January 2023

ಉಡುಪಿ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ; ಇಬ್ಬರ ಬಂಧನ

ಸಮಗ್ರ ನ್ಯೂಸ್: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಬಂಧಿತರನ್ನು ಉಡುಪಿ ಕಾಪು ತೆಂಕ ಎರ್ಮಾಳ್ ನಿವಾಸಿ ಜಯಂತ್‌ ಸಾಲಿಯಾನ್‌ (46) ಹೆಬ್ರಿ ನಾಡ್ಪಾಲು ನಿವಾಸಿ ದಿನೇಶ್‌ ಎಸ್‌ (42) ಎಂದು ಗುರುತಿಸಲಾಗಿದೆ. ಇವರು ಉಡುಪಿ ಹಳೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ವಸತಿಗೃಹದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಲಾಡ್ಜ್ ಗೆ ದಾಳಿ ನಡೆಸಿದ್ದು, ಸಂತ್ರಸ್ಥೆಯನ್ನು ರಕ್ಷಿಸಿ ಆರೋಪಿಗಳಾದ ಜಯಂತ್ ಸಾಲಿಯಾನ್ ಮತ್ತು ದಿನೇಶ್ […]

ಉಡುಪಿ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ; ಇಬ್ಬರ ಬಂಧನ Read More »

ಹವಾಮಾನ ವೈಪರೀತ್ಯ; ಕೇಂದ್ರ ಸಚಿವ ಅಮಿತ್ ಶಾ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ಸಮಗ್ರ ನ್ಯೂಸ್: ಹವಾಮಾನ ವೈಪರಿತ್ಯದ ಕಾರಣ ಗೃಹ ಸಚಿವ ಅಮಿತ್ ಶಾ ಪ್ರಯಾಣಿಸುತ್ತಿದ್ದ ವಿಮಾನ ಗುವಾಹಟಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅಗರ್ತಲಕ್ಕೆ ಹೊರಟ್ಟಿದ್ದ ಅಮಿತ್ ಶಾ ಹವಾಮಾನ ವೈಪರಿತ್ಯದಿಂದ ವಿಮಾನ ಇಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬರ್ದೊಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಅಮಿತ್ ಶಾ ಗುವಾಹಟಿಯ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದಾರೆ. ಗುರುವಾರ ಬೆಳಿಗ್ಗೆ ತ್ರಿಪುರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ

ಹವಾಮಾನ ವೈಪರೀತ್ಯ; ಕೇಂದ್ರ ಸಚಿವ ಅಮಿತ್ ಶಾ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ Read More »

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ(Immunity Power) ಕಡಿಮೆಯಾಗ್ತಿದೆಯಾ? ಹಾಗಾದ್ರೆ ಆಹಾರದಲ್ಲಿ ಶುಂಠಿಯನ್ನು ಹೀಗೆ ಬಳಸಿ

ಸಮಗ್ರ ನ್ಯೂಸ್: ಆಹಾರದ ರುಚಿಯನ್ನು ಹೆಚ್ಚಿಸಲು ಶುಂಠಿಯನ್ನು ಬಳಸಲಾಗುತ್ತದೆ. ಇದರಲ್ಲಿ ಹಲವು ಔಷಧೀಯ ಗುಣಗಳಿವೆ. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಇದನ್ನು ವಿವಿಧ ರೀತಿಯಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯ. ಶುಂಠಿಯು ಬೆಚ್ಚಗಾಗುವ ಪರಿಣಾಮವನ್ನು ಹೊಂದಿದೆ. ಚಳಿಗಾಲದ ಆಹಾರದಲ್ಲಿ ಶುಂಠಿಯನ್ನು ಸೇರಿಸಲು ಸಲಹೆ ನೀಡಲಾಗುತ್ತದೆ. ಇದರ ಬಳಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನೀವು ಆಹಾರದಲ್ಲಿ ಶುಂಠಿಯನ್ನು ಯಾವ ರೀತಿಯಲ್ಲಿ ಸೇರಿಸಿಕೊಳ್ಳಬಹುದು ಎಂಬುದನ್ನು ತಿಳಿಯಿರಿ. ಶುಂಠಿ ಸೂಪ್:ಚಳಿಗಾಲದಲ್ಲಿ ಶುಂಠಿ ಸೂಪ್ ಮಾಡಲು ನೀವು ಅದರೊಂದಿಗೆ ಇತರ ತರಕಾರಿಗಳನ್ನು ಸೇರಿಸಬಹುದು.

