November 2022

ಮತ್ತೊಂದು ಕುಕ್ಕರ್ ಬಾಂಬ್; ಸ್ವಲ್ಪದರಲ್ಲೇ ತಪ್ಪಿತು ಭಾರೀ ಅನಾಹುತ

ಸಮಗ್ರ ನ್ಯೂಸ್: ಸೇನಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.ಶೋಪಿಯಾನ್ ನ ಇಮಾಮ್ ಸಾಹೇಬ್ ನಲ್ಲಿ ಐಇಡಿ ಕುಕ್ಕರ್ ಬಾಂಬ್ ಪತ್ತೆಯಾಗಿದೆ. ಕುಕ್ಕರ್ ಬಾಂಬ್ ಸ್ಪೋಟಗೊಂಡಿದ್ದರೆ ಬಾರಿ ಅನಾಹುತವೇ ಸಂಭವಿಸುತ್ತಿತ್ತು. ಸೇನಾ ಸಿಬ್ಬಂದಿ ಸಕಾಲಿಕ ಕ್ರಮದಿಂದ ಅನಾಹುತ ತಪ್ಪಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶುಕ್ರವಾರ ಶೋಪಿಯಾನ್ ಪೊಲೀಸ್ ಮತ್ತು ಭಾರತೀಯ ಸೇನೆಯ 44 ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆಯಲ್ಲಿ, ಶೋಪಿಯಾನ್‌ನ ಇಮಾಸಾಹಿಬ್‌ನಲ್ಲಿ ಕುಕ್ಕರ್‌ನಲ್ಲಿ ಅಳವಡಿಸಲಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ) […]

ಮತ್ತೊಂದು ಕುಕ್ಕರ್ ಬಾಂಬ್; ಸ್ವಲ್ಪದರಲ್ಲೇ ತಪ್ಪಿತು ಭಾರೀ ಅನಾಹುತ Read More »

ಮಂಗಳೂರು: ಭಿನ್ನ ಕೋಮಿನ ಲವ್ ಬರ್ಡ್ಸ್ ಗೆ ಹಲ್ಲೆ; ಯುವಕನಿಂದ ದೂರು

ಸಮಗ್ರ ನ್ಯೂಸ್: ಬಸ್ ನಲ್ಲಿ ಹಿಂದೂ ಯುವತಿ ಜೊತೆ ಬರುತ್ತಿದ್ದ ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಹಲ್ಲೆಗೊಳಗಾದ ಯುವಕ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಗಳೂರಿನ ನಂತೂರು ಸರ್ಕಲ್ ಬಳಿ ನಿನ್ನೆ(ನ.24) ಘಟನೆ ನಡೆದಿದೆ. ಕಾರ್ಕಳದಿಂದ ಬಸ್ ನಲ್ಲಿ ಬರುತ್ತಿದ್ದ ಅನ್ಯಕೋಮಿನ ಯುವಕ ಮತ್ತು ಹಿಂದೂ ಯುವತಿಯನ್ನು ನಗರದ ನಂತೂರಿನಲ್ಲಿ ಬಸ್ಸನ್ನು ತಡೆದು ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಯುವಕ ಮತ್ತು

ಮಂಗಳೂರು: ಭಿನ್ನ ಕೋಮಿನ ಲವ್ ಬರ್ಡ್ಸ್ ಗೆ ಹಲ್ಲೆ; ಯುವಕನಿಂದ ದೂರು Read More »

15 ವರ್ಷಕ್ಕಿಂತ ಹಳೆಯ ವಾಹನಗಳು ಗುಜುರಿಗೆ

ನಾಗಪುರ: 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ವಾಹನಗಳನ್ನು ಗುಜರಿ ಹಾಕಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ನಾಗಪುರದಲ್ಲಿ ವಾರ್ಷಿಕ ಕೃಷಿ-ವಿಷನ್, ಕೃಷಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು, ಭಾರತ ಸರ್ಕಾರಕ್ಕೆ ಸೇರಿದ 15ಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಸ್ಕ್ರ್ಯಾಪ್ ನೀತಿಯನ್ನು ಎಲ್ಲಾ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದರು. ಕೇಂದ್ರಕ್ಕೆ ಸಂಬಂಧಿಸಿದ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಕಡತವೊಂದಕ್ಕೆ ಈಗಾಗಲೇ ನಾನು ಸಹಿ ಹಾಕಿದ್ದೇನೆ. ರಾಜ್ಯಗಳು ಕೂಡಾ ಇದನ್ನು

