January 2023

ಕಡಬ: ಕುಮಾರಧಾರಾ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆ‌ ಸಾವು

ಸಮಗ್ರ ನ್ಯೂಸ್: ಕುಮಾರಧಾರ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆಯೋರ್ವರು ಮೃತಪಟ್ಟ ಘಟನೆ ‌‌ಕಡಬ ತಾಲೂಕಿನ ಕೊಯಿಲ‌ ಎಂಬಲ್ಲಿ ನಡೆದಿದೆ. ಇಲ್ಲಿನ ಏಣಿತ್ತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬುವವರ ಪತ್ನಿ ಗೀತಾ(46) ಮೃತ ಮಹಿಳೆ. ಇವರು ಕುಮಾರಧಾರ ಹೊಳೆಯ ಇನ್ನೊಂದು ಮಗ್ಗುಲಲ್ಲಿರುವ ಅರೆಲ್ತಡ್ಕ ಎಂಬಲ್ಲಿಂದ ಹುಲ್ಲು ಸಂಗ್ರಹಿಸಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿಕೊಂಡು ಹೊಳೆಯನ್ನು ತೆಪ್ಪದ ಮುಖಾಂತರ ದಾಟುತ್ತಾ ನದಿಯ ಮದ್ಯ ಭಾಗಕ್ಕೆ ಬಂದಾಗ ಜೊರಾದ ಗಾಳಿ ಬೀಸಿದ್ದು ಈ ವೇಳೆ ತೆಪ್ಪ ಮಗುಚಿ ಬಿದ್ದಿದೆ. ತೆಪ್ಪದಲ್ಲಿದ್ದ ಇನ್ನಿಬ್ಬರು […]

ಕಡಬ: ಕುಮಾರಧಾರಾ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆ‌ ಸಾವು Read More »

ಜಾನುವಾರುಗಳ ಚರ್ಮಗಂಟು ರೋಗ| ಹೋಮಿಯೋಪಥಿಯಲ್ಲಿದೆ ಪರಿಹಾರ

ಸಮಗ್ರ ನ್ಯೂಸ್: ದ. ಕ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ದೇಶದ ಹಲವೆಡೆಯಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ಸಾಂಕ್ರಾಮಿಕ ರೋಗವು ಹರಡುತ್ತಲೇ ಇದೆ. ಈ ಜಾನುವಾರುಗಳಿಗೆ ಬಂದ ಕಾಯಿಲೆಯು ಅದನ್ನೇ ಅವಲಂಬಿತವಾಗಿರುವ ಜನರ ನಿದ್ದೆ ಕೆಡಿಸಿದೆ. ಇದು ಜಾನುವಾರುಗಳಿಗೆ ಬರುವ ಕಾಯಿಲೆಯಾಗಿದೆ. ಇದರಿಂದ ಮನುಷ್ಯರಿಗೆ ಹರಡುವುದಿಲ್ಲ ಎಂದು ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ ದೃಢೀಕರಣ ಪಡಿಸಿದೆ . ಚರ್ಮಗಂಟು ರೋಗ ಲಕ್ಷಣಗಳೇನು – ಕೆಲವೊಮ್ಮೆ ಕರುಗಳಲ್ಲಿ ಮಲವು ನೀರಿನಂತಾಗಿ (Diarrhoea) ಇರುತ್ತದೆ. ಜ್ವರ ಇರುವ ಸಂದರ್ಭದಲ್ಲಿ ರಾತ್ರಿಯಿಡೀ

ಜಾನುವಾರುಗಳ ಚರ್ಮಗಂಟು ರೋಗ| ಹೋಮಿಯೋಪಥಿಯಲ್ಲಿದೆ ಪರಿಹಾರ Read More »

ಪ್ರಜಾಧ್ವನಿ ಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿದ ಇನಾಯತ್ ಅಲಿ ಮೂಲ್ಕಿ!!

