November 2022

ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ| ಸರ್ಕಾರದ ನಡೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್

ಸಮಗ್ರ ನ್ಯೂಸ್: ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ರಷ್ಟು ಮೀಸಲಾತಿ ವಿಚಾರ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಮಾನ ಹೊರ ಬಿದ್ದಿದ್ದು, ಐವರು ನ್ಯಾಯಮೂರ್ತಿಗಳ ಪೈಕಿ ನಾಲ್ವರು ನ್ಯಾಯಮೂರ್ತಿಗಳು ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿದ್ದಾರೆ. ನ್ಯಾಯಮೂರ್ತಿ ರವೀಂದ್ರ ಭಟ್‌ ಅವರು ಮಾತ್ರ ಇದು ಅಸಾಂವಿಧಾನಿಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದರಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ ಆಗುವುದಿಲ್ಲ ಎಂದು ಅಭಿಪ್ರಾಯಪಡಲಾಗಿದ್ದು, ಮೀಸಲಾತಿಗಾಗಿ ಸಂವಿಧಾನದ ತಿದ್ದುಪಡಿ ಸರಿಯಾಗಿದೆ ಎಂದು ಮೀಸಲಾತಿ ಪರ ತೀರ್ಪು ನೀಡಿರುವ […]

ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ| ಸರ್ಕಾರದ ನಡೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ Read More »

ಶಿವಮೊಗ್ಗ: ತಾಯಿ, ಮಗಳು,‌ ಮೊಮ್ಮಗಳು ಅಪಘಾತದಲ್ಲಿ ‌ದುರ್ಮರಣ

ಸಮಗ್ರ ನ್ಯೂಸ್: ಕಾರು- ಬೈಕ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಳಿಯ ಮಂಚಿಕೊಪ್ಪದಲ್ಲಿ ನಡೆದಿದೆ. ಹಲುಗಿನಕೊಪ್ಪದ ಗಂಗಮ್ಮ(50), ಇವರ ಮಗಳು ಜ್ಯೋತಿ(30) ಮತ್ತು ಜ್ಯೋತಿ ಅವರ 4 ವರ್ಷದ ಪುತ್ರಿ ಸೌಜನ್ಯ(4) ಮೃತ ದುರ್ದೈವಿಗಳು. ಇವರೆಲ್ಲರೂ ಕಾರಿನಲ್ಲಿ ಹಿರೇಕರೂರು ಕಡೆಯಿಂದ ಶಿವಮೊಗ್ಗದತ್ತ ಭಾನುವಾರ ರಾತ್ರಿ ಹೊರಟಿದ್ದರು. ಶಿರಾಳಕೊಪ್ಪದಿಂದ ಹುಲಗಿನಕೊಪ್ಪ ಕಡೆಗೆ ಬೈಕ್​ನಲ್ಲಿ ಮಲ್ಲಿಕಾರ್ಜುನ್ ಎಂಬಾತ ತೆರಳುತ್ತಿದ್ದ. ಮಾರ್ಗಮಧ್ಯೆ ಶಿರಾಳಕೊಪ್ಪ ಸಮೀಪದ ಮಂಚಿಕೊಪ್ಪ ಬಳಿ

ಶಿವಮೊಗ್ಗ: ತಾಯಿ, ಮಗಳು,‌ ಮೊಮ್ಮಗಳು ಅಪಘಾತದಲ್ಲಿ ‌ದುರ್ಮರಣ Read More »

ಬೆಂಗಳೂರಿಗೆ ಹೊರಟಿದ್ದ ಫ್ಲೈಟ್ ಪುಣೆಯಲ್ಲೇ ಬಾಕಿ..!!

