December 2022

ಈ ಕುಟುಂಬ ಮದುವೆ ದಿಬ್ಬಣ ಹೊರಟಿದ್ದು ಯಾವುದರಲ್ಲಿ ಗೊತ್ತಾ?

ಸಮಗ್ರ ನ್ಯೂಸ್: ಬಸ್ಸು, ಕಾರು, ರೈಲಿನಲ್ಲೆಲ್ಲಾ ಸಂಬಂಧಿಕರು ಒಟ್ಟಾಗಿ ಮದುವೆ ದಿಬ್ಬಣ ಹೋಗುವುದನ್ನು ಕಂಡಿದ್ದೇವೆ. ಆದರೆ ಇದೀಗ ಇಲ್ಲೊಂದು ಕುಟುಂಬ ವಿಮಾನವೊಂದನ್ನು ಬುಕ್ ಮಾಡಿ, ಮದುವೆ ದಿಬ್ಬಣ ಹೊರಟಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆ ದಿಬ್ಬಣದಲ್ಲಿ ಸಂಭ್ರಮ, ಸಡಗರ ತುಂಬಿರುತ್ತದೆ. ಹಾಡುತ್ತಾ, ನಲಿಯುತ್ತಾ ಸಾಗುವುದೇ ಸೋಜಿಗ. ಕುಟುಂಬ ಸದಸ್ಯರೊಂದಿಗೆ ಮದುವೆ ದಿಬ್ಬಣ ಹೋಗುವುದು ಸದಾ ಕಾಲ ನೆನಪಿನಲ್ಲಿ ಉಳಿಯುವಂತಹ ಸಂಭ್ರಮ. ಶ್ರೇಯಾ ಶಾ ಎಂಬ ಇನ್ಸ್​ಟಾಗ್ರಾಂ ಬಳಕೆದಾರರೊಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ ವಿಮಾನದ […]

ಈ ಕುಟುಂಬ ಮದುವೆ ದಿಬ್ಬಣ ಹೊರಟಿದ್ದು ಯಾವುದರಲ್ಲಿ ಗೊತ್ತಾ? Read More »

ಕಟೀಲು ದುರ್ಗೆಯ ದರ್ಶನ ಪಡೆದ ನಟ ಸುದೀಪ್ ದಂಪತಿ

ಸಮಗ್ರ ನ್ಯೂಸ್: ಪ್ರಸಿದ್ಧ ದೇವಿಕ್ಷೇತ್ರ ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪತ್ನಿ ಪ್ರಿಯಾ ಜೊತೆ ನಟ ಕಿಚ್ಚ ಸುದೀಪ್ ಭಾನುವಾರ ಭೇಟಿ ನೀಡಿದರು. ಕಟೀಲು ಮತ್ತು ಮುಲ್ಕಿಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿರುವ ನಟ ಸುದೀಪ್ ಕಟೀಲು ಶ್ರೀದೇವಿಗೆ ವಿಶೇಷ ಪೂಜೆ ನೆರವೇರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇಗುಲದ ವತಿಯಿಂದ ಸುದೀಪ್ ರನ್ನು ಗೌರವಿಸಲಾಯಿತು.

ಕಟೀಲು ದುರ್ಗೆಯ ದರ್ಶನ ಪಡೆದ ನಟ ಸುದೀಪ್ ದಂಪತಿ Read More »

ಸುಬ್ರಹ್ಮಣ್ಯ: ಯುವಕನಲ್ಲಿ ಹಣಕ್ಕೆ ಪೀಡಿಸಿದ ಪೊಲೀಸ್ ವಿರುದ್ಧ ದೂರು

ಸಮಗ್ರ ನ್ಯೂಸ್ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿಯಂದು ವ್ಯಾಪಾರ ಮಾಡುತ್ತಿದ್ದ ಯುವಕನಲ್ಲಿ ಹಣಕ್ಕೆ ಪೀಡಿಸಿದ್ದಲ್ಲದೆ ಪೊಲೀಸ್ ವಸತಿಗೃಹಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆಂಬ ಆರೋಪದಲ್ಲಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ. ಕಡಬ ತಾಲೂಕಿನ ಕುಟ್ರಾಪಾಡಿ ಗ್ರಾಮದ ಭೀಮಗುಂಡಿ ಶಶಿಕಿರಣ್‌ (19) ಅವರು ಸುಬ್ರಹ್ಮಣ್ಯ ಠಾಣೆಯ ಪೊಲೀಸ್‌ ಸಿಬ್ಬಂದಿ ಭೀಮಣ್ಣ ಗೌಡ ವಿರುದ್ದ ದೂರು ನೀಡಿದ್ದಾರೆ. ಪಂಚಮಿ ದಿನವಾದ ನವೆಂಬರ್‍ 28ರಂದು ವ್ಯಾಪಾರ ನಡೆಸುತ್ತಿದ್ದಾಗ ರಾತ್ರಿ 11.30ರ ವೇಳೆಗೆ ಸ್ಟಾಲ್‌ಗೆ ಬಂದ ಭೀಮಣ್ಣ ಗೌಡ

