November 2022

ಯಕ್ಷರಂಗದ ಧ್ರುವತಾರೆ, ಮಾತಿನ ಮೋಡಿಗಾರ ಕುಂಬಳೆ ಸುಂದರ ರಾವ್ ಇನ್ನಿಲ್ಲ

ಸಮಗ್ರ ನ್ಯೂಸ್: ಯಕ್ಷರಂಗದಲ್ಲಿ ಮಾತಿನ ಮನೆ ಕಟ್ಟಿದ ಹಿರಿಯ ಕಲಾವಿದ, ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬಳೆ ಸುಂದರ್ ರಾವ್(88) ನ.30ರ ಮುಂಜಾನೆ ನಿಧನ ಹೊಂದಿದ್ದಾರೆ. ಯಾವುದೇ ಬಗೆಯ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುತ್ತಿದ್ದ ಅವರಿಗೆ ಪಾದುಕಾ ಪಟ್ಟಾಭಿಷೇಕದ ಭರತ, ವಿರಾಟ ಪರ್ವದ ಉತ್ತರ ಕುಮಾರ, ಕೃಷ್ಣ ಸಂಧಾನದ ಕೃಷ್ಣ, ದಕ್ಷಯಜ್ಞದ ಈಶ್ವರ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಗೋವಿಂದ ದೀಕ್ಷಿತ, ತ್ರಿಪುರ ಮಥನದ ಚಾರ್ವಾಕ ಮುಂತಾದ ಪಾತ್ರಗಳು ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು. ಭಕ್ತಿ, ಕರುಣಾರಸದ ಪಾತ್ರಗಳನ್ನು […]

ಯಕ್ಷರಂಗದ ಧ್ರುವತಾರೆ, ಮಾತಿನ ಮೋಡಿಗಾರ ಕುಂಬಳೆ ಸುಂದರ ರಾವ್ ಇನ್ನಿಲ್ಲ Read More »

ಷಷ್ಠಿ‌ ಮಹೋತ್ಸವ ವೇಳೆ ನಕಲಿ ಐಡಿ ಕಾರ್ಡ್ ಬಳಸಿ ಅನ್ಯಕೋಮಿನ ಯುವಕರಿಂದ ವ್ಯಾಪಾರ|ಹಿಂದೂ ಕಾರ್ಯಕರ್ತರಿಂದ ತರಾಟೆ

ಸಮಗ್ರ ನ್ಯೂಸ್:‌ ಚಂಪಾಷಷ್ಠಿ ಹಾಗೂ ದೇವಾಲಯ ವಾರ್ಷಿಕೋತ್ಸವದಲ್ಲಿ ಅನ್ಯಕೋಮಿನವರ ವ್ಯಾಪಾರ ವಹಿವಾಟು ನಿಷೇಧಿಸಿದ್ದರೂ, ಯುವಕನೊಬ್ಬ ಹಿಂದೂ ಹೆಸರಿನ ‘ಐಡಿ ಕಾರ್ಡ್’ ಬಳಸಿ ವ್ಯಾಪಾರ ನಡೆಸಲು ಬಂದು ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದ ಘಟನೆ ಕೊಡಗು ಜಿಲ್ಲೆಯ ‌ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದ ದೇವಾಲಯದಲ್ಲಿ ನಡೆದಿದೆ. ಇಲ್ಲಿ ಸುಬ್ರಹ್ಮಣ್ಯ ಷಷ್ಠಿ ಹಾಗೂ ದೇವಾಲಯದ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭ ಹಿಂದೂಯೇತರರು ವ್ಯಾಪಾರ ನಡೆಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಒಂದು ವಾರದ ಹಿಂದೆಯೇ ಘೋಷಿಸಲಾಗಿತ್ತು. ಅಲ್ಲದೆ ಒಂದು ವೇಳೆ

ಷಷ್ಠಿ‌ ಮಹೋತ್ಸವ ವೇಳೆ ನಕಲಿ ಐಡಿ ಕಾರ್ಡ್ ಬಳಸಿ ಅನ್ಯಕೋಮಿನ ಯುವಕರಿಂದ ವ್ಯಾಪಾರ|ಹಿಂದೂ ಕಾರ್ಯಕರ್ತರಿಂದ ತರಾಟೆ Read More »

