January 2023

ದೇವರಮನೆಗೆ ಬರುವ ಪ್ರವಾಸಿಗರಿಂದ ಬಣಕಲ್ ಗ್ರಾಮಸ್ಥರಿಗೆ ಕಿರಿಕಿರಿ

ಸಮಗ್ರ ನ್ಯೂಸ್: ಪ್ರವಾಸಿ ತಾಣ ಹಾಗೂ ಐತಿಹಾಸಿಕ ಸ್ಥಳ ದೇವರಮನೆಯಲ್ಲಿ ಕೆಲ ಪ್ರವಾಸಿಗರ ಉಪಟಳದಿಂದ ಬಣಕಲ್ ಗ್ರಾಮಸ್ಥರಿಗೆ ಕಿರಿಕಿರಿ ಉಂಟಾಗಿದೆ. ಭಾನುವಾರ ದೇವರಮನೆಯಲ್ಲಿ ಕೆಲ ಪ್ರವಾಸಿಗರು ಅನುಚಿತವಾಗಿ ವರ್ತಿಸಿದ್ದು ಗ್ರಾಮಸ್ಥರು ಆ ಪ್ರವಾಸಿಗರನ್ನು ತರಾಟೆಗೆ ತೆಗೆದುಕೊಂಡು ಬಣಕಲ್ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಬಣಕಲ್ ಗ್ರಾಮಸ್ಥರಾದ ಬಿ.ಎಸ್ ವಿಕ್ರಂ, ದೇವರಮನೆ ಪ್ರವಾಸಿತಾಣಕ್ಕೆ ಬರುತ್ತಿರುವ ಕೆಲ ಪ್ರವಾಸಿಗರು ಮದ್ಯಪಾನ ಮತ್ತು ಮಾದಕ ವ್ಯಸನ ಮಾಡುತ್ತಿದ್ದು ದೇವರಮನೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದಾರೆ. ನಿಸರ್ಗ […]

ದೇವರಮನೆಗೆ ಬರುವ ಪ್ರವಾಸಿಗರಿಂದ ಬಣಕಲ್ ಗ್ರಾಮಸ್ಥರಿಗೆ ಕಿರಿಕಿರಿ Read More »

ಚಿಕ್ಕಮಗಳೂರು : ವರ್ಷವಾದರೂ ಆರಂಭವಾಗದ ಕಾಮಗಾರಿ| ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಸಮಗ್ರ ನ್ಯೂಸ್ : ಅನುದಾನ ನೀಡಿ ವರ್ಷವಾದರೂ ಕಾಮಗಾರಿ ಆರಂಭವಾಗದ ಹಿನ್ನಲೆ ಆಕ್ರೋಶಗೊಂಡ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ ಘಟನೆ ಕಳಸ ತಾಲೂಕಿನ ಶಂಕರಕೂಡಿಗೆ ಯಿಂದ ವರದಿ ಯಾಗಿದೆ. ಕಾಡಿನ ಕಲ್ಲು ದಾರಿಯಲ್ಲಿ ಹಳ್ಳಿಗರ ಏಳು-ಬೀಳಿನ ಬದುಕು ನಡೆಸುತ್ತಿದ್ದ ಊರಿನ ರಸ್ತೆಗೆ ಕಾಂಕ್ರಿಟ್ ಮಾಡಲು ವರ್ಷದ ಹಿಂದೆಯೇ 70 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಅಲ್ಲದೆ ಕಾಮಗಾರಿಗೆ ರಸ್ತೆ ಅಗೆದು ಕಂಟ್ರಾಕ್ಟರ್ ನಾಪತ್ತೆಯಾಗಿದ್ದಾನೆ. ಈ ಎಲ್ಲಾ ಆರೋಪವನಿಟ್ಟು ಗ್ರಾಮದ ಧ್ವಾರ ಬಾಗಿಲಲ್ಲಿ ಬಹಿಷ್ಕಾರದ ಬ್ಯಾನರ್ ಹಿಡಿದು ಮಲೆನಾಡಿಗರ

ಚಿಕ್ಕಮಗಳೂರು : ವರ್ಷವಾದರೂ ಆರಂಭವಾಗದ ಕಾಮಗಾರಿ| ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ Read More »

