Ad Widget .

ದ.ಕ ಜಿಲ್ಲೆಯ 10 ಕಡೆಗಳಲ್ಲಿ ‘ನಮ್ಮ ಕ್ಲಿನಿಕ್’ ಆರಂಭ |ಇನ್ಮುಂದೆ ಬಿಪಿಎಲ್‌ ನಾಗರಿಕರಿಗೆ ಸಿಗಲಿದೆ ಶೀಘ್ರ ಸೇವೆ

ಸಮಗ್ರ ನ್ಯೂಸ್: ಬಡತನ ರೇಖೆಗಿಂತ ಕೆಳಗಿರುವವರಿಗೆ ಆರೋಗ್ಯ ಸೇವೆ ಸಿಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಆರಂಭಿಸಿದ ನಮ್ಮ ಕ್ಲಿನಿಕ್ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ಕಡೆಗಳಲ್ಲಿ ಏಕಕಾಲದಲ್ಲೇ ಲೋಕಾರ್ಪಣೆಗೊಂಡಿದೆ.

Ad Widget . Ad Widget .

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೀನಕಳೀಯ (ಬೈಕಂಪಾಡಿ), ಬೋಳೂರು, ಸೂಟರ್ ಪೇಟೆ, ಹೊಯಿಗೆಬಜಾರ್, ಕೋಡಿಕಲ್, ಪಚ್ಚನಾಡಿ, ಉಳ್ಳಾಲ ನಗರ ವ್ಯಾಪ್ತಿಯಲ್ಲಿ ಕೆರೆಬೈಲು, ಮೂಡಬಿದ್ರೆ ನಗರ ವ್ಯಾಪ್ತಿಯಲ್ಲಿ ಗಂಟಲ್ಕಟ್ಟೆ, ಕಡಬ ನಗರ ವ್ಯಾಪ್ತಿಯಲ್ಲಿ ಕೋಡಿಂಬಾಳ ಹಾಗು ಸುಳ್ಯ ನಗರ ವ್ಯಾಪ್ತಿಯಲ್ಲಿ ದುಗ್ಗಲಡ್ಕಗಳಲ್ಲಿ ಕಾರ್ಯಾರಂಭಿಸಿದೆ.

Ad Widget . Ad Widget .

ಸುಳ್ಯ ,ಕಡಬ ತಾಲೂಕುಗಳಲ್ಲಿ ಸಚಿವ ಎಸ್. ಅಂಗಾರ, ಮಂಗಳೂರು ಪಚ್ಚನಾಡಿಯಲ್ಲಿ ಶಾಸಕ ಭರತ್ ಶೆಟ್ಟಿ, ಮೂಡಬಿದ್ರೆಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಸೇರಿದಂತೆ ಆಯಾ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ಕುಮಾರ್, ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ರಾಜೇಶ್, ಕಡಬ ತಾಲೂಕು ತಹಶಿಲ್ದಾರ್ ರಮೇಶ್ ಬಾಬು, ಸುಳ್ಯ ತಾಲೂಕು ವೈದ್ಯಾಧಿಕಾರಿ ನಂದಕುಮಾರ್ ನಮ್ಮ ಕ್ಲಿನಿಕ್​ಗೆ ಚಾಲನೆ ನೀಡಿ ಶುಭ ಹಾರೈಸಿದರು.

Leave a Comment

Your email address will not be published. Required fields are marked *