15 ವರ್ಷಕ್ಕಿಂತ ಹಳೆಯ ವಾಹನಗಳು ಗುಜುರಿಗೆ Read More »

ಫೀಫಾ ವಿಶ್ವಕಪ್ ನ ಮೆಡಿಕಲ್ ಟೀಂನಲ್ಲಿ ಕರಾವಳಿ ಕುವರಿ|

ಸಮಗ್ರ ನ್ಯೂಸ್: ಕತಾರ್ ದೇಶದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಮೆಡಿಕಲ್ ತಂಡದೊಂದಿಗೆ ಸೇವೆ ಸಲ್ಲಿಸಲು ತುಳುನಾಡಿನ ಮಹಿಳೆಯೊರ್ವರು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರ ಪತ್ನಿ ಪ್ರತಿಭಾ ಎನ್.ದರ್ಖಾಸು ಎಂಬವರು ಇದೀಗ ಕತಾರಿನ ವಿಶ್ವಕಪ್ ಮೆಡಿಕಲ್ ಟೀಮಿನಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದವರು. ಈ ಮೂಲಕ ಇವರು ವಿಶ್ವಕಪ್ ಮೆಡಿಕಲ್ ಟೀಮಿಗೆ ಆಯ್ಕೆಯಾದ ಕರ್ನಾಟಕದ ಏಕೈಕ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.ಪ್ರತಿಭಾ ಅವರು ಕತಾರಿನ ಹಾಮದ್ ಮೆಡಿಕಲ್

ಫೀಫಾ ವಿಶ್ವಕಪ್ ನ ಮೆಡಿಕಲ್ ಟೀಂನಲ್ಲಿ ಕರಾವಳಿ ಕುವರಿ| Read More »

‘ಕಾಂತಾರ’ ಚಿತ್ರತಂಡಕ್ಕೆ ಜಯ| ‘ವರಾಹರೂಪಂ’ ಹಾಡು ಬಳಸಲು ಕೋರ್ಟ್ ಅನುಮತಿ

ಸಮಗ್ರ ನ್ಯೂಸ್: ‘ಕಾಂತಾರ’ ಸಿನಿಮಾದ ‘ವರಾಹರೂಪಂ’ ಹಾಡಿನ ವಿರುದ್ದ ಮೆಟ್ಟಿಲೇರಿದ್ದ ಕೇರಳದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ವರಾಹಂ ರೂಪಂ ಹಾಡು ಬಳಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದ ಕೋಜಿಕ್ಕೋಡ್ ನ್ಯಾಯಾಲಯ ವಿವಾದದ ಬಗ್ಗೆ ಅಂತಿಮ ಆದೇಶ ಹೊರಡಿಸಿದ್ದು, ತೈಕ್ಕುಡಂ ಬ್ರಿಡ್ಜ್ ಹಾಕಿದ್ದ ಅರ್ಜಿಯನ್ನೇ ವಜಾ ಮಾಡಿದೆ. ಕಾಂತಾರ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿದ ಬೆನ್ನಲ್ಲೇ ತೈಕ್ಕುಡಂ ಬ್ರಿಡ್ಜ್ ತಂಡದವರು ವರಾಹಂ ರೂಪಂ ಹಾಡಿನ ಬಗ್ಗೆ ಅಪಸ್ವರ ಎತ್ತಿ ಕೋರ್ಟ್ ಮೆಟ್ಟಿಲೇರಿದ್ದರು. ತಾವು ಮಾಡಿದ್ದ

‘ಕಾಂತಾರ’ ಚಿತ್ರತಂಡಕ್ಕೆ ಜಯ| ‘ವರಾಹರೂಪಂ’ ಹಾಡು ಬಳಸಲು ಕೋರ್ಟ್ ಅನುಮತಿ Read More »