ಕಾಸರಗೋಡು: ತಾಯಿ ಹಾಗೂ 12 ಹರೆಯದ ಮಗಳ ಮೃತದೇಹ ಪತ್ತೆ

ಸಮಗ್ರ ನ್ಯೂಸ್: ತಾಯಿ ಮತ್ತು ಮಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡು, ಬೇಡಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಡಂಗುಯಿಯಲ್ಲಿ ನಡೆದಿದೆ. ಕುಂಡಂಗುಯಿ ನಿರ್ಕಾಯಿಯ ನಿವಾಸಿ ಚಂದ್ರ ಎಂಬವರ ಪತ್ನಿ ನಾರಾಯಣಿ (46) ಮತ್ತು ಪುತ್ರಿ ಶ್ರೀನಂದಾ (12) ಮೃತಪಟ್ಟವರು. ನಾರಾಯಣಿರವರ ಮೃತದೇಹ ನೇಣು ಬಿಗಿದು ಹಾಗೂ ಬಾಲಕಿ ಶ್ರಿನಂದಾರವರ ಮೃತದೇಹ ಕೋಣೆಯಲ್ಲಿ ಪತ್ತೆಯಾಗಿದೆ. ಶ್ರೀನಂದಾಳು ಕುಂಡ ಗುಯಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಭಾನುವಾರ ರಾತ್ರಿ ಕೃತ್ಯ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಮಿಸಿ

ಕಾಸರಗೋಡು: ತಾಯಿ ಹಾಗೂ 12 ಹರೆಯದ ಮಗಳ ಮೃತದೇಹ ಪತ್ತೆ Read More »

ಕುಂದಾಪುರ: ಮದ್ಯಪಾನ ಮಾಡಿ ವಾಹನ ಚಾಲನೆ| ಡಿವೈಡರ್ ಹಾರಿದ ಲಾರಿ

ಸಮಗ್ರ ನ್ಯೂಸ್: ಸಿಮೆಂಟ್ ತುಂಬಿದ್ದ ಕಂಟೈನರ್ ಲಾರಿಯೊಂದು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದ ಸಂಗಂ ಜಂಕ್ಷನ್ ನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಕೊಪ್ಪಳದಿಂದ ಸುಮಾರು 50 ಟನ್ ಗಿಂತಲೂ ಹೆಚ್ಚು ಸಿಮೆಂಟ್ ತುಂಬಿದ್ದ ಕಂಟೈನರ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಯಾರ್ಡ್ ಗೆ ಪ್ರಯಾಣಿಸುತ್ತಿತ್ತು. ಚಾಲಕ ರಾಹುಲ್ ಕುಡಿದು ಟೈಟಾಗಿ ವಾಹನ ಚಾಲನೆ ಮಾಡುತ್ತಿದ್ದ ಪರಿಣಾಮ ಸಂಗಂ ಜಂಕ್ಷನ್ ನಲ್ಲಿ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿಯಾಗಿ, ಸಿಸಿ ಕೆಮೆರಾ ಅಳವಡಿಸಲಾಗಿದ್ದ ಕಂಬವನ್ನು ಮುರಿದುಕೊಂಡು

ಕುಂದಾಪುರ: ಮದ್ಯಪಾನ ಮಾಡಿ ವಾಹನ ಚಾಲನೆ| ಡಿವೈಡರ್ ಹಾರಿದ ಲಾರಿ Read More »

ಸುಳ್ಯ: ನಾಪತ್ತೆಯಾಗಿದ್ದ ಮಹಿಳೆ ಪತ್ತೆ

ಸಮಗ್ರ ನ್ಯೂಸ್: ಜ.21 ರಂದು ಮರ್ಕಂಜದಿಂದ ಔಷಧಿಗೆಂದು ತೆರಳಿದ ವಿವಾಹಿತ ಮಹಿಳೆ ನಾಪತ್ತೆ ಯಾಗಿದ್ದು ಇದೀಗ ಇದೀಗ ಜ.22 ಪತ್ತೆಯಾದ ಬಗ್ಗೆ ವರದಿ ಯಾಗಿದೆ. ಕೀರ್ತಿಶ್ರೀ ಎಂಬಾಕೆ ಗಂಡನ ಮನೆಗೂ, ತಾಯಿ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ ಎಂದು ಪತಿ ರಾಜಶೇಖರ ಪೋಲೀಸರಿಗೆ ದೂರು ನೀಡಿದ್ದರು. ಆದರೆ ಜ.22 ರಂದು ಸಂಜೆ ಮಡಿಕೇರಿಯಲ್ಲಿ ಪತ್ತೆಯಾದ ಅವಳನ್ನು ಸುಳ್ಯ ಪೊಲೀಸ್ ಠಾಣೆಗೆ ಹಾಜರು ಪಡಿಸಿ ಬಳಿಕ ತಾಯಿ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ: ನಾಪತ್ತೆಯಾಗಿದ್ದ ಮಹಿಳೆ ಪತ್ತೆ Read More »

