November 2022

ಹವಾಮಾನ ವರದಿ: ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿಯ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದ.ಕ ಜಿಲ್ಲೆಯ ಪಣಂಬೂರು ಕಡಲ ಕಿನಾರೆ ಸೇರಿದಂತೆ ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕಿನ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿದ್ದು, ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ತುಂತುರ ಮಳೆಯಾಗಲಿದ್ದು, ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ. ದಕ್ಷಿಣ ಒಳನಾಡಿನ […]

ಹವಾಮಾನ ವರದಿ: ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ Read More »

ಭಾರತ್ ಜೋಡೋ ಯಾತ್ರೆ ವೇಳೆ ಕಾಲ್ತುಳಿತ| ಕೆ.ಸಿ‌ ವೇಣುಗೋಪಾಲ್ ಜಖಂ

ಸಮಗ್ರ ನ್ಯೂಸ್: ಭಾರತ್ ಜೋಡೋ ಪಾದಯಾತ್ರೆ ವೇಳೆ ಕಾಲ್ತುಳಿತ ಉಂಟಾಗಿದ್ದು, ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಕೆ.ಸಿ. ವೇಣುಗೋಪಾಲ್ ಅವರ ಮೊಣಕಾಲು, ಕೈಗಳಿಗೆ ಗಾಯಗಳಾಗಿದ್ದು, ಭಾರತ್ ಜೋಡೋ ಯಾತ್ರೆ ಶಿಬಿರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಜನರು ಮುನ್ನುಗ್ಗಿದ್ದಾರೆ. ಈ ವೇಳೆ ನೂಕಾಟ-ತಳ್ಳಾಟ ನಡೆದಿದ್ದು, ಕಾಲ್ತುಳಿತ ಸಂಭವಿಸಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ಕಾಲ್ತುಳಿತ| ಕೆ.ಸಿ‌ ವೇಣುಗೋಪಾಲ್ ಜಖಂ Read More »

ಸಿಸಿಬಿ ಪೊಲೀಸರ ಕಾರ್ಯಾಚರಣೆ|ನಾಲ್ವರು ಕಳ್ಳರ ಬಂಧನ|20.40 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಸಮಗ್ರ ನ್ಯೂಸ್: ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕಳ್ಳರು ಸೆರೆ ಸಿಕ್ಕಿದ್ದಾರೆ. ಬಂಧಿತರಿಂದ 20 ಲಕ್ಷ 40 ಸಾವಿರ ಮೌಲ್ಯದ 380 ಗ್ರಾಂ ಚಿನ್ನಾಭರಣ,808 ಗ್ರಾಂ ಬೆಳ್ಳಿ,3 ಕೈಗಡಿಯಾರ,ಒಂದು ಕಾರು,ಒಂದು ಕ್ಯಾಮರಾ ವಶಪಡಿಸಿಕೊಂಡಿದ್ದಾರೆ. ಮೊದಲನೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದ್ದು 16.50 ಲಕ್ಷ ಮೌಲ್ಯದ 312 ಗ್ರಾಂ ಚಿನ್ನಾಭರಣ ಹಾಗೂ 808 ಗ್ರಾಂ ಬೆಳ್ಳಿ ಪದಾರ್ಥ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿದ ಪೊಲೀಸ್ ಠಾಣಾ

ಸಿಸಿಬಿ ಪೊಲೀಸರ ಕಾರ್ಯಾಚರಣೆ|ನಾಲ್ವರು ಕಳ್ಳರ ಬಂಧನ|20.40 ಲಕ್ಷ ಮೌಲ್ಯದ ಚಿನ್ನಾಭರಣ ವಶ Read More »

ಕುಕ್ಕೆ ಸುಬ್ರಹ್ಮಣ್ಯ: ಎರಡು ವರ್ಷಗಳ ಬಳಿಕ ನಡೆಯಿತು ಎಡೆಸ್ನಾನ| ಸೇವೆ ಸಲ್ಲಿಸಿದ 116 ಮಂದಿ ಭಕ್ತರು