ಕಾಫಿನಾಡಲ್ಲಿ ಫಾರೆಸ್ಟ್‌ ಆಫೀಸ್ ಪುಡಿ…ಪುಡಿ

ಸಮಗ್ರ ನ್ಯೂಸ್: ಆನೆಯ ನಿರಂತರ ದಾಳಿಯಿಂದ ಕಂಗೆಟ್ಟಿರುವ ಮಲೆನಾಡಿಗರುಕಳ್ಳ ಬೇಟೆ ನಿಗ್ರಹ ಶಿಬಿರವನ್ನ ಧ್ವಂಸ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ. ನಾಲ್ಕು ದಿನದ ಹಿಂದೆ ಆನೆ ದಾಳಿಗೆ 35 ವರ್ಷದ ಮಹಿಳೆ ಸಾವನ್ನಪ್ಪಿದ್ದಳು ಈ ಹಿನ್ನೆಲೆ ಆನೆ ದಾಳಿಯನ್ನ ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ರೋಷಾವೇಶ ಮೆರೆದಿದ್ದಾರೆ. ಈ ವೇಳೆ ಕಳ್ಳ ಬೇಟೆ ನಿಗ್ರಹ ಶಿಬಿರದಲ್ಲಿ ಕೈಗೆ ಸಿಕ್ಕ… ಸಿಕ್ಕ… ವಸ್ತುಗಳನ್ನೆಲ್ಲಾ ಪುಡಿ ಮಾಡಿದ ಆಕ್ರೋಶಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಅರಣ್ಯ

ಕಾಫಿನಾಡಲ್ಲಿ ಫಾರೆಸ್ಟ್‌ ಆಫೀಸ್ ಪುಡಿ…ಪುಡಿ Read More »

ಹುಲಿ ದಾಳಿಗೆ ಮೂರು ಹಸುಗಳು ಬಲಿ|ಕಾಫಿನಾಡಲ್ಲಿ ಮುಂದುವರೆದ ಹುಲಿಯ ಅಟ್ಟಹಾಸ

ಸಮಗ್ರ ನ್ಯೂಸ್: ಕೊಟ್ಟಿಗೆಹಾರದ ಭಾರತಿಬ್ಯೆಲು ಕನ್ನಗೆರೆ ಕಣ್ಣ ಕಾಪಿ ಎಸ್ಟೇಟ್ ನಲ್ಲಿ ರಾತ್ರಿ ಸಮಯದಲ್ಲಿ ಹುಲಿ ಸುಮಾರು ಮೂರು ಹಸುಗಳನ್ನು ಬೇಟೆಯಾಡಿದ್ದು. ಅಲ್ಲದೆ ಒಂದು ಕರುವನ್ನು ಬೇಟೆಯಾಡಿದ ಘಟನೆ ನಡೆದಿದೆ. ಇವುಗಳಲ್ಲಿ ಒಂದು ಹಸು ಜೀವ ಉಳಿಸಿಕೊಂಡು ಕನ್ನಗೆರೆ ಗ್ರಾಮಕ್ಕೆ ಓಡಿ ಬಂದಿದ್ದು ಇನ್ನೆರಡು ಹಸುಹಾಗು ಒಂದು ಕರು ಪ್ರಾಣ ಬಿಟ್ಟಿದ್ದು ಒಂದನ್ನು ಬಾಗಶಂ ತಿಂದಿದೆ. ಅದರಲ್ಲಿ ಒಂದು ಹಸು ಗರ್ಭ ಧರಿಸಿದ್ದು ಹೊಟ್ಟೆಯಿಂದ ಕರವನ್ನು ಹೊರಹಾಕಿ ತಿಂದಿರುವ ಭಯಾನಕ ದೃಶ್ಯವನ್ನು ಗ್ರಾಮಸ್ಥರು ಕಂಡು ಬೆಚ್ಚಿಬಿದ್ದಿದ್ದು. ಈ

ಹುಲಿ ದಾಳಿಗೆ ಮೂರು ಹಸುಗಳು ಬಲಿ|ಕಾಫಿನಾಡಲ್ಲಿ ಮುಂದುವರೆದ ಹುಲಿಯ ಅಟ್ಟಹಾಸ Read More »

ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಯಾಯ್ತು ಬಪ್ಪನಾಡು ದೇಗುಲ!