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ(Immunity Power) ಕಡಿಮೆಯಾಗ್ತಿದೆಯಾ? ಹಾಗಾದ್ರೆ ಆಹಾರದಲ್ಲಿ ಶುಂಠಿಯನ್ನು ಹೀಗೆ ಬಳಸಿ Read More »

ತೂಕ‌‌ ಇಳಿಸಿಕೊಳ್ಳುವ ಮಾತ್ರೆ ಸೇವಿಸಿ‌ ಯುವಕ ಸಾವು

ಸಮಗ್ರ ನ್ಯೂಸ್: ದೇಹದ‌ ತೂಕವನ್ನು ಇಳಿಸಿಕೊಳ್ಳಲು ಮಾತ್ರೆ ಸೇವಿಸಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಮೃತನನ್ನು ಪಿ ಸೂರ್ಯ (21) ಎಂದು ಗುರುತಿಸಲಾಗಿದೆ. ಈತ ಕಾಂಚೀಪುರಂನ ಶ್ರೀಪೆರಂಬದೂರು ಸಮೀಪದ ಸೋಮಂಗಲಂನಲ್ಲಿ ಹಾಲಿನ ಸಂಸ್ಥೆಯೊಂದರಲ್ಲಿ ವಿತರಕರಾಗಿ ಕೆಲಸ ಮಾಡುತ್ತಿದ್ದರು. ಸ್ಥೂಲಕಾಯದಿಂದ ಬಳಲುತ್ತಿದ್ದ ಸೂರ್ಯನಿಗೆ ಕಳೆದ ತಿಂಗಳುಗಳಿಂದ ತೂಕ ಕಡಿಮೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಡಿಸೆಂಬರ್ 22 ರಿಂದ, ಸೂರ್ಯ ಸ್ನೇಹಿತರ ಸಲಹೆಗಳ ಆಧಾರದ ಮೇಲೆ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು ಎನ್ನಲಾಗಿದೆ. ಮಾತ್ರೆಗಳ ಹೆಸರು ಅಥವಾ ವೈದ್ಯರ

ತೂಕ‌‌ ಇಳಿಸಿಕೊಳ್ಳುವ ಮಾತ್ರೆ ಸೇವಿಸಿ‌ ಯುವಕ ಸಾವು Read More »

ಶಬರಿಮಲೆಯಲ್ಲಿ ಹಾರಿಬಿಟ್ಟ ಪಾರಿವಾಳ ಮರಳಿ ಗೂಡು ತಲುಪಿತು| ಇದು ಅಯ್ಯಪ್ಪನ ಪವಾಡವೇ?

ಸಮಗ್ರ ನ್ಯೂಸ್: ಚಿತ್ರದುರ್ಗದಲ್ಲಿ ಆಶ್ಚರ್ಯಕರ ಸಂಗತಿಯೊಂದು ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾ. ಮೇಗಳಹಟ್ಟಿ ಗ್ರಾಮದಲ್ಲಿ ಪಾರಿವಾಳ ಪವಾಡ ಮಾಡಿದೆ. ಶಬರಿಮಲೆ ಯಾತ್ರೆಯಲ್ಲಿ ಬಿಟ್ಟ ಪಾರಿವಾಳ ಮರಳಿ ತನ್ನ ಗೂಡಿಗೆ ಸೇರಿದೆ. ಕೇರಳದಲ್ಲಿ ಬಿಟ್ಟ ಮಾಲಾಧಾರಿಯ ಪಾರಿವಾಳ ಮರಳಿ ಗೂಡಿಗೆ ಬಂದಿದೆ. ಮೇಗಳಹಟ್ಟಿ ಗ್ರಾಮದ ವೆಂಕಟೇಶ್ ಅವರ ಪಾರಿವಾಳ ಡಿ.30 ರಂದು ಶಬರಿಮಲೆಯಲ್ಲಿ ಹಾರಿ ಬಿಟ್ಟಿದ್ದರು. ನಾಲ್ಕು ದಿನಗಳ ಬಳಿಕ ಆ ಪಾರಿವಾಳ ಮೇಗಳಹಟ್ಟಿ ಗ್ರಾಮಕ್ಕೆ ಆಗಮಿಸಿದೆ. ಪಾರಿವಾಳ ಆಗಮಿಸಿದ್ದನ್ನು ಕಂಡು ಗ್ರಾಮಸ್ಥರಲ್ಲಿ ಅಚ್ಚರಿ ಹುಟ್ಟುಹಾಕಿದೆ. ಕೇರಳ

ಶಬರಿಮಲೆಯಲ್ಲಿ ಹಾರಿಬಿಟ್ಟ ಪಾರಿವಾಳ ಮರಳಿ ಗೂಡು ತಲುಪಿತು| ಇದು ಅಯ್ಯಪ್ಪನ ಪವಾಡವೇ? Read More »