ಸುಬ್ರಹ್ಮಣ್ಯ: ಯುವಕನಲ್ಲಿ ಹಣಕ್ಕೆ ಪೀಡಿಸಿದ ಪೊಲೀಸ್ ವಿರುದ್ಧ ದೂರು Read More »

ಬೆಂಗಳೂರು: ದೀಪಾವಳಿ ಬಲೀಂದ್ರ ಹಬ್ಬ ಆಚರಣೆ| ಬದುಕು ಕಟ್ಟುವ ಜೊತೆಗೆ ಆಚರಣೆಗಿರಲಿ ಮನ್ನಣೆ- ಕಜೆಗದ್ದೆ

ಸಮಗ್ರ ನ್ಯೂಸ್: ಬದುಕು ಕಟ್ಟಿಕೊಳ್ಳಲು ಬಂದವರು ನಮ್ಮ ಆಚರಣೆ, ಪದ್ದತಿ ಬಿಟ್ಟು ಹೋಗಬಾರದೆಂದು ಈ ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಹೇಳಿದರು. ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿಯ ಕರ್ನಾಟಕ ಸಚಿವಾಲಯ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಗೌಡ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ದೀಪಾವಳಿ ಬಲೀಂದ್ರ ಹಬ್ಬದ ಆಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೃಷಿ ಸಂಸ್ಕೃತಿಯ ಹಿನ್ನೆಲೆ ಉಳ್ಳ ನಾವು

ಬೆಂಗಳೂರು: ದೀಪಾವಳಿ ಬಲೀಂದ್ರ ಹಬ್ಬ ಆಚರಣೆ| ಬದುಕು ಕಟ್ಟುವ ಜೊತೆಗೆ ಆಚರಣೆಗಿರಲಿ ಮನ್ನಣೆ- ಕಜೆಗದ್ದೆ Read More »

ಬೈಕ್ ಗೆ ಡಿಕ್ಕಿ ಹೊಡೆದ ಎಂಎಲ್ಸಿ ರವಿಕುಮಾರ್ ಕಾರು

ಸಮಗ್ರ ನ್ಯೂಸ್: ಬೈಕ್‌ ಸವಾರನಿಗೆ ಎಂಎಲ್‌ಸಿ ರವಿಕುಮಾರ್‌ ಕಾರು ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರನಿಗೆ ಗಾಯವಾಗಿದೆ. ಇದೇ ವೇಳೆ ಗಾಯಾಳುವಿನ ಸಹಾಯಕ್ಕೆ ಬಾರದ ಹಿನ್ನಲೆಯಲ್ಲಿ ಅವರಿಗೆ ಸ್ಥಳೀಯ ಜನತೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಕೋಲಾರ ತಾಲೂಕಿನ ಲಕ್ಷ್ಮಿಸಾಗರ ಬಳಿ ಈ ಅಪಘಾತವಾಗಿದ್ದು, ರವಿಕುಮಾರ್‌ ಇದ್ದ ಕಾರು ಬೈಕ್‌ ಸವಾರಿನಿಗೆ ಗುದ್ದಿದೆ ಎನ್ನಲಾಗಿದೆ. ಅಪಘಾತ ಸ್ಥಳಕ್ಕೆ ವೇಮಗಲ್ ಪೋಲಿಸರು ಆಗಮಿಸಿ, ಸ್ಥಳಿಯರನ್ನು ಸಮಾಧಾನ ಮಾಡಿ, ಗಾಯಾಳುವನ್ನು ಹತ್ತಿರದ ಆಸ್ಪತ್ತೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ ಅಂತ ತಿಳಿದು ಬಂದಿದೆ.

ಬೈಕ್ ಗೆ ಡಿಕ್ಕಿ ಹೊಡೆದ ಎಂಎಲ್ಸಿ ರವಿಕುಮಾರ್ ಕಾರು Read More »

