ಸಮಗ್ರ ನ್ಯೂಸ್: ಆಡಿಯೋ ಬಾಂಬ್ ಸಿಡಿಸುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಡಿಕೆಶಿ ಅಕ್ರಮ ಆಸ್ತಿ ಮತ್ತು ಅವರು ಕಪ್ಪು ಹಣವನ್ನು ವೈಟ್ ಮನಿಯನ್ನಾಗಿ ಮಾಡುವ ಕೆಲಸದ ಬಗ್ಗೆ ಮಾತನಾಡಿದ್ದಾರೆ.
ಗ್ರಾಮೀಣ ಭಾಗದ ಶಾಸಕಿ ಹೆಬ್ಬಾಳ್ಕರ್‌ಗೆ ಸಕ್ಕರೆ ಫ್ಯಾಕ್ಟರಿ ಇದ್ದು, ಕಳೆದ ನಾಲ್ಕೈದು ವರ್ಷದಿಂದ ಸಾವಿರಾರು ಕೋಟಿ ಆವ್ಯವಹಾರವಾಗಿದೆ. ಬ್ಯಾಂಕ್ ಲೋನ್ ಡೈವರ್ಟ್ ಆಗಿದೆ. ಮಹಾನಾಯಕನ ಬಗ್ಗೆ ತನಿಖೆ ಆಗಬೇಕು. ಬ್ಯಾಕ್ಮನಿಯನ್ನು ವೈಟ್ ಮನಿಯನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ಇದನ್ನು ಸಿಬಿಐಗೆ ನೀಡಿದರೆ ಎಲ್ಲಾ ವಿಚಾರ ಹೊರಗೆ ಬರಲಿದೆ” ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
”ನನ್ನ ಮೇಲೆ ಷಡ್ಯಂತ್ರ ಮಾಡಿ ಹೀಗೆ ಮಾಡಿದ್ದಾರೆ. ಡಿಕೆಶಿ ಶಿವಕುಮಾರ್ ನಾಲಾಯಕ್. ಆತ ರಾಜಕೀಯಕ್ಕೆ ನಾಲಾಯಕ್. ಯಾರನ್ನು ನಾನು ವೈಯಕ್ತಿಕ ಟೀಕೆ ಮಾಡಿಲ್ಲ. ಅದನ್ನು ರಾಜಕೀಯಕ್ಕೆ ಬಳಸಬಾರದು” ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬಳಿಕ ಆಡಿಯೋ ಬಾಂಬ್ ಸಿಡಿಸುವ ಬಗ್ಗೆ ಮಾತನಾಡಿದ ಅವರು, ”ನಾನು ಆಡಿಯೋ ಬಿಡುವುದಿಲ್ಲ, ಝಲಕ್ ಕೊಟ್ಟಿದ್ದೇನೆ ಅಷ್ಟೆ. ಇದೊಂದು ಕ್ರಿಮಿನಲ್ ಕೇಸ್. ಹಾಗಾಗಿ ನಾನು ಇದರ ಬಗ್ಗೆ ಹೇಳುದಿಲ್ಲ. ಡಿಕೆ ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ನನ್ನ ಧರ್ಮ ಪತ್ನಿ ಮಕ್ಕಳು, ಸಹೋದರು, ನಾಡಿನ ಜನತೆಯ ಆಶಿರ್ವಾದದಿಂದ ನಾನಿಲ್ಲಿ ಬಂದಿದ್ದೇನೆ. ನನ್ನತ್ರ 120 ಸಾಕ್ಷಿಗಳಿವೆ. ನಾನು ಸಿಬಿಐಗೆ ಕೊಡುತ್ತೇನೆ ” ಎಂದು ಹೇಳಿದ್ದಾರೆ.