ಬೆಳಗಾವಿ: ಮರಕ್ಕೆ ಬೊಲೆರೋ ವಾಹನ ಡಿಕ್ಕಿ| 6 ಮಂದಿ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಮರಕ್ಕೆ ಬೊಲೆರೊ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ 6 ಮಂದಿ ಮೃತಪಟ್ಟ ಘಟನೆ ಬೆಳಗಾವಿ ರಾಮದುರ್ಗ ತಾಲೂಕಿನ ಚುಂಚನೂರ ಬಳಿ ನಡೆದಿದೆ.ಚಾಲಕನ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಮೃತರನ್ನು ಹನುಮವ್ವ, ದೀಪಾ, ಸವಿತಾ, ಸುಪ್ರಿತಾ, ಮಾರುತಿ, ಇಂದಿರವ್ವ ಎಂದು ಗುರುತಿಸಲಾಗಿದೆ. ಸವದತ್ತಿ ಯಲ್ಲಮನ ದರ್ಶನಕ್ಕೆ ಹೊರಟಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಎಸ್ ಪಿ ಡಾ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿ: ಮರಕ್ಕೆ ಬೊಲೆರೋ ವಾಹನ ಡಿಕ್ಕಿ| 6 ಮಂದಿ ಸ್ಥಳದಲ್ಲೇ ಸಾವು Read More »

ರೈಲ್ವೇ ನಿಲ್ದಾಣದ ಪ್ಲಾಸ್ಟಿಕ್ ಡ್ರಮ್ ನಲ್ಲಿ ಯುವತಿಯ ಕೊಳೆತ ಶವ| ಬೆಚ್ಚಿಬಿದ್ದ ಪ್ರಯಾಣಿಕರು

ಸಮಗ್ರ ನ್ಯೂಸ್: ಯಶವಂತಪುರ ರೈಲ್ವೇ ನಿಲ್ದಾಣದ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಡ್ರಮ್‌ ಪರಿಶೀಲನೆ ಮಾಡಿದಾಗ ಕೊಳೆತ ಸ್ಥಿತಿಯಲ್ಲಿರುವ ಯುವತಿ ದೇಹ ಪತ್ತೆಯಾಗಿದೆ ಯಶವಂತಪುರ ರೈಲ್ವೇ ನಿಲ್ದಾಣದ ಗೂಡ್ಸ್ ಪ್ಲಾಟ್ ಫಾರ್ಮ್ ನ ಬಾಕ್ಸ್ ಒಂದರಲ್ಲಿ ಶವ ಪತ್ತೆಯಾಗಿದ್ದು, ಅಂದಾಜು 23 ವರ್ಷದ ಯುವತಿ ಎಂದು ಗುರುತಿಸಲಾಗಿದೆ. ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಯುವತಿಯನ್ನು ಕೊಲೆ

ರೈಲ್ವೇ ನಿಲ್ದಾಣದ ಪ್ಲಾಸ್ಟಿಕ್ ಡ್ರಮ್ ನಲ್ಲಿ ಯುವತಿಯ ಕೊಳೆತ ಶವ| ಬೆಚ್ಚಿಬಿದ್ದ ಪ್ರಯಾಣಿಕರು Read More »

ಕೇಂದ್ರ ಸರ್ಕಾರದಿಂದ ಮಹತ್ವದ ಯೋಜನೆ| 7 ಲಕ್ಷ ಮನೆಗಳಿಗೆ ಉಚಿತ ‘ಡಿಶ್ ಟಿವಿ’ ಕೊಡುಗೆ

ಸಮಗ್ರ ನ್ಯೂಸ್: ಸುದ್ದಿ ಮತ್ತು ಮನರಂಜನಾ ವಾಹಿನಿಗಳಾದ ದೂರದರ್ಶನ (DD) ಮತ್ತು ಆಲ್ ಇಂಡಿಯಾ ರೇಡಿಯೋ (AIR)ಗಳ ಸ್ಥಿತಿಯನ್ನ ಸುಧಾರಿಸಲು ಕೇಂದ್ರ ಸರ್ಕಾರ 2,539 ಕೋಟಿ ರೂ. ಖರ್ಚು ಮಾಡಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬ್ರಾಡ್ ಕಾಸ್ಟಿಂಗ್ ಮೂಲಸೌಕರ್ಯ ಮತ್ತು ನೆಟ್ವರ್ಕ್ ಡೆವಲಪ್ಮೆಂಟ್ ಅಂಡ್ ನೆಟ್ವರ್ಕ್ ಡೆವಲಪ್ಮೆಂಟ್ (BIND) ಅಡಿಯಲ್ಲಿ, ಜನರಿಗೆ ಸರಿಯಾದ ಸುದ್ದಿ, ಶಿಕ್ಷಣ ಮತ್ತು ಮನರಂಜನೆಯನ್ನ ತರುವುದು ಸರ್ಕಾರದ ಉದ್ದೇಶವಾಗಿದೆ. 2021-22 ರಿಂದ 2025-26 ರವರೆಗೆ ಸರ್ಕಾರದ ಆರ್ಥಿಕ ವ್ಯವಹಾರಗಳ