10ವರ್ಷದ ಬಾಲಕಿಯ ಬರ್ಬರ ಹತ್ಯೆ| ಹೊಟ್ಟೆ ಸೀಳಿ ಅಂಗಾಂಗ ಹೊರತೆಗೆದು ವಿಕೃತಿ

ಸಮಗ್ರ ನ್ಯೂಸ್: ಹತ್ತು ವರ್ಷದ ಬಾಲಕಿಯೋರ್ವಳನ್ನು ಭೀಕರ ಸ್ವರೂಪದಲ್ಲಿ ಹತ್ಯೆಗೈಯಲಾಗಿದೆ. ಈಕೆಯ ಹತ್ಯೆಗೆ ತಂದೆಯ ಮೇಲಿನ ಹಗೆತನವೇ ಕಾರಣವೆಂದು ಹೇಳಲಾಗಿದೆ. ಉತ್ತರ ಪ್ರದೇಶದ ಪೀಲೀಭೀತ್​​ನಲ್ಲಿ 10 ವರ್ಷದ ಬಾಲಕಿಯನ್ನು ಅತ್ಯಂತ ಭೀಕರ ಸ್ವರೂಪದಲ್ಲಿ ಹತ್ಯೆಗೈಯಲ್ಲಾಗಿದೆ. ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಆಕೆಯ ಮೃತದೇಹ ಮನೆ ಸಮೀಪದ ಗೋಧಿ ಹೊಲದಲ್ಲಿ ಪತ್ತೆಯಾಗಿದೆ. ಆದರೆ ಆಕೆಯ ಮೃತದೇಹ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಬಾಲಕಿಯ ಹೊಟ್ಟೆಯನ್ನು ಕತ್ತರಿಸಲಾಗಿದ್ದು, ಹೊಟ್ಟೆ ತೆರೆದ ಸ್ಥಿತಿಯಲ್ಲಿದೆ. ಒಳಗಿನ ಅಂಗಾಂಗಳನ್ನೆಲ್ಲ ಕಿತ್ತು, ಅಲ್ಲೇ ಎಸೆಯಲಾಗಿದೆ. ಅತ್ಯಂತ ಕ್ರೂರವಾಗಿ,

10ವರ್ಷದ ಬಾಲಕಿಯ ಬರ್ಬರ ಹತ್ಯೆ| ಹೊಟ್ಟೆ ಸೀಳಿ ಅಂಗಾಂಗ ಹೊರತೆಗೆದು ವಿಕೃತಿ Read More »

OYO ದಿಂದಲೂ ಉದ್ಯೋಗಿಗಳ ಗೇಟ್ ಪಾಸ್!! ಕೆಲಸ ಕಳೆದುಕೊಳ್ಳಲಿದ್ದಾರೆ 600 ಮಂದಿ

ಸಮಗ್ರ ನ್ಯೂಸ್: ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಈಗಾಗಲೇ ಉದ್ಯೋಗ ಕಡಿತದ ಪರ್ವ ಆರಂಭವಾಗಿದ್ದು, ಟ್ವಿಟ್ಟರ್, ಮೆಟಾ, ಸಿಸ್ಕೋ ಮೊದಲಾದ ಕಂಪನಿಗಳು ತಮ್ಮ ಸಹಸ್ರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಭಾರತದಲ್ಲಿ ಈಗಾಗಲೇ ಸ್ಟಾರ್ಟ್ ಅಪ್ ಕಂಪನಿಗಳಾದ ಬೈಜೂಸ್ ಹಾಗೂ ಝೋಮ್ಯಾಟೋ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುತ್ತಿದ್ದು, ಇದೀಗ ಓಯೋ ಹೋಟೆಲ್ಸ್ ಅಂಡ್ ಪ್ರೈವೇಟ್ ಲಿಮಿಟೆಡ್ ಇದೇ ಹಾದಿ ಹಿಡಿಯುತ್ತಿದೆ. ಓಯೋ 600 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ತೀರ್ಮಾನಿಸಿದ್ದು, ಒಟ್ಟು 3,700 ಉದ್ಯೋಗಿಗಳ ಪೈಕಿ

OYO ದಿಂದಲೂ ಉದ್ಯೋಗಿಗಳ ಗೇಟ್ ಪಾಸ್!! ಕೆಲಸ ಕಳೆದುಕೊಳ್ಳಲಿದ್ದಾರೆ 600 ಮಂದಿ Read More »

ಹುಣಸೂರು: ಕಟ್ಟಿದ ಹಸುವಿನ ಕೊರಳ ಹಿಡಿದ ವ್ಯಾಘ್ರ| ಹುಲಿ ದಾಳಿಗೆ ಹಸು ಬಲಿ; ಗ್ರಾಮಸ್ಥರಲ್ಲಿ ಆತಂಕ

ಸಮಗ್ರ ನ್ಯೂಸ್: ಮೈಸೂರು ಜಿಲ್ಲೆಯಲ್ಲಿ ಹುಲಿ, ಚಿರತೆಗಳ ಆರ್ಭಟ ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹುಣಸೂರು ತಾಲ್ಲೂಕಿನ ಹೈರಿಗೆ ಗ್ರಾಮದ ತಮ್ಮಯ್ಯ ಎಂಬುವವರು ತಮ್ಮ ಹೊಲದಲ್ಲಿ ಹಸು ಕಟ್ಟಿರುವ ವೇಳೆ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಇಂದು ವಾರದಿಂದ ಹುಲಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದರು ಹುಲಿ ಸಿಗದೆ ಜನರಲ್ಲಿ ಆತಂಕ ಮೂಡಿಸಿದೆ ಹೈರಿಗೆ ಗ್ರಾಮದಲ್ಲಿ ಹಸು ಮೇಲೆ ದಾಳಿ ನಡೆಸಿರುವ ಹುಲಿ ಸುತ್ತ ಮುತ್ತಲಿನ ಗ್ರಾಮದ ಜನರಲ್ಲಿ ಬಯ ಹುಟ್ಟಿಸಿದೆ. ರೈತರು

