January 2023

ಶಬರಿಮಲೆ: ಜ್ಯೋತಿ ದರ್ಶನಕ್ಕೆ ಸಕಲ ಸಿದ್ದತೆ| ಜ.14 ರಂದು ದರ್ಶನ ನೀಡಲಿದ್ದಾನೆ ಅಯ್ಯಪ್ಪ

ಸಮಗ್ರ ನ್ಯೂಸ್: ಕೇರಳದ ಪ್ರಸಿದ್ಧ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯದಲ್ಲಿ ಮಕರ ಸಂಕ್ರಾಂತಿ ವಿಶೇಷ ಪೂಜಾ ಕಾರ್ಯಗಳು ಆರಂಭವಾಗಿವೆ. ಮಕರ ಜ್ಯೋತಿ ಉತ್ಸವದ ಅಂಗವಾಗಿ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ತೊಡಿಸುವ ಪವಿತ್ರ ಆಭರಣಗಳ ಶೋಭಾಯಾತ್ರೆ ಗುರುವಾರ ಪಂದಳ ಅರಮನೆಯಿಂದ ಆರಂಭವಾಗಿದೆ. ಕಾಡುದಾರಿಯ ಮೂಲಕ ಆಭರಣ ಶೋಭಾಯಾತ್ರೆ ಸಾಗಲಿದ್ದು ಜನವರಿ 14ರಂದು ಅಯ್ಯಪ್ಪ ಸ್ವಾಮಿ ಸನ್ನಿಧಾನ ತಲುಪಲಿದೆ. ಸಂಜೆ ಆವರಣ ಪೆಟ್ಟಿಗೆಗಳನ್ನು ಗರ್ಭಗುಡಿಗೆ ಕೊಂಡೊಯ್ದು ಸ್ವಾಮಿಯ ವಿಗ್ರಹಕ್ಕೆ ಆಭರಣ ತೊಡಿಸಿ ಅಲಂಕಾರ, ವಿಶೇಷ ಪೂಜೆ, ದೀಪಾರಾಧನೆ ನೆರವೇರಿಸಲಾಗುತ್ತದೆ. ನಂತರ […]

ಶಬರಿಮಲೆ: ಜ್ಯೋತಿ ದರ್ಶನಕ್ಕೆ ಸಕಲ ಸಿದ್ದತೆ| ಜ.14 ರಂದು ದರ್ಶನ ನೀಡಲಿದ್ದಾನೆ ಅಯ್ಯಪ್ಪ Read More »

ಮಾಜಿ ಕೇಂದ್ರ ಸಚಿವ ಶರದ್ ಯಾದವ್ ವಿಧಿವಶ

ಸಮಗ್ರ ನ್ಯೂಸ್: ಮಾಜಿ ಕೇಂದ್ರ ಸಚಿವ, ಆರ್ ಜೆಡಿ ನಾಯಕ ಶರದ್‌ ಯಾದವ್‌ ಇಂದು ನಿಧನರಾಗಿದ್ದಾರೆ. ಅವರ ನಿಧನದ ಕುರಿತು ಅವರ ಪುತ್ರಿ ಶುಭಾಶಿನಿ ಶರದ್‌ ಯಾದವ್‌ ಸಾಮಾಜಿಕ ತಾಣದಲ್ಲಿ ಮಾಹಿತಿ ನೀಡಿದ್ದಾರೆ. 1974ರಲ್ಲಿ‌ ಮಧ್ಯಪ್ರದೇಶದ ಜಬಲ್‌ಪುರದಿಂದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು . ಜೆಪಿ ಚಳವಳಿಯು ಉತ್ತುಂಗದಲ್ಲಿದ್ದ ಸಮಯ ಮತ್ತು ಹಲ್ದಾರ್ ಕಿಸಾನ್‌ನ ಚುನಾವಣಾ ಚಿಹ್ನೆಯ ಮೇಲೆ ರಾಜಕೀಯ ಕ್ಷೇತ್ರಕ್ಕೆ ಶ್ರೀ ಜೈ ಪ್ರಕಾಶ್ ನಾರಾಯಣ್ ಅವರು ಆಯ್ಕೆ ಮಾಡಿದ ಮೊದಲ ಅಭ್ಯರ್ಥಿ. 1977ರಲ್ಲಿ

ಮಾಜಿ ಕೇಂದ್ರ ಸಚಿವ ಶರದ್ ಯಾದವ್ ವಿಧಿವಶ Read More »