ಕೇಂದ್ರ ಸರ್ಕಾರದಿಂದ ಮಹತ್ವದ ಯೋಜನೆ| 7 ಲಕ್ಷ ಮನೆಗಳಿಗೆ ಉಚಿತ ‘ಡಿಶ್ ಟಿವಿ’ ಕೊಡುಗೆ Read More »

ಸುಳ್ಯ ಜಾತ್ರೋತ್ಸವದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ| ತುರ್ತುಸಭೆಯಲ್ಲಿ ಸಂಘಟನೆಗಳ ಒತ್ತಡಕ್ಕೆ ಮಣಿದ ಆಡಳಿತ ಮಂಡಳಿ

ಸಮಗ್ರ ನ್ಯೂಸ್: ಸುಳ್ಯ ಜಾತ್ರೋತ್ಸವದಲ್ಲಿ ಎಲ್ಲ ಧರ್ಮೀಯರಿಗೆ ಮುಕ್ತ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ಸಭೆಯಲ್ಲಿ ಈ ಮೊದಲು ಘೋಷಿಸಲಾಗಿದ್ದು, ಇದನ್ನು ಹಿಂದೂ ಸಂಘಟನೆಗಳು ವಿರೋಧ ಮಾಡಿದ್ದವು. ಈ ಕುರಿತಂತೆ ಇಂದು ತುರ್ತು ಸಭೆ ನಡೆಸಿದ ಹಿಂದೂ ಸಂಘಟನೆಗಳ ಪ್ರಮುಖರು ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ|ಕೆ.ವಿ. ಚಿದಾನಂದ ಅವರಿಗೆ ಮನವಿ ಮಾಡಿದ್ದರು. ತಕ್ಷಣ ಇದಕ್ಕೆ ಸ್ಪಂದಿಸಿದ ಡಾ|ಕೆ.ವಿ. ಚಿದಾನಂದ ಅವರು ತುರ್ತು ಸಭೆಯನ್ನು ಕರೆದಿದ್ದರು. ಅದರಂತೆ

ಸುಳ್ಯ ಜಾತ್ರೋತ್ಸವದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ| ತುರ್ತುಸಭೆಯಲ್ಲಿ ಸಂಘಟನೆಗಳ ಒತ್ತಡಕ್ಕೆ ಮಣಿದ ಆಡಳಿತ ಮಂಡಳಿ Read More »

“ಬೇಕಾಬಿಟ್ಟಿ ರಸ್ತೆ ಅಗೆದ್ರೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಿಸ್ತೀನಿ”
-ಗೇಲ್ ಅಧಿಕಾರಿಗೆ ಶಾಸಕ ಭರತ್ ಶೆಟ್ಟಿ ಎಚ್ಚರಿಕೆ

ಸಮಗ್ರ ನ್ಯೂಸ್: “ಪೈಪ್ ಲೈನ್ ಗಾಗಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದು ಜನರಿಗೆ ತೊಂದರೆ ಉಂಟುಮಾಡಿದರೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಿಸ್ತೀನಿ” ಹೀಗೆಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಗೇಲ್ ಕಂಪೆನಿಯ ಅಧಿಕಾರಿಗಳಿಗೆ ಬಹಿರಂಗ ಎಚ್ಚರಿಕೆ ನೀಡಿದ ಘಟನೆ ಬುಧವಾರ ನಡೆಯಿತು. ದೇರೆಬೈಲ್ ಕೊಂಚಾಡಿ ಬಳಿ ರಸ್ತೆ ಕಾಮಗಾರಿಯ ಗುದ್ದಲಿಪೂಜೆಗೆ ಬಂದಿದ್ದ ಶಾಸಕರಲ್ಲಿ ಸ್ಥಳೀಯರು ಗೇಲ್ ಕಂಪೆನಿ ಅಧಿಕಾರಿಗಳು ಎಲ್ಲೆಂದರಲ್ಲಿ ರಸ್ತೆಯನ್ನು ಅಗೆಯುತ್ತಿದ್ದು ಇದರಿಂದ ನೀರಿನ ಪೈಪ್ ಒಡೆದು

“ಬೇಕಾಬಿಟ್ಟಿ ರಸ್ತೆ ಅಗೆದ್ರೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಿಸ್ತೀನಿ”
-ಗೇಲ್ ಅಧಿಕಾರಿಗೆ ಶಾಸಕ ಭರತ್ ಶೆಟ್ಟಿ ಎಚ್ಚರಿಕೆ
Read More »