December 2022

ಕಾರ್ಕಳ: ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ಮೂವರು ಬಲಿ

ಸಮಗ್ರ ನ್ಯೂಸ್: ಉಡುಪಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಜಗೋಳಿ ಸಮೀಪದ ನೆಲ್ಲಿಕಾರು ಬಳಿ ಖಾಸಗಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿ ಗಂಡ ಹೆಂಡತಿ ಮಗು ಸಹಿತ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ( ಡಿ.10 ರಂದು) ನಡೆದಿದೆ. ಮೃತಪಟ್ಟವರನ್ನು ಆಂಧ್ರಪ್ರದೇಶ ಮೂಲದವರು ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ 7 ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತರನ್ನು ಬೆಂಗಳೂರು ಮೂಲದ ನಾಗರಾಜ್ (40), ಅವರ ಪತ್ನಿ ಪ್ರತ್ಯುಷಾ (32) […]

ಕಾರ್ಕಳ: ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ಮೂವರು ಬಲಿ Read More »

ದೇವರೆಂದು ಪೂಜಿಸಿದ ಆ ವಿಗ್ರಹ ದೇವರಲ್ಲ! ಹಾಗಾದ್ರೆ ಮತ್ತಿನ್ನೇನು? ಶಾಕ್ ನಲ್ಲಿ ಭಕ್ತಾಧಿಗಳು..!

ಸಮಗ್ರ ನ್ಯೂಸ್: ಇಷ್ಟು ದಿನ ದೇವರು ಅಂತ ಆರಾಧಿಸಿದ್ದು ದೇವರೇ ಅಲ್ಲ ಎಂದು ತಿಳಿದರೆ ಯಾರಿಗೇ ಆಗಲಿ, ಶಾಕ್ ಆಗೋದು ಖಂಡಿತ. ಇಂತಹುದೇ ಒಂದು ಅತಿ ವಿಚಿತ್ರ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯೇರಿ ಗ್ರಾಮದಲ್ಲಿರುವ ದೇವಾಲಯವೊಂದರಲ್ಲಿ ಆರಾಧಿಸುತ್ತಿದ್ದ ತಲೈವೆಟ್ಟಿ ಮುನಿಯಪ್ಪನ್ ದೇವರು ಇದೀಗ ಬುದ್ಧ ಎಂದು ಸಾಬೀತಾಗಿದೆ. ಈ ದೇವಾಲಯದಲ್ಲಿ ಬುದ್ಧನ ಶಿಲ್ಪವಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಗೆ ಮದ್ರಾಸ್ ಹೈಕೋರ್ಟ್ ಖಡಕ್ ಆದೇಶ ನೀಡಿದೆ. ತಲೈವೆಟ್ಟಿ ಮುನಿಯಪ್ಪನ್ ದೇವಾಲಯದಲ್ಲಿ ಹಿಂದೂ ಧರ್ಮಕ್ಕೆ

ದೇವರೆಂದು ಪೂಜಿಸಿದ ಆ ವಿಗ್ರಹ ದೇವರಲ್ಲ! ಹಾಗಾದ್ರೆ ಮತ್ತಿನ್ನೇನು? ಶಾಕ್ ನಲ್ಲಿ ಭಕ್ತಾಧಿಗಳು..! Read More »

ರಾಜ್ಯದಲ್ಲಿ ಇನ್ನೂ ಐದು ದಿನ ಚಳಿ, ಮಳೆ| 15 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್

ಸಮಗ್ರ ನ್ಯೂಸ್: ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ರಾಜ್ಯಾದ್ಯಂತ ಇನ್ನೂ ಐದು ದಿನಗಳ ಕಾಲ ಭಾರೀ ಥಂಡಿ, ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ತಮಿಳುನಾಡು, ಪುದುಚೇರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ. ಡಿ.13ರವರೆಗೂ ಮಳೆಯಾಗಲಿದ್ದು, ಈ ನಿಟ್ಟಿನಲ್ಲಿ 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ ಕರ್ನಾಟಕದ ಮೇಲೆ ಪ್ರಮುಖವಾಗಿ ದಕ್ಷಿಣ

ರಾಜ್ಯದಲ್ಲಿ ಇನ್ನೂ ಐದು ದಿನ ಚಳಿ, ಮಳೆ| 15 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ Read More »