ಕಾಂಗ್ರೆಸ್ ವಿರುದ್ದ ಬಿಜೆಪಿಯಿಂದ ‌’ಥಟ್ ಅಂತ ಹೇಳಿ’ ಅಭಿಯಾನ

ಸಮಗ್ರ ನ್ಯೂಸ್: ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ನಡೆದ ಹಳೆ ಪ್ರಕರಣಗಳನ್ನು ಮತ್ತೆ ಕೆದಕಿರುವ ಬಿಜೆಪಿ, ಸಾಮಾಜಿಕ ಜಾಲತಾಣದಲ್ಲಿ ‘ಥಟ್‌ ಅಂತ ಹೇಳಿ’ ಅಭಿಯಾನ ಪ್ರಾರಂಭಿಸಿದೆ. ಐಎಎಸ್‌ ಅಧಿಕಾರಿ ಡಿ.ಕೆ. ರವಿ ಹಾಗೂ ಡಿವೈಎಸ್‌ಪಿ ಎಂ.ಕೆ. ಗಣಪತಿ ಎಂಬ ಇಬ್ಬರು ದಕ್ಷ ಅಧಿಕಾರಿಗಳ ಸಾವಿಗೆ ಕಾರಣ ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ. ಇದಕ್ಕೆ ಉತ್ತರದ ಆಯ್ಕೆಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾಜಿ ಸಚಿವ ಕೆ.ಜೆ.ಜಾರ್ಜ್‌, ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರ ಹೆಸರನ್ನು ನೀಡಿದೆ. ಅದೇ

ಕಾಂಗ್ರೆಸ್ ವಿರುದ್ದ ಬಿಜೆಪಿಯಿಂದ ‌’ಥಟ್ ಅಂತ ಹೇಳಿ’ ಅಭಿಯಾನ Read More »

ಇಂಡೋ- ಶ್ರೀಲಂಕಾ ಏಕದಿನ ಸರಣಿ|ಭಾರತಕ್ಕೆ 4 ವಿಕೆಟ್ ಜಯ; ಸರಣಿ ಕೈವಶ

ಸಮಗ್ರ ನ್ಯೂಸ್: ಅತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್ ಗಳಿಂದ ಜಯಗಳಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾವನ್ನು ಸ್ಪೀನರ್ ಕುಲದೀಪ್ ಯಾದವ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ಮಾಡಿ ತಲಾ 3 ವಿಕೆಟ್ ಪಡೆಯುವ ಮೂಲಕ ಕೇವಲ 215 ರನ್ ಗಳಿಗೆ ಕಟ್ಟಿ ಹಾಕಲಾಯಿತು. ಲಂಕಾ ನೀಡಿದ 216 ರನ್ ಗಳ ಗುರಿ ಬೆನ್ನಟ್ಟಿದ

ಇಂಡೋ- ಶ್ರೀಲಂಕಾ ಏಕದಿನ ಸರಣಿ|ಭಾರತಕ್ಕೆ 4 ವಿಕೆಟ್ ಜಯ; ಸರಣಿ ಕೈವಶ Read More »

ರಾಜ್ಯ ಸರ್ಕಾರಕ್ಕೆ ಹಿನ್ನಡೆ; ಒಕ್ಕಲಿಗ, ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಹೈಕೋರ್ಟ್ ತಡೆ

ಸಮಗ್ರ ನ್ಯೂಸ್: ಹೈಕೋರ್ಟ್​​ನಲ್ಲಿ ಸಿಎಂ ಬಸವರಾಜ್​ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ರಾಜ್ಯದ ಪ್ರಬಲ ಸಮುದಾಯಗಳಾದ ಪಂಚಮಸಾಲಿ ಲಿಂಗಾಯತ ಮತ್ತು ಒಕ್ಕಲಿಗರ ಮೀಸಲಾತಿ ಹೆಚ್ಚಳ ನಿರ್ಧಾರಕ್ಕೆ ತಡೆ ನೀಡಿ ಹೈಕೋರ್ಟ್​ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಮೀಸಲಾತಿ ಪರಿಷ್ಕೃತ ನಿರ್ಧಾರವನ್ನು ಪ್ರಶ್ನಿಸಿ ರಾಘವೇಂದ್ರ ಡಿ.ಜಿ. ಎಂಬುವರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಈಗ ವಿಚಾರಣೆ ನಡೆಸಿರುವ ಹೈಕೋರ್ಟ್​, ಅಂತಿಮ ತೀರ್ಪು ನೀಡುವತನಕ ಸರ್ಕಾರ ಈ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು

ರಾಜ್ಯ ಸರ್ಕಾರಕ್ಕೆ ಹಿನ್ನಡೆ; ಒಕ್ಕಲಿಗ, ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಹೈಕೋರ್ಟ್ ತಡೆ Read More »

