November 2022

ಸುಳ್ಯ: ವಿಕಲಚೇತನ ಹೆಸರಿನಲ್ಲಿ ಬಂದಿರುವ ಅನುದಾನ ದುರುಪಯೋಗ|ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರಪಣೆಗೆ ವಿಕಲಚೇತನ ಹೆಸರಿನಲ್ಲಿ ಬಂದಿರುವ ಅನುದಾನ ದುರುಪಯೋಗ,ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ. ಅರಂತೋಡು ಗ್ರಾಮದ ಬೆದ್ರಪಣೆ ವಿಕಲಚೇತನ ನಿವಾಸಿಯಾದ ಹೊನ್ನಪ್ಪ .ಬಿ.ಬಿನ್ ಸುಬ್ಬಯ್ಯ ಗೌಡ ಎಂಬವರಿಗೆ ಅರಂತೋಡು ಗ್ರಾಮ ಪಂಚಾಯತ್ ಕ್ರಿಯ ಯೋಜನೆ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಬಂದಿರುವ ಕಾಂಕ್ರೀಟ್ರಿಕರಣವನ್ನು ಸುಬ್ಬಯ್ಯ ಗೌಡರ ಮನೆಯಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿರುವಂತ ಮೇಲಡ್ತಲೆ ವೆಂಕಪ್ಪ ಗೌಡರ ಮನೆಯ ಬಳಿ ಕಾಂಕ್ರೀಟ್ರಿಕರಣ ಮಾಡಿದ್ದಾರೆ. ವಿಕಲಚೇತನದವರಿಗೆ ಸರಕಾರದಿಂದ ಬರುವಂತ ಸವಲತ್ತುಗಳನ್ನು ಈ ರೀತಿಯಾಗಿ […]

ಸುಳ್ಯ: ವಿಕಲಚೇತನ ಹೆಸರಿನಲ್ಲಿ ಬಂದಿರುವ ಅನುದಾನ ದುರುಪಯೋಗ|ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ Read More »

“ನಿನ್ನನ್ನು ಕೊಚ್ಚಿ ನಾಯಿಗೆ ಹಾಕುತ್ತೇವೆ” | ಪ್ರಮೋದ್ ಮುತಾಲಿಕ್ ಗೆ ಜೀವ ಬೆದರಿಕೆಯೊಡ್ಡಿದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಶ್ರೀ ರಾಮಸೇನೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವ ಕುರಿತು ಸ್ವತಃ ಪ್ರಮೋದ್ ಮುತಾಲಿಕ್ ಅವರೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವ ಆರೋಪ ಕೇಳಿಬಂದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕಟ್ಟಾ ಹಿಂದುತ್ವವಾದಿಗೆ ಜೀವ ಬೆದರಿಕೆ ಹಾಕಲಾಗಿದೆ. ‘ನಿನ್ನನ್ನು ಕೊಚ್ಚಿ ಕೊಚ್ಚಿ ತುಂಡು ಮಾಡಿ ನಾಯಿಗೆ ಬಿಸಾಕುತ್ತೇವೆ’ ಎಂದು ಅಪರಿಚಿತ ದುಷ್ಕರ್ಮಿಗಳು ಮುತಾಲಿಕ್ ಅವರಿಗೆ ನಿಂದಿಸಿ

“ನಿನ್ನನ್ನು ಕೊಚ್ಚಿ ನಾಯಿಗೆ ಹಾಕುತ್ತೇವೆ” | ಪ್ರಮೋದ್ ಮುತಾಲಿಕ್ ಗೆ ಜೀವ ಬೆದರಿಕೆಯೊಡ್ಡಿದ ದುಷ್ಕರ್ಮಿಗಳು Read More »

ಪಂಜುರ್ಲಿಯ ವೇಷ ಧರಿಸಿ ರೀಲ್ಸ್ ಮಾಡಿದ್ದ ಪ್ರಕರಣ| ಧರ್ಮಸ್ಥಳದಲ್ಲಿ ಕ್ಷಮಾಪಣೆ ಕೇಳಿದ ಶ್ವೇತಾರೆಡ್ಡಿ