ಸಮಗ್ರ ನ್ಯೂಸ್: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದ್ದ ಪ್ರಜಾಧ್ವನಿ ಬೃಹತ್ ಸಮಾವೇಶಕ್ಕೆ ತೆರಳುವ ದಾರಿ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಎನ್ ಐಟಿಕೆ ಬಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇನಾಯತ್ ಮೂಲ್ಕಿ ಅವರು ಭವ್ಯವಾಗಿ ಸ್ವಾಗತ ಕೋರಿದರು. ಉಡುಪಿಯಿಂದ ಸಾಗಿಬಂದ ಪ್ರಜಾಧ್ವನಿ ಯಾತ್ರೆಯನ್ನು ಎನ್ ಐಟಿಕೆ ಬಳಿ ಕಾಂಗ್ರೆಸ್ ಮುಖಂಡರು, ಸಾವಿರಾರು ಮಂದಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ರಸ್ತೆಯ ಇಕ್ಕೆಲದಲ್ಲಿ ನಿಲ್ಲಿಸಿದ್ದ ಎರಡು ಜೆಸಿಬಿಯಿಂದ ಯಾತ್ರೆಯ

ಪ್ರಜಾಧ್ವನಿ ಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿದ ಇನಾಯತ್ ಅಲಿ ಮೂಲ್ಕಿ!! Read More »

ಮೂಲ್ಕಿ: ಬೆಳ್ಳಾಯರು-ಕೆರೆಕಾಡು ಪರಿಸರದಲ್ಲಿ ವಾಮಾಚಾರ!!

ಸಮಗ್ರ ನ್ಯೂಸ್: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಯರು, ತೋಕೂರು, ಕೆರೆಕಾಡು ಪರಿಸರದ ಮುಖ್ಯ ರಸ್ತೆಗಳಲ್ಲಿ ಅಮಾವಾಸ್ಯೆ, ಹುಣ್ಣಿಮೆಯಂದು ವಾಮಾಚಾರ ಪ್ರಯೋಗ ನಡೆಸಲಾಗುತ್ತಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೋಕೂರು ಬಸ್ ನಿಲ್ದಾಣ ಬಳಿಯ ಕೂಡು ರಸ್ತೆ, ಟಿ ಎ ಬೋರ್ಡ್ ಬಳಿಯ ರಸ್ತೆ, ಬೆಳ್ಳಾಯರು ಮುಖ್ಯರಸ್ತೆಗಳಲ್ಲಿ ಮಧ್ಯರಾತ್ರಿಯ ವೇಳೆ ಬೈಕ್, ಸ್ಕೂಟರ್, ಕಾರ್, ರಿಕ್ಷಾಗಳು ಸಂಶಯಾಸ್ಪದವಾಗಿ ಸಂಚಾರ ನಡೆಸುತ್ತಿದ್ದು ಶನಿವಾರ ಬೆಳ್ಳಾಯರು ಟಿಎ ಬೋರ್ಡ್ ಪ್ಲೈವುಡ್ ಫ್ಯಾಕ್ಟರಿ ಬಳಿ ಇದೇ ರೀತಿ ಮಂತ್ರಿಸಿದ ನಿಂಬೆಹಣ್ಣು, ತೆಂಗಿನಕಾಯಿ

ಮೂಲ್ಕಿ: ಬೆಳ್ಳಾಯರು-ಕೆರೆಕಾಡು ಪರಿಸರದಲ್ಲಿ ವಾಮಾಚಾರ!! Read More »

ಸುಳ್ಯ: ಔಷಧಿಗೆಂದು ಆಸ್ಪತ್ರೆಗೆ ಹೋದ ಮಹಿಳೆ ನಾಪತ್ತೆ

ಸಮಗ್ರ ನ್ಯೂಸ್: ಔಷಧಿ ತರಲು ಆಸ್ಪತ್ರೆಗೆ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿರು ಬಗ್ಗೆ ಸುಳ್ಯ ತಾಲೂಕು ಮರ್ಕಂಜ ಗ್ರಾಮದಿಂದ ವರದಿಯಾಗಿದೆ. ಮರ್ಕಂಜದ ರಾಜಶೇಖರ ಎಂಬವರ ಪತ್ನಿ ನವ ವಿವಾಹಿತೆ ಕೀರ್ತಿಶ್ರೀ (26) ನಾಪತ್ತೆಯಾದವರು. ಇವರು ಜ.21ರಂದು ಎಲಿಮಲೆಯಲ್ಲಿರುವ ಆಸ್ಪತ್ರೆ ಔಷಧಿಗೆ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಆರೋಗ್ಯ ಸರಿ ಇಲ್ಲವೆಂದು ನನ್ನ ಪತ್ನಿ ನನ್ನ ಬಳಿ ಹೇಳಿದ್ದು ನಾನು ಆಕೆಯನ್ನು ಆಸ್ಪತ್ರೆಗೆ ಹೋಗಲೆಂದು ನನ್ನ ಮನೆಯಿಂದ ನನ್ನ ಜೀಪಿನಲ್ಲಿ ಬೆಳಿಗ್ಗೆ 10 ಗಂಟೆಗೆಕರೆದುಕೊಂಡು ಹೋಗಿದ್ದು