ಸಮಗ್ರ ನ್ಯೂಸ್: ರಾಜ್ಯ ಇತಿಹಾಸ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಆಚರಣೆ ನಡೆಯುತ್ತಿದ್ದು ಇದರ ಅಂಗವಾಗಿ ನಡೆಯುವ ಎಡೆಮಡೆಸ್ನಾನ ಬರೋಬ್ಬರಿ ಎರಡು ವರ್ಷಗಳ ಬಳಿಕ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅನಾದಿ‌ ಕಾಲದಿಂದ ನಡೆದುಕೊಂಡು ಬರುತ್ತಿದ್ದ ಮಡೆ ಸ್ನಾನಕ್ಕೆ ನ್ಯಾಯಾಲಯ ನಿಷೇಧ ಹೇರಿತ್ತು. ಬ್ರಾಹ್ಮಣರು ತಿಂದು ಉಳಿಸಿದಂತಹ ಎಲೆಯ ಮೇಲೆ ಭಕ್ತಾಧಿಗಳು ಈ‌ ಸೇವೆಯನ್ನು ನೆರವೇರಿಸುತ್ತಿದ್ದರು. ಈ ಸೇವೆಗೆ ಇತ್ತೀಚಿನ ಕೆಲವು ವರ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಪದ್ಧತಿಯನ್ನು ನಿಷೇಧಗೊಳಿಸಿ

ಕುಕ್ಕೆ ಸುಬ್ರಹ್ಮಣ್ಯ: ಎರಡು ವರ್ಷಗಳ ಬಳಿಕ ನಡೆಯಿತು ಎಡೆಸ್ನಾನ| ಸೇವೆ ಸಲ್ಲಿಸಿದ 116 ಮಂದಿ ಭಕ್ತರು Read More »

ಕೆನಡಾದಲ್ಲಿ ಅಪಘಾತ; ಭಾರತೀಯ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ಸೈಕಲ್ ನಲ್ಲಿ ರಸ್ತೆ ದಾಡುತ್ತಿದ್ದ ವೇಳೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಭಾರತೀಯ ವಿದ್ಯಾರ್ಥಿ ಕಾರ್ತಿಕ್ ಸೈನಿ ಎಂಬ ವಿದ್ಯಾರ್ಥಿ ಕೆನಡಾದಲ್ಲಿ ಸಾವನ್ನಪ್ಪಿದ್ದಾನೆ. 2021ರ ಆಗಸ್ಟ್‌ನಲ್ಲಿ ಭಾರತದಿಂದ ಕೆನಡಾಕ್ಕೆ ತೆರಳಿದ್ದರು. ಕಾರ್ತಿಕ್ ಅವರ ಕುಟುಂಬವು ಹರಿಯಾಣದ ಕರ್ನಾಲ್‌ನಲ್ಲಿ ನೆಲೆಸಿದೆ ಎಂದು ತಿಳಿದು ಬಂದಿದೆ. ಕಾರ್ತಿಕ್ ಕೆನಡಾದ ಶೆರಿಡನ್ ಕಾಲೇಜಿನಲ್ಲಿ ದಾಖಲಾಗಿದ್ದಾನೆ. ಕಾರ್ತಿಕ್ ಅವರ ದುರಂತ ಸಾವು ಅತೀವ ದುಃಖವನ್ನು ಉಂಟುಮಾಡಿದೆ, ಅವರ ಕುಟುಂಬ, ಸ್ನೇಹಿತರು, ಸಹಪಾಠಿಗಳು ಮತ್ತು ಶಿಕ್ಷಕರಿಗೆ ಆಳವಾದ

ಕೆನಡಾದಲ್ಲಿ ಅಪಘಾತ; ಭಾರತೀಯ ವಿದ್ಯಾರ್ಥಿ ಸಾವು Read More »

ದಾವಣಗೆರೆ: ಚಂದ್ರು ಸಾವು ಮಾದರಿಯಲ್ಲೇ ಮತ್ತೊಂದು ದುರಂತ| ಬೆಳಗಾವಿ ಎಎಸ್ಐ ಪುತ್ರ ಹೊನ್ನಾಳಿಯಲ್ಲಿ ಸಾವು

ಸಮಗ್ರ ನ್ಯೂಸ್: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವನ್ನಪ್ಪಿದ್ದ ರೀತಿಯಲ್ಲೇ ಬೆಳಗಾವಿಯ ಎಎಸ್ ಐ ಪುತ್ರ ಸಾವನ್ನಪ್ಪಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಬಳಿ ಇರುವ ಮಹೇಶ್ವರಿ ಹಳ್ಳದಲ್ಲಿ ಕಾರು ಬಿದ್ದು ಬೆಳಗಾವಿ ಎಎಸ್ ಐ ಪುತ್ರ ಪ್ರಕಾಶ್ ಅರಳಿಕಟ್ಟೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗಕ್ಕೆ ತನ್ನ ಸ್ನೇಹಿತರನ್ನು ಬಿಟ್ಟು ವಾಪಸ್ ಬರುವಾಗ ಮಧ್ಯರಾತ್ರಿ 1 ಗಂಟೆಗೆ ಕಾರು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ ಎನ್ನಲಾಗಿದೆ. ಇನ್ನು ಕೆಲ

