January 2023

ರಾಜಕೀಯ ನಿವೃತ್ತಿ ಘೋಷಿಸಿದ ಎಸ್.ಎಂ ಕೃಷ್ಣ

ಸಮಗ್ರ ನ್ಯೂಸ್: ಮಾಜಿ ಸಿಎಂ ಎಸ್.ಎಂ ಕೃಷ್ಣ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಎಸ್ ಎಂ ಕೃಷ್ಣ ನಾನು ಹೆಚ್ಚಾಗಿ ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. 90 ವರ್ಷದ ವಯಸ್ಸಿನಲ್ಲಿ 50 ವರ್ಷದ ವ್ಯಕ್ತಿ ಹಾಗೆ ನಟಿಸೋಕೆ ಆಗುತ್ತಾ..? ಆದ್ದರಿಂದ ರಾಜಕೀಯ ಜೀವನಕ್ಕೆ ಗುಡ್ ಬೈ ಹೇಳುವ ಬಗ್ಗೆ ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ವಯಸ್ಸಿನ ಕಾರಣದಿಂದ ಸಾರ್ವಜನಿಕ ಜೀವನದಿಂದ ದೂರ ಇದ್ದೇನೆ, ಹಾಗಾಗಿ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆ […]

ರಾಜಕೀಯ ನಿವೃತ್ತಿ ಘೋಷಿಸಿದ ಎಸ್.ಎಂ ಕೃಷ್ಣ Read More »

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಎನ್ಇಪಿ ಅಡಿಯಲ್ಲಿ ಹೊಸ ಮಾನದಂಡ ಪ್ರಕಟ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇನ್ನು ಮುಂದೆ ಅಂಗನವಾಡಿ ಕಾರ್ಯಕರ್ತೆಯರಾಗಲು ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು, ಸಹಾಯಕರಿಗೆ ಎಸ್ಸೆಸ್ಸೆಲ್ಸಿ ಕಡ್ಡಾಯ! ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಹೊಸ ನಿಯಮ ಜಾರಿಗೆ ಬರಲಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆಕನಿಷ್ಠ ಪಿಯುಸಿ ತೇರ್ಗಡೆ ಹೊಂದಿರಬೇಕು, ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಸಂದರ್ಭದಲ್ಲಿ ಸರ್ಕಾರದ ಅಂಗೀಕೃತ ಸಂಸ್ಥೆಗಳಿಂದ D.SE.R.T.ಯಿಂದ ECCE ಡಿಪ್ಲೊಮಾ ಕೋರ್ಸ್, JOC ಕೋರ್ಸ್, N.T.T. ಕೋರ್ಸ್‌ಗಳನ್ನು ಹಾಗೂ ಅಂಗನವಾಡಿ ಚಟುವಟಿಕೆಗಳಿಗೆ

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಎನ್ಇಪಿ ಅಡಿಯಲ್ಲಿ ಹೊಸ ಮಾನದಂಡ ಪ್ರಕಟ Read More »

ರಾತ್ರಿ‌ ಮದ್ಯ ಸೇವಿಸಿ ಮಲಗಿದಾತ ಬೆಳಿಗ್ಗೆ ಹೆಣವಾದ| ಕುಟುಂಬಸ್ಥರಿಂದ‌ ಬಾರ್‌ ಮುಂದೆ ಪ್ರತಿಭಟನೆ

ಸಮಗ್ರ ನ್ಯೂಸ್: ರಾತ್ರಿ ಮದ್ಯ ಸೇವಿಸಿದ ಯುವಕನೋರ್ವ ಬೆಳಗ್ಗೆ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ‌ತರೀಕೆರೆ ತಾಲೂಕಿನ ಕರಕುಚ್ಚಿ ಕಾಲನಿಯಲ್ಲಿ ನಡೆದಿರುವುದು ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಮಂಜುನಾಥ(29) ಎಂದು‌‌ ಗುರುತಿಸಲಾಗಿದೆ. ಇಲ್ಲಿನ ಬಾರ್ ನಲ್ಲಿ ಮದ್ಯ ಸೇವಿಸಿದ್ದೇ ಅವರ ಸಾವಿಗೆ ಕಾರಣ ಎಂದು ಆರೋಪಿಸಿ ಮೃತಪಟ್ಟ ಯುವಕನ ಕುಟುಂಬಸ್ಥರು ಬಾರ್ ಎದುರು ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು. ಈ ಹಿಂದೆಯೂ ಇದೇ ರೀತಿ ಮೂರ್ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಆದ್ದರಿಂದ ಕೂಡಲೇ ಬಾರ್ ಮುಚ್ಚುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ರಾತ್ರಿ‌ ಮದ್ಯ ಸೇವಿಸಿ ಮಲಗಿದಾತ ಬೆಳಿಗ್ಗೆ ಹೆಣವಾದ| ಕುಟುಂಬಸ್ಥರಿಂದ‌ ಬಾರ್‌ ಮುಂದೆ ಪ್ರತಿಭಟನೆ Read More »

