಕ್ಕಬಳ್ಳಾಪುರದ ತಮಟೆ ವಾದಕ ಮುನಿ ವೆಂಕಟಪ್ಪ ಸೇರಿ 106 ಸಾಧಕರು ಸೇರಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. 2023ನೇ ಸಾಲಿಗೆ 106 ಪದ್ಮ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.

ಕೇಂದ್ರಸರ್ಕಾರದಿಂದ ಪದ್ಮ ಪ್ರಶಸ್ತಿ ಘೋಷಣೆ| ಮಾಜಿ ಸಿಎಂ ಎಸ್.ಎಂ ಕೃಷ್ಣ, ಸುಧಾಮೂರ್ತಿ, ಎಸ್.‌ಎಲ್ ಬೈರಪ್ಪ ಸೇರಿ‌ 106 ಸಾಧಕರಿಗೆ ಪುರಸ್ಕಾರ Read More »

ಕೊಟ್ಟಿಗೆಹಾರ:ಬಸ್ಸು , ಗ್ಯಾಸ್ ಲಾರಿ ಮುಖಮುಖಿ ಡಿಕ್ಕಿ

ಸಮಗ್ರ ನ್ಯೂಸ್: ಕಾಲೇಜು ಬಸ್ಸು ಹಾಗೂ ಗ್ಯಾಸ್ ಲಾರಿ ಮುಖಮುಖಿ ಡಿಕ್ಕಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ73 ಮೂಡಿಗೆರೆ ತಾಲೂಕಿನ ಚಕ್ ಮಕ್ಕಿ ಬಳಿ ಸಂಭವಿಸಿದೆ. ಉಡುಪಿಯಿಂದಾ ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದ ಕಾಲೇಜ್ ಬಸ್ ಹಾಗೂ ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಗ್ಯಾಸ್ ಸಿಲಿಂಡರಿನ ಲಾರಿ ಮುಖಮರವಖಿನಡಿಕ್ಕಿಯಾಗಿದೆ. ಈ ವೇಳೆ ಬಸ್ಸಿನ ಚಾಲಕನಿಗೆ ತೀವ್ರ ಪೆಟ್ಟಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಉಡುಪಿಯ ದಂತ ಕಾಲೇಜು ವಿದ್ಯಾರ್ಥಿಗಳಾಗಿದ್ದು ಅವರು ಸಣ್ಣ ಪುಟ್ಟ ಗಾಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಟ್ಟಿಗೆಹಾರ:ಬಸ್ಸು , ಗ್ಯಾಸ್ ಲಾರಿ ಮುಖಮುಖಿ ಡಿಕ್ಕಿ Read More »

ಹವಾಮಾನ ವೈಪರೀತ್ಯ; ರವಿಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಕಾಪ್ಟರ್ ತುರ್ತು ಭೂಸ್ಪರ್ಶ

ಸಮಗ್ರ ನ್ಯೂಸ್: ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕ ಶ್ರೀ ರವಿ ಶಂಕರ್ ಗುರೂಜಿ ಇದ್ದ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಈರೋಡ್’ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ರವಿ ಶಂಕರ್ ಗುರೂಜಿ ಹಾಗೂ ಇತರ ಮೂವರಿದ್ದ ಹೆಲಿಕಾಪ್ಟರ್ ಈರೋಡ್ ಜಿಲ್ಲೆಯ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಬುಡಕಟ್ಟು ಕುಗ್ರಾಮ ಉಕಿನಿಯಂನಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಅನ್ನು ಪೈಲಟ್ ಸೇಫ್ ಆಗಿ ಲ್ಯಾಂಡ್ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. ಹೆಲಿಕಾಪ್ಟರ್ ನಲ್ಲಿ ಗುರೂಜಿ

ಹವಾಮಾನ ವೈಪರೀತ್ಯ; ರವಿಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಕಾಪ್ಟರ್ ತುರ್ತು ಭೂಸ್ಪರ್ಶ Read More »

ಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದ ಬಸ್ ಪಲ್ಟಿ; ಹಲವರಿಗೆ ಗಾಯ

ಸಮಗ್ರ ನ್ಯೂಸ್: ತಮಿಳುನಾಡಿನಿಂದ ಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದ ಗುಜರಾತ್ ಪ್ರವಾಸಿಗರಿದ್ದ ಬಸ್ ಪಾಲರ್ ಬಳಿ ಬುಧವಾರ ಬೆಳಿಗ್ಗೆ ಉರುಳಿ ಬಿದ್ದಿದ್ದು, 15 ಜನರು ಗಾಯಗೊಂಡಿದ್ದಾರೆ. ತಮಿಳುನಾಡಿನಿಂದ ಪ್ರವಾಸ ಮುಗಿಸಿಕೊಂಡು ಪಾಲಾರ್ ಮೂಲಕ ರಾಜ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಬುಧವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಪಾಲಾರ್ ರಸ್ತೆಯ ಎರಡನೇ ತಿರುವು ಬಳಿ ಬಸ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಉರುಳಿ ಬಿದ್ದಿದೆ. ಬಸ್ಸಿನಲ್ಲಿ ಒಟ್ಟು 50 ಜನರಿದ್ದು, ಈ ಪೈಕಿ 15 ಜನರಿಗೆ ಗಾಯಗಳಾಗಿವೆ.

ಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದ ಬಸ್ ಪಲ್ಟಿ; ಹಲವರಿಗೆ ಗಾಯ Read More »

ಧರ್ಮಸ್ಥಳ: ಲಾಡ್ಜ್ ಗೆ ಬಂದ ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಲಾಡ್ಜ್ ಗೆ ಬಂದ ಅನ್ಯಕೋಮಿನ ಜೋಡಿಯನ್ನು ಹಿಂದೂ ಕಾರ್ಯಕರ್ತರು ಹಿಡಿದು ಧರ್ಮಸ್ಥಳ ಪೊಲೀಸರ ವಶಕ್ಕೆ ನೀಡಿದ ಘಟನೆ ಧರ್ಮಸ್ಥಳದಲ್ಲಿ ಜ.25ರಂದು ಬೆಳಗ್ಗೆ ನಡೆದಿದೆ. ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಖಾಸಗಿ ಲಾಡ್ಜ್ ಗಳಲ್ಲಿ ಐಡಿ ಕಾರ್ಡ್ ನೀಡಿ ರೂಂ ಪಡೆಯಲು ಯತ್ನಿಸುತ್ತಿದ್ದು ಆದ್ರೆ ಯಾವ ಲಾಡ್ಜ್ ಮಾಲೀಕರು ಕೂಡ ಅನ್ಯಕೋಮಿನ ಜೋಡಿ ಅಗಿದ್ದರಿಂದ ರೂಂ ನೀಡದೆ ವಾಪಸ್ ಕಳುಹಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಜ.25 ರಂದು ಬೆಳಗ್ಗೆ ಇಬ್ಬರನ್ನು ಹಿಡಿದು

ಧರ್ಮಸ್ಥಳ: ಲಾಡ್ಜ್ ಗೆ ಬಂದ ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ Read More »

