January 2023

ಪುತ್ತೂರು: ಹಣದ ವಿಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿ ಕೊಲೆ ಬೆದರಿಕೆ

ಸಮಗ್ರ ನ್ಯೂಸ್: ಹಣದ ವಿಚಾರದಲ್ಲಿ ತಂಡವೊಂದು ವ್ಯಕ್ತಿಯನ್ನು ಅಪಹರಣ ಮಾಡಿ, ಸಹೋದರನ ಮಾಹಿತಿಯನ್ನು ಪಡೆಯುವ ಜತೆಗೆ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕೊಯಿಲ ನಿವಾಸಿ ನಿಝಾಮ್ (25) ಆಸ್ಪತ್ರೆಯಗೆ ದಾಖಲಾಗಿದ್ದಾರೆ. ಸಹೋದರ ಶಾರೂಕ್ (23) ಅವರನ್ನು ಅಪಹರಣ ಮಾಡಿದ್ದಾರೆಂದು ಹೇಳಲಾಗಿದೆ. ಮಂಗಳೂರಿನ ಮಲ್ಲೂರು ಭಾಗಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸಹೋದರನ ಮಾಹಿತಿ ಪಡೆದು ಆತನನ್ನು ಅಪಹರಣ ಮಾಡಿ ಹಣ ತರದೇ ಹೋದರೆ ತಮ್ಮನನ್ನು […]

ಪುತ್ತೂರು: ಹಣದ ವಿಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿ ಕೊಲೆ ಬೆದರಿಕೆ Read More »

ಶ್ರೀರಾಮ ಮಧ್ಯಾಹ್ನವೇ ಹೆಂಡತಿ ಸೀತೆ ಜೊತೆಗೂಡಿ ಹೆಂಡ ಹೀರುತ್ತಿದ್ದ| ಮತ್ತೆ ರಾಮನಿಂದನೆ ಮಾಡಿ‌ ನಾಲಿಗೆ ಹರಿಬಿಟ್ಟ ಕೆ.ಎಸ್.ಭಗವಾನ್

ಸಮಗ್ರ ನ್ಯೂಸ್: ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಚಿಂತಕ ಕೆ.ಎಸ್. ಭಗವಾನ್ ಇದೀಗ ಮರ್ಯಾದ ಪುರುಷೋತ್ತಮ ಶ್ರೀರಾಮನ ಕುರಿತು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಮಧ್ಯಾಹ್ನ ಆದರೆ ಸಾಕು ಸೀತೆ ಜೊತೆ ಹೆಂಡ ಕುಡಿದುಕೊಂಡು ಕುಳಿತಿರುತ್ತಿದ್ದ ರಾಮ ಆಕೆಗೂ ಕುಡಿಸುತ್ತಿದ್ದ ಎಂದು ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದ ಪುಸ್ತಕ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಾಲ್ಮೀಕಿ ರಾಮಾಯಣದ ಉತ್ತರ ಕಾಂಡದಲ್ಲಿ ಇದರ ಬಗ್ಗೆ ದಾಖಲೆ ಇದೆ ಎಂದು ತಿಳಿಸಿದ್ದಾರೆ.

ಶ್ರೀರಾಮ ಮಧ್ಯಾಹ್ನವೇ ಹೆಂಡತಿ ಸೀತೆ ಜೊತೆಗೂಡಿ ಹೆಂಡ ಹೀರುತ್ತಿದ್ದ| ಮತ್ತೆ ರಾಮನಿಂದನೆ ಮಾಡಿ‌ ನಾಲಿಗೆ ಹರಿಬಿಟ್ಟ ಕೆ.ಎಸ್.ಭಗವಾನ್ Read More »

ಎ. 1ರಿಂದ 15 ವರ್ಷ ಹಳೆಯ ವಾಹನಗಳು ಗುಜರಿಗೆ| ಸರ್ಕಾರಿ ವಾಹನಗಳಿಂದಲೇ ‘ವೆಹಿಕಲ್ ಸ್ಕ್ರಾಪ್ ನೀತಿ’ ಜಾರಿಗೆ ತರಲು ನಿರ್ಧಾರ