ಉಪ್ಪಿನಂಗಡಿ: ಭೀಕರ ಅಪಘಾತ; ರಿಕ್ಷಾ ಚಾಲಕ ದುರ್ಮರಣ

ಸಮಗ್ರ ನ್ಯೂಸ್: ಎಟಿಎಂ ನ‌ ಹಣ ಸಾಗಿಸುವ ವಾಹನ ಹಾಗೂ ಅಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ಅಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿಯ ಬೊಳ್ಳಾರು ಸಮೀಪ ನಡೆದಿದೆ. ಮೃತ ರಿಕ್ಷಾ ಚಾಲಕನನ್ನು ಉಪ್ಪಿನಂಗಡಿಯ ಸುಭಾಶ್ ನಗರ ನಿವಾಸಿ, ವಾಸು ಪೂಜಾರಿ (50 ವರ್ಷ) ಎಂದು ಗುರುತಿಸಲಾಗಿದೆ. ಎಟಿಎಂ ವಾಹನ ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದರೆ, ಅಟೋ ರಿಕ್ಷಾ ಉಪ್ಪಿನಂಗಡಿ ಕಡೆಗೆ ತೆರಳುತ್ತಿತ್ತು. ಘಟನೆಯಲ್ಲಿ ಅಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಉಪ್ಪಿನಂಗಡಿ: ಭೀಕರ ಅಪಘಾತ; ರಿಕ್ಷಾ ಚಾಲಕ ದುರ್ಮರಣ Read More »

ಎರಡು ವರ್ಷಗಳ ಬಳಿಕ ಮಂಗಳೂರಿಗೆ ಬಂದ ಐಷಾರಾಮಿ ಹಡಗು….!!

ಸಮಗ್ರ ನ್ಯೂಸ್: ಮಂಗಳೂರು ನವಮಂಗಳೂರು ಬಂದರಿಗೆ ಈ ಋತುವಿನ ಮೊದಲ ಐಷರಾಮಿ ಹಡಗು ಆಗಮಿಸಿದೆ. ಮಾಲ್ಟಾದಿಂದ ಬಂದಿದ್ದ ‘ಎಂಎಸ್‌ ಯುರೋಪ–2’ ಹೆಸರಿನ ಹಡಗಿನಲ್ಲಿ 271 ಪ್ರಯಾಣಿಕರು ಹಾಗೂ 373 ಸಿಬ್ಬಂದಿ ಆಗಮಿಸಿದ್ದಾರೆ. ಹಡಗಿನಲ್ಲಿ ಆಗಮಿಸಿದ್ದ ಪ್ರಯಾಣಿಕರಿಗೆ ಎನ್ಎಂಪಿಎ ದಲ್ಲಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು, ಹಡಗಿನಲ್ಲಿ ಬಂದಿದ್ದ ಪ್ರವಾಸಿಗರು ಸೇಂಟ್‌ ಅಲೋಶಿಯಸ್‌ ಕಾಲೇಜು, ಕದ್ರಿ ಹಾಗೂ ಕುದ್ರೋಳಿ ದೇವಸ್ಥಾನ, ಮಂಗಳೂರಿನ ಮಾರುಕಟ್ಟೆ, ಉಡುಪಿ ಕೃಷ್ಣ ಮಠ, ಮೂಡುಬಿದಿರೆಯ ಸಾವಿರ ಕಂಬದ ಬಸದಿ ಫಿಜಾ ಮಾಲ್‌ ಮುಂತಾದ ಸ್ಥಳಗಳಿಗೆ ಭೇಟಿ

ಎರಡು ವರ್ಷಗಳ ಬಳಿಕ ಮಂಗಳೂರಿಗೆ ಬಂದ ಐಷಾರಾಮಿ ಹಡಗು….!! Read More »

ಕೊಡಗು: ಹಸುವಿನ ಮೇಲೆ ಅತ್ಯಾಚಾರ ಮಾಡಿದ ಕಾಮುಕ ಜೈಲಿಗೆ

ಸಮಗ್ರ ನ್ಯೂಸ್: ಮೇಯಲು ಕಟ್ಟಿಹಾಕಿದ್ದ ಹಸುವಿನ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಅಂದಗೋವೆ ಎಂಬಲ್ಲಿ ನಡೆದಿದೆ. ನವೆಂಬರ್ 27ರಂದು ಈ ಒಂದು ಹೇಯ್ಯ ಕೃತ್ಯ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದ ಸಿ.ಎ ದೇವಯ್ಯ ಅವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದು ತಾವು ಸಂತೆಗೆ ಹೋಗಿ ವಾಪಸ್

ಕೊಡಗು: ಹಸುವಿನ ಮೇಲೆ ಅತ್ಯಾಚಾರ ಮಾಡಿದ ಕಾಮುಕ ಜೈಲಿಗೆ Read More »