ಸಮಗ್ರ ನ್ಯೂಸ್: ಮೂಲ್ಕಿ ಸಮೀಪದ ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಕರ್ನಾಟಕ ರಾಜ್ಯದ ಪ್ರವಾಸಿ ತಾಣಗಳ ಸೇರ್ಪಡೆಯಾಗಿದ್ದು ಭಕ್ತರ ಹರ್ಷಕ್ಕೆ ಕಾರಣವಾಗಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಗುರುತಿಸಿರುವ ಪ್ರವಾಸಿ ತಾಣಗಳ ಪಟ್ಟಿಗೆ ಬಪ್ಪನಾಡು ದೇವಸ್ಥಾನವನ್ನು ಸೇರ್ಪಡೆಗೊಳಿಸಬೇಕೆಂದು ಭಕ್ತರ ಪರವಾಗಿ ಜೀವನ್ ಕೆ. ಶೆಟ್ಟಿ ಅವರು ಸರಕಾರಕ್ಕೆ ಮನವಿ ಮಾಡಿದ್ದರು.ರಾಜ್ಯ ಪ್ರವಾಸೋದ್ಯಮ ಸಚಿವರಾದ ಸಿ.ಪಿ.ಯೋಗೀಶ್ವರ್, ಮಾಜಿ ಸಚಿವ ಪಿ.ಜಿ. ಆರ್. ಸಿಂಧ್ಯಾ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು, ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಹಿಂದಿನ

ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಯಾಯ್ತು ಬಪ್ಪನಾಡು ದೇಗುಲ! Read More »

ಬೆಂಗಳೂರು: ಸೆಕ್ಸ್ ನಲ್ಲಿ ತೊಡಗಿದ್ದಾಗ ವ್ಯಕ್ತಿ ಸಾವು| ಗಂಡನೊಂದಿಗೆ ಸೇರಿ ಪ್ರಿಯಕರನ ಶವವನ್ನು ಎಸೆದ ಮಹಿಳೆ

ಸಮಗ್ರ ನ್ಯೂಸ್: ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಮೃತಪಟ್ಟ ವೃದ್ಧನ ಶವವನ್ನು ಎಸೆದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ನವೆಂಬರ್ 17 ರಂದು 67 ವರ್ಷದ ಉದ್ಯಮಿಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಎಸೆಯಲಾಗಿತ್ತು. ಶವ ಪತ್ತೆಯಾದ ನಂತರ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ತನಿಖೆ ವೇಳೆಯಲ್ಲಿ 67 ವರ್ಷದ ಉದ್ಯಮಿಯು ತನ್ನ 35 ವರ್ಷದ ಮನೆಕೆಲಸದಾಕೆಯೊಂದಿಗೆ ಸಂಬಂಧ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸಾವನ್ನಪ್ಪಿದ್ದ

ಬೆಂಗಳೂರು: ಸೆಕ್ಸ್ ನಲ್ಲಿ ತೊಡಗಿದ್ದಾಗ ವ್ಯಕ್ತಿ ಸಾವು| ಗಂಡನೊಂದಿಗೆ ಸೇರಿ ಪ್ರಿಯಕರನ ಶವವನ್ನು ಎಸೆದ ಮಹಿಳೆ Read More »

ಡಿ.1 ರಿಂದ ದ.ಕ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಪ್ರಯಾಣ ದರ ಹೆಚ್ಚಳ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಲ್ಲಿ ಸಂಚರಿಸುವ ಆಟೋ ರಿಕ್ಷಾಗಳ ಪ್ರಯಾಣ ದರವನ್ನು ಡಿ. 1ರಿಂದ ಅನ್ವಯವಾಗುವಂತೆ ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶ ಹೊರಡಿಸಿದ್ದಾರೆ. 1.5 ಕಿ.ಮೀ. ವ್ಯಾಪ್ತಿಗೆ ಕನಿಷ್ಠ ದರ 35 ರೂ. (ಗರಿಷ್ಠ ಮೂವರು ಪ್ರಯಾಣಿಕರು), ಅನಂತರ ಪ್ರತೀ ಕಿ.ಮೀ.ಗೆ 20 ರೂ. ನಿಗದಿಪಡಿಸಲಾಗಿದೆ. ಕಾಯುವಿಕೆ ಮೊದಲ 15 ನಿಮಿಷ ಉಚಿತ. ಅನಂತರ 15 ನಿಮಿಷದ ವರೆಗೆ 5 ರೂ. ಇರಲಿದೆ. ಪ್ರಯಾಣಿಕರ ಸರಕಿಗೆ (ಲಗೇಜ್‌) ಒಬ್ಬ ಪ್ರಯಾಣಿಕ ಕಡ್ಡಾಯವಾಗಿ

ಡಿ.1 ರಿಂದ ದ.ಕ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಪ್ರಯಾಣ ದರ ಹೆಚ್ಚಳ Read More »