December 2022

ಕುಕ್ಕೆ ಸುಬ್ರಹ್ಮಣ್ಯ: ಪೊಲೀಸ್ ಪೇದೆ ಭೀಮಣ್ಣ ವಾಪಾಸ್ಸಾತಿಗೆ ವಿರೋಧ| ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ ಹಿಂ.ಜಾ.ವೇ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇತ್ತೀಚೆಗೆ ನಡೆದ ಚಂಪಾಷಷ್ಠಿ ಸಂಧರ್ಭದಲ್ಲಿ ವ್ಯಾಪಾರಿ ಯುವಕನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಆರೋಪದಲ್ಲಿ ಅಮಾನತಿನಲ್ಲಿರುವ ಪೊಲೀಸ್ ಪೇದೆ ಭೀಮಣ್ಣ ಮತ್ತೆ ಕಡಬ ಅಥವಾ ಪುತ್ತೂರು ತಾಲೂಕಿನ ಠಾಣೆಗಳಲ್ಲಿ ಕರ್ತವ್ಯಕ್ಕೆ ಹಾಜರಾದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ. ಈ ಕುರಿತು ‘ಸಮಗ್ರ ಸಮಾಚಾರ’ಕ್ಕೆ ಹೇಳಿಕೆ ನೀಡಿರುವ ಹಿಂಜಾವೇ ”ಪೊಲೀಸ್ ಪೇದೆ ಹಿಂದೂ ವ್ಯಾಪಾರಿಗೆ ವಿನಾಃ ಕಾರಣ ಹಲ್ಲೆ ನಡೆಸಿದ್ದು ದೌರ್ಜನ್ಯವೆಸಗಿದ್ದಾರೆ. ಈ ಕುರಿತಂತೆ ಪ್ರಕರಣ […]

ಕುಕ್ಕೆ ಸುಬ್ರಹ್ಮಣ್ಯ: ಪೊಲೀಸ್ ಪೇದೆ ಭೀಮಣ್ಣ ವಾಪಾಸ್ಸಾತಿಗೆ ವಿರೋಧ| ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ ಹಿಂ.ಜಾ.ವೇ Read More »

ನಟ ದರ್ಶನ್ ಅಭಿನಯದ “ಕ್ರಾಂತಿ” ಗೆ ಬಾಯ್ಕಾಟ್ ಬಿಸಿ| ಟ್ವಿಟರ್ ನಲ್ಲಿ ಭಾರೀ ವಿರೋಧ ಮಾಡ್ತಿರೋದು ಯಾಕೆ ಗೊತ್ತಾ?

ಸಮಗ್ರ ನ್ಯೂಸ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಹೇಳಿಕೆ ʼಕ್ರಾಂತಿʼ ಚಿತ್ರಕ್ಕೆ ಮುಳುವಾಗುವಂತಿದೆ. ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ʼಬಾಯ್ಕಾಟ್‌ ಕ್ರಾಂತಿʼ ಎಂಬ ಹ್ಯಾಷ್‌ ಟ್ಯಾಗ್‌ ಸದ್ದು ಮಾಡಲು ಪ್ರಾರಂಭಿಸುತ್ತಿದೆ. ಹೀಗೆ ಮುಂದುವರೆದರೆ ದಚ್ಚು ಸಿನಿಮಾದ ವಿರುದ್ಧ ಬಾಯ್ಕಾಟ್‌ ʼಕ್ರಾಂತಿʼ ಶುರುವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗುತ್ತಿದೆ. ‘ಕ್ರಾಂತಿ’ ಸಿನಿಮಾ ಬಿಡುಗಡೆ ದಿನಾಂಕ ಸಮೀಪಿಸುತ್ತಿದೆ. ನಿನ್ನೆ ತಾನೇ ಚಿತ್ರದ ʼಧರಣಿʼ ಎಂಬ ಹಾಡು ಬಿಡುಗಡೆಯಾಗಿದೆ. ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಿರುವಾಗ ಸಂದರ್ಶನ ಒಂದರಲ್ಲಿ ನಟ ದರ್ಶನ ಹೇಳಿರುವ

ನಟ ದರ್ಶನ್ ಅಭಿನಯದ “ಕ್ರಾಂತಿ” ಗೆ ಬಾಯ್ಕಾಟ್ ಬಿಸಿ| ಟ್ವಿಟರ್ ನಲ್ಲಿ ಭಾರೀ ವಿರೋಧ ಮಾಡ್ತಿರೋದು ಯಾಕೆ ಗೊತ್ತಾ? Read More »

