January 2023

ಅಮೇರಿಕಾದಲ್ಲಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಭಾರತೀಯ ಮಹಿಳೆ ಸಾವು

ಸಮಗ್ರ ನ್ಯೂಸ್: ಅಮೆರಿಕದ ಸೌತ್ ಲೇಕ್ ಯೂನಿಯನ್‌ನಲ್ಲಿ ಸಿಯಾಟಲ್ ಪೊಲೀಸ್ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದು 23 ವರ್ಷದ ಭಾರತೀಯ ಮೂಲದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಸಿಯಾಟಲ್ ಪೊಲೀಸ್ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಸೋಮವಾರ ರಾತ್ರಿ ಪೊಲೀಸ್ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಸಂತ್ರಸ್ತೆಯನ್ನು ಗಂಭೀರ ಸ್ಥಿತಿಯಲ್ಲಿ ಹಾರ್ಬರ್‌ವ್ಯೂ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.ಕಿಂಗ್ ಕೌಂಟಿ ಮೆಡಿಕಲ್ ಎಕ್ಸಾಮಿನರ್ ಕಚೇರಿಯು ಮಹಿಳೆಯನ್ನು ಜಾಹ್ನವಿ ಕಂದುಲಾ ಎಂದು ಗುರುತಿಸಿದೆ ಎಂದು ದಿ ಸಿಯಾಟಲ್ ಟೈಮ್ಸ್ ವರದಿ ಮಾಡಿದೆ. ತೀವ್ರ […]

ಅಮೇರಿಕಾದಲ್ಲಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಭಾರತೀಯ ಮಹಿಳೆ ಸಾವು Read More »

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಗ್ ಶಾಕ್| ಬಿಜೆಪಿ ಕಾರ್ಯಕರ್ತರಿಂದಲೇ ”ಗೋ ಬ್ಯಾಕ್ ಆರ್. ಅಶೋಕ್” ಅಭಿಯಾನ|

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕಗೊಳಿಸಲಾಗಿದ್ದು, ಸಚಿವರ ಬದಲಾವಣೆಗೆ ಇದೀಗ ಜಿಲ್ಲೆಯ ಬಿಜೆಪಿ ಮುಖಂಡರಿಂದ ಆಕ್ರೋಶ ವ್ಯಕ್ತವಾಗಿದೆ. ಸಚಿವ ಗೋಪಾಲಯ್ಯ ಅವರನ್ನು ಬದಲಿಸಿ ಆರ್.ಅಶೋಕ್ ಅವರಿಗೆ ಮಂಡ್ಯ ಉಸ್ತುವಾರಿಯನ್ನು ನೀಡಲಾಗಿದೆ. ಅಶೋಕ್ ಅವರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಅಲ್ಲದೇ, ಜಿಲ್ಲೆಯವರೇ ಆದ ನಾರಾಯಣ ಗೌಡ ಅವರನ್ನ ಉಸ್ತುವಾರಿ ಸಚಿವರನ್ನಾಗಿ ಮಾಡುವಂತೆ ಕೆಲವು ಬಿಜೆಪಿ ಮುಖಡರು

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಗ್ ಶಾಕ್| ಬಿಜೆಪಿ ಕಾರ್ಯಕರ್ತರಿಂದಲೇ ”ಗೋ ಬ್ಯಾಕ್ ಆರ್. ಅಶೋಕ್” ಅಭಿಯಾನ| Read More »

ಹಾಕಿ ವಿಶ್ವಕಪ್; ಭಾರತಕ್ಕೆ ರೋಚಕ ಜಯ

ಸಮಗ್ರ ನ್ಯೂಸ್: ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಅವಕಾಶ ಮಿಸ್ ಮಾಡಿಕೊಂಡ ಭಾರತ, ಇದೀಗ ಜಪಾನ್ ವಿರುದ್ಧ 5-0 ಅಂತರದ ಗೋಲು ಸಿಡಿಸಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ 9ನೇ ಸ್ಥಾನ ಖಚಿತಪಡಿಸಿಕೊಂಡಿದೆ. ಕ್ಲಾಸಿಫಿಕೇಶನ್ ಪಂದ್ಯದಲ್ಲಿ ಭಾರತ ಅಬ್ಬರಿಸಿತು. ಜಪಾನ್ ವಿರುದ್ಧ ಮೊದಲ ಕ್ವಾರ್ಟರ್‌ಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ,3 ಹಾಗೂ 4 ಕ್ವಾರ್ಟರ್‌ನಲ್ಲಿ ಗೋಲು ಸಿಡಿಸಿ ಭರ್ಜರಿ 8-0 ಅಂತರದಿಂದ ಗೆಲುವು ದಾಖಲಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಪೆನಾಲ್ಟಿ