ಚಿತ್ರದುರ್ಗ‌ ಮುರುಘಾ ಶ್ರೀ‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್| ಅತ್ಯಾಚಾರ ‌ನಡೆದೇ‌ ಇಲ್ಲ ಅಂತಿದೆ ವೈದ್ಯಕೀಯ ವರದಿ

ಚಿತ್ರದುರ್ಗ: ಹಾಸ್ಟೆಲ್​ನ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಅವರು ಜೈಲು ಸೇರಿದ್ದಾರೆ. ಆದರೆ ಬಾಲಕಿಯರ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯರು ವರದಿ ನೀಡಿದ್ದು ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 1ನೇ ಪೋಕ್ಸೋ ಪ್ರಕರಣದ ಇಬ್ಬರು ಸಂತ್ರಸ್ತೆ ಬಾಲಕಿಯರ ಮೆಡಿಕಲ್ ರಿಪೋರ್ಟ್​​​ನಲ್ಲಿ ಅತ್ಯಾಚಾರ ಆಗಿಲ್ಲ ಎಂಬ ವರದಿ ಬಂದಿದೆ. ಯಾವುದೇ ಗಾಯಗಳು ಇಲ್ಲ ಎಂದು

ಚಿತ್ರದುರ್ಗ‌ ಮುರುಘಾ ಶ್ರೀ‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್| ಅತ್ಯಾಚಾರ ‌ನಡೆದೇ‌ ಇಲ್ಲ ಅಂತಿದೆ ವೈದ್ಯಕೀಯ ವರದಿ Read More »

ಅಪಘಾತದಲ್ಲಿ ಮೃತ ಮುಷರಫ್ ಸೋದರಿಯ ವಿದ್ಯಾಭ್ಯಾಸಕ್ಕೆ ಇನಾಯತ್ ಅಲಿ ನೆರವಿನ ಭರವಸೆ

ಸಮಗ್ರ ನ್ಯೂಸ್: ರವಿವಾರ ವೇಣೂರು ಸಮೀಪದ ಗರ್ಡಾಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಧಾರ್ಮಿಕ ಗುರು ನೌಶಾದ್‌ ಹಾಜಿ ಅವರ ಕಾರ್ ಚಾಲಕ ಮುಷರಫ್‌ ಉಳಾಯಿಬೆಟ್ಟು ಅವರ ನಿವಾಸಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮುಷರಫ್‌ ಅವರ ಅಗಲಿಕೆ ಅವರ ಕುಟುಂಬದವರಿಗೆ ಭರಿಸಲಾಗದ ನಷ್ಟವಾಗಿದೆ. ಅವರ ಕಷ್ಟ ಕಾಲದಲ್ಲಿ ನೆರವಾಗುವುದಾಗಿ ಭರವಸೆ ನೀಡಿದ ಇನಾಯತ್‌ ಅಲಿ ಅವರು, ಮುಷರಫ್‌ ಅವರ ಸಹೋದರಿಯ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸುವುದಾಗಿ

ಅಪಘಾತದಲ್ಲಿ ಮೃತ ಮುಷರಫ್ ಸೋದರಿಯ ವಿದ್ಯಾಭ್ಯಾಸಕ್ಕೆ ಇನಾಯತ್ ಅಲಿ ನೆರವಿನ ಭರವಸೆ Read More »

