ಸುಳ್ಯ: ಮತ್ತೆ ಲಘು‌ ಭೂಕಂಪನ

ಸಮಗ್ರ ನ್ಯೂಸ್: ಕೆಲದಿನಗಳಿಂದ ತಣ್ಣಗಾಗಿದ್ದ ಭೂಮಿ ಸುಳ್ಯದಲ್ಲಿ ಮತ್ತೆ ಕಂಪಿಸಿರುವ ಬಗ್ಗೆ ವರದಿಯಾಗಿದೆ. ತಾಲೂಕಿನ ಮಡಪ್ಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಭೂಕಂಪನವಾದ ಘಟನೆ ಗುರುವಾರ ಸಂಜೆ ವೇಳೆಗೆ ನಡೆದಿದೆ.

Ad Widget ... ..

ಮಡಪ್ಪಾಡಿ ಗ್ರಾಮದ ಕಡ್ಯ, ಹಾಡಿಕಲ್ಲು, ಮಡಪ್ಪಾಡಿ ಪೇಟೆ ಹಾಗೂ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ನಡುಗಿದ ಅನುಭವವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Ad Widget

Leave a Comment

Your email address will not be published. Required fields are marked *