ಸಮಗ್ರ ನ್ಯೂಸ್: ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ವಾಹನಗಳ ಇಂಧನ ಕ್ಷಮತೆಯನ್ನು ಹೆಚ್ಚಿಸಲು, ಭಾರತ ಸರ್ಕಾರವು ‘ವಾಹನ ಸ್ಕ್ರ್ಯಾಪ್ ನೀತಿ’ಯನ್ನು ಪರಿಚಯಿಸಿದೆ. ಈ ನೀತಿಯಡಿ ದೇಶದಲ್ಲಿ 15 ವರ್ಷ ಹಳೆಯ ನೋಂದಣಿಯನ್ನು ಕಡ್ಡಾಯವಾಗಿ ರದ್ದುಗೊಳಿಸಲಾಗುತ್ತದೆ. ನೋಂದಣಿಯನ್ನು ನವೀಕರಿಸಿದ (15 ವರ್ಷಗಳ ನಂತರ) ವಾಹನಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಎಲ್ಲಾ ಹಳೆಯ ವಾಹನಗಳನ್ನು ನೋಂದಾಯಿತ ಸ್ಕ್ರ್ಯಾಪ್ ಕೇಂದ್ರದಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, 15 ವರ್ಷಕ್ಕಿಂತ

ಎ. 1ರಿಂದ 15 ವರ್ಷ ಹಳೆಯ ವಾಹನಗಳು ಗುಜರಿಗೆ| ಸರ್ಕಾರಿ ವಾಹನಗಳಿಂದಲೇ ‘ವೆಹಿಕಲ್ ಸ್ಕ್ರಾಪ್ ನೀತಿ’ ಜಾರಿಗೆ ತರಲು ನಿರ್ಧಾರ Read More »

ಧರ್ಮಸ್ಥಳ: ಭಕ್ತಾದಿಗಳ ಪ್ರೀತಿಯ ‘ಗಿರೀಶ’ ಇನ್ನಿಲ್ಲ| ಕಣ್ಣೀರು ಮಿಡಿದ ಖಾವಂದರು

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಕುಲ ಗೋಶಾಲೆಯಲ್ಲಿದ್ದ, ಹೆಗ್ಗಡೆಯವರ‌ ಪ್ರೀತಿಯ ಗೀರ್ ತಳಿಯ ಎತ್ತು ಗಿರೀಶ ಜ.18 ರಂದು ರಾತ್ರಿ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ಬಹಳ ವರ್ಷಗಳಿಂದ ಈ ಗೋಶಾಲೆಯಲ್ಲಿದ್ದ ಗಿರೀಶನಿಗೆ 18 ವರ್ಷ ವಯಸ್ಸು. ಕ್ಷೇತ್ರದ ಯಾವುದೇ ಉತ್ಸವಗಳಿಗೂ ಬಸವನಾಗಿ ಗಿರೀಶನೇ ಮುಂಚೂಣಿಯಲ್ಲಿತ್ತು. ಉತ್ಸವಗಳಿಗೆ ಹೋಗುವುದರಲ್ಲೇ ಸಂತೋಷ ಪಡುತ್ತಿದ್ದ ಈ ಬಸವ ಇದೀಗ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ಎಲ್ಲರೊಂದಿಗೆ ಸಕ್ರೀಯವಾಗಿದ್ದ ಗಿರೀಶನಿಗೆ ದಿಢೀರ್ ಹೃದಯಾಘಾತ ಸಂಭವಿಸಿ ಉಸಿರುಚೆಲ್ಲಿದೆ. ಜ.19 ರಂದು ಬೆಳಗ್ಗೆ 11 ಗಂಟೆ ವೇಳೆ