ಸುಳ್ಯ: ಔಷಧಿಗೆಂದು ಆಸ್ಪತ್ರೆಗೆ ಹೋದ ಮಹಿಳೆ ನಾಪತ್ತೆ Read More »

ಮಂಗಳೂರು: ರೈಲು ಹಳಿ ಮೇಲೆ ಅಪರಿಚಿತ ಯುವಕನ ಶವ ಪತ್ತ

ಸಮಗ್ರ ನ್ಯೂಸ್ : ಅಪರಿಚಿತ ಯುವಕನೊಬ್ಬನ ಮೃತದೇಹವು ಕುಳಾಯಿಗುಡ್ಡೆ ರೈಲ್ವೆ ಸೇತುವೆಯಿಂದ ಸುರತ್ಕಲ್ ಕಡೆಗೆ 200 ಮೀಟರ್ ದೂರದಲ್ಲಿರುವ ರೈಲ್ ಹಳಿಗಳ ಮೇಲೆ ಪತ್ತೆಯಾಗಿದೆ. ವ್ಯಕ್ತಿಯ ವಯಸ್ಸು ಸುಮಾರು 30 ವರ್ಷ ಎಂದು ಅಂದಾಜಿಸಲಾಗಿದ್ದು, ಈತ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯು ಕಪ್ಪು ನೈಟ್ ಪ್ಯಾಂಟ್, ಹಳದಿ ಬಣ್ಣದ ಪೂರ್ಣ ತೋಳಿನ ಶರ್ಟ್ ಮತ್ತು ಕಪ್ಪು ಜರ್ಕಿನ್ ಧರಿಸಿರುತ್ತಾರೆ. ಮೃತ ವ್ಯಕ್ತಿಯ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಯನ್ನು 0824-2220540 ಗೆ ಸಂಪರ್ಕಿಸಲು ಕೋರಲಾಗಿದೆ.

ಮಂಗಳೂರು: ರೈಲು ಹಳಿ ಮೇಲೆ ಅಪರಿಚಿತ ಯುವಕನ ಶವ ಪತ್ತ Read More »

2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ

ನವದೆಹಲಿ: 2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್-ಸಿಸಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷರನ್ನು ಇದೇ ಮೊದಲ ಬಾರಿಗೆ ಆಹ್ವಾನಿಸಲಾಗಿದೆ. ಅಧ್ಯಕ್ಷ ಅಲ್-ಸಿಸಿ ಜ. 24 ರಿಂದ 26 ರವರೆಗೆ ಭಾರತದಲ್ಲಿರಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈಜಿಪ್ಟ್ ನ ಅಧ್ಯಕ್ಷರೊಂದಿಗೆ ಐವರು ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಇರಲಿದೆ.

2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ Read More »

ತಂದೆ ಸಾವನ್ನಪ್ಪಿದ ಸುದ್ದಿ ತಿಳಿದು ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಮಗಳು

ಸಮಗ್ರ ನ್ಯೂಸ್: ತಂದೆ ಹೃದಯಾಘಾತದಿಂದ ಸಾವಿಗೀಡಾದ ಸುದ್ದಿ ತಿಳಿದು ಪುತ್ರಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಬರ್ಖೇಡ ಜಾಗಿರ್ ಎಂಬ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ಶುಕ್ರವಾರ ಬೆಳಗ್ಗೆ ತೀವ್ರತರವಾದ ಎದೆನೋವಿಗೆ ತುತ್ತಾಗಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದರು. ಆಸ್ಪತ್ರೆಯಲ್ಲಿದ್ದವರು ಮೊಬೈಲ್‌ ಫೋನ್ ಮೂಲಕ ಕರೆ ಮಾಡಿ ಕುಟುಂಬಸ್ಥರಿಗೆ ಈ ವಿಚಾರ ತಿಳಿಸಿದ್ದಾರೆ.