ಪುಣೆ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟಿದ್ದ ಏರ್‌ಏಷ್ಯಾ ವಿಮಾನವು ಟೇಕ್ ಆಫ್ ಆಗದೆ ಪುಣೆ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿರುವ ಘಟನೆ ನಡೆದಿದೆ. ಎಲೆಕ್ಟ್ರಾನಿಕ್ ಸೆಂಟ್ರಲೈಸ್ಡ್ ಏರ್‌ಕ್ರಾಫ್ಟ್ ಮಾನಿಟರ್‌‌ನಿಂದ ಬ್ರೇಕ್-ಹಾಟ್ ಎಚ್ಚರಿಕೆಯ ಸಿಗ್ನಲ್ ಬಂದ ಕಾರಣ ಏರ್ ಏಷ್ಯಾ ಫ್ಲೈಟ್ I5-1427 ಪ್ರಯಾಣವನ್ನು ವಿಳಂಬಿಸಿದೆ ಎನನಲಾಗಿದೆ. ಇನ್ನು ಬ್ರೇಕ್ ಫ್ಯಾನ್ ನಲ್ಲಿ ತಾಂತ್ರಿಕ ತೊಂದರೆ ಕಂಡು ಬಂದ ಕಾರಣ ವಿಮಾನಯಾನ ತನ್ನ ಪ್ರಯಾಣವನ್ನು ವಿಳಂಬ ಮಾಡಿದೆ, ಅಲ್ಲದೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಡೈರೆಕ್ಟರೇಟ್ ಜನರಲ್ ಆಫ್

ಬೆಂಗಳೂರಿಗೆ ಹೊರಟಿದ್ದ ಫ್ಲೈಟ್ ಪುಣೆಯಲ್ಲೇ ಬಾಕಿ..!! Read More »

ಹೆಣ್ಣು ಮಗುವಿಗೆ ‌ಜನ್ಮ ನೀಡಿದ ನಟಿ‌ ಆಲಿಯಾ‌‌ ಭಟ್

ಸಮಗ್ರ ನ್ಯೂಸ್: ಬಾಲಿವುಡ್ ನಟಿ‌ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಕಪೂರ್‌ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಮುಂಬೈನ ಗಿರ್ಗಾಂವ್ನಲ್ಲಿರುವ ಎಚ್.ಎನ್.ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಮಗುವಿಗೆ ಜನ್ಮ ನೀಡಿದ್ದಾರೆ. ಆಲಿಯಾ-ರಣಬೀರ್ ಜೂನ್‌ ನಲ್ಲಿ ತಾವು ತಂದೆ – ತಾಯಿಯಾಗಲಿದ್ದೇವೆ ಎನ್ನುವ ಸಂತಸದ ವಿಷಯವನ್ನು ಫೋಟೋ ಹಂಚಿಕೊಂಡು ಹೇಳಿದ್ದರು. ಇದೀಗ‌ ಕಪೂರ್ ಕುಟುಂಬದಲ್ಲಿ ಸಂತಸ‌ ಮನೆ ಮಾಡಿದ್ದು ಎಲ್ಲೆಡೆಯಿಂದ ಶುಭಾಶಯದ‌ ಮಹಾಪೂರವೇ ಹರಿದುಬರುತ್ತಿದೆ.

ಹೆಣ್ಣು ಮಗುವಿಗೆ ‌ಜನ್ಮ ನೀಡಿದ ನಟಿ‌ ಆಲಿಯಾ‌‌ ಭಟ್ Read More »

ನಮೀಬಿಯಾದಿಂದ ತಂದ ಚೀತಾಗೆ ಗರ್ಭಪಾತ!!