ಸಮಗ್ರ ನ್ಯೂಸ್: ‘ಕಾಂತಾರ’ ಚಲನ ಚಿತ್ರದಲ್ಲಿರುವ ದೈವದ ಪಾತ್ರದಂತೆ ಮುಖವರ್ಣಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೈದರಾಬಾದ್‌ ಮೂಲದ ಶ್ವೇತಾ ರೆಡ್ಡಿ ಅವರು ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿ, ಡಾ| ಡಿ.ವೀರೇಂದ್ರ ಹೆಗ್ಗಡೆಯವರಲ್ಲಿ ಕ್ಷಮಾಪಣೆ ಕೇಳಿ ಆಶೀರ್ವಾದ ಪಡೆದ ಘಟನೆ ನ. 3ರಂದು ನಡೆದಿದೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶ್ವೇತಾ, ಇದನ್ನು ತಿಳಿದು ಮಾಡಿರಲಿಲ್ಲ, ಯಕ್ಷಗಾನ ಪಾತ್ರ ಮತ್ತು ಇದು ಒಂದೇ ಎಂದುಕೊಂಡಿದ್ದೆ. ಟೀಕೆಗಳು ಬಂದ ಬಳಿಕ ಬೇರೆ ಬೇರೆ ಎಂದು

ಪಂಜುರ್ಲಿಯ ವೇಷ ಧರಿಸಿ ರೀಲ್ಸ್ ಮಾಡಿದ್ದ ಪ್ರಕರಣ| ಧರ್ಮಸ್ಥಳದಲ್ಲಿ ಕ್ಷಮಾಪಣೆ ಕೇಳಿದ ಶ್ವೇತಾರೆಡ್ಡಿ Read More »

ಸುಳ್ಯ: ಹೃದಯಾಘಾತಕ್ಕೆ ಎರಡನೇ ತರಗತಿ ವಿದ್ಯಾರ್ಥಿ ಬಲಿ!!

ಸಮಗ್ರ ನ್ಯೂಸ್: ಹೃದಯಾಘಾತದಿಂದ ಶಾಲಾ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬುಧವಾರ ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಸಂಭವಿಸಿದೆ. ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯ 2ನೇ ತರಗತಿ ವಿದ್ಯಾರ್ಥಿ ಕುಂಟಿಕಾನದ ಮೋಕ್ಷಿತ್‌ ಕೆ.ಸಿ.(7) ಮೃತ ಬಾಲಕ. ಬಾಲಕ ಎಂದಿನಂತೆ ಶಾಲೆಗೆ ಬಂದಿದ್ದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ. ಮಧ್ಯಾಹ್ನದ ವೇಳೆಗೆ ಸ್ವಲ್ಪ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿಕ್ಷಕರು ದೂರವಾಣಿ ಮೂಲಕ ಪೋಷಕರಿಗೆ ಮಾಹಿತಿ ನೀಡಿದರು. ತಂದೆ ಚಂದ್ರಶೇಖರ ಆಚಾರ್ಯ ಅವರು ಶಾಲೆಗೆ ಬಂದಿರುವ ಸಂದರ್ಭದಲ್ಲೇ ಬಾಲಕ ನಿಂತಲ್ಲಿಯೇ ಕುಸಿದು

ಸುಳ್ಯ: ಹೃದಯಾಘಾತಕ್ಕೆ ಎರಡನೇ ತರಗತಿ ವಿದ್ಯಾರ್ಥಿ ಬಲಿ!! Read More »

ಸುಳ್ಯ: ಶಾಂತಿನಗರ ಕ್ರೀಡಾಂಗಣದಲ್ಲಿ ಭಾರಿ ಗಾತ್ರದ ಬಿರುಕು|ಸ್ಥಳೀಯರಲ್ಲಿ ಆತಂಕ

ಸಮಗ್ರ ನ್ಯೂಸ್: ಸುಳ್ಯ ಶಾಂತಿನಗರ ಕ್ರೀಡಾಂಗಣದಲ್ಲಿ ಒಂದು ಭಾಗದಲ್ಲಿ ಭಾರಿ ಗಾತ್ರದ ಬಿರುಕುಗಳು ಉಂಟಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ನಾಲ್ಕು, ಐದು ತಿಂಗಳ ಮೊದಲು ಶಾಂತಿನಗರ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ ಆರಂಭಗೊಳಿಸಲಾಗಿದ್ದು,ಆ ಸಂದರ್ಭದಲ್ಲಿ ಕ್ರೀಡಾಂಗಣದ ಒಂದು ಭಾಗದಲ್ಲಿ ಭಾರಿ ಎತ್ತರಕ್ಕೆ ಮಣ್ಣುಗಳನ್ನು ಹಾಕಿ ಕ್ರೀಡಾಂಗಣವನ್ನು ವಿಶಾಲ ಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಈ ಭಾಗದಲ್ಲಿ ಹಾಕಿರುವ ಮಣ್ಣುಗಳು ಕುಸಿದು ಕೆಳಭಾಗದಲ್ಲಿ ಇರುವ ಮನೆಗಳಿಗೆ ಹಾನಿಯಾಗುವ ಆತಂಕವನ್ನು ಸೂಚಿಸಿದ ಸ್ಥಳೀಯರು, ಕೆಳಬಾಗದಲ್ಲಿ ತಡೆಗೋಡೆಯನ್ನು ನಿರ್ಮಿಸುವಂತೆ ಆಗ್ರಹವನ್ನು ವ್ಯಕ್ತಪಡಿಸಿದ್ದರು. ಇದರ