ಕೊನೆಕ್ಷಣದಲ್ಲಿ ಕರ್ನಾಟಕದ ಸ್ಥಬ್ದಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ ಪರೇಡ್ ಸಮಿತಿ| ಗಣರಾಜ್ಯೋತ್ಸವದಲ್ಲಿ ನಾರಿಶಕ್ತಿಯ ಪ್ರದರ್ಶನಕ್ಕೆ ಅಸ್ತು

ಸಮಗ್ರ ನ್ಯೂಸ್: ಕರ್ನಾಟಕದ ನಾರಿಶಕ್ತಿ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಪರೇಡ್ ಸಮಿತಿ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಈ ಮೂಲಕ ಕೊನೆ ಕ್ಷಣದಲ್ಲಿ ಕರ್ನಾಟಕ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ಗೆ ಸೇರ್ಪಡೆಯಾಗಿದೆ. 14ನೇ ಬಾರಿ ಕರ್ನಾಟಕದ ಟ್ಯಾಬ್ಲೋ ಕರ್ತವ್ಯ ಪಥದಲ್ಲಿ ಸಾಗಲಿದೆ. ರಾಜಧಾನಿ ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಸಂಸ್ಕೃತಿ, ಕಲೆ, ಬಿಂಬಿಸುವ ಸ್ತಬ್ಧ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿದ್ದವು. ಈ ಬಾರಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಕರ್ನಾಟಕದ ನಾರಿಶಕ್ತಿ ಸ್ತಬ್ದ

ಕೊನೆಕ್ಷಣದಲ್ಲಿ ಕರ್ನಾಟಕದ ಸ್ಥಬ್ದಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ ಪರೇಡ್ ಸಮಿತಿ| ಗಣರಾಜ್ಯೋತ್ಸವದಲ್ಲಿ ನಾರಿಶಕ್ತಿಯ ಪ್ರದರ್ಶನಕ್ಕೆ ಅಸ್ತು Read More »

ಹುಬ್ಬಳ್ಳಿ: ಪ್ರಧಾನಿ ಮೋದಿ ರೋಡ್ ಶೋ ವೇಳೆ‌ ಭದ್ರತಾ‌ ಲೋಪ

ಸಮಗ್ರ ನ್ಯೂಸ್: ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು, ರೋಡ್ ಶೋ ನಡೆಸಿದ ವೇಳೆಯಲ್ಲಿ ಭದ್ರತಾ ಲೋಪ ಕಂಡು ಬಂದಿದೆ. ಭದ್ರತೆಯನ್ನು ಮೀರಿ ಯುವಕನೋರ್ವ ನರೇಂದ್ರ ಮೋದಿಗೆ ಹಾರ ಹಾಕಲು ಯತ್ನಿಸಿದ್ದಾನೆ. ಇಂದು ಮೋದಿಯವರು ಹುಬ್ಬಳ್ಳಿಯಲ್ಲಿ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಭದ್ರತಾ ಲೋಪ ಕಂಡು ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಭದ್ರತೆಯನ್ನು ಮೀರಿ ಯುವಕನೋರ್ವ ನಡೆದುಕೊಂಡಿದ್ದಾರೆ. ಪ್ರಧಾನಿ ಮೋದಿಯವರ ಭದ್ರತೆಯನ್ನು ಮೀರಿ ಹುಬ್ಬಳ್ಳಿಯ ರೋಡ್

ಹುಬ್ಬಳ್ಳಿ: ಪ್ರಧಾನಿ ಮೋದಿ ರೋಡ್ ಶೋ ವೇಳೆ‌ ಭದ್ರತಾ‌ ಲೋಪ Read More »

ಹಾಸನ: ಹೆತ್ತ ಕಂದಮ್ಮಗಳಿಗೆ ವಿಷವುಣ್ಣಿಸಿ‌ ಆತ್ಮಹತ್ಯೆಗೆ ಯತ್ನಿಸಿದ ತಾಯಿ| ಒಂದು ಮಗು ಸಾವು; ಮತ್ತೊಂದರದ್ದು ಜೀವನ್ಮರಣ ಹೋರಾಟ|

ಸಮಗ್ರ ನ್ಯೂಸ್: ತಾಯಿಯೊಬ್ಬಳು ತನ್ನ ಮಕ್ಕಳಿಗೆ ಇಲಿ ಪಾಷಾಣ ತಿನ್ನಿಸಿ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ.ವಿಷ ಸೇವಿಸಿ ಮೂರೂವರೆ ವರ್ಷದ ಮೊಹಮ್ಮದ್ ಆರಾನ್ ಮೃತಪಟ್ಟಿದ್ದು, ಸುನೈನಾ ಎಂಬ 7 ವರ್ಷದ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ವಿಷ ನೀಡಿದ ತಾಯಿ ಜೀನತ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತವರು ಮನೆಯವರು ತನ್ನನ್ನು ನೋಡಲು ಬರಲಿಲ್ಲ ಎಂಬ ಕಾರಣಕ್ಕೆ ಜೀನತ್ ತನ್ನ ಮಕ್ಕಳಿಗೆ ವಿಷ ನೀಡಿದ್ದಾಳೆ ಎಂದು ಜೀನತ್ ಒಪ್ಪಿಕೊಂಡಿದ್ದಾರೆ. ಆರೋಪಿ