ಲ್ಯುಮೆಸಿಟಿಯನ್ನು ಸ್ವಾಧೀನಪಡಿಸಿಕೊಂಡ ಟೆಕ್ ದೈತ್ಯ ಮೈಕ್ರೋಸಾಫ್ಟ್

ಸಮಗ್ರ ನ್ಯೂಸ್: ಮುಂದಿನ ಪೀಳಿಗೆಯ ಹಾಲೋ ಕೋರ್ ಫೈಬರ್ (HCF) ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರುವ ಲ್ಯುಮೆಸಿಟಿ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಮೈಕ್ರೋಸಾಫ್ಟ್ ಘೋಷಿಸಿದೆ. ಲ್ಯುಮೆಸಿಟಿಯ ನವೀನ HCF ಉತ್ಪನ್ನವು ಜಾಗತಿಕವಾಗಿ ಉದ್ಯಮ ಮತ್ತು ದೊಡ್ಡ ಪ್ರಮಾಣದ ಸಂಸ್ಥೆಗಳಿಗೆ ವೇಗದ, ವಿಶ್ವಾಸಾರ್ಹ ಮತ್ತು ಸುರಕ್ಷಿತ ನೆಟ್‌ವರ್ಕಿಂಗ್ ಅನ್ನು ಸಂಪರ್ಕಿಸಲು ಸಹಾಯಕವಾಗಿದೆ. ಈ ಸ್ವಾಧೀನಪಡಿಸಿಕೊಳ್ಳುವಿಕೆಯು ಮೈಕ್ರೋಸಾಫ್ಟ್ ತನ್ನ ಜಾಗತಿಕ ಕ್ಲೌಡ್ ಮೂಲಸೌಕರ್ಯವನ್ನು ಇನ್ನಷ್ಟು ಉತ್ತಮಗೊಳಿಸುವ ಸಾಮರ್ಥ್ಯವನ್ನು ವಿಸ್ತರಿಸಲು ಸಹಾಯಕವಾಗಲಿದೆ ಮತ್ತು ಅದರ ಕ್ಲೌಡ್ ಪ್ಲಾಟ್‌ಫಾರ್ಮ್ ಮತ್ತು ಸೇವೆಗಳನ್ನು ಗ್ರಾಹಕರಿಗೆ ಕಟ್ಟುನಿಟ್ಟಾದ ಲೇಟೆನ್ಸಿ

ಲ್ಯುಮೆಸಿಟಿಯನ್ನು ಸ್ವಾಧೀನಪಡಿಸಿಕೊಂಡ ಟೆಕ್ ದೈತ್ಯ ಮೈಕ್ರೋಸಾಫ್ಟ್ Read More »

ಪಾನ್‌ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯ| ತೆರಿಗೆ ಇಲಾಖೆಯಿಂದ ಕೊನೆಯ ಗಡುವು

ಸಮಗ್ರ ನ್ಯೂಸ್: ನೀವು ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಬೇಕೆಂದು ವರ್ಷಗಳಿಂದ ಸರ್ಕಾರ ಹೇಳುತ್ತಿದ್ದರೂ ಇನ್ನೂ ಕೂಡ ಹಲವರು ತಮ್ಮ ಪ್ಯಾನ್ ಕಾರ್ಡ್ ಆಧಾರ್ ಲಿಂಕ್ ಮಾಡಿಸಿಲ್ಲ. ಹಾಗಾಗಿ ತೆರಿಗೆ ಇಲಾಖೆಯು ಅವರಿಗೆ ಕೊನೆಯ ಗಡುವು ನೀಡಿದೆ. ವೈಯಕ್ತಿಕ ತೆರಿಗೆದಾರರು ತಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ನೀವು ಹಾಗೆ ಮಾಡದಿದ್ದಲ್ಲಿ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ. 1961 ರ ಆದಾಯ

ಪಾನ್‌ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯ| ತೆರಿಗೆ ಇಲಾಖೆಯಿಂದ ಕೊನೆಯ ಗಡುವು Read More »