ಹಾಕಿ ವಿಶ್ವಕಪ್; ಭಾರತಕ್ಕೆ ರೋಚಕ ಜಯ Read More »

ಸ್ವಪಕ್ಷೀಯ ಕಾರ್ಯಕರ್ತನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ| ಆರೋಪಿ ಹಾಗೂ ಕಾರು ಚಾಲಕ ಅರೆಸ್ಟ್

ಸಮಗ್ರ ನ್ಯೂಸ್: ಬಿಜೆಪಿ ಮುಖಂಡರೊಬ್ಬರು ಸ್ವಪಕ್ಷೀಯ ಕಾರ್ಯಕರ್ತನನ್ನು ಅಟ್ಟಾಡಿಸಿಕೊಂಡು ಹೊಡೆದಿರುವಂತಹ ಘಟನೆ ನಿನ್ನೆ(ಜ.25) ಅರಸೀಕೆರೆಯಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆ ಪೊಲೀಸರಿಂದ ಬಿಜೆಪಿ ಘಟಕದ ಉಪಾಧ್ಯಕ್ಷ ವಿಜಯ್ ಕುಮಾರ್​ ಹಾಗೂ ಕಾರು ಚಾಲಕನನ್ನು ಬಂಧಿಸಿದ್ದಾರೆ. ಕೊಲೆ ಯತ್ನ ಆರೋಪದಡಿ ಐಪಿಸಿ ಸೆಕ್ಷನ್​ 307ರಡಿ ಕೇಸ್ ದಾಖಲು ಮಾಡಲಾಗಿದೆ. ನಿನ್ನೆ(ಜ.25) ಸಂಜೆ ನಡುರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತ ಕುಮಾರ್​ ಮೇಲೆ ದೊಣ್ಣೆಯಿಂದ ವಿಜಯ್ ಕುಮಾರ್​ ಮಾರಣಾಂತಿಕ ಹಲ್ಲೆ ಮಾಡಿದ್ದ. ಬಿಜೆಪಿ ಕಾರ್ಯಕರ್ತ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಕುಮಾರ್​ಗೆ

ಸ್ವಪಕ್ಷೀಯ ಕಾರ್ಯಕರ್ತನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ| ಆರೋಪಿ ಹಾಗೂ ಕಾರು ಚಾಲಕ ಅರೆಸ್ಟ್ Read More »

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರಿಪ್ರಿಯಾ- ವಸಿಷ್ಠ ಸಿಂಹ

ಸಮಗ್ರ ನ್ಯೂಸ್: ಚಲನಚಿತ್ರ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮದುವೆ ನಗರದ ಊಟಿ ರಸ್ತೆಯಲ್ಲಿರುವ ಸಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರ ಅದ್ಧೂರಿಯಾಗಿ ನೆರವೇರಿತು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಗೆ ಬಂಧುಗಳು, ಕಲಾವಿದರು, ರಾಜಕಾರಣಿಗಳು ಶುಭ ಹಾರೈಸಿದರು. ಹ್ಯಾಟ್ರಿಕ್ ಹೀರೊ ಶಿವರಾಜ್‌ ಕುಮಾರ್ ನವ ದಂಪತಿಗೆ ಶುಭ ಕೋರಿದರು. ನಟರಾದ ಧನಂಜಯ್, ಕೃಷ್ಣ, ಮಾಸ್ಟರ್ ಆನಂದ್, ನಟಿ ಅಮೃತಾ ಅಯ್ಯಂಗಾರ್, ಸಂಗೀತ ನಿರ್ದೇಶಕ ಗುರುಕಿರಣ್ ಮೊದಲಾದವರು ಶುಭಾಶಯ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್,

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರಿಪ್ರಿಯಾ- ವಸಿಷ್ಠ ಸಿಂಹ Read More »

ತಂದೆಯ ಸಾವಿನ ಬಳಿಕ ತಾಯಿಗೆ ಮರುಮದುವೆ ಮಾಡಿಸಿದ ಮಗ!!