ಹಾಸನ: ಹೆತ್ತ ಕಂದಮ್ಮಗಳಿಗೆ ವಿಷವುಣ್ಣಿಸಿ‌ ಆತ್ಮಹತ್ಯೆಗೆ ಯತ್ನಿಸಿದ ತಾಯಿ| ಒಂದು ಮಗು ಸಾವು; ಮತ್ತೊಂದರದ್ದು ಜೀವನ್ಮರಣ ಹೋರಾಟ| Read More »

ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಮಗು ಪತ್ತೆ| ಪೋಷಕರ ಪತ್ತೆಗೆ ಸಾರ್ವಜನಿಕರಿಗೆ ಮನವಿ

ಸಮಗ್ರ ನ್ಯೂಸ್: ಸುರತ್ಕಲ್ ಠಾಣಾ ವ್ಯಾಪ್ತಿಯ ಸುರತ್ಕಲ್ ಸದಾನಂದ ಹೋಟೆಲ್ ಬಳಿ ಬುಧವಾರ ಅಂದಾಜು 3-4 ವರ್ಷ ಪ್ರಾಯದ ಹೆಣ್ಣು ಮಗುವೊಂದು ಪತ್ತೆಯಾಗಿರುವುದು ವರದಿಯಾಗಿದೆ. ಒಂಟಿಯಾಗಿದ್ದ ಮಗುವನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಯಾರಾದರೂ ಮಗುವನ್ನು ಕಳೆದುಕೊಂಡಿದ್ದಲ್ಲಿ ಸುರತ್ಕಲ್ ಠಾಣಾ ಫೋನ್ ದೂ.ಸಂ.- 0824-2220540, ಪೊಲೀಸ್ ನಿರೀಕ್ಷಕರ ಮೊ.ಸಂ.- 9480805360, ಪೊಲೀಸ್ ಉಪನಿರೀಕ್ಷಕ- 9480802344, ನಗರ ನಿಸ್ತಂತು ನಿಯಂತ್ರಣ ಕೊಠಡಿ ಮೊ. 9480802321 ಅಥವಾ ಮಹಿಳಾ ಸಮನ್ವಯ ಅಧಿಕಾರಿ ಮೊ.: 9448332713ನ್ನು ಸಂಪರ್ಕಿಸುವಂತೆ ಸುರತ್ಕಲ್

ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಮಗು ಪತ್ತೆ| ಪೋಷಕರ ಪತ್ತೆಗೆ ಸಾರ್ವಜನಿಕರಿಗೆ ಮನವಿ Read More »

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಭಜರಂಗದಳ ಮುಖಂಡನ ಶವ..!! ಸಾವಿನ ಸುತ್ತ ಅನುಮಾನದ ಹುತ್ತ

ಸಮಗ್ರ ನ್ಯೂಸ್: ಪಾಣೆಮಂಗಳೂರು ಹಳೆಯ ಸೇತುವೆಯ ನೇತ್ರಾವತಿ ನದಿಯಲ್ಲಿ ಯುವಕನೋರ್ವ ಶವ ಪತ್ತೆಯಾದ ಘಟನೆ ನಡೆದಿದೆ. ಸಜೀಪ ವಿಶ್ವ ಹಿಂದೂ ಪರಿಷತ್ ಮುಖಂಡ, ಬಜರಂಗದಳ ಕಲ್ಲಡ್ಕ ಪ್ರಖಂಡ ಗೋ ರಕ್ಷಣಾ ಪ್ರಮುಖ್ ರಾಜೇಶ್ ಸುವರ್ಣ ಸ್ಥಾನದಮನೆ ಮೃತಪಟ್ಟ ಯುವಕ. ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ದ್ವಿಚಕ್ರ ವಾಹನವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಸಂಶಯಗೊಂಡು ಪಾಣೆಮಂಗಳೂರು ಸೇತುವೆಯಲ್ಲಿ ಸಂಚರಿಸುವ ವಾಹನ ಸವಾರರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ನೇತ್ರಾವತಿ ನದಿಗೆ ಯಾರೋ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಭಜರಂಗದಳ ಮುಖಂಡನ ಶವ..!! ಸಾವಿನ ಸುತ್ತ ಅನುಮಾನದ ಹುತ್ತ Read More »