ಸುರತ್ಕಲ್-ಬಾಳದಲ್ಲಿ ನವವಿವಾಹಿತೆ ಆತ್ಮಹತ್ಯೆ!!

ಸಮಗ್ರ ನ್ಯೂಸ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಒಟ್ಟೆ ಕಾಯರ್ ಎಂಬಲ್ಲಿ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉಳ್ಳಾಲ ಕೋಟೆಕಾರ್ ಮಾಡೂರು ನಿವಾಸಿ ಚಂದ್ರಶೇಖರ-ಗಿರಿಜಾ ದಂಪತಿ ಪುತ್ರಿ ದಿವ್ಯಾ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಒಂದೂವರೆ ವರ್ಷದ ಹಿಂದಷ್ಟೇ ಒಟ್ಟೆಕಾಯರ್ ನಿವಾಸಿ ಹರೀಶ್ ಎಂಬವರನ್ನು ಮದುವೆಯಾಗಿದ್ದರು.ದಂಪತಿ ಶನಿವಾರ ನೆರೆಮನೆಯಲ್ಲಿ ಜರುಗಿದ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಜಗಳ ನಡೆದಿದ್ದು ದಿವ್ಯಾ ಬೇಸರಗೊಂಡು ವಾಪಸ್ ಮನೆಗೆ ಬಂದಿದ್ದರು. ಇದರಿಂದ ನೊಂದಿದ್ದ ದಿವ್ಯಾ ನಿನ್ನೆ

ಸುರತ್ಕಲ್-ಬಾಳದಲ್ಲಿ ನವವಿವಾಹಿತೆ ಆತ್ಮಹತ್ಯೆ!! Read More »

ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ಮಕ್ಕಳು ಮೊಟ್ಟೆ ಕೇಳಿದರೆ‌ ನೀಡಲೇಬೇಕು – ಸರ್ಕಾರದ ಆದೇಶ

ಸಮಗ್ರ ನ್ಯೂಸ್: ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ವೇಳೆ ಮಕ್ಕಳು ಮೊಟ್ಟೆಯನ್ನು ಕೇಳಿದರೆ ಮೊಟ್ಟೆಯನ್ನೇ ನೀಡಬೇಕು. ಬಾಳೆಹಣ್ಣು, ಚಿಕ್ಕಿ ನೀಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಸರ್ಕಾರಿ ಶಾಲೆಯ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಶಿಕ್ಷಣ ಇಲಾಖೆ ಜಾರಿಗೆ ತಂದಿದ್ದು, ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಮಾತ್ರ ಬಾಳೆಹಣ್ಣು, ಚಿಕ್ಕಿ ನೀಡುವಂತೆ ಸೂಚಿಸಿದೆ. ಆದರೆ, ಕೆಲವು ಶಾಲೆಗಳಲ್ಲಿ ಮಕ್ಕಳು ಮೊಟ್ಟೆ ಕೇಳಿದರೂ ಬಲವಂತವಾಗಿ ಬಾಳೆಹಣ್ಣು ಹಾಗೂ ಚಿಕ್ಕಿ ನೀಡುತ್ತಿರುವುದು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ

ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ಮಕ್ಕಳು ಮೊಟ್ಟೆ ಕೇಳಿದರೆ‌ ನೀಡಲೇಬೇಕು – ಸರ್ಕಾರದ ಆದೇಶ Read More »

300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಹೆಸರಾಂತ ನಟ ಲಕ್ಷ್ಮಣ ಹೃದಯಾಘಾತ ದಿಂದ ನಿಧನ