ಧರ್ಮಸ್ಥಳ: ಭಕ್ತಾದಿಗಳ ಪ್ರೀತಿಯ ‘ಗಿರೀಶ’ ಇನ್ನಿಲ್ಲ| ಕಣ್ಣೀರು ಮಿಡಿದ ಖಾವಂದರು Read More »

ಜ.29 :ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಿಂದೂ ಹೃದಯ ಸಂಗಮ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜನವರಿ 29 ರಂದು ನಡೆಯಲಿರುವ ಹಿಂದೂ ಹೃದಯ ಸಂಗಮದ ಪೂರ್ವಭಾವಿಯಾಗಿ ಕಾರ್ಯಾಲಯ ಉದ್ಘಾಟನೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಜ.19ರಂದು ನಡೆಯಿತು. ಕಾರ್ಯಕ್ರಮದಲ್ಲಿ ಕಿಶೋರ್ ಶಿರಾಡಿ, ಹೇಮಚಂದ್ರ, ಕೌಶಿಕ್ ಕೊಡಪಾಲ, ಚಿದಾನಂದ ಕಂದಡ್ಕ, ರಾಜೇಶ್ ಎನ್ ಎಸ್ , ಶುಬಾಶಿನಿ ಮತ್ತಿತರರು ಉಪಸ್ಥಿತರಿದ್ದರು.

ಜ.29 :ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಿಂದೂ ಹೃದಯ ಸಂಗಮ Read More »

ಕಂಕಣ ಭಾಗ್ಯ ಕರುಣಿಸಲು ಕೊರಗಜ್ಜನ ಮೊರೆಹೋದ ನಟಿ ಪ್ರೇಮಾ

ಸಮಗ್ರ ನ್ಯೂಸ್: ಕಂಕಣ ಭಾಗ್ಯ ಕರುಣಿಸುವಂತೆ ಕೋರಿ ಸ್ಯಾಂಡಲ್‌ ವುಡ್‌ ನಟಿ ಪ್ರೇಮಾ ಕೊರಗಜ್ಜನ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಪು ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾರಣಿಕದ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮ ದೇವರ ದರ್ಶನ ಪಡೆದರು. ಹಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದು ಒಂಟಿಯಾಗಿ ಜೀವನ ಸಾಗಿಸುತ್ತಿರುವ ನಟಿ ಪ್ರೇಮಾ ಇದೀಗ 2ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಕಂಕಣ ಭಾಗ್ಯ ಕರುಣಿಸುವಂತೆ ದೈವದ ಮೊರೆ ಹೋಗಿದ್ದಾರೆ. ಕಾಪು ಕೊರಗಜ್ಜ ಸನ್ನಿಧಿಯಲ್ಲಿ ಮದುವೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

ಕಂಕಣ ಭಾಗ್ಯ ಕರುಣಿಸಲು ಕೊರಗಜ್ಜನ ಮೊರೆಹೋದ ನಟಿ ಪ್ರೇಮಾ Read More »

ಬೆಂಗಳೂರಿನ ಕಾಲೇಜು ಕ್ಯಾಂಪಸ್ ಗಳಲ್ಲಿ ಕಾಂಡೋಮ್, ಬಿಯರ್ ಬಾಟಲ್ಸ್| ಅನೈತಿಕ ಚಟುವಟಿಕೆಯತ್ತ ವಿದ್ಯಾರ್ಥಿಗಳು!!