ಸಮಗ್ರ ನ್ಯೂಸ್: ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ಅಭಯಾರಣ್ಯಕ್ಕೆ ಇತ್ತೀಚೆಗೆ ತರಲಾಗಿದ್ದ ಚೀತಾಗಳ ಪೈಕಿ ಆಶಾ ಎಂಬ ಚೀತಾ ಗರ್ಭ ಧರಿಸಿತ್ತು ಎಂಬ ವರದಿಗಳ ಕುರಿತು ಇದೀಗ ಸ್ವತಃ ಸಿಸಿಎಫ್‌ (ಚೀನಾ ಕನ್ಸ್‌ರ್ವೇಷನ್‌ ಫಂಡ್‌) ಸ್ವಯಂಸೇವಾ ಸಂಸ್ಥೆ ಸಂಸ್ಥಾಪಕಿ ಡಾ.ಲೌರಿ ಮಾರ್ಕರ್‌ ಸ್ಪಷ್ಟನೆ ನೀಡಿದ್ದಾರೆ.’ಗರ್ಭ ಧರಿಸಿದ್ದು ಹೌದು. ಆದರೆ ಗರ್ಭಪಾತವಾಗಿದೆ’ ಎಂದಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಡಾ. ಲೌರಿ ‘ನಮೀಬಿಯಾದ ಅರಣ್ಯದಲ್ಲಿ ಸೆರೆಹಿಡಿಯುವಾಗಲೇ ಒಂದು ಚೀತಾ ಗರ್ಭ ಧರಿಸಿತ್ತು. ಆದರೆ ನಂತರ, ಚೀತಾಗಳಲ್ಲಿ ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಡುವ ಒತ್ತಡಕ್ಕೆ

ನಮೀಬಿಯಾದಿಂದ ತಂದ ಚೀತಾಗೆ ಗರ್ಭಪಾತ!! Read More »

ಮನೆಯಲ್ಲೇ‌ ಶುದ್ದ ನೀರಿದ್ದಾಗ ದೇವಸ್ಥಾನದ ತೀರ್ಥವೇಕೆ ಕುಡಿಯಬೇಕು?| ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್

ಸಮಗ್ರ ನ್ಯೂಸ್: ದೇವಸ್ಥಾನದಲ್ಲಿ ಕೊಡುವ ತೀರ್ಥವನ್ನು ಕುಡಿಯುವುದರಿಂದ ರೋಗಗಳು ಹರಡುತ್ತವೆ. ತೀರ್ಥ ಕೊಡುವವರು ಶುದ್ಧವಾಗಿ ಕೈ ತೊಳೆದಿರುವುದಿಲ್ಲ. ಇದರಿಂದ ಎಷ್ಟೋ ಜನರು ವಾಂತಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಎಲ್ಲರ ಮನೆಯಲ್ಲಿಯೂ ನೀರು ಇದೆ. ಹೀಗಿದ್ದಾಗ ತೀರ್ಥ ಯಾಕೆ ಕುಡಿಯಬೇಕು. ಹೆಣ ಸುಟ್ಟು ಗಂಗಾ ನದಿಗೆ ಎಸೆಯುತ್ತಾರೆ. ಇದರಿಂದ ನದಿಯಲ್ಲಿ ಹೆಣಗಳು ತೇಲಿ ಬರುತ್ತವೆ. ಇಂತಹ ಜಲವನ್ನು ಗಂಗಾಜಲವೆಂದು ಯಾಕೆ ಕುಡಿಯಬೇಕು ಎಂದು ಲಲಿತಾ ನಾಯಕ್ ಪ್ರಶ್ನಿಸಿದ್ದಾರೆ. ಕಾಣದ ದೇವರಿಗೆ

ಮನೆಯಲ್ಲೇ‌ ಶುದ್ದ ನೀರಿದ್ದಾಗ ದೇವಸ್ಥಾನದ ತೀರ್ಥವೇಕೆ ಕುಡಿಯಬೇಕು?| ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ Read More »

ಕರಾವಳಿ ಸೇರಿ ರಾಜ್ಯದಲ್ಲಿ ನಾಲ್ಕು ದಿನ‌ ಮಳೆ ಸಾಧ್ಯತೆ

ಬೆಂಗಳೂರು : ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ನಾಲ್ಕು ದಿನ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ , ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜ ನಗರ, ಕೊಡಗು, ಚಿಕ್ಕಮಗಳೂರು, ಕೋಲಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ

ಕರಾವಳಿ ಸೇರಿ ರಾಜ್ಯದಲ್ಲಿ ನಾಲ್ಕು ದಿನ‌ ಮಳೆ ಸಾಧ್ಯತೆ Read More »