ದಾವಣಗೆರೆ: ಚಂದ್ರು ಸಾವು ಮಾದರಿಯಲ್ಲೇ ಮತ್ತೊಂದು ದುರಂತ| ಬೆಳಗಾವಿ ಎಎಸ್ಐ ಪುತ್ರ ಹೊನ್ನಾಳಿಯಲ್ಲಿ ಸಾವು Read More »

ಬಣಕಲ್ ನಿಂದ ಶಬರಿಮಲೆಗೆ ಪಾದಯಾತ್ರೆ ಹೊರಟ ಅಯ್ಯಪ್ಪ ಭಕ್ತ

ಸಮಗ್ರ ನ್ಯೂಸ್: ಬಣಕಲ್ ನಿಂದ ಶಬರಿಮಲೆಗೆ ಸುಭಾಷ್ ನಗರದ ಗೋಪಾಲಕೃಷ್ಣ ನಾಯರ್ ಎಂಬವವರು ಶನಿವಾರದಂದು ತಮ್ಮ ಸ್ವಗೃಹದಿಂದ ಪೂಜೆ ಮುಗಿಸಿ ಇರ್ಮುಡಿ ಕಟ್ಟಿ ಶಬರಿಮಲೆಗೆ ಪಾದಯಾತ್ರೆ ಮೂಲಕ ನಡಿಗೆ ಪಯಣಕ್ಕೆ ಚಾಲನೆ ನೀಡಿದರು. ಸುಮಾರು 800ಕಿ.ಮೀ ವ್ಯಾಪ್ತಿಯ ಶಬರಿಮಲೆ ಕ್ಷೇತ್ರಕ್ಕೆ 32 ವರ್ಷಗಳ ಕಾಲ ವಾಹನದಲ್ಲಿ ಹೋಗಿ ಬರುತ್ತಿದ್ದರು. ಈ ವರ್ಷ ಇವರು 33 ನೇ ವರ್ಷಕ್ಕೆ ನಡೆದು ಬರುವುದಾಗಿ ಹರಕೆ ಹೊತ್ತು ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯ ಭಕ್ತನಾಗಿ ಗುರು ಸ್ವಾಮಿಗಾಗಿ ಗೋಪಾಲಕೃಷ್ಣ ಅವರು ಒಬ್ಬಂಟಿಗನಾಗಿ ಪಾದಯಾತ್ರೆ

ಬಣಕಲ್ ನಿಂದ ಶಬರಿಮಲೆಗೆ ಪಾದಯಾತ್ರೆ ಹೊರಟ ಅಯ್ಯಪ್ಪ ಭಕ್ತ Read More »

ಮಂಗಳೂರು: ಮತಾಂತರಗೊಳಿಸಿ ಲೈಂಗಿಕ ಕಿರುಕುಳ| ಮುಸ್ಲಿಂ ಯುವಕನ ವಿರುದ್ದ ದೂರಿತ್ತ ಯುವತಿ

ಸಮಗ್ರ ನ್ಯೂಸ್: ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ ಮೊಬೈಲ್‌ ಶಾಪ್‌ನಲ್ಲೇ ಮೊಬೈಲ್‌ ರಿಚಾರ್ಜ್‌ ಮಾಡುತ್ತಿದ್ದೆ.ಆಗ ಖಲೀಲ್‌ನ ಪರಿಚಯವಾಗಿತ್ತು. 2021ರ ಜ.14ರಂದು ಖಲೀಲ್‌ ಒಳ್ಳೆಯ ಕೆಲಸ ಮತ್ತು ಹಣ ಕೊಡುವುದಾಗಿ ಆಮಿಷವೊಡ್ಡಿ ಪುಸಲಾಯಿಸಿ ಆತನ ಕುಟುಂಬದ ಮನೆಯಾದ ಕಲ್ಲಾಪುಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಮಹಿಳೆಯರಿಗೆ ಪರಿಚಯಿಸಿದ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು, ಕುರಾನ್‌ ಓದಲು ಒತ್ತಾಯ ಮಾಡಿ ನಮಾಝ್ ಮಾಡಿಸಿದ್ದ.