ಸಮಗ್ರ ನ್ಯೂಸ್: ಪೋಷಕರು ತಮ್ಮ ಮಕ್ಕಳು ಯಾವುದೇ ದುಷ್ಚಟಗಳಿಗೆ ಬಲಿಯಾಗದೆ ಉತ್ತಮರಾಗಿರಬೇಕು, ಕಾಲೇಜಿನ ಶಿಕ್ಷಣ ಅದಕ್ಕೆ ಪೂರಕವಾಗಿರಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಆದರೆ, ಈ ಕಾಲೇಜು ಕ್ಯಾಂಪಸ್‌ಗಳೇ ಅಕ್ರಮಗಳ ಅಡ್ಡೆಯಾಗಿ ಬದಲಾಗುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ವಿವಿಯ ಹುಡುಗರ ಹಾಸ್ಟೆಲ್ ಬಳಿ ಕಾಂಡೋಮ್ ಕವರ್‌ಗಳು ಪತ್ತೆಯಾಗಿವೆ. ಜತೆಗೆ ಅಲ್ಲಲ್ಲಿ ಕಾಂಡೋಮ್‌ಗಳು ಬಿದ್ದಿವೆ. ಇಷ್ಟೇ ಅಲ್ಲ, ಹಾಸ್ಟೆಲ್ ಸುತ್ತ ಬಿಯರ್ ಬಾಟಲ್‌ಗಳು ಕೂಡಾ ಪತ್ತೆಯಾಗಿವೆ. ಹಾಗಿದ್ದರೆ ಕಾಲೇಜು ಕ್ಯಾಂಪಸ್‌ನಲ್ಲಿ, ಅದರಲ್ಲೂ ಹುಡುಗರ ಹಾಸ್ಟೆಲ್‌ನಲ್ಲಿ ಅನೈತಿಕ ಮತ್ತು ಅಕ್ರಮ

ಬೆಂಗಳೂರಿನ ಕಾಲೇಜು ಕ್ಯಾಂಪಸ್ ಗಳಲ್ಲಿ ಕಾಂಡೋಮ್, ಬಿಯರ್ ಬಾಟಲ್ಸ್| ಅನೈತಿಕ ಚಟುವಟಿಕೆಯತ್ತ ವಿದ್ಯಾರ್ಥಿಗಳು!! Read More »

ಒಂಟಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಮೂವರು ಸಹೋದರಿಯರು

ಸಮಗ್ರ ನ್ಯೂಸ್: ಒಂಟಿ ಮನೆಯಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಒಂಬತ್ತು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಂಜಿತಾ (24), ಬಿಂದು (21), ಚಂದನ (18) ಆತ್ಮಹತ್ಯೆಗೆ ಶರಣಾದ ಸಹೋದರಿಯರಾಗಿದ್ದಾರೆ. ಈ ವಿಷಯ ಗುರುವಾರ (ಜ.19) ಬೆಳಕಿಗೆ ಬಂದಿದೆ. ಅನೇಕ ವರ್ಷಗಳ ಹಿಂದೆ ಪೋಷಕರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಅಂದಿನಿಂದ ಅಜ್ಜಿ ಜತೆಯಲ್ಲಿ ಇವರು ವಾಸವಿದ್ದರು. ಇತ್ತೀಚೆಗೆ ಅಜ್ಜಿ ಕೂಡ ಮೃತಪಟ್ಟಿದ್ದರು. ಅಜ್ಜಿ

ಒಂಟಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಮೂವರು ಸಹೋದರಿಯರು Read More »

ಮತ್ತೊಬ್ಬ ಯುವನಟನ ಕಳೆದುಕೊಂಡ ಕನ್ನಡ ಚಿತ್ರರಂಗ| ಶೂಟಿಂಗ್ ವೇಳೆ ಅನಾರೋಗ್ಯದಿಂದ ನಟ ಧನುಷ್ ಸಾವು

