ಸಮಗ್ರ ನ್ಯೂಸ್: ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಹರಾಜು ಮುಕ್ತಾಯಗೊಂಡಿದೆ. 8.75 ಕೋಟಿ ರೂಪಾಯಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಲ್ಲಿ ಬೇಡಿಕೆ ಆಟಗಾರರ ಖರೀದಿಗೆ ಮನಸ್ಸು ಮಾಡಲಿಲ್ಲ. ಇದಕ್ಕೆ ಹಣದ ಅಭಾವ ಪ್ರಮುಖ ಕಾರಣವಾಗಿತ್ತು.
ಹೀಗಾಗಿ ಅಂತಿಮ ಹಂತದಲ್ಲಿ ಮೂಲ ಬೆಲೆಯ ಅಸುಪಾಸಿನಲ್ಲಿ ಆಟಗಾರರ ಖರೀದಿಸಿದ ಕೋಟಾ ಭರ್ತಿ ಮಾಡಿಕೊಂಡಿದೆ. ಸಮರ್ಥ ಬ್ಯಾಟ್ಸ್‌ಮನ್ ಹುಡುಕಾಟದಲ್ಲಿದ್ದ ಆರ್‌ಸಿಬಿ 3.2 ಕೋಟಿ ರೂಪಾಯಿ ನೀಡಿ ವಿಲ್ಸ್ ಜಾಕ್ಸ್‌ನ ತಂಡಕ್ಕೆ ಸೇರಿಸಿಕೊಂಡಿದೆ. ಒಟ್ಟು 7 ಆಟಗಾರರನ್ನು ಆರ್‌ಸಿಬಿ ಖರೀದಿ ಮಾಡಿದೆ. ಇದರಲ್ಲಿ ಕರ್ನಾಟಕ ಮೂಲದ ಮನೋಜ್ ಭಂಡಾಜೆ ಕೂಡ ಸೇರಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇದೀಗ ಒಟ್ಟು 25 ಆಟಗಾರರಿದ್ದಾರೆ. ಇದರಲ್ಲಿ 17 ಭಾರತೀಯ ಆಟಗಾರರು ಹಾಗೂ 8 ವಿದೇಶಿ ಆಟಗಾರರು ಸೇರಿದ್ದಾರೆ. ಸದ್ಯ ಆರ್‌ಸಿಬಿ ಬಳಿ 1.75 ಕೋಟಿ ರೂಪಾಯಿ ಬಾಕಿ ಉಳಿದಿದೆ.
ಐಪಿಎಲ್ ಹರಾಜು 2023ರಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರ ವಿವರ:
ವಿಲ್ ಜಾಕ್ಸ್, 3.2 ಕೋಟಿ ರೂಪಾಯಿ
ರೀಸ್ ಟಾಪ್ಲೆ, 1.90 ಕೋಟಿ ರೂಪಾಯಿ
ಹಿಮಾಂಶು ಶರ್ಮಾ, 20 ಲಕ್ಷ ರೂಪಾಯಿ
ಮನೋಜ್ ಭಂಡಾಜೆ, 20 ಲಕ್ಷ ರೂಪಾಯಿ
ರಾಜನ್ ಕುಮಾರ್, 70 ಲಕ್ಷ ರೂಪಾಯಿ
ಸೋನು ಯಾದವ್, 20 ಲಕ್ಷ ರೂಪಾಯಿ
ಅವಿನಾಶ್ ಸಿಂಗ್, 60 ಲಕ್ಷ ರೂಪಾಯಿ
ಆರ್‌ಸಿಬಿ ತನ್ನಲ್ಲೇ ಉಳಿಸಿಕೊಂಡಿರುವ ಆಟಗಾರರ ವಿವರ: ಫಾಫ್ ಡುಪ್ಲಸಿಸ್(ನಾಯಕ), ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ವಾನಿಂಡು ಹಸರಂಗ, ದಿನೇಶ್ ಕಾರ್ತಿಕ್, ಶಹಬಾಜ್ ಅಹಮ್ಮದ್, ಅನೂಜ್ ರಾವತ್, ಅಕಾಶ್ ದೀಪ್, ಜೋಶ್ ಹೇಜಲ್‌ವುಡ್, ಮಹಿಪಾಲ್ ಲೊಮ್ರೊರ್, ಫಿನ್ ಅಲೆನ್, ಕರಣ್ ಶರ್ಮಾ, ಸಿದ್ದಾರ್ಥ್ ಕೌಲ್, ಡೇವಿಡ್ ವಿಲೆ, ರಜತ್ ಪಾಟಿದಾರ್.
ಕಳೆದ 15 ಆವತ್ತಿಗಳಲ್ಲಿ ಆರ್‌ಸಿಬಿ ತಂಡಕ್ಕೆ ಟ್ರೋಫಿ ಮರೀಚಿಕೆಯಾಗಿದೆ. ಪ್ರತಿ ಬಾರಿ ಈ ಸಲ್ ಕಪ್ ನಮ್ದೆ ಅನ್ನೋ ಅಭಿಮಾನಿಗಳು ಇದೀಗ 2023ರ ಐಪಿಎಲ್ ಆವೃತ್ತಿ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫಾಫ್ ಡುಪ್ಲಸಿಸ್ ನೇತೃತ್ವದ ಆರ್‌ಸಿಬಿ ಗೆಲುವಿನ ನಗೆ ಬೀರಲಿದೆ ಎಂಬ ವಿಶ್ವಾಸ ಹೆಚ್ಚಿದೆ.