ಸಮಗ್ರ ನ್ಯೂಸ್: ಮೂವರು ಮಕ್ಕಳಿಗೆ ವಿಷವುಣಿಸಿ ತಾಯಿ ನೇಣಿಗೆ ಕೊರಳೊಡ್ಡಿರುವ ದಾರುಣ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ಇಂದು ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಮಹಾವೀರ ಚಿತ್ರಮಂದಿರದ ಹಿಂಭಾಗದಲ್ಲಿ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬದ ಉಸ್ನಾ ಕೌಸರ್ ಬಿನ್ ಆಖಿಲ್ ಅಹಮ್ಮದ್( 30) ಮದ್ದೂರು ಮೆಡಿಕಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ತನ್ನ ಮೂವರು ಮಕ್ಕಳಾದ ಹಾರಿಸ್ ಗಂಡು (7) ವರ್ಷ, ಅಲೀಸಾ ಹೆಣ್ಣು ( 4 )ವರ್ಷ, ಅನಮ್ ಫಾತಿಮಾ ಹೆಣ್ಣು (2) ವರ್ಷ ಸಾವಿಗೀಡಾದ ದುರ್ದೈವಿಗಳು.
ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಮದ್ದೂರು ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.