ಸಮಗ್ರ ನ್ಯೂಸ್ : 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಹೆಸರಾಂತ ನಟ ಲಕ್ಷ್ಮಣ(74) ಹೃದಯಾಘಾತರಿಂದ ಕೊನೆಯುಸಿರು ಎಳೆದಿದ್ದಾರೆ. ಜ. 22ರಂದು ರಾತ್ರಿ ಲಕ್ಷ್ಮಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಜ.23ರ ಮುಂಜಾನೆ 3.30 ಸುಮಾರಿಗೆ ಅವರನ್ನು ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇಸಿಜಿ ಮಾಡಿ ಅವರನ್ನು ಮನೆಗೆ ಕರೆದುಕೊಂಡು ಬರಲಾಯಿತು. ಮುಂಜಾನೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಇನ್ನೂ ಅವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ‘ಯಜಮಾನ’, ‘ಸೂರ್ಯವಂಶ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರ

300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಹೆಸರಾಂತ ನಟ ಲಕ್ಷ್ಮಣ ಹೃದಯಾಘಾತ ದಿಂದ ನಿಧನ Read More »

ಗಾಯಕಿ ಕಾರಿನ ಮೇಲೆ ಕಲ್ಲು ತೂರಾಟ|ಸ್ಪಷ್ಟನೇ ನೀಡಿದ ಮಂಗ್ಲಿ

ಸಮಗ್ರ ನ್ಯೂಸ್ : ಜ.22 ರಂದು ಬಳ್ಳಾರಿಯಲ್ಲಿ ನಡೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ ವೇಳೆ ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಲಾಗಿದೆ ಎನ್ನುವ ಸುದ್ದಿ ಹರಡಿತ್ತು. ಕಿಡಿಗೇಡಿಗಳು ಮಂಗ್ಲಿಗೆ ಮುತ್ತಿಗೆ ಹಾಕಿ, ಕಲ್ಲು ತೂರಾಟ ಮಾಡಿದರು ಎಂದು ಹೇಳಲಾಗಿತ್ತು. ಈ ವೇಳೆ ಪೊಲೀಸರು ಲಾಠಿಚಾರ್ಜ್ ಕೂಡ ಮಾಡಿದರು ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈ ಕುರಿತು ಸ್ವತಃ ಮಂಗ್ಲಿ ಸ್ಪಷ್ಟನೇ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ

ಗಾಯಕಿ ಕಾರಿನ ಮೇಲೆ ಕಲ್ಲು ತೂರಾಟ|ಸ್ಪಷ್ಟನೇ ನೀಡಿದ ಮಂಗ್ಲಿ Read More »

ಯುಎಇ ಅಧಿಕಾರಿ‌ ಸೋಗಿನಲ್ಲಿ ದೆಹಲಿಯ ಪೈವ್ ಸ್ಟಾರ್ ಹೊಟೇಲ್ ಗೆ ಪಂಗನಾಮ| ಬಿಲ್ ಪಾವತಿಸದೆ ಪರಾರಿಯಾದಾತ ಮಂಗಳೂರಿನಲ್ಲಿ ಅರೆಸ್ಟ್

ಸಮಗ್ರ ನ್ಯೂಸ್: ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಅಧಿಕಾರಿ ಎಂದು ಹೇಳಿಕೊಂಡು 23 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಂಚತಾರಾ ಹೋಟೆಲ್​ಗೆ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಮದ್ ಷರೀಫ್ (41) ಬಂಧಿತ ವ್ಯಕ್ತಿ. ಬಂಧಿತ ಮಹಮ್ಮದ್ ಷರೀಫ್ ಕರ್ನಾಟಕದ ದಕ್ಷಿಣ ಕನ್ನಡ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ. ನಕಲಿ ವ್ಯಾಪಾರ ಕಾರ್ಡ್​​​ನ್ನು ಬಳಸಿಕೊಂಡು ಸುಮಾರು ಮೂರು ತಿಂಗಳ ಕಾಲ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಹಮ್ಮದ್ ಷರೀಫ್ ಮೂರು

ಯುಎಇ ಅಧಿಕಾರಿ‌ ಸೋಗಿನಲ್ಲಿ ದೆಹಲಿಯ ಪೈವ್ ಸ್ಟಾರ್ ಹೊಟೇಲ್ ಗೆ ಪಂಗನಾಮ| ಬಿಲ್ ಪಾವತಿಸದೆ ಪರಾರಿಯಾದಾತ ಮಂಗಳೂರಿನಲ್ಲಿ ಅರೆಸ್ಟ್ Read More »