Ad Widget .

ರಾಷ್ಟ್ರೀಯ ಪಕ್ಷವಾಗಿ ಆಮ್ ಆದ್ಮಿ ಪಾರ್ಟಿ ಪರಿವರ್ತನೆ

ಸಮಗ್ರ ನ್ಯೂಸ್: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಗಳಿಕೆಯಾದ ಮತಗಳ ಪ್ರಮಾಣದಿಂದ ಅಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಪರಿವರ್ತನೆಯಾಗಲಿದೆ. ಈಗಾಗಲೇ ದೆಹಲಿ ಮತ್ತು ಪಂಜಾಬ್ ಸೇರಿ ಎರಡೂ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿದಿದ್ದು, ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಭೂತಪೂರ್ವ ಬೆಂಬಲ ಗಳಿಸಿದೆ.

Ad Widget . Ad Widget .

ಸತತವಾಗಿ ಚುನಾವಣೆಗಳಲ್ಲಿ ಗಳಿಸಿದ ಮತಗಳಿಂದಾಗಿ ರಾಷ್ಟ್ರೀಯ ಪಕ್ಷವಾಗುವ ಅರ್ಹತೆಯನ್ನು ಅಮ್ ಆದ್ಮಿ ಪಡೆದುಕೊಂಡಿದೆ. 2012ರಲ್ಲಿ ಸರಿಯಾಗಿ 10 ವರ್ಷಗಳ ಹಿಂದೆ ಆರಂಭಗೊಂಡು ಆಪ್ ಹೆಸರಿನಿಂದ ರಾಜಕೀಯ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ಅಮ್ ಆದ್ಮಿ ಹಂತ ಹಂತವಾಗಿ ಪ್ರಚಲಿತವಾಗುತ್ತಿದೆ.

Ad Widget . Ad Widget .

ಪಂಜಾಬ್ ವಿಧಾನಸಭೆಯಲ್ಲಿ ಶೇ.18.3ರಷ್ಟು, ದೆಹಲಿ ವಿಧಾನಸಭೆಯಲ್ಲಿ ಶೇ.23ರಷ್ಟು ಮತ ಗಳಿಸಿತ್ತು. ಗೋವಾ ಚುನಾವಣೆಯಲ್ಲಿ ಶೇ.0.5ರಷ್ಟು ಮತ ಗಳಿಸಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಶೇ. 2.1ರಷ್ಟು, 2019ರ ಚುನಾವಣೆಯಲ್ಲಿ 0.4ರಷ್ಟು ಮತ ಗಳಿಸಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಇದುವರೆಗಿನ ಫಲಿತಾಂಶದ ಪ್ರಕಾರ ಅಮ್ ಆದ್ಮಿ ಶೇ.12ರಷ್ಟು ಮತಗಳಿಸಿದೆ.

Leave a Comment

Your email address will not be published. Required fields are marked *