ಕೆ.ಎಸ್.ಆರ್.ಟಿ.ಸಿ ಬಸ್, ಬೈಕ್ ನಡುವೆ ಅಪಘಾತ| ಓರ್ವ ಸಾವು ಮತೋರ್ವ ಗಂಭೀರ

ಸಮಗ್ರ ನ್ಯೂಸ್: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನಪಿದ್ದು ಮತೋರ್ವ ನ ಸ್ಥಿತಿ ಗಂಭೀರವಾಗಿದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಬಸ್ ನಿಲ್ದಾಣದ ಬಳಿ ಸಂಭವಿಸಿದೆ. ಬೈಕ್ ನಲ್ಲಿ ಇದ್ದ ರಾಮೇಗೌಡ(48)ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಸತೀಶ್(45) ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಬೈಕಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ ಬೈಕ್ ಸವಾರರು ಬಿಳಿಕೆರೆ ಹೋಬಳಿಯ ರಂಗ್ಯನ ಕೊಪ್ಪಲು ಗ್ರಾಮದ ನಿವಾಸಿಗಳು ಎನ್ನಲಾಗಿದ್ದು, ಬಿಳಿಕೆರೆ ಪೊಲೀಸ್

ಕೆ.ಎಸ್.ಆರ್.ಟಿ.ಸಿ ಬಸ್, ಬೈಕ್ ನಡುವೆ ಅಪಘಾತ| ಓರ್ವ ಸಾವು ಮತೋರ್ವ ಗಂಭೀರ Read More »

ತುಳಸಿ ಪೂಜೆ ಮಾಡಿ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ

ಸಮಗ್ರ ನ್ಯೂಸ್: ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದ ಅಶ್ವತ್ಥ್ ನಗರದಲ್ಲಿ ನಡೆದಿದೆ. ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ. ಈಕೆ 5 ತಿಂಗಳ ಹಿಂದೆ ಆಕಾಶ್ ಎಂಬ ಯುವಕನ ಜೊತೆ ವಿವಾಹವಾಗಿದ್ದಳು ಜೊತೆಗೆ ನಗರದ ಖ್ಯಾತ ವೈದ್ಯೆ ಡಾ. ಜಯಶ್ರೀ ಹೊಮ್ಮರಡಿ ಅವರ ಸೊಸೆಯಾಗಿದ್ದಳು. ನಿನ್ನೆ ರಾತ್ರಿ ನವ್ಯಶ್ರೀ ತುಳಸಿ ಪೂಜೆ ಮಾಡಿ, ಅರಿಶಿನ, ಕುಂಕುಮ ಸ್ವೀಕರಿಸಿ ಬಂದಿದ್ದಳು. ಬಳಿಕ ಕಾರ್ ಶೆಡ್‍ನಲ್ಲಿ ನೇಣು ಬಿಗಿದು, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆಗೆ ಸಂಬಂಧಿಸಿ ಆಕೆಯ

ತುಳಸಿ ಪೂಜೆ ಮಾಡಿ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ Read More »

ಸುಳ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೇ ದುರ್ಮರಣ

ಸಮಗ್ರ ನ್ಯೂಸ್: ಸುಳ್ಯ ಸಮೀಪದ ಜಾಲ್ಸೂರು ಗ್ರಾಮದ ಅಡ್ಕಾರ್ ನಲ್ಲಿ ಕಳೆದ ರಾತ್ರಿ ಬಸ್ – ಬೈಕ್ ಮಧ್ಯೆ ನಡೆದ ಅಪಘಾತ ದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅಪಘಾತದಲ್ಲಿ ಗಂಭೀರಗೊಂಡು ಮೃತಪಟ್ಟ ಬೈಕ್ ಸವಾರನನ್ನು ನೆಟ್ಟಾರ್ ಬೊಳಿಯಮೂಲೆ ನಿವಾಸಿ ರೋಹಿತ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರೋಹಿತ್ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಬಳಿಕ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಹೋರಾಟದಲ್ಲಿದ್ದ ರೋಹಿತ್ ತಡರಾತ್ರಿಯೇ

ಸುಳ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೇ ದುರ್ಮರಣ Read More »