ಬೆಂಗಳೂರು ಯುವಕನ ಕಿಡ್ನಾಪ್ & ಕೊಲೆ ಪ್ರಕರಣ|ಚಾರ್ಮಾಡಿ ಘಾಟ್ ನಲ್ಲಿ ಶವಕ್ಕಾಗಿ ಹುಡುಕಾಟ

ಸಮಗ್ರ ನ್ಯೂಸ್: ಸುಮಾರು 9 ತಿಂಗಳ ಹಿಂದೆ ಕೊಲೆಯಾದ ಯುವಕನ ಶವವನ್ನು ಚಾರ್ಮಾಡಿ ಘಾಟಿ ಪರಿಸರದಲ್ಲಿ ಎಸೆಯಲಾಗಿದೆ ಎಂದು ಆರೋಪಿಗಳು ತಿಳಿಸಿದ್ದು ಅದರಂತೆ ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರು ಡಿಸಿಪಿ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ,ಪಿಎಸ್ ಐ ಮತ್ತು ಸಿಬ್ಬಂದಿ ಶವ ಪತ್ತೆಹಚ್ಚುವ ಕಾರ್ಯಾಚರಣೆಗೆ ಮಂಗಳವಾರ ಆಗಮಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ – ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಘಾಟಿಯ ಪ್ರದೇಶಗಳ ಕಣಿವೆಗಳಲ್ಲಿ ಸ್ಥಳೀಯ ಪೊಲೀಸರ

ಬೆಂಗಳೂರು ಯುವಕನ ಕಿಡ್ನಾಪ್ & ಕೊಲೆ ಪ್ರಕರಣ|ಚಾರ್ಮಾಡಿ ಘಾಟ್ ನಲ್ಲಿ ಶವಕ್ಕಾಗಿ ಹುಡುಕಾಟ Read More »

ಕರ್ನಾಟಕದಲ್ಲಿ ಕಾಣಿಸಿಕೊಂಡ ಓಮಿಕ್ರಾನ್ XBB 1.5 ಉಪತಳಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೊನಾ ಸೋಂಕಿನ ಹೆಚ್ಚಳದ ಆತಂಕದ ನಡುವೆಯೇ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ಅಮೆರಿಕದ ಜನರನ್ನು ಕಾಡಿದ್ದ ಕೋವಿಡ್ ಒಮಿಕ್ರಾನ್ ನ ಎಕ್ಸ್ ಬಿಬಿ 1.5 ಉಪತಳಿ ಕರ್ನಾಟಕದಲ್ಲೂ ಪತ್ತೆಯಾಗಿದೆ. ಜಿನೋಮಿಕ್ ಸೀಕ್ವೇನ್ಸ್ ಪರೀಕ್ಷೆಯಲ್ಲಿ ಉಪತಳಿ ಎಕ್ಸ್ ಬಿಬಿ 1.5 ಸೋಂಕು ಪತ್ತೆಯಾಗಿದ್ದು, ದೇಶದಲ್ಲಿ ಎಚ್ ಬಿಬಿ 1.5 ತಳಿಯ ಸೋಂಕು ಪ್ರಕರಣಗಳ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಒಂದು, ಗುಜರಾತ್ ನಲ್ಲಿ ಮೂವರಲ್ಲಿ ಹಾಗೂ ಕರ್ನಾಟಕದ ಒಬ್ಬರಲ್ಲಿ ಎಕ್ಸ್ ಬಿಬಿ 1.5

ಕರ್ನಾಟಕದಲ್ಲಿ ಕಾಣಿಸಿಕೊಂಡ ಓಮಿಕ್ರಾನ್ XBB 1.5 ಉಪತಳಿ Read More »

ರಸ್ತೆ ಗುಂಡಿ, ಮೋರಿ‌ ವಿಚಾರ ಬಿಟ್ಹಾಕಿ, ಲವ್ ಜಿಹಾದ್ ಬಗ್ಗೆ ಗಮನಿಸಿ| ದ.ಕ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬೇಜವಾಬ್ದಾರಿ ಹೇಳಿಕೆ

ಸಮಗ್ರ ನ್ಯೂಸ್: ‘ ಚುನಾವಣಾ ಪ್ರಚಾರದಲ್ಲಿ ರಸ್ತೆಗುಂಡಿ, ಮೋರಿ ಇತ್ಯಾದಿ ವಿಚಾರಗಳನ್ನು ಬಿಟ್ಟು ಲವ್ ಜಿಹಾದ್ ಕುರಿತು ಗಮನಹರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಬೇಜವಾಬ್ದಾರಿ ಮತ್ತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಲವ್ ಜಿಹಾದ್ ನಿಲ್ಲಿಸಲು ಭಾರತೀಯ ಜನತಾ ಪಾರ್ಟಿ ಬೇಕು. 2014ರ ನಂತರ ಎಲ್ಲೂ ಈ ದೇಶದಲ್ಲಿ ಬಾಂಬ್‌ ಬ್ಲಾಸ್ಟ್‌ಗಳು ಆಗಿಲ್ಲ. ಅದು ನರೇಂದ್ರ ಮೋದಿ ತಾಕತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಂಗಳೂರಿನಲ್ಲಿ