ಹುಣಸೂರು: ಕಟ್ಟಿದ ಹಸುವಿನ ಕೊರಳ ಹಿಡಿದ ವ್ಯಾಘ್ರ| ಹುಲಿ ದಾಳಿಗೆ ಹಸು ಬಲಿ; ಗ್ರಾಮಸ್ಥರಲ್ಲಿ ಆತಂಕ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಒಂದು ವಾರದಲ್ಲಿ ಸೌರಮಂಡಲದಲ್ಲಿ ಆಗುವಂತಹ ಬದಲಾವಣೆಗಳನ್ನು ನೋಡಿಕೊಂಡು ವಾರ ಭವಿಷ್ಯ ಹೇಳಲಾಗುತ್ತದೆ. ಈ ವಾರ ಭವಿಷ್ಯ ಹೆಚ್ಚು ಉಪಯೋಗಕಾರಿ. ಯಾಕೆಂದರೆ ನಮಗೆ ಬರುವಂತಹ ಸಮಸ್ಯೆಗಳು, ಎದುರಾಗುವ ಆಪತ್ತು ಇತ್ಯಾದಿಗಳನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ನಡೆದು ಕೊಳ್ಳಬಹುದು. ಈ ವಾರ ನಿಮ್ಮ ರಾಶಿಗಳ ಗೋಚಾರಫಲ ಹೇಗಿದೆ ತಿಳಿಯೋಣ ಬನ್ನಿ… ಮೇಷ: ನಿಮ್ಮ ಕುಟುಂಬದಲ್ಲಿ ಉತ್ತಮ ಕ್ರಮವನ್ನು ಕಾಪಾಡಿಕೊಳ್ಳಲು ಮಾಡಲಾದ ನಿಯಮಗಳು ಮತ್ತು ನಿಬಂಧನೆಗಳಿಂದ ಮನೆಯಲ್ಲಿ ಶಿಸ್ತುಬದ್ಧ ಮತ್ತು ಆಹ್ಲಾದಕರ ವಾತಾವರಣ ಇರುತ್ತದೆ. ದೀರ್ಘ ಕಾಲದ ದೇಶೀಯ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಬೆಳ್ತಂಗಡಿ : ಮೋಜಿಗಾಗಿ ಫಾಲ್ಸ್ ಗೆ ತೆರಳಿದ ವಿದ್ಯಾರ್ಥಿ ನೀರಲ್ಲಿ ಮುಳುಗಿ‌ ಸಾವು| ಜೀವ ಕಸಿದ ವೀಕೆಂಡ್ ರೈಡ್

ಸಮಗ್ರ ನ್ಯೂಸ್: ಮೋಜಿಗಾಗಿ ಸ್ನೇಹಿತರ ಜತೆ ಬೆಳ್ತಂಗಡಿ ತಾಲೂಕಿನಲ್ಲಿರುವ ಎಮಾ೯ಯಿ ಫಾಲ್ಸ್ ಗೆ ತೆರಳಿದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು (ಡಿ.3) ನಡೆದಿದೆ. ಧಮ೯ಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಎಂಬವರ ಪುತ್ರ ಉಜಿರೆ ಪದವಿ ಪೂವ೯ ಕಾಲೇಜಿನ ವಿದ್ಯಾರ್ಥಿ ವಿವೇಕ್ (17ವ) ಮೃತಪಟ್ಟ ದುರ್ದೈವಿ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಸಮೀಪ ಮಲವಂತಿಗೆ ಬಳಿ ಇರುವ ಪ್ರಸಿದ್ದ ಪ್ರವಾಸಿ ತಾಣ ಎಮಾ೯ಯಿ ಫಾಲ್ಸ್ ನಲ್ಲಿ ಈ ದುರ್ಘಟನೆ ನಡೆದಿದೆ. ಶನಿವಾರದ ಕಾರಣ ಇಂದು

ಬೆಳ್ತಂಗಡಿ : ಮೋಜಿಗಾಗಿ ಫಾಲ್ಸ್ ಗೆ ತೆರಳಿದ ವಿದ್ಯಾರ್ಥಿ ನೀರಲ್ಲಿ ಮುಳುಗಿ‌ ಸಾವು| ಜೀವ ಕಸಿದ ವೀಕೆಂಡ್ ರೈಡ್ Read More »