ಸುಳ್ಯ: ಶಾಂತಿನಗರ ಕ್ರೀಡಾಂಗಣದಲ್ಲಿ ಭಾರಿ ಗಾತ್ರದ ಬಿರುಕು|ಸ್ಥಳೀಯರಲ್ಲಿ ಆತಂಕ Read More »

ಕಚ್ಚಾತೈಲ ದರದಲ್ಲಿ ಇಳಿಕೆ ಹಿನ್ನಲೆ| ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ₹2 ಇಳಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಜಾಗತಿಕ ಕಚ್ಚಾ ತೈಲ ದರ ಇಳಿಕೆ ಹಿನ್ನೆಲೆಯಲ್ಲಿ ಸದ್ಯದಲ್ಲೇ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಲೀಟರ್‌ಗೆ ತಲಾ 2 ರೂ.ಇಳಿಕೆ ಮಾಡುವ ಸಾಧ್ಯತೆಯಿದೆ. ಮುಂದಿನ 5 ದಿನಗಳ ಕಾಲ ಪ್ರತಿದಿನ ಲೀಟರ್‌ಗೆ ತಲಾ 40 ಪೈಸೆಯಂತೆ ತೈಲ ದರದಲ್ಲಿ ಇಳಿಕೆಯಾಗಬಹುದು. ಆ ಮೂಲಕ ಒಟ್ಟಾರೆ ಲೀ.ಗೆ 2 ರೂ.ಗಳಷ್ಟು ಕಡಿತವಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಿಂದಿ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಜತೆಗೆ, ತೈಲದ ದರ ಮತ್ತು ಡಾಲರ್‌ ಎದುರು ರೂಪಾಯಿ

ಕಚ್ಚಾತೈಲ ದರದಲ್ಲಿ ಇಳಿಕೆ ಹಿನ್ನಲೆ| ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ₹2 ಇಳಿಕೆ ಸಾಧ್ಯತೆ Read More »

ಮಿಸ್ ಅರ್ಜೆಂಟೀನಾ – ಮಿಸ್ ಪೋರ್ಟೊರಿಕೊ ‘ಸುಂದರಿ’ಯರ ವಿವಾಹ.!

ಅರ್ಜೆಂಟೈನಾ: ’ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಅರ್ಜೆಂಟೈನಾ 2020 ’ ಮರಿಯಾನಾ ವರೆಲಾ ಮತ್ತು ’ಗ್ರ್ಯಾಂಡ್ ಇಂಟರ್ನ್ಯಾಷನಲ್ ಪೋರ್ಟೊ ರಿಕೊ 2020 ’ ಕಿರೀಟವನ್ನು ಅಲಂಕರಿಸಿದ ಫ್ಯಾಬಿಯೊಲಾ ವ್ಯಾಲೆಂಟಿನ್, ಈ ಇಬ್ಬರು ಸುಂದರಿಯರು ಮದುವೆಯಾಗಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿಕೊಂಡಿದ್ದಾರೆ. ನವವಿವಾಹಿತೆಯರು ತಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ರಹಸ್ಯವಾಗಿಟ್ಟ ನಂತರ ಅಧಿಕೃತಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ. “ನಮ್ಮ ಸಂಬಂಧವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ನಿರ್ಧರಿಸಿದ ಬಳಿಕ, ನಾವು ಅ.೨೮ ರಂದು ವಿಶೇಷ ದಿನದಂದು ವಿವಾಹವಾಗಿ ಬಹಿರಂಗಪಡಿಸಿದ್ದೇವೆ” ಎಂದು ಶೀರ್ಷಿಕೆ ಬರೆದು ಇನ್ಟ್ರಾ ಗ್ರಾಂ ನಲ್ಲಿ ಪೋಸ್ಟ್

ಮಿಸ್ ಅರ್ಜೆಂಟೀನಾ – ಮಿಸ್ ಪೋರ್ಟೊರಿಕೊ ‘ಸುಂದರಿ’ಯರ ವಿವಾಹ.! Read More »