ಹತ್ತು ತಿಂಗಳ ಮಗುವನ್ನು ಕಾರಿನಿಂದ ಹೊರಗೆಸೆದು ಕೊಲೆ| ತಾಯಿ ಮೇಲೆ ಲೈಂಗಿಕ ದೌರ್ಜನ್ಯ

ಸಮಗ್ರ ನ್ಯೂಸ್: ಹತ್ತು ತಿಂಗಳ ಹೆಣ್ಣುಮಗುವನ್ನು ಕಾರಿನಿಂದ ಹೊರಕ್ಕೆಸೆದು ತಾಯಿಯ ಮೇಲೆ ಲೈಂಗಿಕ ಕಿರುಕುಳ ಎಸಗಿದ ಪ್ರಕರಣ ಮುಂಬೈ- ಅಹ್ಮದಾಬಾದ್ ಹೆದ್ದಾರಿಯ ಪಾಲ್ಗರ್ ಎಂಬಲ್ಲಿ ಶನಿವಾರ ನಡೆದಿದೆ. ತಾಯಿಯನ್ನೂ ಕಾರಿನಿಂದ ಹೊರಕ್ಕೆ ತಳ್ಳಲಾಗಿದ್ದು, ತಾಯಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ವರದಿ ಮಾಡಿವೆ. ಮಹಿಳೆ ಹಾಗೂ ಆಕೆಯ ಮಗಳು ವಾಡಾ ತಾಲೂಕಿನ ಪೊಶೆರೆ ಎಂಬಲ್ಲಿಗೆ ಕಾರಿನಲ್ಲಿ ಹೋಗುತ್ತಿದ್ದರು. ಇತರ ಕೆಲ ಪ್ರಯಾಣಿಕರ ಜತೆ ಕಾರಿನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ಮಾರ್ಗಮಧ್ಯದಲ್ಲಿ

ಹತ್ತು ತಿಂಗಳ ಮಗುವನ್ನು ಕಾರಿನಿಂದ ಹೊರಗೆಸೆದು ಕೊಲೆ| ತಾಯಿ ಮೇಲೆ ಲೈಂಗಿಕ ದೌರ್ಜನ್ಯ Read More »

ಮಂಗಳೂರು: ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಭಿನ್ನಕೋಮಿನ ಜೋಡಿ| ಸಂಘ ಪರಿವಾರದಿಂದ ನೈತಿಕ ಪೊಲೀಸ್ ಗಿರಿ

ಮಂಗಳೂರು: ನಗರದಲ್ಲಿ ಸಂಶಯಾಸ್ಪದವಾಗಿ ಸುತ್ತಾಟ ನಡೆಸುತ್ತಿದ್ದ ಜೋಡಿಯ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆಗೈದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಮೂಲಕ ನೈತಿಕ ಗಿರಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಂಗಳೂರಿನ ಕೊಟ್ಟಾರದಲ್ಲಿ ತಡರಾತ್ರಿ ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿಯರ ಸುತ್ತಾಟ ನಡೆಸಿದ್ದಾರೆ. ಹಿಂದೂ ಕಾರ್ಯಕರ್ತರು ಇವರನ್ನು ತಡೆದಾಗ ಹೊಟೇಲ್‌ಗೆ ಊಟಕ್ಕೆ ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಘಟನೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರು: ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಭಿನ್ನಕೋಮಿನ ಜೋಡಿ| ಸಂಘ ಪರಿವಾರದಿಂದ ನೈತಿಕ ಪೊಲೀಸ್ ಗಿರಿ Read More »

ಹವಾಮಾನ ವರದಿ; ಡಿ. 12ರವರೆಗೂ ಮುಂದುವರಿಯಲಿದೆ ಮಳೆ; ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಉಂಟಾಗಿರುವ ಮ್ಯಾಂಡೌಸ್‌ ಚಂಡಮಾರುತದ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ ಡಿಸೆಂಬರ್ 12ರ ವರೆಗೆ ಮೋಡ ಕವಿದ ವಾತಾವರಣ, ಚಳಿಯ ಜೊತೆಗೆ ಮಳೆ ಸುರಿಯಲಿದೆ. ಮುಂದಿನ 24 ಗಂಟೆಗಳ ಕಾಲ ದಕ್ಷಿಣ ಒಳನಾಡಿನ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಭಾಗಗಳಲ್ಲಿ ಮೋಡ ಕವಿದ ವಾತಾವರಣ, ಮಳೆ ಚಳಿಯ ವಾತಾವರಣ ಸೃಷ್ಟಿಯಾಗಿದೆ. ನಾಳೆ ಗುಡುಗು ಮತ್ತು ಬಿರುಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ.

ಹವಾಮಾನ ವರದಿ; ಡಿ. 12ರವರೆಗೂ ಮುಂದುವರಿಯಲಿದೆ ಮಳೆ; ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ Read More »