ಶಿರಾಡಿ ಘಾಟ್ ಸುರಂಗ ಮಾರ್ಗ ಹೆದ್ದಾರಿ ನಿರ್ಮಾಣ ಸಾಧ್ಯವಿಲ್ಲ| ಕೇಂದ್ರ ಸಾರಿಗೆ ಸಚಿವ ನಿತಿನ್ ಘಡ್ಕರಿ ಅಭಿಮತ

ಸಮಗ್ರ ನ್ಯೂಸ್: ದಶಕದಿಂದಲೇ ಪ್ರಸ್ತಾವದಲ್ಲಿದ್ದ ಶಿರಾಡಿ ಘಾಟಿ ಸುರಂಗ ಮಾರ್ಗ ಹೆದ್ದಾರಿ ಯೋಜನೆಯನ್ನು ಕೇಂದ್ರ ಸರಕಾರ ಕೈಬಿಡುವ ಸೂಚನೆಗಳು ಕಾಣುತ್ತಿವೆ. ಈ ಯೋಜನೆಯು ದೊಡ್ಡ ಮೊತ್ತದ್ದಾಗಿದೆ ಹಾಗೂ ಅನೇಕ ಸವಾಲುಗಳಿಂದ ಕೂಡಿರುವ ಕಾರಣ ಇದು ಕಾರ್ಯಸಾಧುವಲ್ಲ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ. ಲೋಕಸಭೆಯಲ್ಲಿ ಗುರುವಾರ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಪ್ರಶ್ನೆಗೆ, ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಖಾತೆ ಸಚಿವ ನಿತಿನ್‌ ಗಡ್ಕರಿಯವರು ನೀಡಿರುವ ಉತ್ತರದಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ಮಂಗಳೂರಿಗೆ ಫೆಬ್ರವರಿಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ,

ಶಿರಾಡಿ ಘಾಟ್ ಸುರಂಗ ಮಾರ್ಗ ಹೆದ್ದಾರಿ ನಿರ್ಮಾಣ ಸಾಧ್ಯವಿಲ್ಲ| ಕೇಂದ್ರ ಸಾರಿಗೆ ಸಚಿವ ನಿತಿನ್ ಘಡ್ಕರಿ ಅಭಿಮತ Read More »

ಮುಜುರಾಯಿ ದೇವಳಗಳಲ್ಲಿ ಟಿಪ್ಪು ಕಾಲದ ಸಲಾಂ ಆರತಿ, ದೀವಟಿಗೆ ಸಲಾಂಗೆ ಇತಿಶ್ರೀ| ಧಾರ್ಮಿಕ ಪರಿಷತ್ ನಿಂದ‌ ಮಹತ್ವದ ನಿರ್ಧಾರ

ಸಮಗ್ರ ನ್ಯೂಸ್: ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಟಿಪ್ಪುವಿನ ಕಾಲದ ದೀವಟಿಗೆ ಸಲಾಂಗೆ ಇತೀಶ್ರೀ ಹಾಕಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜ್ಯ ಧಾರ್ಮಿಕ ಪರಿಷತ್ ಈ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ರಾಜ್ಯದ ಯಾವುದೇ ದೇವಸ್ಥಾನಗಳಲ್ಲಿ ದೀವಿಟಿಗೆ ಪೂಜೆ ಅಥವಾ ಸಲಾಂ ಪೂಜೆಯನ್ನು ಮಾಡಬಾರದು ಎಂದು ಧಾರ್ಮಿಕ ಷರಿಷತ್ ಆದೇಶ ಹೊರಡಿಸಿದೆ. ಟಿಪ್ಪು ಕಾಲದಲ್ಲಿ ಆರಂಭಗೊಂಡಿದ್ದ ದೀವಿಟಿಗೆ ಅಥವಾ ಸಲಾಂ ಪೂಜೆ ರಾಜ್ಯದ ಕೆಲ ಎಲ್ಲಾ ಪ್ರಸಿದ್ಧ ದೇವಾಲಯಗಳಲ್ಲಿ ನಡೆಯುತ್ತಿದೆ. ದೇವಸ್ಥಾನದಲ್ಲಿ ಸಂಜೆ ಸಮಯದಲ್ಲಿ ದೀವಿಟಿಗೆ ಪೂಜೆ ನಡೆಯುತ್ತಿತ್ತು.