ಬಂಟ್ವಾಳ: ಸ್ಕೂಟರ್‌ ಚಲಾಯಿಸಿದ ಅಪ್ರಾಪ್ತ ಬಾಲಕಿ| 26 ಸಾವಿರ ರೂ. ದಂಡ ಕಟ್ಟಿದ ತಾಯಿ

ಸಮಗ್ರ ನ್ಯೂಸ್: ಬಂಟ್ವಾಳದ ಸಿದ್ದಕಟ್ಟೆಯಲ್ಲಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ಸ್ಕೂಟರ್‌ ಚಲಾಯಿಸಲು ನೀಡಿದ ಆಕೆಯ ತಾಯಿಗೆ ಬಂಟ್ವಾಳ ನ್ಯಾಯಾಲಯ 26 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಕಳೆದ ಆಗಸ್ಟ್‌ನಲ್ಲಿ ಸಿದ್ದಕಟ್ಟೆಯಲ್ಲಿ ಸ್ಕೂಟರ್‌ ಮತ್ತು ಕಾರಿನ ಮಧ್ಯೆ ಅಪಘಾತ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಎಎಸ್‌ಐ ವಿಜಯ್‌ ಅವರು ನೋಟಿಸ್‌ ಜಾರಿ ಮಾಡಿದ್ದರು. ಇದೀಗ ವಿಚಾರಣೆ ನಡೆಸಿದ

ಬಂಟ್ವಾಳ: ಸ್ಕೂಟರ್‌ ಚಲಾಯಿಸಿದ ಅಪ್ರಾಪ್ತ ಬಾಲಕಿ| 26 ಸಾವಿರ ರೂ. ದಂಡ ಕಟ್ಟಿದ ತಾಯಿ Read More »

ಕಡಬ: ಹಿಂದೂ ಯುವತಿಯನ್ನು ರೂಂಗೆ ಕರೆದ ಮುಸ್ಲಿಂ ಯುವಕ | ಹಿಂಜಾವೇ ಕಾರ್ಯಕರ್ತರಿಗೆ ಹೆದರಿ ಪರಾರಿ

ಸಮಗ್ರ ನ್ಯೂಸ್: ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ ಜತೆ ರೂಂನಲ್ಲಿದ್ದಾಗ ಹಿಂಜಾವೇ ಕಾರ್ಯರ್ತರು ಬರುತ್ತಿದ್ದಂತೆ ಪರಾರಿಯಾದ ಘಟನೆ ಅಲಂಕಾರು ಸಮೀಪದ ಕೊಂತೂರು ಪೆರಾಬೆ ಗ್ರಾಮದ ಕೋಚಕಟ್ಟೆಯಲ್ಲಿ ನ.27 ರ ಭಾನುವಾರ ಸಂಜೆ ನಡೆದಿದೆ. ಯುವತಿ ಮಂಜೇಶ್ವರ ಮೂಲದವಳಾಗಿದ್ದು, ಮುಡಿಪು ಮೂಲದ ಮುಸ್ಲಿಂ ಯುವಕನ ಸಂಪರ್ಕದಲ್ಲಿದ್ದು, ಪ್ರಸ್ತುತ ಆತ ಕೆಲಸದ ನಿಮಿತ್ತ ಕೊಂತೂರು ಪೆರಾಬೆ ಕ್ರಾಮದ ಕೋಚಕಟ್ಟೆಯಲ್ಲಿ ಬಾಡಿಗೆ ಕೊಠಡಿಯಲ್ಲಿದ್ದು, ಅಲ್ಲಿಗೆ ಯುವತಿಯನ್ನು ಬರುವಂತೆ ಹೇಳಿದ್ದ. ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಯುವಕನ

ಕಡಬ: ಹಿಂದೂ ಯುವತಿಯನ್ನು ರೂಂಗೆ ಕರೆದ ಮುಸ್ಲಿಂ ಯುವಕ | ಹಿಂಜಾವೇ ಕಾರ್ಯಕರ್ತರಿಗೆ ಹೆದರಿ ಪರಾರಿ Read More »

“ವಿದ್ಯಾರ್ಥಿಗಳೇ, ಮತೀಯ ಸಂಘಟನೆಗಳ ಜೊತೆ ಗುರುತಿಸಿಕೊಳ್ಳದಿರಿ”
-ಇನಾಯತ್ ಅಲಿ |ಸುರತ್ಕಲ್ ನಲ್ಲಿ ಎನ್ ಎಸ್ ಯು ಐ ನಿಂದ “ನಮ್ಮೂರ ಹೆಮ್ಮೆ” ಪ್ರತಿಭಾ ಪುರಸ್ಕಾರ

ಸುರತ್ಕಲ್: ಎನ್ ಎಸ್ ಯು ಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ‘ನಮ್ಮೂರ ಹೆಮ್ಮೆ’ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೋಮವಾರ ಸಂಜೆ ಇಲ್ಲಿನ ವಿಶ್ವ ಬ್ರಾಹ್ಮಣ ಸಭಾಭವನದಲ್ಲಿ ಜರುಗಿತು. ಈ ವೇಳೆ ಮಾತಾಡಿದ ಎನ್ ಎಸ್ ಯು ಐ ರಾಜ್ಯ ಉಸ್ತುವಾರಿ ಇನಾಯತ್ ಅಲಿ ಅವರು, “ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು.ಅದರಂತೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ

“ವಿದ್ಯಾರ್ಥಿಗಳೇ, ಮತೀಯ ಸಂಘಟನೆಗಳ ಜೊತೆ ಗುರುತಿಸಿಕೊಳ್ಳದಿರಿ”
-ಇನಾಯತ್ ಅಲಿ |ಸುರತ್ಕಲ್ ನಲ್ಲಿ ಎನ್ ಎಸ್ ಯು ಐ ನಿಂದ “ನಮ್ಮೂರ ಹೆಮ್ಮೆ” ಪ್ರತಿಭಾ ಪುರಸ್ಕಾರ
Read More »

ಕಾಪು ಕ್ಷೇತ್ರಕ್ಕೆ ಗುರ್ಮೆ ಸುರೇಶ್ ಶೆಟ್ಟಿ ಬಿಜೆಪಿ ಅಭ್ಯರ್ಥಿ!?

ಮಂಗಳೂರು: ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯು ಅಭ್ಯರ್ಥಿಗಳನ್ನು ಬದಲಿಸಲಿದ್ದು, ಆ ಪೈಕಿ ಕಾಪು ಕ್ಷೇತ್ರ ಕೂಡ ಒಂದು ಎಂದು ತಿಳಿದು ಬಂದಿದೆ. ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಹಲವಾರು ಪ್ರಮುಖ ಮುಖಂಡರು ಪ್ರಯತ್ನಿಸುತ್ತಿದ್ದು, ಆ ಪೈಕಿ ಹಿರಿಯ ನಾಯಕ ಸುರೇಶ್ ಶೆಟ್ಟಿ ಗುರ್ಮೆ ಹೆಸರು ಗಟ್ಟಿಯಾಗಿ ಕೇಳಿ ಬರುತ್ತಿದೆ. ಇವರ ಹೆಸರು ಕಳೆದ ಬಾರಿಯೇ ಕೇಳಿ ಬಂದಿದ್ದು, ಕೊನೆ ಕ್ಷಣಕ್ಕೆ ಬದಲಾದ ಬೆಳವಣಿಗೆಯಲ್ಲಿ ಹಿಂದಿನ ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಗೇ ಟಿಕೆಟ್ ನೀಡಲಾಗಿತ್ತು. ಬೆಂಗಳೂರಿನಲ್ಲಿ

ಕಾಪು ಕ್ಷೇತ್ರಕ್ಕೆ ಗುರ್ಮೆ ಸುರೇಶ್ ಶೆಟ್ಟಿ ಬಿಜೆಪಿ ಅಭ್ಯರ್ಥಿ!? Read More »

ಅಪ್ಪ ಮಗಳ ಬಾಂಧವ್ಯದ ಅಧ್ಬುತವಾದ ಕಿರುಚಿತ್ರ| youtubeನಲ್ಲಿ ಬಿಡುಗಡೆ

ಸಮಗ್ರ ಸಿನಿಮಾ: ಅಪ್ಪ ಮಗಳ ಬಾಂಧವ್ಯದ ಅಧ್ಬುತವಾದ ಒಂದು ಕಿರುಚಿತ್ರ “93 studios and media works ” youtube ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ರೋಶನಿ ದಯಾನಂದ ಅವರು ಮಾಡಿರುತ್ತಾರೆ, ಮತ್ತು ಛಾಯಾಗ್ರಹಣ, ಸಂಕಲನ, ಮತ್ತು ನಿರ್ದೇಶನ ಗಿರೀಶ್ ಆಚಾರ್ಯ ಭೈತಡ್ಕ ಮಾಡಿರುತ್ತಾರೆ. ಇದರ ಡಬ್ಬಿಂಗ್ ಮತ್ತು ರೆಕಾರ್ಡಿಂಗ್ ಕೆಲಸವು ” Glowing wave recording” ಸುಳ್ಯ ಇಲ್ಲಿ ನಡೆದಿರುತ್ತದೆ. ಇದರ ಚಿತ್ರೀಕರಣವು ಸುಳ್ಯ ಮತ್ತು ಮಂಗಳೂರಿನಲ್ಲಿ ಮಾಡಲಾಗಿದೆ. ರೋಶನಿ,

ಅಪ್ಪ ಮಗಳ ಬಾಂಧವ್ಯದ ಅಧ್ಬುತವಾದ ಕಿರುಚಿತ್ರ| youtubeನಲ್ಲಿ ಬಿಡುಗಡೆ Read More »