ಪುತ್ತೂರು: ಮುತ್ತಪ್ಪ ರೈ ಸಹೋದರನ ವಿರುದ್ದ ಸ್ಪೋಟಕ ದಾಸ್ತಾನು ಪ್ರಕರಣ ದಾಖಲು

ಸಮಗ್ರನ್ಯೂಸ್: ಪುತ್ತೂರಿನ ಪಟಾಕಿ ಗೊಡೌನ್ ಗೆ ನಲ್ಲಿ ಪಟಾಕಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲಕ ಪುತ್ತೂರು ಅಶ್ವಿನಿ ಬಾರ್ & ರೆಸ್ಟೋರೆಂಟ್ ಪಾಲುದಾರ ಕರುಣಾಕರ ರೈ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪೊಲೀಸರು ಸೆಕ್ಷನ್ 9B ಅಡಿ ಸೊಮೋಟೋ ಪ್ರಕರಣ ದಾಖಲಿಸಿದ್ದಾರೆ. ಸೆಕ್ಷನ್ 9ಬಿ ಅಡಿ ಕರುಣಾಕರ್ ರೈ ವಿರುದ್ಧ ಸ್ಫೋಟಕ ದಾಸ್ತಾನು ಗಂಭೀರ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಪೊಲೀಸರು ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. ಪುತ್ತೂರು ದರ್ಬೆಯ ಅಶ್ವಿನಿ ಹೊಟೆಲ್ ಮಾಲಕರಾದ ಕರುಣಾಕರ ರೈ ಮಾಲಿಕತ್ವದ ದರ್ಬೆಯ ಆರಾಧ್ಯ

ಪುತ್ತೂರು: ಮುತ್ತಪ್ಪ ರೈ ಸಹೋದರನ ವಿರುದ್ದ ಸ್ಪೋಟಕ ದಾಸ್ತಾನು ಪ್ರಕರಣ ದಾಖಲು Read More »

ಪುತ್ತೂರು: ‘ರೈಟ್ ಪೋಯಿ’ ಎಂದ ವಿದ್ಯಾರ್ಥಿ|ನಿರ್ವಾಹಕನನ್ನು ಬಿಟ್ಟು ಬಸ್ ಚಲಾಯಿಸಿಕೊಂಡು ಹೋದ ಚಾಲಕ

ಸಮಗ್ರ ನ್ಯೂಸ್: ನಿರ್ವಾಹಕನನ್ನು ನಿಲ್ದಾಣದಲ್ಲಿಯೇ ಬಿಟ್ಟು ಚಾಲಕ ಬಸ್ ಚಲಾಯಿಸಿಕೊಂಡು ಹೋದ ಘಟನೆ ಪುತ್ತೂರಿನಲ್ಲಿ ನ.3ರಂದು ನಡೆದಿದೆ. ಪುತ್ತೂರುನಿಂದ ಮಂಗಳೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕ ನಿರ್ವಾಹಕನನ್ನು ಪುತ್ತೂರು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. ನಿಲ್ದಾಣದಿಂದ ಬಸ್ ಹೊರಡುವ ವೇಳೆ ವಿದ್ಯಾರ್ಥಿಯೋರ್ವ ‘ರೈಟ್ ಪೋಯಿ’ ಎಂದು ಹೇಳಿದ್ದ.‌ ನಿರ್ವಾಹಕನೇ ‘ರೈಟ್ ಪೋಯಿ’ ಎಂದು ಹೇಳಿದ್ದಾಗಿ ಭಾವಿಸಿದ ಚಾಲಕ ಬಸ್ ಚಲಾಯಿಸಿದ್ದಾರೆ. ಪುತ್ತೂರು ನಿಲ್ದಾಣದಿಂದ ಹೊರಟ ಬಸ್ ಎಂ.ಟಿ.ರಸ್ತೆಯಾಗಿ ತಾಲೂಕು ಕಛೇರಿ ರಸ್ತೆ ದಾಟಿ ಮುಖ್ಯ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ

ಪುತ್ತೂರು: ‘ರೈಟ್ ಪೋಯಿ’ ಎಂದ ವಿದ್ಯಾರ್ಥಿ|ನಿರ್ವಾಹಕನನ್ನು ಬಿಟ್ಟು ಬಸ್ ಚಲಾಯಿಸಿಕೊಂಡು ಹೋದ ಚಾಲಕ Read More »

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ| ಆಪ್ತ ಸಹಾಯಕ ಸಾವು

ಸಮಗ್ರ ನ್ಯೂಸ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪಾಕಿಸ್ತಾನದ ಶಹಬಾಜ್ ಷರೀಫ್ ಸರ್ಕಾರದ ವಿರುದ್ಧ ಲಾಹೋರ್‌ ನಿಂದ ಇಸ್ಲಾಮಾಬಾದ್‌ಗೆ ಮೆರವಣಿಗೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ. ಇಮ್ರಾನ್ ಖಾನ್ ಗುರುವಾರ ವಜೀರಾಬಾದ್‌ ನಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಮ್ರಾನ್ ಖಾನ್ ಸೇರಿದಂತೆ 6 ಜನರು ಗಾಯಗೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಇಮ್ರಾನ್

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ| ಆಪ್ತ ಸಹಾಯಕ ಸಾವು Read More »