ಮುಜುರಾಯಿ ದೇವಳಗಳಲ್ಲಿ ಟಿಪ್ಪು ಕಾಲದ ಸಲಾಂ ಆರತಿ, ದೀವಟಿಗೆ ಸಲಾಂಗೆ ಇತಿಶ್ರೀ| ಧಾರ್ಮಿಕ ಪರಿಷತ್ ನಿಂದ‌ ಮಹತ್ವದ ನಿರ್ಧಾರ Read More »

ಪಬ್ಲಿಕ್ ಪ್ರಾಬ್ಲಂ, ಪಬ್ಲಿಕ್ ವಾಯ್ಸ್: ಕೆಎಸ್ಆರ್ಟಿಸಿ ಚಾಲಕ- ನಿರ್ವಾಹಕರು ಯಾಕೆ ಹೀಗೆ?

ಸಮಗ್ರ ನ್ಯೂಸ್: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಬೆನ್ನಲ್ಲೇ ಸಂಸ್ಥೆಯ ಮೇಲೆ ಕೆಲವು ಅಪವಾದಗಳೂ ಇವೆ. ಇದಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರೋರ್ವರು ನೀಡಿದ ದೂರಿನ ಸಾರಾಂಶವನ್ನು ‘ಸಮಗ್ರ ಸಮಾಚಾರ’ ಪ್ರಕಟಿಸುತ್ತಿದೆ. ಇತ್ತೀಚೆಗೆ ಸಂಸ್ಥೆಯ ಬಸ್ ಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳೂ ಪೂರಕವಾಗಿವೆ. ನಾನು ದಿನನಿತ್ಯ ಕೆಎಸ್ಆರ್ಟಿಸಿ ಬಸ್ ನಲ್ಲಿ ಓಡಾಡುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಸ್ ಗಳಲ್ಲಿ ಓಡಾಡುವ ವೇಳೆ ಗಮನಿಸಿದ ಹಾಗೂ ಅನುಭವಿಸಿದ ಘಟನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಸಾಮಾನ್ಯವಾಗಿ

ಪಬ್ಲಿಕ್ ಪ್ರಾಬ್ಲಂ, ಪಬ್ಲಿಕ್ ವಾಯ್ಸ್: ಕೆಎಸ್ಆರ್ಟಿಸಿ ಚಾಲಕ- ನಿರ್ವಾಹಕರು ಯಾಕೆ ಹೀಗೆ? Read More »

ಮೂಡಿಗೆರೆ: ಎಂ.ಪಿ.ಕುಮಾರಸ್ವಾಮಿ ಅವರಿಂದ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಸಮಗ್ರ ನ್ಯೂಸ್: ತಾಲೂಕಿನ ಕಡಿದಾಳು ಗ್ರಾಮದ ನೂತನ ಶಾಲಾ ಕಟ್ಟಡ ನಿರ್ಮಾಣ ಹಾಗೂ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಶಾಸಕ ಎಂ ಪಿ ಕುಮಾರಸ್ವಾಮಿ ನೆರವೇರಿಸಿದರು. ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶಾಲೆ ದೇವಾಲಯ ಇದ್ದಂತೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣ ಪ್ರತಿಯೊಬ್ಬ ಮಗುವಿಗೂ ಸಿಕ್ಕಾಗ ಮಾತ್ರ ಗ್ರಾಮಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಮಲೆನಾಡಿನಲ್ಲಿ ಇತ್ತೀಚೆಗೆ ನಿರ್ಮಾಣವಾದ ಆರ್ ಸಿ ಸಿ ಮೇಲ್ಚಾವಣಿ ಇರುವ ಕಟ್ಟಡಗಳು ಶೀತಲಗೊಂಡಿದ್ದು, ಮಲೆನಾಡಿನಲ್ಲಿ ಹಂಚಿನ ಮೇಲ್ಚಾವಣಿ ನಿರ್ಮಾಣ

ಮೂಡಿಗೆರೆ: ಎಂ.ಪಿ.ಕುಮಾರಸ್ವಾಮಿ ಅವರಿಂದ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ Read More »

