January 2023

ಗುಡ್ ನ್ಯೂಸ್ ನೀಡಿದ ಚಂದನ್ ಶೆಟ್ಟಿ – ನಿವೇದಿತಾ| ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್ ವುಡ್ ಕ್ಯೂಟ್ ಜೋಡಿ!

ಸಮಗ್ರ ನ್ಯೂಸ್: ಗಾಯಕ, ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೊನೆಗೂ ಗುಡ್ ನ್ಯೂಸ್ ನೀಡಿದ್ದಾರೆ. ನಿವೇದಿತಾ ಮತ್ತು ಚಂದನ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗ ಪಡಿಸಿದ್ದಾರೆ. ವಿಶೇಷ ವಿಡಿಯೋ ಮೂಲಕ ಚಂದನ್ ಮತ್ತು ನಿವಿ ದಂಪತಿ ಸುಳಿವು ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್​ ಶೆಟ್ಟಿ ಕೇಳಿದ್ದಾರೆ. ಅದಕ್ಕೆ ಉತ್ತರ ‘ಫಾದರ್​’. ಹಾಗಾಗಿ ಚಂದನ್​ […]

ಗುಡ್ ನ್ಯೂಸ್ ನೀಡಿದ ಚಂದನ್ ಶೆಟ್ಟಿ – ನಿವೇದಿತಾ| ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್ ವುಡ್ ಕ್ಯೂಟ್ ಜೋಡಿ! Read More »

ಉಡುಪಿ: ಬ್ರೈನ್ ಟ್ಯೂಮರ್ ಗೆ ಬಲಿಯಾದ ರಾಜ್ಯಮಟ್ಟದ ಕ್ರಿಕೆಟರ್

ಸಮಗ್ರ ನ್ಯೂಸ್: ಬ್ರೈನ್ ಟ್ಯೂಮರ್‌ನಿಂದಾಗಿ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರನೊಬ್ಬ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ.ಮೃತಪಟ್ಟವರನ್ನು ಪೆಡೂ೯ರು ಬುಕ್ಕಿಗುಡ್ಡೆ ರಕ್ಷಿತ್ ಶೆಟ್ಟಿ (29) ಎಂದು ಗುರುತಿಸಲಾಗಿದೆ. ಹೆಬ್ರಿಯ ಗೆಳೆಯರ ಬಳಗ ಪೆರ್ಡೂರು ತಂಡದ ಮೂಲಕ ರಕ್ಷಿತ್ ಶೆಟ್ಟಿ ಕ್ರಿಕೆಟ್ ಆಟವನ್ನು ಪ್ರಾರಂಭಿಸಿದ್ದರು. ಬಳಿಕ ವಿವಿಧ ಜಿಲ್ಲಾ ಮಟ್ಟದ ತಂಡಗಳಲ್ಲಿ ಆಡಿ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ರಾಜ್ಯ ಮಟ್ಟದಲ್ಲಿಯೂ ರಕ್ಷಿತ್ ಗುರುತಿಸಿಕೊಂಡಿದ್ದರು. ಬೌಲಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು, ತಮ್ಮ ಆಕರ್ಷಕ ಶೈಲಿಯ

ಉಡುಪಿ: ಬ್ರೈನ್ ಟ್ಯೂಮರ್ ಗೆ ಬಲಿಯಾದ ರಾಜ್ಯಮಟ್ಟದ ಕ್ರಿಕೆಟರ್ Read More »

ಬಿಜೆಪಿಗೆ ಭಾರೀ ಮುಖಭಂಗ| ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ

ಸಮಗ್ರ ನ್ಯೂಸ್: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿಯವರು ಹೊರತರಲು ಮುಂದಾಗಿರುವ “ಸಿದ್ದು ನಿಜಕನಸು ಪುಸ್ತಕ”ದ ಬಿಡುಗಡೆಗೆ ನ್ಯಾಯಾಲಯದ ತಡೆಯಾಜ್ಞೆ ನೀಡಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತಡೆ ಕೋರಿ ಸಿದ್ದರಾಮಯ್ಯ ಪುತ್ರ ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ನ್ಯಾಯಾಲಯದಲ್ಲಿ ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿರುವ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ಕೃತಿ ಬಿಡುಗಡೆಗೆ ತಡೆಯಾಜ್ಞೆ ನೀಡಿ, ಪುಸ್ತಕ ಬಿಡುಗಡೆಗೊಳಿಸಲಿದ್ದ ಸಚಿವ ಡಾ.ಅಶ್ವತ್ಥನಾರಾಯಣ ಅವರಿಗೆ ನೋಟಿಸ್ ಜಾರಿ ಮಾಡಿದೆ. ಪುಸ್ತಕ ಬಿಡುಗಡೆ ವಿರೋಧಿಸಿ ಕಾಂಗ್ರೆಸ್

