November 2022

ಹಾಲು, ಮೊಸರಿನ ದರದಲ್ಲಿ ₹3 ಏರಿಕೆ| ಗ್ರಾಹಕರಿಗೆ ಕತ್ತರಿ, ಹೈನುಗಾರರಿಗೆ ಬಂಪರ್ ಕೊಡುಗೆ

ಸಮಗ್ರ ನ್ಯೂಸ್: ಪ್ರತಿ ಲೀಟರ್ ನಂದಿನಿ ಹಾಲಿನ ದರದಲ್ಲಿ 3 ರೂಪಾಯಿ ಏರಿಸಲು ಕೆಎಂಎಫ್ ನಿರ್ಧರಿಸಿದೆ. ಹಾಗೂ ಮೊಸರಿನ ಬೆಲೆಯೂ ಕೂಡ 3 ರೂಪಾಯಿ ಏರಿಕೆ ಮಾಡಲಾಗಿದೆ. ಕರ್ನಾಟಕ ಹಾಲು ಒಕ್ಕೂಟವು ನಡೆಸಿದ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾಗಿ ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ಮೇಲೆ 3 ರೂಪಾಯಿ ಹೆಚ್ಚಳ ಮಾಡುವುದಕ್ಕೆ ಕೆಎಂಎಫ್ ನಿರ್ಧರಿಸಿದೆ ಎಂದು ತಿಳಿದು […]

ಹಾಲು, ಮೊಸರಿನ ದರದಲ್ಲಿ ₹3 ಏರಿಕೆ| ಗ್ರಾಹಕರಿಗೆ ಕತ್ತರಿ, ಹೈನುಗಾರರಿಗೆ ಬಂಪರ್ ಕೊಡುಗೆ Read More »

ಮಂಡ್ಯದ ಚುಂಚನಗಿರಿಯಲ್ಲಿ ವಧೂವರ‌ರ ಸಮಾವೇಶ| ಹುಡುಗರ ಅರ್ಜಿ ಸಂಖ್ಯೆ ನೋಡಿ ಆಯೋಜಕರೇ ಸುಸ್ತು!!

ಸಮಗ್ರ ನ್ಯೂಸ್: ಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಧು ವರ ಸಮಾವೇಶದಲ್ಲಿ ಒಕ್ಕಲಿಗ ಹುಡುಗರ ಅರ್ಜಿ ಸಂಖ್ಯೆ ನೋಡಿ ಆಯೋಜಕರು ಸುಸ್ತಾದ ಘಟನೆ ನಡೆದಿದೆ. ಒಕ್ಕಲಿಗರಿಗೆ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲವೆಂದು ಒಕ್ಕಲಿಗ ವಧುಗಳಿಗಾಗಿ ಸಾವಿರಾರು ಒಕ್ಕಲಿಗ ಹುಡುಗರು ಮುಗಿಬಿದ್ದಿದ್ದರು. ಸಮಾವೇಶದಲ್ಲಿ 200 ಜನ ಒಕ್ಕಲಿಗ ಹುಡುಗಿಯರಿಗೆ 10 ಸಾವಿರಕ್ಕೂ ಹೆಚ್ಚಿನ ಹುಡುಗರ ಅರ್ಜಿ ಬಂದಿದ್ದವು. ಹುಡುಗರ ಅರ್ಜಿ ಸಂಖ್ಯೆ ನೋಡಿ ಸಮಾವೇಶದ ಆಯೋಜಕರು ಸುಸ್ತಾದರು. ಹುಡುಗಿಯರಿಗಾಗಿ ಸಮಾವೇಶದಲ್ಲಿ ಸಾವಿರಾರು ಹುಡುಗರು ಮತ್ತ ಅವರ ಪೋಷಕರು ಕ್ಯೂ ನಿಂತಿದ್ದರು.

ಮಂಡ್ಯದ ಚುಂಚನಗಿರಿಯಲ್ಲಿ ವಧೂವರ‌ರ ಸಮಾವೇಶ| ಹುಡುಗರ ಅರ್ಜಿ ಸಂಖ್ಯೆ ನೋಡಿ ಆಯೋಜಕರೇ ಸುಸ್ತು!! Read More »