ರಸ್ತೆ ಗುಂಡಿ, ಮೋರಿ‌ ವಿಚಾರ ಬಿಟ್ಹಾಕಿ, ಲವ್ ಜಿಹಾದ್ ಬಗ್ಗೆ ಗಮನಿಸಿ| ದ.ಕ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬೇಜವಾಬ್ದಾರಿ ಹೇಳಿಕೆ Read More »

ಇಂಡೋ – ಶ್ರೀಲಂಕಾ ಟಿ.20 ಸರಣಿ| ಶುಭಾರಂಭ ಮಾಡಿದ ಟೀಂ ಇಂಡಿಯಾ

ಸಮಗ್ರ ನ್ಯೂಸ್: ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ ತಂಡ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ T20 ಸರಣಿಯನ್ನು ಆರಂಭಿಸಿದೆ. ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದು, ಎರಡು ರನ್ ಗಳ ರೋಚಕ ಜಯ ಗಳಿಸಿದೆ. ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಡಿದ ಭಾರತ ತಂಡವು ಲಂಕಾಗೆ 163 ರನ್​ಗಳ ಟಾರ್ಗೆಟ್​ ನೀಡಿತು. ಈ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡವು ನಿಗದಿತ 20 ಓವರ್​ಗಳಲ್ಲಿ 10 ವಿಕೆಟ್ ನಷ್ಟಕ್ಕೆ 160 ರನ್

ಇಂಡೋ – ಶ್ರೀಲಂಕಾ ಟಿ.20 ಸರಣಿ| ಶುಭಾರಂಭ ಮಾಡಿದ ಟೀಂ ಇಂಡಿಯಾ Read More »

ಆಧಾರ್ ನಲ್ಲಿ ವಿಳಾಸವನ್ನು ನೀವೂ ಬದಲಾವಣೆ ಮಾಡಿಕೊಳ್ಳಬಹುದು| ಹೇಗೆ ಗೊತ್ತಾ? ಈ ಸ್ಟೋರಿ ಓದಿ…

ಸಮಗ್ರ ನ್ಯೂಸ್: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಈಗ ನಿವಾಸಿಗಳಿಗೆ ತಮ್ಮ ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ಆನ್ ಲೈನ್ ನಲ್ಲೇ ಆಧಾರ್ ನಲ್ಲಿನ ವಿಳಾಸಗಳನ್ನು ನವೀಕರಿಸಲು ಅನುಮತಿ ನೀಡಿದೆ ಎಂದು ಅಧಿಕೃತವಾಗಿ ತಿಳಿಸಿದೆ. ರೇಷನ್ ಕಾರ್ಡ್, ಅಂಕಪಟ್ಟಿ, ಮದುವೆ ಪ್ರಮಾಣಪತ್ರ, ಪಾಸ್ಪೋರ್ಟ್ ಇತ್ಯಾದಿ ದಾಖಲೆಗಳ ಪುರಾವೆಗಳನ್ನು ಸಲ್ಲಿಸಿದ ನಂತರ, ಅರ್ಜಿದಾರರು ಮತ್ತು ಕುಟುಂಬದ ಮುಖ್ಯಸ್ಥರ ಹೆಸರು ಮತ್ತು ಅವರ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ನಂತರ ಹೊಸ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಈ ಪ್ರಕ್ರಿಯೆಗೆ HOF ನಿಂದ OTP-ಆಧಾರಿತ ದೃಢೀಕರಣದ

ಆಧಾರ್ ನಲ್ಲಿ ವಿಳಾಸವನ್ನು ನೀವೂ ಬದಲಾವಣೆ ಮಾಡಿಕೊಳ್ಳಬಹುದು| ಹೇಗೆ ಗೊತ್ತಾ? ಈ ಸ್ಟೋರಿ ಓದಿ… Read More »