ಸಮಗ್ರ ನ್ಯೂಸ್: ಸಮಾಜದ ಕಟ್ಟುಪಾಡುಗಳಿಗೆ ಸೆಡ್ಡು ಹೊಡೆದು ತಾನೇ ಮುಂದೆ ನಿಂತು ತನ್ನ ವಿಧವೆ ತಾಯಿಗೆ ಮರುಮದುವೆ ಮಾಡಿಸಿದ್ದಾನೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಕೊಲ್ಹಾಪುರ ಜಿಲ್ಲೆಯ ಯುವರಾಜ್ ಶೆಲೆ ಎಂಬಾತ ಐದು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡಿದ್ದ. ಈತನ ತಾಯಿ ಪತಿ ಸಾವಿನಿಂದ ತುಂಬಾ ನೊಂದುಕೊಂಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. 45 ವರ್ಷ ವಯಸ್ಸಿನ ತಾಯಿಗೆ ಸಂಗಾತಿಯ ಅಗತ್ಯವನ್ನು ಅರಿತ ಯುವರಾಜ್‌ ವರನನ್ನು ಹುಡುಕಿ ತಾನೇ ಮುಂದೆ ನಿಂತು ಮರು ಮದುವೆ

ತಂದೆಯ ಸಾವಿನ ಬಳಿಕ ತಾಯಿಗೆ ಮರುಮದುವೆ ಮಾಡಿಸಿದ ಮಗ!! Read More »

ಸೊಸೆಯ ವೈಧವ್ಯ ಸಹಿಸದ ಮರುಮದುವೆ ಮಾಡಿಸಿದ ಮಾಜಿ ಶಾಸಕ

ಸಮಗ್ರ ನ್ಯೂಸ್: ಮದುವೆಯಾದ ಕೆಲವೇ ವರ್ಷಗಳಲ್ಲಿ ಕಾಯಿಲೆಯಿಂದ ಮಗ ತೀರಿಕೊಂಡ ಬಳಿಕ ಸೊಸೆಗೆ ಬೇರೊಬ್ಬನ ಜೊತೆ ಮರುವಿವಾಹ ಮಾಡಿಸುವ ಮೂಲಕ ಒಡಿಶಾದ ಮಾಜಿ ಶಾಸಕರೊಬ್ಬರು ಮಾದರಿಯಾಗಿದ್ದಾರೆ. ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಶಾಸಕರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಒಡಿಶಾದ ಧೆನಂಕನಲ್​ ಜಿಲ್ಲೆಯ ಗಂಡಿಯಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಬಿನ್ ನಂದಾ ಅವರ ಪುತ್ರ ಸಂಬಿತ್​ ಜೊತೆ ಮಧುಸ್ಮಿತಾ ಎಂಬ ಯುವತಿಗೆ ಮದುವೆ ನಿಶ್ಚಯ ಮಾಡಿ, ಅದ್ಧೂರಿಯಾಗಿ ಮದುವೆ ಮಾಡಿದ್ದರು. ಆದರೆ, ಕರೊನಾದಿಂದ

ಸೊಸೆಯ ವೈಧವ್ಯ ಸಹಿಸದ ಮರುಮದುವೆ ಮಾಡಿಸಿದ ಮಾಜಿ ಶಾಸಕ Read More »

ಸುಬ್ರಹ್ಮಣ್ಯ: ಮರದಿಂದ ಬಿದ್ದು ವ್ಯಕ್ತಿ ಸಾವು

ಸಮಗ್ರ ನ್ಯೂಸ್: ರಾಮಪತ್ರೆ ಕೊಯ್ಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕಡಬ ತಾಲೂಕಿನ ಬಳ್ಪದಲ್ಲಿ ನಡೆದಿದೆ. ಇಲ್ಲಿನ ಬಳ್ಪ ಗ್ರಾಮದ ಕುಂಜತ್ತಾಡಿ ಮನೆ ದಾಮೋದರ ಗೌಡ (57) ಮೃತ ದುರ್ದೈವಿ. ಇವರು ಮನೆಯ ಬಳಿಯಿದ್ದ ರಾಮಪತ್ರೆ ಕೊಯ್ಯಲು ಮರವನ್ನು ಹತ್ತಿ ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಕೂಡಲೇ ಅವರನ್ನು ಅಂಬುಲೆನ್ಸ್ ಮೂಲಕ ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತು. ಈ ವೇಳೆ ವೈದ್ಯರು ಪರೀಕ್ಷಿಸಿ

ಸುಬ್ರಹ್ಮಣ್ಯ: ಮರದಿಂದ ಬಿದ್ದು ವ್ಯಕ್ತಿ ಸಾವು Read More »