ನಟ ಅನಿರುದ್ಧ್ – ಆರೂರು ಜಗದೀಶ್ ನಡುವಿನ ಭಿನ್ನಾಭಿಪ್ರಾಯ ಸುಖಾಂತ್ಯ| ಸಂಧಾನ ಸಭೆ ಯಶಸ್ವಿ

ಸಮಗ್ರ ನ್ಯೂಸ್: ಕಿರುತೆರೆ ನಿರ್ಮಾಪಕರು, ನಟ ಅನಿರುದ್ಧ್ ವಿವಾದ ಸುಖಾಂತ್ಯ ಕಂಡಿದೆ. ಅಸಮಾಧಾನ ಮರೆತು ಅನಿರುದ್ಧ್ ಮತ್ತು ನಿರ್ಮಾಪಕ, ನಿರ್ದೇಶಕ ಆರೂರು ಜಗದೀಶ್ ಒಂದಾಗಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದಲೂ ನಡೆಯುತ್ತಿದ್ದ ಜಟಾಪಟಿಗೆ ಅಧಿಕೃತವಾಗಿ ತೆರೆ ಬಿದ್ದಿದೆ. ಬೆಂಗಳೂರಿನಲ್ಲಿ ಹಿರಿಯರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ನಿರ್ದೇಶಕ ಪಿ. ಶೇಷಾದ್ರಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಸಭೆಯಲ್ಲಿ ಅನಿರುದ್ಧ್, ಕಿರುತೆರೆ ನಿರ್ಮಾಪಕ ಆರೂರು ಜಗದೀಶ್, ಕಿರುತೆರೆ ನಿರ್ಮಾಪಕರು, ನಿರ್ದೇಶಕರು, ಕರ್ನಾಟಕ ಟೆಲಿವಿಜನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್

ನಟ ಅನಿರುದ್ಧ್ – ಆರೂರು ಜಗದೀಶ್ ನಡುವಿನ ಭಿನ್ನಾಭಿಪ್ರಾಯ ಸುಖಾಂತ್ಯ| ಸಂಧಾನ ಸಭೆ ಯಶಸ್ವಿ Read More »

ಮ್ಯಾಂಡಸ್ ಅಬ್ಬರ; ತಮಿಳುನಾಡು ತತ್ತರ| ಜನಜೀವನ ಅಸ್ತವ್ಯಸ್ತ, ನಾಲ್ಕು ಸಾವು

ಸಮಗ್ರ ನ್ಯೂಸ್: ಬಂಗಾಳಕೊಲ್ಲಿ ಸೃಷ್ಟಿಯಾಗಿರುವ ಮ್ಯಾಂಡಸ್‌ ಚಂಡಮಾರುತ ತಮಿಳುನಾಡು ಕಡಲ ತೀರಕ್ಕೆ ಅಪ್ಪಳಿಸಿದ್ದು, ಭಾರಿ ಅನಾಹುತ ಸೃಷ್ಟಿಸಿದೆ. 70 ಕಿ.ಮೀ. ವೇಗದಲ್ಲಿ ಚಲಿಸುತ್ತಿರುವ ಗಾಳಿಯಿಂದಾಗಿ ಭಾರಿ ಮಳೆ ಸುರಿದಿದ್ದು, ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಂಡಮಾರುತ ಆಂಧ್ರಪ್ರದೇಶದತ್ತ ಚಲಿಸಿದ್ದು, ಅಲ್ಲೂ ಸಹ ಮಳೆಯಾಗುತ್ತಿದೆ. ಆದರೆ, ಅಪ್ಪಳಿಸಿದ ಬಳಿಕ ಚಂಡಮಾರುತವು ವಾಯುಭಾರ ಕುಸಿತವಾಗಿ ಮಾರ್ಪಾಟಾಗಿದ್ದು, ಮೊದಲಿನ ತೀವ್ರತೆ ಕಳೆದುಕೊಂಡಿದೆ. ಹೀಗಾಗಿ ಇನ್ನು ಮಳೆ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚೆನ್ನೈ ನಗರದಲ್ಲಿ ಸುಮಾರು 400ಕ್ಕೂ

ಮ್ಯಾಂಡಸ್ ಅಬ್ಬರ; ತಮಿಳುನಾಡು ತತ್ತರ| ಜನಜೀವನ ಅಸ್ತವ್ಯಸ್ತ, ನಾಲ್ಕು ಸಾವು Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ. ಡಿಸೆಂಬರ್‌ 11ರಿಂದ ಡಿಸೆಂಬರ್‌ 17ರ ತನಕ ವಾರ ಭವಿಷ್ಯ ಹೇಗಿದೆ ನೋಡಿ: ಮೇಷ ರಾಶಿ: ನಿಮ್ಮ ಸಂಗಾತಿ ಈ ವಾರ ನಿಮ್ಮ ನಡವಳಿಕೆಯ ಬಗ್ಗೆ ತುಂಬಾ ಖುಷಿಪಡಬಹುದು. ಧನಾತ್ಮಕ ಶಕ್ತಿಗಳು ನಿಮಗೆ ಉತ್ತಮವಾಗಿವೆ. ಈ ವಾರ ನಿಮ್ಮ ಕೆಲಸದಲ್ಲಿ ನಿಮ್ಮ

ದ್ವಾದಶ ರಾಶಿಗಳ ವಾರಭವಿಷ್ಯ Read More »