Ad Widget .

ಮಂಗಳೂರು ನಗರಗಳಲ್ಲಿ ಜಿಯೊ ಟ್ರೂ 5ಜಿ ಸೇವೆ ಆರಂಭ

ಸಮಗ್ರ ನ್ಯೂಸ್: ಮಂಗಳೂರು ಮತ್ತು ಇತರ ಏಳು ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದೆ. ರಿಲಯನ್ಸ್ ಜಿಯೋ ಮಂಗಳೂರಿನಲ್ಲಿ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ.

Ad Widget . Ad Widget .

ಜಿಯೊ ಗ್ರಾಹಕರು 5 ಜಿ ವೆಲ್‍ಕಮ್ ಆಫರ್ ನಡಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಇಂದಿನಿಂದ ಪಡೆಯಬಹುದಾಗಿದೆ ಎಂದು ಜಿಯೋ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ.

Ad Widget . Ad Widget .

ಇನ್ನು ಮಂಗಳೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದು, ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಪಡೆಯುತ್ತಾರಷ್ಟೇ ಅಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್‍ಎಂಇಗಳು ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ ಎಂದು ಪ್ರಕಟಣೆ ಹೇಳಿದೆ.

Leave a Comment

Your email address will not be published. Required fields are marked *