ರಾಜ್ಯದ ಹಲವೆಡೆ ಬಿರುಸಿನ ಮಳೆ| ಕೃಷಿ ಹಾನಿ; ಕಾಫಿ, ಅಡಿಕೆ ನಷ್ಟ| ಫೆ.2ರವರೆಗೂ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ, ದ.ಕ ಜಿಲ್ಲೆಯ ವಿವಿಧೆಡೆ ಮಂಗಳವಾರ ಬಿರುಸಿನ ಮಳೆಯಾಗಿದೆ. ಮಡಿಕೇರಿ ನಗರವೂ ಸೇರಿದಂತೆ ಕೊಡಗು ಜಿಲ್ಲೆಯ ಭಾಗಮಂಡಲ, ಸಂಪಾಜೆ ಸಮೀಪದ ಚೆಂಬು, ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಅಮ್ಮತ್ತಿ, ಸೋಮವಾರಪೇಟೆ ಭಾಗದಲ್ಲಿ ಮಳೆ ಸುರಿದಿದೆ. ಒಣಗಿಸಲು ಕಣದಲ್ಲಿ ಹಾಕಿದ್ದ ಕಾಫಿ ಹಾಗೂ ಕೊಯ್ಲು ಮಾಡಿದ್ದ ಕಾಫಿ ಮಳೆಯಿಂದ ಹಾಳಾಗಿದೆ. ಭಾಗಮಂಡಲದ ಕೆಲವೆಡೆ ಇನ್ನೂ ಭತ್ತದ ಕೊಯ್ಲು ಆಗಿಲ್ಲ. ಮಳೆಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಹಲವೆಡೆ ಚದುರಿದಂತೆ

ರಾಜ್ಯದ ಹಲವೆಡೆ ಬಿರುಸಿನ ಮಳೆ| ಕೃಷಿ ಹಾನಿ; ಕಾಫಿ, ಅಡಿಕೆ ನಷ್ಟ| ಫೆ.2ರವರೆಗೂ ಮಳೆ ಸಾಧ್ಯತೆ Read More »

ತಾಯಿ-ಮಗಳು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವೀಸ್ಟ್|ಮಗಳನ್ನೇ ಹತ್ಯೆ ಮಾಡಿದ ತಾಯಿ

ಸಮಗ್ರ ನ್ಯೂಸ್: ರವಿವಾರ ರಾತ್ರಿ ತಾಯಿ ಹಾಗೂ ಮಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಿಗೂಢ ಘಟನೆಯನ್ನು ಭಾಗಶ: ಬೇಧಿಸುವಲ್ಲಿ ಬೇಡಡ್ಕ ಪೊಲೀಸರು ಸಫಲರಾಗಿದ್ದು, ತಾಯಿ ಮಗಳನ್ನು ಹತ್ಯೆ ಮಾಡಿದ ಬಳಿಕ ಆಕೆ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್‌ ತನಿಖೆಯಲ್ಲಿ ಮೇಲ್ನೋಟಕ್ಕೆ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಕಾಸರಗೋಡಿನ ಕುಂಡಂಕುಳಿ ನೀರ್ಕಯದ ಟೂರಿಸ್ಟ್ ಚಾಲಕ ಚಂದ್ರನ್‌ರ ಪತ್ನಿ ನಾರಾಯಣಿ (45) ಮತ್ತು ಅವರ ಪುತ್ರಿ ಏಳನೇ ತರಗತಿ ವಿದ್ಯಾರ್ಥಿನಿ ಶ್ರೀನಂದ (12)ಳ ಮೃತ ದೇಹ ನೇಣು ಬಿಗಿದ

ತಾಯಿ-ಮಗಳು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವೀಸ್ಟ್|ಮಗಳನ್ನೇ ಹತ್ಯೆ ಮಾಡಿದ ತಾಯಿ Read More »

ಉಪ್ಪಿನಂಗಡಿ: ಆಡಳಿತ ಪಕ್ಷದಿಂದ ಗ್ರಾ.ಪಂ ಸಾಮಾನ್ಯ ಸಭೆ ಬಹಿಷ್ಕಾರ| ಅಸಾಂವಿಧಾನಿಕ ನಡೆ ಎಂದು SDPI ಆಕ್ರೋಶ