ಮಂಗಳೂರು: ಮತಾಂತರಗೊಳಿಸಿ ಲೈಂಗಿಕ ಕಿರುಕುಳ| ಮುಸ್ಲಿಂ ಯುವಕನ ವಿರುದ್ದ ದೂರಿತ್ತ ಯುವತಿ Read More »

ಮೈಸೂರು:ಬಸ್ ನಿಲ್ದಾಣ ವಿವಾದಕ್ಕೆ ಕೊನೆಗೂ ಮುಕ್ತಿ| ಶಾಸಕ- ಸಂಸದರ ನಡುವಿನ ಶೀತಲ ಸಮರಕ್ಕೆ ಇತಿಶ್ರೀ…

ಸಮಗ್ರ ನ್ಯೂಸ್: ಮೈಸೂರು ನಗರದ ಗುಂಬಜ್ ಮಾದರಿ ಬಸ್ ಶೆಲ್ಟರ್ ನಿರ್ಮಾಣ ವಿವಾದಕ್ಕೆ ಶಾಸಕ ಎಸ್.ಎ.ರಾಮ್‌ದಾಸ ಅಂತ್ಯ ಹಾಡಿದ್ದಾರೆ. ಬಸ್ ಶೆಲ್ಟರ್ ಮೇಲಿದ್ದ ಮೂರು ಗೋಪುರಗಳ ಪೈಕಿ ಒಂದು ಗೋಪುರ ಉಳಿಸಿಕೊಂಡು, ಮತ್ತೆರಡು ಗೋಪುರಗಳನ್ನ ತೆರವುಗೊಳಿಸಲಾಗಿದೆ. ರಾತ್ರೋರಾತ್ರಿ ಬಸ್ ಶೆಲ್ಟರ್ ಮೇಲಿದ್ದ ಎರಡು ಗೋಪುರಗಳನ್ನ ಅಧಿಕಾರಿಗಳು ತೆರವು ಮಾಡಿದ್ದಾರೆ. ಮೈಸೂರು ಅರಮನೆ ಪರಂಪರೆಗಾಗಿ ಬಸ್ ಶೆಲ್ಟರ್ ಮಾಡಲಾಗುತ್ತಿತ್ತು. ಶಾಸಕರ ಅನುಧಾನದಲ್ಲಿ 12 ಬಸ್ ಶೆಲ್ಟರ್ ನಿರ್ಮಿಸಲಾಗುತ್ತಿತ್ತು. ವಿನಾಕಾರಣ ಧರ್ಮದ ಹೆಸರಿನಲ್ಲಿ ವಿವಾದ ಸೃಷ್ಟಿಸಲಾಗಿತ್ತು. ಇದು ಮುಂದೆ ವಿವಾದಿತ

ಮೈಸೂರು:ಬಸ್ ನಿಲ್ದಾಣ ವಿವಾದಕ್ಕೆ ಕೊನೆಗೂ ಮುಕ್ತಿ| ಶಾಸಕ- ಸಂಸದರ ನಡುವಿನ ಶೀತಲ ಸಮರಕ್ಕೆ ಇತಿಶ್ರೀ… Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ. ನವೆಂಬರ್‌ 27ರಿಂದ ಡಿಸೆಂಬರ್‌ 3ರವರೆಗಿನ‌ ನಿಮ್ಮ ರಾಶಿಗಳ ವಾರಭವಿಷ್ಯ ಹೇಗಿದೆ ನೋಡಿ: ಮೇಷ: ಮಕ್ಕಳಿಗೆ ವಿದ್ಯಾಭ್ಯಾಸದ ಬಗ್ಗೆ ತಿಳಿ ಹೇಳುವುದರ ಜೊತೆಗೆ ಪ್ರೋತ್ಸಾಹವೂ ಸಿಗುತ್ತದೆ. ವಾಹನ ಚಾಲನೆ ಮಾಡುವವರು ಚಾಲನೆ ಮಾಡುವಾಗ ಜಾಗರೂಕರಾಗಿರುವುದು ಉತ್ತಮ. ಕೃಷಿ ಕಾರ್ಯಗಳ ವೆಚ್ಚಕ್ಕಾಗಿ ಹಣಕಾಸು

ದ್ವಾದಶ ರಾಶಿಗಳ ವಾರಭವಿಷ್ಯ Read More »