ನಿಮ್ಮನ್ನು ನಂಬಿ ಇನ್ನೂ ಕೋರ್ಟ್ ಗೆ ಅಲೆಯುತ್ತಿದ್ದೇವೆ| ಪರೇಶ್ ಮೇಸ್ತಾ ಪ್ರಕರಣ ಸಂಬಂಧ ತಿರುಗಿ ಬಿದ್ದ ಹಿಂದೂ ಕಾರ್ಯಕರ್ತರು

ಸಮಗ್ರ ನ್ಯೂಸ್: ಹಿಂದೂ ಕಾರ್ಯಕರ್ತ ಪರೇಶ್‌ ಮೇಸ್ತಾ ಸಾವು ಪ್ರಕರಣಕ್ಕೆ ಸಿಬಿಐ ಬಿ ರಿಪೋರ್ಟ್‌ ಸಲ್ಲಿಸಿದ್ದರೂ ಅದರ ಕಾವು ಮಾತ್ರ ಇನ್ನೂ ಆರಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಇನ್ನೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದು, ಈಗ ಕುಮಟಾ ಶಾಸಕ ದಿನಕರ ಶೆಟ್ಟಿ ವಿರುದ್ಧ ತಿರುಗಿಬಿದ್ದಿದ್ದಾರೆ. ಹೊನ್ನಾವರದ ಶರಾವತಿ ಸರ್ಕಲ್‌ನಲ್ಲಿ‌ ಸೇರಿದ ಹಿಂದು ಕಾರ್ಯಕರ್ತರು, ಬಿಜೆಪಿ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಇಲ್ಲಿನ ಮೀನುಗಾರರು, ಹಿಂದು ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ವಿವಿಧ ಧರ್ಮದ, ಜಾತಿಗಳ ಯುವಕರು

ನಿಮ್ಮನ್ನು ನಂಬಿ ಇನ್ನೂ ಕೋರ್ಟ್ ಗೆ ಅಲೆಯುತ್ತಿದ್ದೇವೆ| ಪರೇಶ್ ಮೇಸ್ತಾ ಪ್ರಕರಣ ಸಂಬಂಧ ತಿರುಗಿ ಬಿದ್ದ ಹಿಂದೂ ಕಾರ್ಯಕರ್ತರು Read More »

ಗುಜರಾತ್ ಗಲಭೆಗೆ ಮುಖ್ಯಮಂತ್ರಿ ನರೇಂದ್ರ ಮೋದಿಯೇ ಹೊಣೆ – ದಿ ಕ್ಯಾರವಾನ್

ಸಮಗ್ರ ನ್ಯೂಸ್: ಗುಜರಾತ್ ನಲ್ಲಿ 2002ರಲ್ಲಿ ಸಂಭವಿಸಿದ್ದ ಗಲಭೆಗಳ ಕುರಿತು ಬ್ರಿಟಿಷ್ ಸರಕಾರವು ನಡೆಸಿದ್ದ ತನಿಖೆಯ ವರದಿಯ ಪ್ರತಿಯು ತನಗೆ ಲಭ್ಯವಾಗಿದ್ದು, ಸಂಪೂರ್ಣ ಹಿಂಸಾಚಾರವು ಪೂರ್ವಯೋಜಿತವಾಗಿತ್ತು ಎನ್ನುವುದನ್ನು ಅದು ಬೆಟ್ಟು ಮಾಡಿದೆ ಎಂದು ‘The Caravan’ ಬಹಿರಂಗಗೊಳಿಸಿದೆ. ಇತ್ತೀಚಿನ ಬಿಬಿಸಿಯ (BBC) ಸಾಕ್ಷ್ಯಚಿತ್ರ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ನಲ್ಲಿ ಈ ವರದಿಯನ್ನು ಉಲ್ಲೇಖಿಸಲಾಗಿದೆ. ಹಿಂದು ರಾಷ್ಟ್ರವಾದಿ ಸಂಘಟನೆ ವಿಶ್ವ ಹಿಂದು ಪರಿಷತ್ (VHP) ಈ ಹಿಂಸಾಚಾರವನ್ನು ‘ಯೋಜಿಸಿತ್ತು, ಬಹುಶಃ ತಿಂಗಳುಗಳ ಮೊದಲೇ’ ಎಂದು ಹೇಳಿರುವ ವರದಿಯು, 2002,

ಗುಜರಾತ್ ಗಲಭೆಗೆ ಮುಖ್ಯಮಂತ್ರಿ ನರೇಂದ್ರ ಮೋದಿಯೇ ಹೊಣೆ – ದಿ ಕ್ಯಾರವಾನ್ Read More »