ಸಮಗ್ರ ನ್ಯೂಸ್: ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯನ್ನು ಸ್ವತಃ ಆಡಳಿತ ಪಕ್ಷದ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರಿಗಳ ಮೇಲಿನ ದ್ವೇಷ ಸಾಧನೆಗಾಗಿ ಬಹಿಷ್ಕರಿಸಿದ್ದು ಅಸಂವಿಧಾನಿಕ ನಡೆಯಾಗಿದೆ. ಈ ಸಂಬಂಧ ತಕ್ಷಣ ಗ್ರಾಮಸ್ಥರೊಂದಿಗೆ ಕ್ಷಮೆ ಕೇಳಿ ಮತ್ತೆ ಸಭೆ ನಡೆಸಬೇಕು ತಪ್ಪಿದಲ್ಲಿ ಉನ್ನತ ಅಧಿಕಾರಿಗಳು ಪಂಚಾಯತ್ ಆಡಳಿತ ಸಮಿತಿಯನ್ನು ವಿಸರ್ಜಿಸುವಂತೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಪ್ಪಿನಂಗಡಿ ಬ್ಲಾಕ್ ಸಮಿತಿಯು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಜನ ಸಾಮಾನ್ಯರು

ಉಪ್ಪಿನಂಗಡಿ: ಆಡಳಿತ ಪಕ್ಷದಿಂದ ಗ್ರಾ.ಪಂ ಸಾಮಾನ್ಯ ಸಭೆ ಬಹಿಷ್ಕಾರ| ಅಸಾಂವಿಧಾನಿಕ ನಡೆ ಎಂದು SDPI ಆಕ್ರೋಶ Read More »

ಜ.30: ಜೆಸಿಐ ಜೋಡುಮಾರ್ಗ ಪದಗ್ರಹಣ

ಸಮಗ್ರ ನ್ಯೂಸ್: ಜೇಸಿಐ ಜೋಡುಮಾರ್ಗ ನೇತ್ರಾವತಿಯ 2023 ನೇ ಸಾಲಿನ ಅಧ್ಯಕ್ಷರಾಗಿ JFD ಗಾಯತ್ರಿ ಲೋಕೇಶ್ ರವರು ಆಯ್ಕೆಯಾಗಿದ್ದು, ಪದಗ್ರಹಣ ಸಮಾರಂಭ ಜ.30ರಂದು ನಡೆಯಲಿದೆ. ಘಟಕದ ಕಾರ್ಯದರ್ಶಿಯಾಗಿ ರಮ್ಯ, ಕೋಶಾಧಿಕಾರಿಯಾಗಿ ದೀಪ್ತಿ ಶ್ರೀನಿಧಿ ಹಾಗು ಘಟಕದ ಉಪಾಧ್ಯಕ್ಷರುಗಳಾಗಿ ಸುಬ್ರಹ್ಮಣ್ಯ ಪೈ, ಕಿಶನ್ ಎನ್ ರಾವ್, ಅಮಿತಾ ಹರ್ಷರಾಜ್, ಡಾ.ವಿನಾಯಕ್ ಕೆ.ಎಸ್. ಪ್ರಕಾಶ್ ಆಳ್ವ, ಶ್ರೀನಿಧಿ ಭಟ್ ಆಯ್ಕೆಯಾಗಿರುತ್ತಾರೆ. ಘಟಕದ ಜೇಜೇಸಿ ಅಧ್ಯಕ್ಷರಾಗಿ ರಶ್ಮಿತಾ ಆಯ್ಕೆಯಾಗಿರುತ್ತಾರೆ. ಘಟಕದ ನಿರ್ದೇಶಕರುಗಳಾಗಿ ಹರಿಶ್ಚಂದ್ರ ಆಳ್ವ, ಹರ್ಷರಾಜ್, ಡಾ.ಧೀರಜ್ ಹೆಬ್ರಿ, ರವೀಂದ್ರ ಕುಕ್ಕಾಜೆ

ಜ.30: ಜೆಸಿಐ ಜೋಡುಮಾರ್ಗ ಪದಗ್ರಹಣ Read More »