ಸಮಗ್ರ ನ್ಯೂಸ್: ಸ್ಯಾಂಡಲ್​ವುಡ್​ಗೆ ಬರಸಿಡಿಲಿನಂತೆ ಮತ್ತೊಂದು ಸುದ್ದಿ ಬಂದೆರಗಿದೆ. ಯುವ ನಟ ಧನುಷ್ ಆಘಾತಕಾರಿ ರೀತಿಯಲ್ಲಿ ಮೃತಪಟ್ಟಿದ್ದಾರೆ. ಕಳೆದ ವಾರ ಲಡಾಕ್​ಗೆ ಶೂಟಿಂಗ್​ಗೆ ಹೋಗಿದ್ದ ಸಮಯದಲ್ಲಿ ಇವರು ಅಲ್ಲಿನ ಹವಾಮಾನದಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೂಡಲೇ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗಿತ್ತು. ಆದರೆ ದುರದೃಷ್ಟವಶಾತ್​ ಧನುಷ್​ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪ್ಯಾರ್ ಕಾ ಗೋಲ್ ಗುಂಬಜ್, ಕೊಟ್ಲಲ್ಲಪ್ಪೋ ಕೈ, ಸಂಪಿಗೆ ಹಳ್ಳಿ, ಲೀಡರ್, ಸ್ನೇಹಿತ ಸೇರಿದಂತೆ ಕೆಲವೊಂದು ಚಿತ್ರಗಳಲ್ಲಿ ನಟ ಧನುಷ್ ಅಭಿನಯಿಸಿದ್ದಾರೆ. ಕಳೆದ ವಾದ

ಮತ್ತೊಬ್ಬ ಯುವನಟನ ಕಳೆದುಕೊಂಡ ಕನ್ನಡ ಚಿತ್ರರಂಗ| ಶೂಟಿಂಗ್ ವೇಳೆ ಅನಾರೋಗ್ಯದಿಂದ ನಟ ಧನುಷ್ ಸಾವು Read More »

ಕದ್ರಿ ಮಂಜುನಾಥನ ಸನ್ನಿದಿ ಎದುರು‌ ಅನ್ಯಧರ್ಮೀಯರಿಗೆ ವ್ಯಾಪಾರ ನಿಷಿದ್ಧ| ಮೂರ್ತಿ ಪೂಜೆ ಹರಾಮ್ ಎನ್ನೋರು ವ್ಯಾಪಾರ ಮಾಡದಂತೆ ಬ್ಯಾನರ್ ಹಾಕಿದ ಸಂಘ ಪರಿವಾರ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಹಿಂದೂ ದೇವಸ್ಥಾನಗಳ ವಿಶೇಷ ಕಾರ್ಯಕ್ರಮಗಳು, ಜಾತ್ರೆಗಳಲ್ಲಿ ಅನ್ಯಧರ್ಮೀಯರಿಗೆ ನಿಷೇಧ ಹೇರುವ ಬ್ಯಾನರ್​ಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಲೇ ಇವೆ. ಈ ಬಾರಿ ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದ ಮುಂಭಾಗ ವ್ಯಾಪಾರ ನಿಷೇಧದ ಬ್ಯಾನರ್ ಕಾಣಿಸಿಕೊಂಡಿದೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ ಶಿವಶಕ್ತಿ ಶಾಖೆ ಕದ್ರಿಯಿಂದ ಬ್ಯಾನರ್ ಅಳವಡಿಸಲಾಗಿದೆ. ಇದೇ ಬ್ಯಾನರ್​ನಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಆರೋಪಿಯ ಉಲ್ಲೇಖವೂ ಇರುವುದು ಹಲವರ ಗಮನ ಸೆಳೆದಿದೆ. ‘ಕದ್ರಿ ಮಂಜುನಾಥನ ಜಾತ್ರೆಯಲ್ಲಿ ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ

ಕದ್ರಿ ಮಂಜುನಾಥನ ಸನ್ನಿದಿ ಎದುರು‌ ಅನ್ಯಧರ್ಮೀಯರಿಗೆ ವ್ಯಾಪಾರ ನಿಷಿದ್ಧ| ಮೂರ್ತಿ ಪೂಜೆ ಹರಾಮ್ ಎನ್ನೋರು ವ್ಯಾಪಾರ ಮಾಡದಂತೆ ಬ್ಯಾನರ್ ಹಾಕಿದ ಸಂಘ ಪರಿವಾರ Read More »