ತಂದೆ ಸಾವನ್ನಪ್ಪಿದ ಸುದ್ದಿ ತಿಳಿದು ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಮಗಳು Read More »

ಮೈಸೂರು: ಚಿರತೆ ದಾಳಿಗೆ ಬಾಲಕ ಬಲಿ

ಸಮಗ್ರ ನ್ಯೂಸ್: ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನರಭಕ್ಷಕ ಚಿರತೆ ದಾಳಿಗೆ 11 ವರ್ಷದ ಬಾಲಕ ಬಲಿಯಾಗಿರುವ ಘಟನೆ ನಡೆದಿದೆ. ಟಿ.ನರಸೀಪುರ ತಾಲೂಕಿನ ಹೊರಹಳ್ಳಿಯಲ್ಲಿ ನಿನ್ನೆ ರಾತ್ರಿಯಿಂದ 11 ವರ್ಷದ ಬಾಲಕ ಸಂಜಯ್ ಕಾಣೆಯಾಗಿದ್ದ. ಬಳಿಕ ಇಂದು ಬೆಳಗ್ಗೆ ಬಾಲಕನ ರುಂಡವಿಲ್ಲದ ಮೃತದೇಹ ಪತ್ತೆಯಾಗಿದ್ದು, ನರಭಕ್ಷಕ ಚಿರತೆ ದಾಳಿ ಮಾಡಿ ಬಾಲಕನನ್ನು ಕೊಂದು ರುಂಡವನ್ನು ತಿಂದು ಹಾಕಿದೆ. ರಾತ್ರಿಯಿಂದ ಬಾಲಕ ಸಂಜಯ್ ಕಾಣೆಯಾಗಿದ್ದು, ಗ್ರಾಮಸ್ಥರು ರಾತ್ರಿಯೆಲ್ಲ ಬಾಲಕನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಇಂದು

ಮೈಸೂರು: ಚಿರತೆ ದಾಳಿಗೆ ಬಾಲಕ ಬಲಿ Read More »

ಸುಳ್ಯ:ಜಿಲ್ಲಾ ಯುವಜನ ಮೇಳ ಮೆರವಣಿಗೆಯಲ್ಲಿ ಸ್ಪಂದನ ಗೆಳೆಯರ ಬಳಗಕ್ಕೆ ಪ್ರಥಮ ಸ್ಥಾನ

ಸಮಗ್ರ ನ್ಯೂಸ್: ಸುಳ್ಯದಲ್ಲಿ ನಡೆದ ದ. ಕ. ಜಿಲ್ಲಾ ಯುವಜನ ಮೇಳ ಮೆರವಣಿಗೆಯಲ್ಲಿ ಸ್ಪಂದನ ಗೆಳೆಯರ ಬಳಗಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಜ.21ರ ಶನಿವಾರ ದಂದು ಸುಳ್ಯದಲ್ಲಿ ನಡೆದ ದ. ಕ. ಜಿಲ್ಲಾ ಮಟ್ಟದ ಯುವಜನ ಮೇಳ 2022-23ರ ವರ್ಣರಂಜಿತ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಭಾಗವಹಿಸಿ ಪ್ರಥಮ ಸ್ಥಾನವನ್ನು ಸ್ಪಂದನ ಗೆಳೆಯರ ಬಳಗ ಅಡ್ತಲೆ ಪಡೆದುಕೊಂಡಿತು. ಈ ವೇಳೆ ಸ್ಪಂದನ ಗೆಳೆಯರ ಬಳಗದ ಸದಸ್ಯರು ಭಾಗವಹಿಸಿದ್ದರು.

ಸುಳ್ಯ:ಜಿಲ್ಲಾ ಯುವಜನ ಮೇಳ ಮೆರವಣಿಗೆಯಲ್ಲಿ ಸ್ಪಂದನ ಗೆಳೆಯರ ಬಳಗಕ್ಕೆ ಪ್ರಥಮ ಸ್ಥಾನ Read More »