ಹುಣಸೂರು: ನಿಂತಿದ್ದ ಗೂಡ್ಸ್ ಗೆ ಡಿಕ್ಕಿ ಹೊಡೆದ ಬಸ್

ಸಮಗ್ರ ನ್ಯೂಸ್: ಹೆದ್ದಾರಿಯಲ್ಲಿ ಪಂಚರ್ ಆಗಿ ನಿಂತಿದ್ದ ಬೆಲ್ಲದ ಟಕ್ಕರ್ ಗಾಡಿಗೆ ಹಿಂದೆಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಟಕ್ಕರ್ ಉರುಳಿ ಬಿದ್ದ ಘಟನೆ ಹುಣಸೂರು ಹೆದ್ದಾರಿಯಲ್ಲಿ ನಡೆದಿದೆ. ಬಸ್ ನಲ್ಲಿ ಸುಮಾರು 20 ಜನ ಪ್ರಯಾಣಿಕರು ಇದ್ದರು. ಈ ಖಾಸಗಿ ಬಸ್ಸೊಂದು ನಿಂತಿದ್ದ ಬೆಲ್ಲದ ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತವು ಕುಪ್ಪೆ ಕೊಳಘಟ್ಟ ಗ್ರಾಮದಲ್ಲಿ ನಡೆದಿದ್ದು, ಯಾವುದೇ ವ್ಯಕ್ತಿಗೂ ಅನಾಹುತ ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ.

ಹುಣಸೂರು: ನಿಂತಿದ್ದ ಗೂಡ್ಸ್ ಗೆ ಡಿಕ್ಕಿ ಹೊಡೆದ ಬಸ್ Read More »

ಕೆಎಸ್ಆರ್ ಟಿಸಿ‌ ನಿರ್ವಾಹಕನ ಜಾಣ್ಮೆಗೆ ಬಸ್ ದರೋಡೆಕೋರರು ಅಂದರ್| ಕಂಡಕ್ಟರ್ ಗೆ ಭಲೇ..ಭೇಷ್ ಎಂದ ಸಾರಿಗೆ ಅಧಿಕಾರಿಗಳು

ಸಮಗ್ರ ನ್ಯೂಸ್: ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸಿ ಪ್ರಯಾಣಿಕರೊಬ್ಬರ ಲಕ್ಷಾಂತರ ರೂ. ಮೌಲ್ಯದ ಒಡವೆ, ಹಣ ದೋಚಿ ಪರಾರಿಯಾಗಿದ್ದ ಕಳ್ಳರು ನಾಲ್ಕು ತಿಂಗಳ ಬಳಿಕ ಅದೇ ಬಸ್‌ನಲ್ಲಿ ಸಂಚರಿಸಿದ ವೇಳೆ ಬಸ್ ನಿರ್ವಾಹಕರು ಮುಖಚಹರೆ ಮೂಲಕವೇ ಗುರುತು ಹಿಡಿದು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಿರ್ವಾಹಕನ ಕಾರ್ಯಕ್ಷಮತೆಗೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತವಾಗಿದೆ. ನಿರ್ವಾಹಕ ಅಶೋಕ್ ಜಾದವ್ ಅವರೇ ಕಳ್ಳರನ್ನು ಪೊಲೀಸರಿಗೊಪ್ಪಿಸಿ ವೃತ್ತಿಪರತೆ ಮೆರೆದವರು. ತಾನು ನಿರ್ವಾಹಕನಾಗಿದ್ದ ಬಸ್‌ನಲ್ಲಿ ಈ ಹಿಂದೆ ಕಳ್ಳತನ ಮಾಡಿ ಮಾರ್ಗ ಮಧ್ಯೆ ಇಳಿದು ಹೋದ

ಕೆಎಸ್ಆರ್ ಟಿಸಿ‌ ನಿರ್ವಾಹಕನ ಜಾಣ್ಮೆಗೆ ಬಸ್ ದರೋಡೆಕೋರರು ಅಂದರ್| ಕಂಡಕ್ಟರ್ ಗೆ ಭಲೇ..ಭೇಷ್ ಎಂದ ಸಾರಿಗೆ ಅಧಿಕಾರಿಗಳು Read More »

ಲಿವಿಂಗ್ ಟುಗೆದರ್ ನಲ್ಲಿದ್ದ ಪ್ರಿಯತಮೆಯ ಭೀಕರ ಕೊಲೆ| ‘ದೇಹ 35 ತುಂಡು’, 18 ದಿನ ಫ್ರಿಡ್ಜ್‌ನಲ್ಲಿ!

ದೆಹಲಿ: ಲಿವಿಂಗ್ ಟುಗೆದರ್ ನಲ್ಲಿ ಜೊತೆಯಾಗಿದ್ದ ಯುವತಿಯನ್ನು ಆಕೆಯ ಪ್ರಿಯತಮನೇ ಹತ್ಯೆ ಮಾಡಿ , ಶವವನ್ನು 35 ಭಾಗಗಳಾಗಿ ತುಂಡರಿಸಿ ದೆಹಲಿಯಾದ್ಯಂತ ಎಸೆದ ಭೀಕರ ಪ್ರಕರಣವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದು ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ. 26 ವರ್ಷದ ಯುವತಿ ಶ್ರದ್ಧಾ, ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು ಈ ವೇಳೆ ಅಫ್ತಾಬ್ ಅಮೀನ್ ಪೂನಾವಾಲಾ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಳು. ಆದರೆ ಯುವತಿಯ ಕುಟುಂಬವು ಈ ಸಂಬಂಧವನ್ನು ಒಪ್ಪದ ಹಿನ್ನಲೆ, ಈ ಜೋಡಿ ಮುಂಬೈ ತೊರೆದು

ಲಿವಿಂಗ್ ಟುಗೆದರ್ ನಲ್ಲಿದ್ದ ಪ್ರಿಯತಮೆಯ ಭೀಕರ ಕೊಲೆ| ‘ದೇಹ 35 ತುಂಡು’, 18 ದಿನ ಫ್ರಿಡ್ಜ್‌ನಲ್ಲಿ! Read More »

ಬೆಂಗಳೂರು ಏರ್ ಪೋರ್ಟ್ ಮೇಲೆ ಅದಾನಿ ಕಣ್ಣು| ಷೇರು ಮಾರಾಟ ಖರೀದಿಗೆ ಚಿಂತನೆ

ಸಮಗ್ರ ನ್ಯೂಸ್: ಮಂಗಳೂರು, ಅಹಮದಾಬಾದ್, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗ ನಂತರ ಈಗ ಅದಾನಿ ಗ್ರೂಪ್ ಕಣ್ಣು ಬೆಂಗಳೂರು ವಿಮಾನ ನಿಲ್ದಾಣದ ಮೇಲೂ ಬಿದ್ದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉಸ್ತುವಾರಿ, ಕಾರ್ಯ ನಿರ್ವಹಣೆ ಮಾಡುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನಲ್ಲಿ (ಬಿಐಎಎಲ್) ಪಾಲನ್ನು ತೆಗೆದುಕೊಳ್ಳುವ ಬಗ್ಗೆ ಅದಾನಿ ಗ್ರೂಪ್ ಚಿಂತಿಸುತ್ತಿದೆ ಎಂದು ಈ ಬಗ್ಗೆ ತಿಳಿದಿರುವ ಉನ್ನತ ಮೂಲಗಳು ಮಾಹಿತಿ ನೀಡಿವೆ. “ಅದಾನಿ ಗ್ರೂಪ್ ಕೆಲವು ಸಮಯದಿಂದ ವಿಮಾನ ನಿಲ್ದಾಣದಲ್ಲಿ ಪಾಲನ್ನು ಖರೀದಿಸಲು

ಬೆಂಗಳೂರು ಏರ್ ಪೋರ್ಟ್ ಮೇಲೆ ಅದಾನಿ ಕಣ್ಣು| ಷೇರು ಮಾರಾಟ ಖರೀದಿಗೆ ಚಿಂತನೆ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಸಂಚು ರೂಪಿಸಿ ಹತ್ಯೆ ಮಾಡಿದ ಪಿಎಫ್ಐ! ಮಾಹಿತಿ ಬಹಿರಂಗ

ಸಮಗ್ರ ನ್ಯೂಸ್: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬೆಳ್ಳಾರೆಯಲ್ಲಿ ನಡೆದ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಪಿಎಫ್ ಐ ಸಂಚು ನಡೆಸಿ ಪ್ರವೀಣ್ ನೆಟ್ಟಾರು ಹತ್ಯೆ ನಡೆಸಿದೆ ಎಂಬ ಸ್ಪೋಟಕ ಮಾಹಿತಿ ಎನ್ ಐಎ ತನಿಖೆಯಲ್ಲಿ ಬಯಲಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ಐಎ) ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ವಿಚಾರಣೆಯಲ್ಲಿ ಮಸೂದ್ ಹತ್ಯೆ ಬಳಿಕ ಅದಕ್ಕೆ ಪ್ರತೀಕಾರವಾಗಿ ಮತ್ತೊಂದು ಕೊಲೆ ನಡೆಸಿ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಸಂಚು ರೂಪಿಸಿ ಹತ್ಯೆ ಮಾಡಿದ ಪಿಎಫ್ಐ! ಮಾಹಿತಿ ಬಹಿರಂಗ Read More »

ಮೋದಿ ಉದ್ಘಾಟಿಸಿದ್ದ ರೈಲುಹಳಿಯಲ್ಲಿ ಭಾರೀ ಸ್ಫೋಟ| ಸ್ವಲ್ಪದರಲ್ಲೇ‌ ತಪ್ಪಿದ ಅನಾಹುತ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿಯವರಿಂದ ಅಕ್ಟೋಬರ್‌ 31 ರಂದು ಉದ್ಘಾಟನೆಗೊಂಡ ಹೊಸ ರೈಲು ಹಳಿಯಲ್ಲಿ ಸ್ಫೋಟಗೊಂಡಿರುವ ಘಟನೆ ಉದಯಪುರ- ಅಹಮಾದಾಬಾದ್‌ ರೈಲು ಮಾರ್ಗದ ಕೆವಡಾ ಪ್ರದೇಶದಲ್ಲಿನ ಓಡಾ ಸೇತುವೆಯ ಬಳಿ ನಡೆದಿದೆ. ಕಳೆದ ತಡರಾತ್ರಿಯ ವೇಳೆಯಲ್ಲಿ ಸ್ಫೋಟದ ಸದ್ದೊಂದು ಕೇಳಿಬಂದಿತ್ತು. ಅದರ ಸದ್ದಿನಿಂದಾಗಿ ಜನರಲ್ಲಿ ಕೋಲಾಹಲ ಉಂಟಾಗಿತ್ತು. ಮಾಹಿತಿಗಳ ಪ್ರಕಾರ ಓಡಾ ಸೇತುವೆಯಿಂದ ಸ್ಫೋಟದ ಶಬ್ಧ ಕೇಳಿ ಬಂದಿದ್ದು ,ಬಳಿಕ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ನೋಡಿದಾಗ ಹೊಸ ಹಳಿ ಹಾಳಾಗಿರುವುದು ಕಂಡುಬಂದಿದೆ. ತಕ್ಷಣವೇ ಸ್ಥಳೀಯರು ರೈಲ್ವೆ

ಮೋದಿ ಉದ್ಘಾಟಿಸಿದ್ದ ರೈಲುಹಳಿಯಲ್ಲಿ ಭಾರೀ ಸ್ಫೋಟ| ಸ್ವಲ್ಪದರಲ್ಲೇ‌ ತಪ್ಪಿದ ಅನಾಹುತ Read More »

ಟಿ20 ವಿಶ್ವಕಪ್ | ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಇಂಗ್ಲೆಂಡ್| ಪಾಕಿಸ್ತಾನಕ್ಕೆ ಭಾರೀ ಮುಖಭಂಗ

ಸಮಗ್ರ ನ್ಯೂಸ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದೆ. ಫೈನಲ್ ಇಂಗ್ಲೆಂಡ್ 5 ವಿಕೆಟ್ ಗಳಿಂದ ತಂಡ ಜಯಭೇರಿ ಬಾರಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತ್ತು. ಇಂಗ್ಲೆಂಡ್ ತಂಡ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

ಟಿ20 ವಿಶ್ವಕಪ್ | ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಇಂಗ್ಲೆಂಡ್| ಪಾಕಿಸ್ತಾನಕ್ಕೆ ಭಾರೀ ಮುಖಭಂಗ Read More »

ದೈವಾರಾಧನೆ ಬಗ್ಗೆ ಅವಹೇಳನಕಾರಿ ಹೇಳಿಕೆ| ಬಿ.ಟಿ ಲಲಿತಾ ನಾಯಕ್ ವಿರುದ್ದ ದೂರು ದಾಖಲು

ಸಮಗ್ರ ನ್ಯೂಸ್: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಅವರು ದೈವ ನರ್ತಕರು ನಾಟಕ ಮಾಡುತ್ತಾರೆ ಎಂಬುದಾಗಿ ಹೇಳುವ ಮೂಲಕ, ದೈವಾರಾಧನೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಅವರ ವಿರುದ್ಧ ದೂರು ದಾಖಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಕಾಂತಾರ ಚಿತ್ರದ ಬಳಿಕ ದೈವ ನರ್ತಕರಿಗೆ ರೂ.2,000 ಗೌರವ ಧನವನ್ನು ಘೋಷಣೆ ಮಾಡಲಾಗಿತ್ತು. ಆದ್ರೇ ಸರ್ಕಾರದ ಈ ನಡೆಯನ್ನು ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಖಂಡಿಸಿದ್ದರು. ಅಲ್ಲದೇ ಇದು ಮೂಢನಂಬಿಕೆಗೆ ಇಂಬು ಕೊಡುತ್ತದೆ ಎಂಬುದಾಗಿ ಹೇಳಿದ್ದರು.

ದೈವಾರಾಧನೆ ಬಗ್ಗೆ ಅವಹೇಳನಕಾರಿ ಹೇಳಿಕೆ| ಬಿ.ಟಿ ಲಲಿತಾ ನಾಯಕ್ ವಿರುದ್ದ ದೂರು ದಾಖಲು Read More »