ಸಮಗ್ರ ನ್ಯೂಸ್: ಮದ್ಯಪಾನ , ಡ್ರಗ್ಸ್, ಶಸ್ತ್ರಾಸ್ತ್ರಗಳು ಮತ್ತು “ದರೋಡೆಕೋರ ಅಥವಾ ಗನ್ ಸಂಸ್ಕೃತಿ”ಯನ್ನು ವೈಭವೀಕರಿಸುವ ಹಾಡುಗಳನ್ನು ಹಾಕದಂತೆ ಖಾಸಗಿ ಎಫ್‌ಎಂ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಇಲ್ಲದಿದ್ದರೆ ಖಾಸಗಿ ಎಫ್‌ಎಂ ಚಾನೆಲ್‌ಗಳಿಗೆ ಅನುಮತಿಗಳನ್ನು ಸಸ್ಪೆಂಡ್ ಮಾಡುವುದು ಮುಂತಾದ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಿದೆ.
ಕೆಲವು ಎಫ್‌ಎಂ ರೇಡಿಯೊ ಚಾನೆಲ್‌ಗಳು ಮದ್ಯ, drugs ಶಸ್ತ್ರಾಸ್ತ್ರಗಳು, ದರೋಡೆಕೋರರು ಮತ್ತು ಗನ್ ಸಂಸ್ಕೃತಿಯನ್ನ ವೈಭವೀಕರಿಸುವ ಹಾಡುಗಳನ್ನ ಪ್ರಸಾರ ಮಾಡುವುದನ್ನ ಸಚಿವಾಲಯ ಗಮನಿಸಿದ್ದು ಎಚ್ಚರಿಕೆ ನೀಡಿದೆ. ಸಲಹೆಯನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ಹೇಳಿದೆ.
ಆಲ್ಕೊಹಾಲ್, ಡ್ರಗ್ಸ್, ಗನ್ ಸಂಸ್ಕೃತಿ ಸೇರಿದಂತೆ ಸಾಮಾಜಿಕ ವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸುವ ಯಾವುದೇ ವಿಷಯವನ್ನು ಪ್ರಸಾರ ಮಾಡುವಂತಿಲ್ಲ. ನಿಯಮಗಳು ಮತ್ತು ಷರತ್ತುಗಳನ್ನ ಕಟ್ಟುನಿಟ್ಟಾಗಿ ಅನುಸರಿಸಲು ಸಚಿವಾಲಯ ರೆಡಿಯೋ ಚಾನೆಲ್ ಗಳಿಗೆ ನಿರ್ದೇಶನ ನೀಡಿದೆ.
ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ಸೂಚನೆಯನ್ನಅನುಸರಿಸಿ ಇಂಥಹ ವಿಷಯಗಳು ಪ್ರಭಾವಶಾಲಿ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಇದು ದರೋಡೆಕೋರರ ಸಂಸ್ಕೃತಿಗೆ ಕಾರಣವಾಗುತ್ತದೆ ಎಂದು ಸಚಿವಾಲಯ ಅಭಿಪ್ರಾಯ ಪಟ್ಟಿದೆ