ಬಿಜೆಪಿಗೆ ಭಾರೀ ಮುಖಭಂಗ| ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ Read More »

ಕೋಲಾರದಿಂದಲೇ ಮುಂದಿನ ಸ್ಪರ್ಧೆ| ಅಧಿಕೃತವಾಗಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಭೇಟಿ ನೀಡಿದ್ದು, ಕಾರ್ಯಕರ್ತರ ಸಮಾವೇಶದಲ್ಲಿ ತಾವು ಕೋಲಾರದಿಂದ ಸ್ಪರ್ದಿಸುವ ಕುರಿತು ಘೋಷಣೆ ಮಾಡಿದ್ದಾರೆ. ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಕೋಲಾರಕ್ಕೆ ಹೋಗಿ ಬಂದಿರುವ ಸಿದ್ದರಾಮಯ್ಯ ಇದೀಗ ಮತ್ತೆ ಕೋಲಾರಕ್ಕೆ ಬಂದಿದ್ದಾರೆ. ಈ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಇದೇ ವೇಳೆ ಕೋಲಾರದಲ್ಲಿ ಅಧಿಕೃತವಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಕೋಲಾರದಿಂದಲೇ ಮುಂದಿನ ಸ್ಪರ್ಧೆ| ಅಧಿಕೃತವಾಗಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ Read More »

ಬೆಳಗಾವಿ: ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನ ಮೇಲೆ ಗುಂಡಿಕ್ಕಿದ ಪ್ರಕರಣ| ಮೂವರನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಶ್ರೀರಾಮಸೇನೆಯ ಬೆಳಗಾವಿ ಅಧ್ಯಕ್ಷ ರವಿ ಕೋಕಿಟ್ಕರ್ ಅವರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಜಿತ್ ಭಟ್ಖಂಡೆ, ರಾಹುಲ್ ಕೊಡಚವಾಡ ಮತ್ತು ಜ್ಯೋತಿಬಾ ಮುಟಗೇಕರ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ. ಅಭಿಜಿತ್ ಪರವಾನಗಿ ಇಲ್ಲದ ಬಂದೂಕನ್ನು ಬಳಸಿ ಒಂದು ಸುತ್ತು ಗುಂಡು ಹಾರಿಸಿದ್ದನು. ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಜನವರಿ 7 ರ ಶನಿವಾರ ಹಿಂಡಲಗಾ ಗ್ರಾಮದಲ್ಲಿ ಕೋಕಿಟ್ಕರ್ ಮತ್ತು ಅವರ

ಬೆಳಗಾವಿ: ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನ ಮೇಲೆ ಗುಂಡಿಕ್ಕಿದ ಪ್ರಕರಣ| ಮೂವರನ್ನು ಬಂಧಿಸಿದ ಪೊಲೀಸರು Read More »

ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ| ಹೊತ್ತಿ ಉರಿದ ಬಸ್| ಯೋಧ ಸೇರಿ ಇಬ್ಬರು ದುರ್ಮರಣ

ಸಮಗ್ರ ನ್ಯೂಸ್: ಕೆಎಸ್’ಆರ್’ಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ತಮಿಳುನಾಡಿನ ಕೃಷ್ಣಗಿರಿಯ ಗುರುಪರಪಲ್ಲಿ ಬಳಿ ನಡೆದಿದೆ. ಗುರುಪರಪಲ್ಲಿಯ ಒಟ್ಟೆರ್ ಗ್ರಾಮ ನಿವಾಸಿಗಳಾದ ಯೋಧ ಸುಂದರೇಶನ್ ಹಾಗೂ ರೈತ ಗಣೇಶನ್ ಮೃತಪಟ್ಟವರು. ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಇಬ್ಬರೂ ಬೈಕ್ ನಲ್ಲಿ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಬೆಂಗಳೂರಿನಿಂದ ತಿರುಕೋವಿಲೂರು ಮಾರ್ಗವಾಗಿ ಬರುತ್ತಿದ್ದ ಕೆಎಸ್’ಆರ್’ಟಿಸಿ ಬಸ್

ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ| ಹೊತ್ತಿ ಉರಿದ ಬಸ್| ಯೋಧ ಸೇರಿ ಇಬ್ಬರು ದುರ್ಮರಣ Read More »

ಹೊಸ ವಿನ್ಯಾಸದ ಬಟ್ಟೆಗಳಿಗೆ ಆದ್ಯತೆ ನೀಡಿ ಗ್ರಾಹಕರನ್ನು ಆಕರ್ಷಿಸಬೇಕು – ರಾಜಮಾತೆ ಪ್ರಮೋದಾದೇವಿ

ಸಮಗ್ರ ನ್ಯೂಸ್: ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಉತ್ಪಾದಿಸಿ ಗ್ರಾಹಕರನ್ನು ಆಕರ್ಷಿಸಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಕಿವಿಮಾತು ಹೇಳಿದರು. ಮೈಸೂರಿನಲ್ಲಿ ಭಾನುವಾರ ರೀಡ್‌ ಅಂಡ್‌ ಟೇಲರ್‌ ರಜನ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ಕೃಷ್ಟ ದರ್ಜೆಯ ಉತ್ಪನ್ನಗಳನ್ನು ಉತ್ಪಾದಿಸಿದಷ್ಟು ಗ್ರಾಹಕರಿಗೆ ಅನುಕೂಲವಾಗುತ್ತದೆ. ಹೊಸ ಹೊಸ ವಿನ್ಯಾಸದ ಬಟ್ಟೆ ಉತ್ಪಾದಿಸಬೇಕು. ಆಗ ಗ್ರಾಹಕರು ಆಕರ್ಷಿತರಾಗುತ್ತಾರೆ ಎಂದರು. ಜೋಸೆಫ್‌ ಟಾಯ್ಲರ್‌ ಎಂಬವರಿಂದ ಬ್ರಾಂಡ್‌ 1830ರಲ್ಲಿ ಆರಂಭವಾಯಿತು. ನಂತರ, 1998ರಲ್ಲಿ ಭಾರತ ದೇಶದಲ್ಲಿ ಆರಂಭವಾಯಿತು. ಮೈಸೂರಿನಲ್ಲಿ ರೀಡ್‌ ಅಂಡ್‌

ಹೊಸ ವಿನ್ಯಾಸದ ಬಟ್ಟೆಗಳಿಗೆ ಆದ್ಯತೆ ನೀಡಿ ಗ್ರಾಹಕರನ್ನು ಆಕರ್ಷಿಸಬೇಕು – ರಾಜಮಾತೆ ಪ್ರಮೋದಾದೇವಿ Read More »

ರಾಜಕಾರಣಿಗಳ‌ ಜೊತೆಗೆ ಖಾಸಾ ಸಂಬಂಧ| ಹೆಣ್ಮಕ್ಕಳ ಬಾಳಿನ ಕಿರಾತಕ| ಬಗೆದಷ್ಟೂ ಹೊರಬರ್ತಿದೆ ಸ್ಯಾಂಟ್ರೋ ರವಿಯ ಕುಕೃತ್ಯ

ಸಮಗ್ರ ನ್ಯೂಸ್: ರಾಜಕಾರಣಿಗಳ ಜತೆ ಖಾಸಾ ಸಂಬಂಧ ಹೊಂದಿರುವ, ನೂರಾರು ಹೆಣ್ಮಕ್ಕಳ ಬಾಳಿನಲ್ಲಿ ಆಟವಾಡಿರುವ ಆರೋಪ ಹೊತ್ತಿರುವ ಮೈಸೂರಿನ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಆತ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ಈ ನಡುವೆ, ಸ್ಯಾಂಟ್ರೋ ರವಿಯಿಂದ ದೌರ್ಜನ್ಯ ಮತ್ತು ವಂಚನೆಗೆ ಒಳಗಾಗಿರುವ ದಲಿತ ಮಹಿಳೆ ನ್ಯಾಯಾಧೀಶರ ಮುಂದೆ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯ ಸೆಕ್ಷನ್‌ ೧೬೪ರ ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿದ್ದು, ಹಲವು ಅಂಶಗಳ ಮೇಲೆ

ರಾಜಕಾರಣಿಗಳ‌ ಜೊತೆಗೆ ಖಾಸಾ ಸಂಬಂಧ| ಹೆಣ್ಮಕ್ಕಳ ಬಾಳಿನ ಕಿರಾತಕ| ಬಗೆದಷ್ಟೂ ಹೊರಬರ್ತಿದೆ ಸ್ಯಾಂಟ್ರೋ ರವಿಯ ಕುಕೃತ್ಯ Read More »

ಉದ್ಯೋಗ ಖಾತರಿ ಯೋಜನೆಯಲ್ಲಿ ಭ್ರಷ್ಟಾಚಾರ ಕುರಿತು ದೂರು ನೀಡಿದಾತನ ಕಗ್ಗೊಲೆ| ಭ್ರಷ್ಟಾಚಾರಿಗಳೇ ಕೊಲೆಗೈದಿರುವ ಶಂಕೆ

ಸಮಗ್ರ ನ್ಯೂಸ್: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅವ್ಯವಹಾರ ನಡೆದಿದೆ ಎಂದು ದೂರು ಸಲ್ಲಿಸಿದ್ದ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಡಾಬಾ ಬಳಿ ನಡೆದಿದೆ. ಕನ್ನಡ ಪರ ಸಂಘಟನೆ ತಾಲೂಕು ಅಧ್ಯಕ್ಷ ರಾಮಕೃಷ್ಣ (30) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್, ಪ್ರಶಾಂತ ಎಂಬುವರನ್ನು ಬಂಧಿಸಲಾಗಿದೆ. ಶನಿವಾರ ರಾತ್ರಿ ಹೊಸಕೆರೆ ಡಾಬಾದಲ್ಲಿ ರಾಮಕೃಷ್ಣ ಮತ್ತು ಇತರರು ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಬೇರೆ ವಿಚಾರ

ಉದ್ಯೋಗ ಖಾತರಿ ಯೋಜನೆಯಲ್ಲಿ ಭ್ರಷ್ಟಾಚಾರ ಕುರಿತು ದೂರು ನೀಡಿದಾತನ ಕಗ್ಗೊಲೆ| ಭ್ರಷ್ಟಾಚಾರಿಗಳೇ ಕೊಲೆಗೈದಿರುವ ಶಂಕೆ Read More »

ಮಂಗಳೂರು: ತಿಮಿಂಗಿಲ ವಾಂತಿ(ಅಂಬರ್ ಗ್ರೀಸ್) ಮಾರಾಟಕ್ಕೆ ಯತ್ನ| ಇಬ್ಬರನ್ನು ಬಂಧಿಸಿದ ಸಿಸಿಬಿ

ಸಮಗ್ರ ನ್ಯೂಸ್: ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಆಂಬರ್-ಗ್ರೀಸ್ (ತಿಮಿಂಗಿಲ ವಾಂತಿ) ಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಕೋಟ್ಯಂತರ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಪಡ್ಯಾರು ಮನೆ ನಿವಾಸಿ ನಿಮಿತ್ (26) ಹಾಗೂ ಪುಂಜಾಲಕಟ್ಟೆ ಕುಕ್ಕಳ ಮನೆ ನಿವಾಸಿ ಯೋಗೀಶ್ ಪೂಜಾರಿ(41) ಬಂಧಿತ ಆರೋಪಿಗಳು. ಬಂಧಿತರಿಂದ 3.2 ಕೆಜಿ ತೂಕದ ಅಂಬರ್ ಗ್ರೀಸ್ ಹಾಗೂ 2 ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದಕ್ಕೆ ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು

ಮಂಗಳೂರು: ತಿಮಿಂಗಿಲ ವಾಂತಿ(ಅಂಬರ್ ಗ್ರೀಸ್) ಮಾರಾಟಕ್ಕೆ ಯತ್ನ| ಇಬ್ಬರನ್ನು ಬಂಧಿಸಿದ ಸಿಸಿಬಿ Read More »