ಹೊಸವರ್ಷದಿಂದ ಯುವಜನತೆಗೆ ಉಚಿತವಾಗಿ ಸಿಗಲಿದೆ ಕಾಂಡೋಮ್

ಸಮಗ್ರ ನ್ಯೂಸ್: ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್ ಬಳಸಲು ಪ್ರೋತ್ಸಾಹಿಸಲಾಗುತ್ತೆ. ಇದರ ಮಧ್ಯೆ ಫ್ರಾನ್ಸ್ ನ ಯುವ ಜನತೆಗೆ ಹೊಸ ವರ್ಷದಿಂದ ಉಚಿತವಾಗಿ ಕಾಂಡೋಮ್ ವಿತರಿಸಲು ತೀರ್ಮಾನಿಸಲಾಗಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಈ ವಿಷಯ ತಿಳಿಸಿದ್ದು, 18 ರಿಂದ 25 ವಯೋಮಾನದ ಯುವ ಜನತೆಗೆ 2023 ರ ಜನವರಿ 1ರಿಂದ ಉಚಿತವಾಗಿ ಕಾಂಡೋಮ್ ಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಫ್ರಾನ್ಸ್ ನಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಲೈಂಗಿಕವಾಗಿ ಹರಡುವ ರೋಗಗಳು ಶೇಕಡ 30ರಷ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ

ಹೊಸವರ್ಷದಿಂದ ಯುವಜನತೆಗೆ ಉಚಿತವಾಗಿ ಸಿಗಲಿದೆ ಕಾಂಡೋಮ್ Read More »

ಜ.12ರಂದು ಸಿಎಂ ಯೋಗಿ ಆದಿತ್ಯನಾಥ್ ಉಡುಪಿಗೆ

ಸಮಗ್ರ ನ್ಯೂಸ್: ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಜಾಗೃತಿಯ ಪ್ರತೀಕ, ಯುವ ಜನತೆಯ ಪ್ರೇರಣಾ ಶಕ್ತಿ ಸ್ವಾಮಿ ವಿವೇಕಾನಂದ ರವರ ಜನ್ಮ ದಿನ. ಅ ದಿನದಂದು ಆಚರಿಸಲ್ಪಡುವ ‘ರಾಷ್ಟ್ರೀಯ ಯುವ ದಿನಾಚರಣೆ’ಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಯುವ ಸಂಗಮ’ದಲ್ಲಿ ಭಾಗಿಯಾಗಲು ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಜೀ ಯವರು ಉಡುಪಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್

ಜ.12ರಂದು ಸಿಎಂ ಯೋಗಿ ಆದಿತ್ಯನಾಥ್ ಉಡುಪಿಗೆ Read More »

ಡಿ.12ರಿಂದ ಯಶವಂತಪುರ- ಮುರುಡೇಶ್ವರ ವಿಶೇಷ ರೈಲು ಸಂಚಾರ

ಸಮಗ್ರ ನ್ಯೂಸ್: ಪ್ರಯಾಣಿಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಯಶವಂತಪುರ – ಮುರುಡೇಶ್ವರ ನಡುವೆ ಸಾಪ್ತಾಹಿಕ ವಿಶೇಷ ರೈಲು ಆರಂಭಿಸಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಡಿಸೆಂಬರ್ 10 ರಿಂದ ಜನವರಿ 28 ರ ವರೆಗೆ ಯಶವಂತಪುರ ನಿಲ್ದಾಣದಿಂದ ಪ್ರತಿ ಶನಿವಾರ ರಾತ್ರಿ 11.55 ಕ್ಕೆ ಈ ರೈಲು ಹೊರಡಲಿದ್ದು ಮರುದಿನ ಮಧ್ಯಾಹ್ನ 12.55 ಕ್ಕೆ ಮುರುಡೇಶ್ವರ ತಲುಪಲಿದೆ. ಅದೇ ರೀತಿ ಡಿಸೆಂಬರ್ 11 ರಿಂದ ಜನವರಿ 29 ರವರೆಗೆ ಮುರುಡೇಶ್ವರ ನಿಲ್ದಾಣದಿಂದ ಪ್ರತಿ ಭಾನುವಾರ ಮಧ್ಯಾನ 1.30

ಡಿ.12ರಿಂದ ಯಶವಂತಪುರ- ಮುರುಡೇಶ್ವರ ವಿಶೇಷ ರೈಲು ಸಂಚಾರ Read More »