Ad Widget .

ಸುಳ್ಯ: ಯುವ ಉದ್ಯಮಿ ನವೀನ್ ಮಲ್ಲಾರ ಅಪಹರಣ| ಸುಂಟಿಕೊಪ್ಪದಲ್ಲಿ ಕಿಡ್ನಾಪರ್ಸ್ ಗಳ ವಾಹನಕ್ಕೆ ತಡೆ; ಪೊಲೀಸರಿಗೆ ಹಸ್ತಾಂತರ

ಸಮಗ್ರ ನ್ಯೂಸ್: ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಕಾಮಧೇನು ಅವರನ್ನು ಅಪರಿಚಿತ ತಂಡವೊಂದು ಬಂದು ಬಲವಂತವಾಗಿ ಆಂಬ್ಯುಲೆನ್ಸ್ ನಲ್ಲಿ ಅಪಹರಣ ಮಾಡಿದ್ದು, ಕಿಡ್ನಾಪರ್ ಗಳ ವಾಹನಕ್ಕೆ ಸುಂಟಿಕೊಪ್ಪದಲ್ಲಿ ತಡೆಯೊಡ್ಡಲಾಗಿದೆ.

Ad Widget . Ad Widget .

ಮನೆಗೆ ಬಂದ ತಂಡವೊಂದು ಮನೆಯಲ್ಲಿದ್ದ ನವೀನ್ ಅವರನ್ನು ಬಲವಂತವಾಗಿ ಕೊಂಡೊಯ್ದಿದ್ದು, ತಡೆದ ತಾಯಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿತ್ತು.

Ad Widget . Ad Widget .

ಇತ್ತೀಚಿನ ಮಾಹಿತಿಯಂತೆ, ಇವರನ್ನು ಆಂಬ್ಯುಲೆನ್ಸ್ ನಲ್ಲಿ‌ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಶಿವ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಬಳಿ ಅಲ್ಲಿಯ ಆಂಬ್ಯಲೆನ್ಸ್ ನವರು ಬೆಳ್ಳಾರೆಯಿಂದ ಹೋದ ಆಂಬ್ಯುಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಸುಂಟಿಕೊಪ್ಪ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *