November 2022

ಕರಾವಳಿಯ ದೈವಸ್ಥಾನಗಳಿಗೆ ಭೇಟಿ ನೀಡಿದ ಸಪ್ತಮಿ ಗೌಡ

ಸಮಗ್ರ ನ್ಯೂಸ್: ಕಾಂತಾರ ಚಿತ್ರ 50ನೇ ದಿನ ಪೂರೈಸಿದ ದಾಖಲೆ ಬರೆಯುತ್ತಿರುವ ಬೆನ್ನಲ್ಲೇ ಕಾಂತಾರದ ನಟಿ ಲೀಲಾ ಇದೀಗ ಕರಾವಳಿಯ ದೈವಸ್ಥಾನಗಳಿಗೆ ಭೇಟಿ ನೀಡಿದರು. ಮಂಗಳೂರಿನ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೈವಸ್ಥಾನ, ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳ ಹಾಗೂ ಈ ಭಾಗದ ಕೆಲವು ದೈವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಕುಟುಂಬ ಸದಸ್ಯರು, ಸಿನಿಮಾದ ಸಹನಟರು ಹಾಗೂ ಸ್ನೇಹಿತರೊಂದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬುರ್ದುಗೋಳಿ ಆದಿಸ್ಥಳ ಕ್ಷೇತ್ರದ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್ ಅವರು […]

ಕರಾವಳಿಯ ದೈವಸ್ಥಾನಗಳಿಗೆ ಭೇಟಿ ನೀಡಿದ ಸಪ್ತಮಿ ಗೌಡ Read More »

ಮಂಗಳೂರು: ನ.19 ಕ್ಕೆ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ| ಜಿಲ್ಲಾಡಳಿತದಿಂದ ವಿಜೃಂಭಣೆಯ ಕಾರ್ಯಕ್ರಮಕ್ಕೆ ಸಿದ್ದತೆ

ಸಮಗ್ರ ನ್ಯೂಸ್: ಕ್ರಿ.ಶ. 1837ರಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ರಣಕಹಳೆ ಮೊಳಗಿಸಿದ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಹಾಗೂ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಸಹಭಾಗಿತ್ವದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಗುವುದು. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಮಂಗಳವಾರ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಂಗಳೂರು: ನ.19 ಕ್ಕೆ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ| ಜಿಲ್ಲಾಡಳಿತದಿಂದ ವಿಜೃಂಭಣೆಯ ಕಾರ್ಯಕ್ರಮಕ್ಕೆ ಸಿದ್ದತೆ Read More »

15000 ಪದವೀಧರ ಶಾಲಾ ಶಿಕ್ಷಕರ ನೇಮಕಾತಿ| ಈ ವಾರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಸಮಗ್ರ ನ್ಯೂಸ್: ರಾಜ್ಯದ ಶಾಲೆಗಳಲ್ಲಿ ಖಾಲಿ ಇದ್ದ 15,000 ಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿ, ಪರೀಕ್ಷೆಯ ಬಳಿಕ ದಾಖಲಾತಿಯ ಪರಿಶೀಲನೆ ಕೂಡ ನಡೆಸಲಾಗಿತ್ತು. ಇದೀಗ ಮುಂದುವರೆದು 1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಈ ವಾರ ಪ್ರಕಟಿಸಲಾಗುತ್ತಿದೆ. ಈ ಕುರಿತಂತೆ ಟ್ವಿಟ್ಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು, ಪದವೀಧರ ಪ್ರಾಥಮಿಕ ಶಾಲಾ‌ ಶಿಕ್ಷಕರ ನೇಮಕ ಸಂಬಂಧಿಸಿದ 1:1 ‘ತಾತ್ಕಾಲಿಕ ಆಯ್ಕೆ’ ಪಟ್ಟಿಯನ್ನು ಈ ವಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಸ್ಪರ್ಧಾತ್ಮಕ

15000 ಪದವೀಧರ ಶಾಲಾ ಶಿಕ್ಷಕರ ನೇಮಕಾತಿ| ಈ ವಾರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ Read More »

ಸುಳ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಲಾರಿ ಚಾಲಕ ಸಾವು

ಸಮಗ್ರ ನ್ಯೂಸ್: ಮೈಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಸರಕಾರಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲಾರಿ ಚಾಲಕ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ನ.15ರ ಸಂಜೆ ಮಾಣಿ ಮೈಸೂರು ರಾ.ಹೆದ್ದಾರಿಯ ಕಲ್ಲುಗುಂಡಿ ಎಂಬಲ್ಲಿ ಘಟನೆ ನಡೆದಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು. ಈ ಪೈಕಿ ಕೆಲವರನ್ನು ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ. ಬಸ್ ಗೆ ಲಾರಿ ಡಿಕ್ಕಿಯಾದ ವೇಳೆ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಲಾರಿ ಚಾಲಕನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ

ಸುಳ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಲಾರಿ ಚಾಲಕ ಸಾವು Read More »

ಶೀಘ್ರದಲ್ಲೇ ತೆರೆಕಾಣಲಿದೆ ತುಳು ‘ಕಾಂತಾರ’

ಸಮಗ್ರ ನ್ಯೂಸ್: ವಿಶ್ವದಲ್ಲಿ ಅಪಾರ ಮೆಚ್ಚುಗೆ ಪಡೆದ ‘ಕಾಂತಾರ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದು, ಸಿನಿಮಾ ಬಂದು ೫೦ ದಿನವಾದ್ರೂ ಅಬ್ಬರ ಕಡಿಮೆಯಾಗಿಲ್ಲ. ಕನ್ನಡದಲ್ಲಿ ತೆರೆಕಂಡು ಬಳಿಕ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಡಬ್ ಆಗಿ ತೆರೆಕಂಡಿತ್ತು. ಇದೀಗ ತುಳು ಭಾಷೆಯಲ್ಲೂ ಡಬ್ ಆಗಲಿದ್ದು ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಹೊಂಬಾಳೆ ಬ್ಯಾನರ್‌ನ `ಕಾಂತಾರ’ ಸಿನಿಮಾ ತುಳು ಭಾಷೆಯಲ್ಲೂ ಕೂಡ ಡಬ್ ಆಗಲಿದೆ. ಈಗಾಗಲೇ ಡಬ್ಬಿಂಗ್ ಪ್ರಕ್ರಿಯೆ ಕೂಡ ಶುರುವಾಗಿದೆ. ಸೆನ್ಸಾರ್ ಬಳಿಕ ಡಿಸೆಂಬರ್ ಮೊದಲ

ಶೀಘ್ರದಲ್ಲೇ ತೆರೆಕಾಣಲಿದೆ ತುಳು ‘ಕಾಂತಾರ’ Read More »

ವಾಟ್ಸಾಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ರಾಜೀನಾಮೆ

ಸಮಗ್ರ ನ್ಯೂಸ್: ವಾಟ್ಸಾಪ್ ನ ಭಾರತದ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಸಾರ್ವಜನಿಕ ನೀತಿ ಮೆಟಾ ಇಂಡಿಯಾದ ನಿರ್ದೇಶಕ ರಾಜೀವ್ ಅಗರ್ವಾಲ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಭಾರತದಲ್ಲಿ ವಾಟ್ಸಾಪ್ ಸಾರ್ವಜನಿಕ ನೀತಿಯ ನಿರ್ದೇಶಕ ಶಿವನಾಥ್ ತುಕ್ರಾಲ್ ಅವರನ್ನು ಈಗ ಭಾರತದ ಎಲ್ಲಾ ಮೆಟಾ ಬ್ರಾಂಡ್ ಗಳ ಸಾರ್ವಜನಿಕ ನೀತಿಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ವಿಶ್ವದಾದ್ಯಂತ ಸುಮಾರು 11,000 ಉದ್ಯೋಗಗಳನ್ನು ಕಡಿತಗೊಳಿಸುವ ಮೂಲಕ ಮೆಟಾ ತನ್ನ ಅತಿದೊಡ್ಡ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ ಒಂದು ವಾರದೊಳಗೆ ಇದು ಬಂದಿದೆ. ಈ

ವಾಟ್ಸಾಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ರಾಜೀನಾಮೆ Read More »

ಸುಳ್ಯ – ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ – ಬಸ್ ನಡುವೆ ಭೀಕರ ಅಪಘಾತ| ಲಾರಿ‌ ಚಾಲಕ ಗಂಭೀರ

ಸಮಗ್ರ ನ್ಯೂಸ್: ರಾಜ್ಯ ಸಾರಿಗೆ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಲಾರಿ ಚಾಲಕ ಸೇರಿ, ೧೦ ಮಂದಿ ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾ.ಹೆದ್ದಾರಿಯ ಕಲ್ಲುಗುಂಡಿ ಎಂಬಲ್ಲಿ ನಡೆದಿದೆ. ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುವ ಲಾರಿ ಹಾಗೂ ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುವ ಬಸ್ ಅಪಘಾತ ಸಂಭವಿಸಿದೆ. ಮೈಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಸರಕಾರಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದಿರುವುದಾಗಿ ಬಸ್ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಗಾಯಗೊಂಡ ಮೂರು ಮಂದಿ

ಸುಳ್ಯ – ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ – ಬಸ್ ನಡುವೆ ಭೀಕರ ಅಪಘಾತ| ಲಾರಿ‌ ಚಾಲಕ ಗಂಭೀರ Read More »

ಮೋದಿ – ರಿಷಿ ಸುನಕ್ ಮುಖಾಮುಖಿ| ಹಲವು ವಿಚಾರಗಳ ಬಗ್ಗೆ ಚರ್ಚೆ

ಸಮಗ್ರ ನ್ಯೂಸ್: ಪ್ರಧಾನಿ ಮೋದಿ ನಿನ್ನೆ ಸಂಜೆ ಇಂಡೋನೆಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಗೆ ತೆರಳಿದ್ದಾರೆ. ಈಗ ಅನೇಕ ಜಾಗತಿಕ ನಾಯಕರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಭಾಷಣೆ ನಡೆಸುತ್ತಿರುವ ಮೋದಿ ಈಗ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ರನ್ನೂ ಭೇಟಿ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯ ‘ಪ್ರಧಾನಿ ಮೋದಿ ಮತ್ತು ಪ್ರಧಾನಿ ರಿಷಿ ಸುನಕ್​ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗದಲ್ಲಿ ಮಾತುಕತೆ ನಡೆಸುತ್ತಿದ್ದಾರೆ’ ಎಂದು ಟ್ವೀಟ್​ ಮಾಡಿದೆ. ಮೋದಿ ಮತ್ತು ಸುನಕ್​ ಇದೇ ಮೊದಲ

ಮೋದಿ – ರಿಷಿ ಸುನಕ್ ಮುಖಾಮುಖಿ| ಹಲವು ವಿಚಾರಗಳ ಬಗ್ಗೆ ಚರ್ಚೆ Read More »

ವಂದೇ ಭಾರತ್ ನಲ್ಲಿ ದೂರ ಪ್ರಯಾಣಕ್ಕೆ ಕಡಿಮೆ ದರ! ಚೆನ್ನೈ- ಬೆಂಗಳೂರಿಗಿಂತ ಮೈಸೂರು- ಬೆಂಗಳೂರು ದರವೇ ತುಟ್ಟಿ

ಸಮಗ್ರ ನ್ಯೂಸ್: ಚೆನ್ನೈ- ಬೆಂಗಳೂರು – ಮೈಸೂರು ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್‌’ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ಮೋದಿ ಅವರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲ್ವೆ ನಿಲ್ದಾಣದಲ್ಲಿ ಕಳೆದ ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ. ಈ ರೈಲಿನ ದರ ಈಗಿರುವ ಶತಾಬ್ದಿ ರೈಲಿಗಿಂತ ಭಿನ್ನವಾಗಿದೆ. ಮೈಸೂರು-ಬೆಂಗಳೂರು ಟಿಕೆಟ್‌ಗೆ ಶತಾಬ್ದಿ ರೈಲಿಗಿಂತ ಹೆಚ್ಚಿನ ದರ ನಿಗದಿ ಮಾಡಲಾಗಿದ್ದರೆ, ಬೆಂಗಳೂರು ಚೆನ್ನೈ ಪ್ರಯಾಣಿಕರಿಗೆ ಮಾತ್ರ ಈಗಿರುವ ದರಕ್ಕಿಂತ ಕಡಿಮೆ ದರ ವಿಧಿಸಲಾಗಿದೆ. ಮೈಸೂರು-

ವಂದೇ ಭಾರತ್ ನಲ್ಲಿ ದೂರ ಪ್ರಯಾಣಕ್ಕೆ ಕಡಿಮೆ ದರ! ಚೆನ್ನೈ- ಬೆಂಗಳೂರಿಗಿಂತ ಮೈಸೂರು- ಬೆಂಗಳೂರು ದರವೇ ತುಟ್ಟಿ Read More »

ಬಂಟ್ವಾಳ: ಸಿಡಿಲಿಗೆ 16 ವರ್ಷದ ಬಾಲಕ ಬಲಿ

ಸಮಗ್ರ ನ್ಯೂಸ್: ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಹೃದಯವಿದ್ರಾವಕ ಘಟನೆ ನ.14 ರ ರಾತ್ರಿ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ನಡೆದಿದೆ. ಸಾಣೂರುಪದವು ಗಣೇಶ್ ಆದಿದ್ರಾವಿಡ ಅವರ ಪುತ್ರ ಕಾರ್ತಿಕ್ (16) ಮೃತಪಟ್ಟ ಬಾಲಕ. ರಾತ್ರಿ 9 ರ ಸುಮಾರಿಗೆ ಊಟ ಮುಗಿಸಿ ಮಲಗಿದ್ದು, 9.30 ರ ಸುಮಾರಿಗೆ ಜೋರಾಗಿ ಸಿಡಿಲು ಸಹಿತ ಮಳೆ ಬಂದು, ಮಲಗಿದ್ದವರಿಗೆ ಕರೆಂಟ್ ಶಾಕ್ ಹೊಡೆದ ಅನುಭವವಾಗಿದೆ .ಈ ವೇಳೆ ಮನೆಮಂದಿ ಹಾಲ್ ಗೆ ಓಡಿ ಬಂದಿದ್ದು, ಅದರೆ ಕಾರ್ತಿಕ್ ಏಳದೆ

ಬಂಟ್ವಾಳ: ಸಿಡಿಲಿಗೆ 16 ವರ್ಷದ ಬಾಲಕ ಬಲಿ Read More »